ಯಾದಗಿರಿಯಲ್ಲಿ ಮೈಲಾರಲಿಂಗನ ಜಾತ್ರಾ ವೈಭವ: ಭಂಡಾರದ ಒಡೆಯನಿಗೆ ಭಂಡಾರ ಅರ್ಪಿಸಿದ ಭಕ್ತರು

By Govindaraj S  |  First Published Jan 14, 2023, 9:45 PM IST

ಕಲ್ಯಾಣ ಕರ್ನಾಟಕದಲ್ಲಿಯೇ ಅತೀ ದೊಡ್ಡ ಜಾತ್ರೆ ಎಂಬ ಖ್ಯಾತಿಯಾಗಿರುವ ಯಾದಗಿರಿ ತಾಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ ಭಾರಿ ವೈಭವದಿಂದ ನಡೆಯಿತು. ಮೈಲಾಪುರದ ಮಲ್ಲಯ್ಯನ ಭಕ್ತರು ಪಲ್ಲಕ್ಕಿ ಮೇಲೆ ಭಂಡಾರ ಅರ್ಪಿಸಿ ತಮ್ಮ ಹರಕೆ ತಿರಿಸಿದರು. 


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ (ಜ.14): ಕಲ್ಯಾಣ ಕರ್ನಾಟಕದಲ್ಲಿಯೇ ಅತೀ ದೊಡ್ಡ ಜಾತ್ರೆ ಎಂಬ ಖ್ಯಾತಿಯಾಗಿರುವ ಯಾದಗಿರಿ ತಾಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ ಭಾರಿ ವೈಭವದಿಂದ ನಡೆಯಿತು. ಮೈಲಾಪುರದ ಮಲ್ಲಯ್ಯನ ಭಕ್ತರು ಪಲ್ಲಕ್ಕಿ ಮೇಲೆ ಭಂಡಾರ ಅರ್ಪಿಸಿ ತಮ್ಮ ಹರಕೆ ತಿರಿಸಿದರು. 

Tap to resize

Latest Videos

ಕಲ್ಯಾಣ ಕರ್ನಾಟಕದಲ್ಲೇ ಮೈಲಾರಲಿಂಗೇಶ್ವರ ಪ್ರಸಿದ್ಧ ಜಾತ್ರೆ: ಯಾದಗಿರಿಯ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಯು ಪ್ರತಿ ವರ್ಷವೂ ಭಾರಿ ಸಂಭ್ರಮ ಮತ್ತು ಸಡಗರದಿಂದ ಸಂಕ್ರಮಣ ದಿನದಂದು ನಡೆಯುತ್ತದೆ. ದೇಶದಲ್ಲಿ ಕಳೆದ 2-3 ವರ್ಷದಿಂದ ಕೋವಿಡ್ ಹಿನ್ನೆಲೆ ಯಾದಗಿರಿ ಜಿಲ್ಲಾಡಳಿತ ಜಾತ್ರೆಯನ್ನ ಅಷ್ಟು ವೈಭವದಿಂದ ನಡೆಯಲು ಅನುಮತಿ ನೀಡಿರಲಿಲ್ಲ. ಹಾಗಾಗಿ ಈ ವರ್ಷ ಎಲ್ಲಾ ನಿರ್ಬಂಧಗಳು ಮುಕ್ತವಾಗಿದ್ದು, ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದರು. ಈ ಮೈಲಾಪುರ ಮಲ್ಲಯ್ಯನ ಜಾತ್ರೆಯು ಹಲವು ವಿಶೇಷಗಳನ್ನು ಹೊಂದಿದೆ.  

Chikkaballapur: ಕಾಂಗ್ರೆಸ್‌ ಪಕ್ಷವು ದರೋಡೆಕೋರರ ಕೂಟ: ಸಚಿವ ಅಶೋಕ್‌

ಮಲ್ಲಯ್ಯ ಗಂಗಾ ಸ್ನಾನಕ್ಕೆ ಹೊನ್ನಕೆರೆಗೆ ಪಲ್ಲಕ್ಕಿ ಉತ್ಸವದೊಂದಿಗೆ ತೆರಳುವಾಗ ಪಲ್ಲಕ್ಕಿ ಮೇಲೆ ಭಕ್ತರು ಭಂಡಾರ ಅರ್ಪಿಸಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದರು. ಜೊತೆಗೆ ಬಂಡೆಯ ಕಲ್ಲಿಗೆ ಕಟ್ಟಿದ ಸರಪಳಿ ಹರಿಯುವುದು ಈ ಜಾತ್ರೆಯ ಪ್ರಮುಖ ಪದ್ಧತಿಯಾಗಿದೆ. ಈ ಸರಪಳಿಯನ್ನು ಮಲ್ಲಯ್ಯನ ಭಕ್ತರು ಹರಿದು ಸಂಭ್ರಮಪಟ್ಟರು. ಈ ಹಿಂದೆ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿ ಎಸೆಯುವ ಪದ್ಧತಿ ಇತ್ತು. ಅದ್ರೆ ಈ ಪದ್ಧತಿಗೆ ಯಾದಗಿರಿ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಆದ್ರೆ ಭಕ್ತರು ಮಾತ್ರ ಕುರಿ ಎಸೆಯಲು ಮೈಲಾಪುರಕ್ಕೆ ಕುರಿ ಸಮೇತ ಆಗಮಿಸಿದ್ದರು. 

