Makar Sankranti 2022: ಸೂರ್ಯನ ಚಲನೆಯಿಂದ ಈ ರಾಶಿಗಳು ಸಂಕಷ್ಟಕ್ಕೀಡಾಗಲಿವೆ..

By Suvarna NewsFirst Published Jan 12, 2022, 4:02 PM IST
Highlights

ಸಂಕ್ರಾಂತಿಯ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದರ ಕೆಟ್ಟ ಪರಿಣಾಮಗಳು ಏಳು ರಾಶಿಗಳ ಮೇಲೆ ಹೆಚ್ಚಾಗಿರಲಿದೆ. ಸೂರ್ಯ ಕೃಪೆಗೆ ಪಾತ್ರರಾಗಲು ಇವರೇನು ಮಾಡಬೇಕು?

ಸಂಕ್ರಾಂತಿಯ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಎಲ್ಲ ಗ್ರಹಗಳ ರಾಜನಾಗಿರುವ ಸೂರ್ಯನ ಈ ಚಲನೆಯಿಂದ ಬುಧ, ಚಂದ್ರ, ಗುರು, ಶನಿ ಗ್ರಹಗಳು ಪರಿಣಾಮ ಎದುರಿಸುತ್ತವೆ. ಸೂರ್ಯನ ರಾಶಿ ಬದಲಾವಣೆಯಿಂದ ಹಲವು ರಾಶಿಗಳ ಜೀವನದಲ್ಲಿ ಬದಲಾವಣೆಗಳಾಗಲಿವೆ. ಕೆಲವಕ್ಕೆ ಒಳಿತಾದರೆ, ಮತ್ತೆ ಕೆಲವು ರಾಶಿಗಳು ಹೆಚ್ಚು ಕಷ್ಟ ಎದುರಿಸಬೇಕಾಗಬಹುದು. ಮುಖ್ಯವಾಗಿ ಈ ಏಳು ರಾಶಿಗಳ ಮೇಲೆ ಸಂಕ್ರಮಣದ ಕೆಟ್ಟ ಪರಿಣಾಮಗಳು ಗೋಚರಿಸಲಿವೆ. ಈ ರಾಶಿಯವರು ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. 

ಮೇಷ(Aries)
ಸೂರ್ಯ ಹಾಗೂ ಬುಧ(Mercury)ನು ನಿಮ್ಮ ರಾಶಿಯ 10ನೇ ಮನೆಯಲ್ಲಿರುವುದರಿಂದ ಇದು ಅಷ್ಟೊಂದು ಶುಭ ಗೋಚಾರವಲ್ಲ. ಇದರಿಂದ ಉದ್ಯೋಗ ಸ್ಥಳದಲ್ಲಿ ಕಡೆಗಣನೆಗೆ ಗುರಿಯಾಗಬಹುದು. ವರ್ಗಾವಣೆ ಸಾಧ್ಯತೆಗಳಿರುತ್ತವೆ. ಜೊತೆಗೆ, ಬಿಸ್ನೆಸ್‌ನಲ್ಲಿ ನಷ್ಟ ಫಲ ಇರುತ್ತದೆ. 

ವೃಷಭ(Taurus)
ಸೂರ್ಯನು ನಿಮ್ಮ ರಾಶಿಯ 9ನೇ ಮನೆಯಲ್ಲಿರುವುದರಿಂದ ಕುಟುಂಬದ ಸಂತೋಷ(happiness) ಹಾಗೂ ನೆಮ್ಮದಿ ಕೆಡಲಿದೆ. ತಂದೆಯೊಂದಿಗಿನ ಬಾಂಧವ್ಯ ಹಾಳಾಗುವ ಸಾಧ್ಯತೆ ಇದೆ. ಸುಖಾಸುಮ್ಮನೆ ಕುಟುಂಬದಲ್ಲಿ ವಾದವಿವಾದಗಳು, ಜಗಳಗಳು ಏಳಬಹುದು. ಹಾಗಾಗಿ, ಬಹಳ ಜಾಗರೂಕರಾಗಿರುವ ಅಗತ್ಯವಿದೆ. 

ಮಿಥುನ(Gemini)
ಸೂರ್ಯ ಹಾಗೂ ಶನಿಯು ಒಟ್ಟಾಗಿ ನಿಮ್ಮ ರಾಶಿಯ 8ನೇ ಮನೆಯಲ್ಲಿರುವರು. ಇದರಿಂದ ಆರೋಗ್ಯ(health) ಸಂಬಂಧಿ ಸಮಸ್ಯೆಗಳು ಏಳಬಹುದು. ದೂರದ ಊರಿಗೆ ಪ್ರಯಾಣ ಕೈಗೊಳ್ಳಲೂ ಇದರಿಂದ ಸಾಧ್ಯವಾಗಬಹುದು. 

ಪುತ್ರ ಶನಿಯೊಂದಿಗೆ ಸೂರ್ಯ ಮುನಿಸು ಮರೆತ ದಿನವೇ ಸಂಕ್ರಾಂತಿ

ಕನ್ಯಾ(Virgo)
ಈ ಸಮಯ ನಿಮಗೆ ಅಷ್ಟು ಒಳ್ಳೆಯದಲ್ಲ. ಮಗುವಿನ ವಿಷಯದಲ್ಲಿ ಆತಂಕ, ಚಿಂತೆಗಳು ಹೆಚ್ಚಲಿವೆ. ವಿದ್ಯಾರ್ಥಿಗಳ(students) ಜೀವನದಲ್ಲಿ ಈ ಸಮಯ ಬಿರುಗಾಳಿಯೇ ಏಳಬಹುದು. ಏಕಾಗ್ರತೆ ಸಾಧ್ಯವಾಗದೆ ಓದಿನಲ್ಲಿ ಹಿಂದೆ ಬೀಳಬಹುದು. 

