Unlucky Numbers: ಜಗತ್ತಿನಲ್ಲಿ ದುರದೃಷ್ಟ ಎನಿಸಿಕೊಂಡಿರೋ ಸಂಖ್ಯೆಗಳಿವು..

Published : Dec 17, 2021, 01:48 PM IST
Unlucky Numbers: ಜಗತ್ತಿನಲ್ಲಿ ದುರದೃಷ್ಟ ಎನಿಸಿಕೊಂಡಿರೋ ಸಂಖ್ಯೆಗಳಿವು..

ಸಾರಾಂಶ

ಸಂಖ್ಯೆ 13, 4, 7, 8, 24, 43 ಮುಂತಾದವುಗಳನ್ನು ಕೆಲ ದೇಶಗಳಲ್ಲಿ ದುರದೃಷ್ಟದ ಸಂಖ್ಯೆ ಎನ್ನಲಾಗುತ್ತದೆ. ಕಾರಣ ಏನು ಗೊತ್ತಾ?

ಸಂಖ್ಯಾಶಾಸ್ತ್ರದ ಪ್ರಕಾರ ಕೆಲ ಸಂಖ್ಯೆಗಳು ಅದೃಷ್ಟ ಎನಿಸಿಕೊಂಡರೆ ಮತ್ತೆ ಕೆಲವು ದುರದೃಷ್ಟ ಸಂಖ್ಯೆಗಳು ಎನಿಸಿಕೊಳ್ಳುತ್ತವೆ. ಆದರೆ, ಜಗತ್ತಿನಾದ್ಯಂತ ಕೆಲ ಸಂಖ್ಯೆಗಳನ್ನು ಆಯಾ ಪ್ರದೇಶದ ನಂಬಿಕೆ, ವಿಚಾರಗಳಿಗನುಗುಣವಾಗಿ ಅನ್‌ಲಕ್ಕಿ ನಂಬರ್ಸ್ ಎನ್ನಲಾಗುತ್ತದೆ. ಸಂಖ್ಯೆ 13, 43 ಸೇರಿದಂತೆ ಬಹಳಷ್ಟು ಸಂಖ್ಯೆಗಳು ಈ ಕಳಂಕ ಹೊತ್ತಿವೆ. 

ಸಂಖ್ಯೆ 4
ಬಹಳಷ್ಟು ಪೂರ್ವ ಏಷ್ಯಾ ದೇಶಗಳಲ್ಲಿ(East Asian countries) ಸಂಖ್ಯೆ 4ನ್ನು ದುರದೃಷ್ಟ ಎನ್ನಲಾಗುತ್ತದೆ. ಅದರಲ್ಲೂ ಚೀನಿಯರಿಗೆ 4 ಎಂದರೆ ಅಪಶಕುನ ಎಂಬ ನಂಬಿಕೆ ಹೆಚ್ಚು. ಸಂಖ್ಯೆ ನಾಲ್ಕನ್ನು ಚೀನಾದ ಭಾಷೆಯಲ್ಲಿ ಹೇಳಿದಾಗ ಅಲ್ಲಿ ಸಾವಿಗೆ ಉಪಯೋಗಿಸುವ ಪದದ ಹಾಗೆಯೇ ಕೇಲಿಸುತ್ತದೆ. ಇದೇ ಕಾರಣಕ್ಕೆ ಚೀನೀಯರು 4 ಎಂದರೆ ಸಾವು ಎಂದುಕೊಳ್ಳುತ್ತಾರೆ. ಈ ನಂಬಿಕೆ ಎಷ್ಟು ಬಲವಾಗಿದೆ ಎಂದರೆ, ಚೀನಾದ ಯಾವ ಕಟ್ಟಡಗಳಲ್ಲೂ ನಿಮಗೆ ಸಂಖ್ಯೆ 4, 13, 14, 24ನೇ ಅಂತಸ್ತುಗಳಿರುವುದಿಲ್ಲ. ಅಂದರೆ, ಆ ಅಂತಸ್ತಿಗೆ ಈ ದುರದೃಷ್ಟದ ಸಂಖ್ಯೆಯ ಹೊರತಾದ ಸಂಖ್ಯೆ ನೀಡಲಾಗುತ್ತದೆ. 

