ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ವಿಜಯದಶಮಿ ಹಬ್ಬದ ಸಂಕೇತವಾಗಿದೆ. ಮನುಷ್ಯ ತನ್ನಲ್ಲಿನ ಕೆಟ್ಟಗುಣ ಅರಿಷಡ್ವÜರ್ಗದಿಂದ ದೂರವಾಗಿ ದುಷ್ಟಗುಣವನ್ನು ಹೋಗಲಾಡಿಸಿ ಅಪರೂಪದ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿಕಾರಿಪುರ (ಅ.6) : ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ವಿಜಯದಶಮಿ ಹಬ್ಬದ ಸಂಕೇತವಾಗಿದೆ. ಮನುಷ್ಯ ತನ್ನಲ್ಲಿನ ಕೆಟ್ಟಗುಣ ಅರಿಷಡ್ವÜರ್ಗದಿಂದ ದೂರವಾಗಿ ದುಷ್ಟಗುಣವನ್ನು ಹೋಗಲಾಡಿಸಿ ಅಪರೂಪದ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಹಣಕ್ಕಿಂತ ಹೃದಯ ಶ್ರೀಮಂತಿಕೆ ಗಳಿಸುವುದು ಶ್ರೇಷ್ಠ: ಬಿ.ವೈ. ರಾಘವೇಂದ್ರ
ಬುಧವಾರ ದಸರಾ ಮಹೋತ್ಸವ ಅಂಗವಾಗಿ ತಾಲೂಕು ಆಡಳಿತ ಹಾಗೂ ಬೇಗೂರು ಗ್ರಾಮ ಪಂಚಾಯಿತಿ ಮತ್ತು ವಿವಿಧ ದೇವಸ್ಥಾನಗಳ ಉಸ್ತುವಾರಿ ಸಮಿತಿ ವತಿಯಿಂದ ತಾಲೂಕಿನ ಬೇಗೂರು ಮರಡಿ ತಾಂಡಾದ ಶ್ರೀ ಗಾಳಿ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿನ ಬನ್ನಿ ಮಂಟಪದಲ್ಲಿ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮದ ಬನ್ನಿ ಮುಡಿಯುವ ಸ್ಥಳ ಅತ್ಯಂತ ಶ್ರೇಷ್ಠವಾಗಿದೆ. ಈಗಾಗಲೇ ಪೂರ್ಣಗೊಂಡಿರುವ ಶ್ರೀ ಲಕ್ಷ್ಮೇನಾರಾಯಣ ದೇವಸ್ಥಾನದ ಪ್ರತಿಷ್ಠಾಪನೆ ಕಾರ್ಯ ಶೀಘ್ರದಲ್ಲಿಯೇ ನೆರವೇರಿಸಲಾಗುವುದು. ತಾಲೂಕಿನ ಜನತೆ ಹಾರೈಕೆ ಬೆಂಬಲದಿಂದ ಸೇವೆ ಸಲ್ಲಿಸುವ ಅವಕಾಶದ ಜತೆಗೆ ಶಕ್ತಿ ದೊರೆತಿದೆ. ಯಡಿಯೂರಪ್ಪ ಅವರನ್ನು ರಾಜ್ಯ ಹಾಗೂ ರಾಷ್ಟ್ರಕ್ಕೆ ಪರಿಚಯಿಸಿದ ತಾಲೂಕಿನ ಋುಣ ತೀರಿಸುವ ಕೆಲಸವನ್ನು ಬೆರಳು ತೋರಿಸದ ರೀತಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.