ಆದ್ರೆ 500 ಕ್ಕೂ ಹೆಚ್ಚು ಕುರಿಗಳನ್ನು ಯಾದಗಿರಿ ಜಿಲ್ಲಾಡಳಿತ ಕಾಣಿಕೆ ರೂಪದಲ್ಲಿ ಪಡೆಯಿತು. ಈ ಕುರಿ ಎಸೆಯುವ ಪದ್ಧತಿ ಹಿಂದೆ ಭಕ್ತರ ಒಂದು ನಂಬಿಕೆ ಇದೆ. ಜಾತ್ರೆಗೆ ಬರುವ ಕುರಿಗಾಹಿಗಳು ತಾವು ಸಾಕುವ ಕುರಿ-ಮರಿಗಳು ಯಾವುದೇ ರೋಗಕ್ಕೆ ತುತ್ತಾಗಬಾರದು. ಜೊತೆಗೆ ಅವರ ಕುರಿಗಳ ಉತ್ಪಾದನೆ ಹೆಚ್ಚಾಗುತ್ತದೆ, ಇದರಿಂದ ತಮ್ಮ ಕುರಿ ಸಾಕಾಣಿಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಲಾಭವಾಗುತ್ತದೆ ಎಂಬುದು ಮೈಲಾಪುರ ಮಲ್ಲಯ್ಯನ ಭಕ್ತರ ನಂಬಿಕೆಯಾಗಿದೆ. 

6 ಕಡೆ ಚೆಕ್ ಪೊಸ್ಟ್, ಪೋಲಿಸ್ ಹದ್ದಿನಕಣ್ಣು: ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಗೆ ಯಾದಗಿರಿ ಜಿಲ್ಲಾಡಳಿತ ಸಕಲ ರೀತಿಯಿಂದ ಸಜ್ಜುಗಿತ್ತು. ಈ ಜಾತ್ರೆಗೆ ಸುಮಾರು 4-5 ಲಕ್ಷ ಜನ ಭಕ್ತರು ಭಾಗವಹಿಸಲಿದ್ದಾರೆ. ಹಾಗಾಗಿ ಈ ಒಂದು ಜಾತ್ರೆಗೆ ಹೆಚ್ಚಿನ ಪ್ರಾಮಾಣದಲ್ಲಿ ಬೀಗಿ ಬಂದೋಬಸ್ತ್ ವಹಿಸಲಾಗಿತ್ತು. ಜೊತೆಗ ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಖಾಕಿಪಡೆ ಕಳೆದ ಒಂದು ವಾರದಿಂದ ಮೈಲಾಪುರದಲ್ಲಿಯೇ ಬೀಡುಬಿಟ್ಟಿದೆ. ಇದಕ್ಕಾಗಿ 6 ಕಡೆ ಚೆಕ್ ಪೋಸ್ಟ್‌ಗಳನ್ನು ಪೋಲಿಸ್ ಇಲಾಖೆ ಅಳವಡಿಕೆ ಮಾಡತ್ತು. 500ಕ್ಕೂ ಹೆಚ್ಚು ಸಿಬ್ಬಂದಿಗಳು, ಎಸ್ಪಿ, ಇಬ್ಬರೂ ಡಿವೈಎಸ್ಪಿ, 14 ಇನ್ಸ್ ಸ್ಪೆಕ್ಟರ್, 35 ಪಿಎಸ್ಐ ಗಳನ್ನು ನಿಯೋಜನೆ ಮಾಡಲಾಗಿತ್ತು. ಜೊತೆಗೆ ಬೇರೆ ಬೇರೆ ಇಲಾಖೆಯ 500 ಕ್ಕೂ ಹೆಚ್ಚು ಸಿಬ್ಬಂದಿಗಳ ನಿಯೋಜನೆ. 

ಸಿದ್ದರಾಮಯ್ಯಗೆ ಮುಖಂಡರು ದಾರಿ ತಪ್ಪಿಸುತ್ತಿದ್ದಾರೆ: ಸಚಿವ ಮುನಿರತ್ನ

ಜಾತ್ರೆ ಗ್ಲಾಸ್ ಹಾಕಿ ಪೋಲಿಸ್ ಅಧಿಕಾರಿಗಳ ಸಂಭ್ರಮ: ಇನ್ನು ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಯ ಬಹಳ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಈ ಜಾತ್ರೆಗೆ ಪೋಲಿಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಬಂದೋಬಸ್ತ್ ಬ್ಯುಸಿಯಲ್ಲಿದ್ದರು. ಆದ್ರೆ ಮೈಲಾಪುರದ ಮಲ್ಲಯ್ಯನ ಜಾತ್ರೆಯು ಬಹಳ ಸೂಸುತ್ರವಾಗಿ ಯಾವುದೇ ತೊಂದರೆ ಆಗದೇ ವೈಭವದಿಂದ ನಡೆಯಿತು. ಜಾತ್ರೆ ಮುಗಿದ ನಂತರ ಯಾದಗಿರಿ ಡಿವೈಎಸ್ಪಿ ಬಸವೇಶ್ವರ ಹೀರಾ, ಕ್ರೈಂ ಪಿಐ ಬಾಪುಗೌಡ ಪಾಟೀಲ್, ಯಾದಗಿರಿ ಸಿಪಿಐ ಸುನೀಲ ಮೂಲಿಮನಿ ಹಾಗೂ ಗುರಮಠಕಲ್ ಪಿಐ ದೌಲತ್ ಕುರಿಯವರು ಮೈಲಾಪುರ ಜಾತ್ರೆಯಲ್ಲಿ ಮಾರಾಟ ಮಾಡುವ ಗ್ಲಾಸ್ ಗಳನ್ನು ಹಾಕಿಕೊಂಡು ಸಂಭ್ರಮಪಟ್ಟರು.

click me!