ಧನು(Sagittarius)
ಈ ಸಮಯದಲ್ಲಿ ಕುಟುಂಬದ ವಾತಾವರಣ ಹದಗೆಡಲಿದೆ. ಇದರಿಂದ ನಿಮ್ಮ ಚಿಂತೆಗಳು ಹೆಚ್ಚಲಿವೆ. ನೀವು ಕೂಡಿಟ್ಟ ಧನವೂ ಕರಗಿ ಆತಂಕ ಹೆಚ್ಚಲಿದೆ. ಮಕ್ಕಳ ವಿಷಯದಲ್ಲಿ ಚಿಂತಿತರಾಗುವಿರಿ. ನೀವು ನಿಮ್ಮ ಸುಖವನ್ನು ತ್ಯಾಗ ಮಾಡಬೇಕಾಗಿ ಬರಬಹುದು.

ಮಕರ(Capricorn)
ಹಣಕಾಸಿನ ಸಮಸ್ಯೆಗಳು(financial problems) ದಿನೇ ದಿನೇ ಹೆಚ್ಚಲಿವೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಗಂಭೀರ ಕಾಯಿಲೆಗಳ ವಿಷಯವಾಗಿ ಆಗಾಗ ತಪಾಸಣೆ ಮಾಡಿಸುತ್ತಿರಿ. 

ಮೀನ(Pisces)
ನಿಮ್ಮ ಸ್ವಾಭಿಮಾನ ಬದಿಗಿಟ್ಟು, ಸಂಗಾತಿಯೊಂದಿಗೆ ತಾಳ್ಮೆಯಿಂದ ಮಾತನಾಡಿ. ನಿಮ್ಮ ಔದ್ಯೋಗಿಕ ಬದುಕಿನಲ್ಲೂ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಸಹೋದ್ಯೋಗಿಗಳ ಕಿರಿಕಿರಿಯೂ ತಪ್ಪದು. 

Donate And Get: ಸಂಕ್ರಾಂತಿ ದಿನ ಇವನ್ನು ದಾನ ಮಾಡಿದ್ರೆ ವರ್ಷವಿಡೀ ದುಡ್ಡಿಗೆ ಎಂದೂ ಬರವಿರೋಲ್ಲ!

ಏನು ಮಾಡಬೇಕು?
ರಾಶಿ ಚಕ್ರದಲ್ಲಿ ಸೂರ್ಯ ಹಾಗೂ ಶನಿಯ ಮುನಿಸಿಗೆ ಒಳಗಾದವರು ಸಂಕ್ರಾಂತಿಯ ದಿನ ಸೂರ್ಯನನ್ನು ಪೂಜಿಸಲೇಬೇಕು. ಈ ದಿನ ಸೂರ್ಯನು ಮಕರ(Capricorn)ಕ್ಕೆ ಪ್ರವೇಶಿಸುವ 8 ಗಂಟೆಗಳ ಮೊದಲು ಎದ್ದು ಸ್ನಾನ ಮಾಡಿ, ಸೂರ್ಯನನ್ನು ಪೂಜಿಸಿ ಪ್ರಾರ್ಥಿಸುವುದರಿಂದ ಬಹಳ ಒಳಿತಾಗುತ್ತದೆ. ನಂತರ ಬಡವರಿಗೆ ವಸ್ತ್ರ, ಧನ, ಧಾನ್ಯಗಳನ್ನು ದಾನ ಮಾಡಬೇಕು. ಸಂಕ್ರಾಂತಿಯ ದಿನ ಎಳ್ಳು, ಬೆಲ್ಲ, ಖಿಚಡಿ, ಹೊದಿಕೆ ಹಾಗೂ ಮರದ ವಸ್ತುಗಳನ್ನು ದಾನ ಮಾಡುವುದರಿಂದ ಸೂರ್ಯನ ವಿಶೇಷ ಕೃಪೆಗೆ ಪಾತ್ರರಾಗಬಹುದು. ಸಂಕ್ರಾಂತಿಯ ಮರು ದಿನದಿಂದಲೇ ಮದುವೆ, ಗೃಹಪ್ರವೇಶದಂಥ ಶುಭ ಕಾರ್ಯಗಳನ್ನು ಆರಂಭಿಸಬಹುದು. 

ಸೂರ್ಯ ಹಾಗೂ ಶನಿ ದೋಷವಿದ್ದವರು ಇಷ್ಟು ಮಾಡಿದರಾದರೆ, ಅವರ ಉದ್ಯೋಗ ಸಂಬಂಧ ತೊಡಕುಗಳು ಬಹುತೇಕ ನಿವಾರಣೆಯಾಗುವುವು. ಜೊತೆಗೆ ಆತ್ಮವಿಶ್ವಾಸ(self-confidence) ಹೆಚ್ಚುವುದು. ತಲೆನೋವು, ಕಣ್ಣಿನ ಸಮಸ್ಯೆ, ಹೃದಯ ಹಾಗೂ ಮೂಳೆಗಳ ಸಮಸ್ಯೆ(bone disease) ನಿವಾರಣೆಯಾಗುವುದು. 

click me!