ಶಿಕಾರಿಪುರದ ಹುಚ್ಚುರಾಯಸ್ವಾಮಿ ದೇವಸ್ಥಾನದ ಸಮೀಪದಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಲಿದೆ. ಸೂರಗೊಂಡನಕೊಪ್ಪದಲ್ಲಿ ಭಾಯಗಢ ರೈಲ್ವೆ ನಿಲ್ದಾಣವಾಗಲಿದೆ. ಚಪ್ಪಲಿ ಧರಿಸದೇ ಶ್ವೇತವಸ್ತ್ರಧಾರಿಯಾಗಿ ರಾಜ್ಯ, ರಾಷ್ಟ್ರಮಟ್ಟದಿಂದ ಧಾವಿಸುವ ಭಕ್ತರ ಅನುಕೂಲಕ್ಕಾಗಿ ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. 12ನೇ ಶತಮಾನದಲ್ಲಿನ ಶರಣೆ ಅಕ್ಕಮಹಾದೇವಿ ಜನ್ಮಸ್ಥಳ ತಾಲೂಕಿನ ಉಡುತಡಿಯಲ್ಲಿ 50- 60 ಅಡಿಗಳ ಎತ್ತರದ ಬೃಹತ್ ಪ್ರತಿಮೆ ನಿರ್ಮಾಣವಾಗಿದೆ. ದೋಣಿ ಮೂಲಕ ವಿಹರಿಸುವ ರೀತಿಯಲ್ಲಿ ಸಂಪೂರ್ಣ ಸ್ಥಳವನ್ನು ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ವರ್ಷಾಂತ್ಯಕ್ಕೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಯಡಿಯೂರಪ್ಪ ಸಿಎಂ ಆಗಿ ತಾಲೂಕಿನ ಜನತೆ ಋುಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಶಿಕ್ಷಣ ನೀರಾವರಿ ಆರೋಗ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸಿದ್ದಾರೆ ಎಂದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಶಿಕಾರಿಪುರವನ್ನು ಜಿಲ್ಲಾ ಕೇಂದ್ರವಾಗಿಸುವ ಬಗ್ಗೆ ಚರ್ಚೆ ವಿಪರೀತವಾಗಿದೆ. ಇದೀಗ ಪ್ರತ್ಯೇಕ ರಾಜ್ಯದ ರೀತಿ ಅಭಿವೃದ್ಧಿಪಡಿಸಲಾಗಿದೆ ಎಂದು ಪರಸ್ಥಳದವರು ಪ್ರಶಂಸಿಸುತ್ತಿದ್ದಾರೆ. ಜಾತಿ, ಮತಗಳ ಬೇಧವಿಲ್ಲದೆ ಪರಸ್ಪರ ಸಹೋದರ ಭಾವನೆಯಲ್ಲಿ ಆಚರಿಸುವ ವಿಜಯ ದಶಮಿಯಿಂದ ದುಷ್ಟಶಕ್ತಿ ನಾಶವಾಗಿ, ರೈತವರ್ಗ ಸಹಿತ ಸಮಸ್ತರು ಸ್ವಾಭಿಮಾನದಿಂದ ಬದುಕುವ ನೆಮ್ಮದಿಗೆ ಪ್ರಾರ್ಥಿಸಿದರು.
ತಹಸೀಲ್ದಾರ್ ಕವಿರಾಜ್ ಅಂಬುಚ್ಚೇದಗೊಳಿಸಿ ವಿಜಯದಶಮಿ ಸಾಂಕೇತಿಕವಾಗಿ ಸಂಪನ್ನಗೊಳಿಸಿದರು. ಪಟ್ಟಣದ ಶ್ರೀ ಹುಚ್ಚುರಾಯಸ್ವಾಮಿ, ಸಿರ್ಸಿ ಮಾರಮ್ಮ, ಗಿಡ್ಡಯ್ಯಸ್ವಾಮಿ, ಹುಲಿಕಟ್ಟೆಪ್ಪಸ್ವಾಮಿ, ಬೇಗೂರಿನ ಆಂಜನೇಯಸ್ವಾಮಿ, ಆಪಿನಕಟ್ಟೆಯ ಕೊನೆ ಬಸವೇಶ್ವರ, ಬೆಂಡೆಕಟ್ಟೆಯ ಬಸವೇಶ್ವರಸ್ವಾಮಿ, ಬಾಳೆಕೊಪ್ಪದ ಹನುಮಂತ ದೇವರ ಸಮಕ್ಷಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ರೇಖಾಬಾಯಿ, ಗ್ರಾಪಂ ಅಧ್ಯಕ್ಷ ಗಂಗಾಧರ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯ ಲಕ್ಷ್ಮಣ, ಮುಖಂಡ ವಸಂತಗೌಡ, ಬೇಗೂರು ಮಂಜುನಾಥ್ ಸಹಿತ ಸಹಸ್ರಾರು ಜನತೆ ನೆರೆದಿದ್ದರು.
ಎರೆಹುಳು ಗೊಬ್ಬರ ಬಳಕೆಗೆ ರೈತರು ಗಮನಹರಿಸಲಿ: ಸಂಸದ ರಾಘವೇಂದ್ರ
ಅತಿವೃಷ್ಟಿ, ಅನಾವೃಷ್ಟಿಯಿಂದ ರೈತ ವರ್ಗ ಪರಿತಪಿಸುತ್ತಿದೆ. ಈ ಬಾರಿ ಅತಿವೃಷ್ಟಿಗೆ ಹೊಸೂರು, ಅಂಜನಾಪುರ, ಕಸಬಾ, ಉಡುಗಣಿ ಹೋಬಳಿ ಬೆಳೆವಿಮೆ ಪಾವತಿಸಿದ ರೈತರಿಗೆ ಎನ್‌ಡಿಆರ್‌ಎಫ್ ಪರಿಹಾರ ನಿಧಿ ಮೂಲಕ .25 ಸಾವಿರ ಪರಿಹಾರ ತುರ್ತಾಗಿ ವಿತರಿಸುವಂತೆ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ
- ಬಿ.ವೈ.ರಾಘವೇಂದ್ರ, ಸಂಸದ