ಸಂಖ್ಯೆ 13
ಜಗತ್ತಿನ ಬಹುತೇಕ ದೇಶಗಳಲ್ಲಿ ಸಂಖ್ಯೆ 13 ಎಂದರೆ ಕೆಟ್ಟದ್ದು, ಅಪಶಕುನ ಎಂಬ ನಂಬಿಕೆ ಇದೆ. ಸುಮಾರಿಗೆ ಯಾವ ಕಟ್ಟಡದಲ್ಲಿಯೂ 13ನೇ ಅಂತಸ್ತು ಇರುವುದಿಲ್ಲ. 12ರ ನಂತರ 14ನೇ ಅಂತಸ್ತು ಇರುತ್ತದೆ. ಏಸುವಿನ ಕೊನೆಯ ಊಟದಲ್ಲಿ ಭಾಗವಹಿಸಿದ 13ನೇ ಅತಿಥಿ ಜುಡಾಸ್ ಇಸ್ಕಾರಿಯೋಟ್(Judas Iscariot) ಜೀಸಸ್‌(Jesus)ಗೆ ಮೋಸ ಮಾಡಿದ. ಹೀಗಾಗಿ, ಕ್ರಿಶ್ಚಿಯನ್ನರಿಗೆ 13 ಎಂದರೆ ಅಲರ್ಜಿ. ಪಾರ್ಸಿಯರಿಗೆ ಕೂಡಾ 13 ಆಗಿ ಬರುವುದಿಲ್ಲ. 

Lizard Falling Meaning: ಹಲ್ಲಿ ಮೈ ಮೇಲೆ ಎಲ್ಲಿ ಬಿದ್ದರೆ ಏನರ್ಥ ತಿಳ್ಕೊಳಿ..

ನಂಬರ್ 24
ಜಪಾನಿಗರು 24 ಸಂಖ್ಯೆ ಕಂಡರೆ ಬೆಚ್ಚುತ್ತಾರೆ. ಇದಕ್ಕೆ ಕಾರಣ, ಹುಟ್ಟುತ್ತಲೇ ಸಾವು ಎಂಬ ಜಪಾನಿ ಪದಕ್ಕೂ 24 ಸಂಖ್ಯೆಯ ಉಚ್ಛರಣೆಯೂ ಜಪಾನಿನಲ್ಲಿ ಒಂದೇ ತರ ಇರುವುದು. 

ಸಂಖ್ಯೆ 39
ಸಂಖ್ಯೆ 39 ಎಂದರೆ ದುರದೃಷ್ಟ ಎಂದು ನಂಬಿದವರು ಆಫ್ಘನ್ನರು. ಆಫ್ಘಾನಿ ಭಾಷೆಯಲ್ಲಿ 39 ಎಂದು ಹೇಳುವುದು ಹೀಗೆ- ಮೊರ್ಡಾ- ಗೌ. ಇದರರ್ಥ ಸತ್ತ ಹಸು ಎಂದು. ಈ ಪದವನ್ನು ಸಾಮಾನ್ಯವಾಗಿ ವೇಶ್ಯಾವಾಟಿಕೆ ನಡೆಸುವ ಪಿಂಪ್‌ಗಳಿಗೆ ಬಳಸುತ್ತಾರೆ. ಹಾಗಾಗಿ, 39 ಸಂಖ್ಯೆ ಆಫ್ಘನ್ನರಿಗೆ ಆಗಿ ಬರುವುದಿಲ್ಲ. 

Good Luck : ಹೊಸ ವರ್ಷದಂದು ಈ ವಸ್ತುಗಳನ್ನು ಮನೆಗೆ ತಂದರೆ ಸದಾ ಸಂತೋಷ

ಸಂಖ್ಯೆ 43
ಜಪಾನಿನಲ್ಲಿ ಸಂಖ್ಯೆ 43 ದುರದೃಷ್ಟದ ಸಂಖ್ಯೆ. ಇದೂ ಕೂಡಾ 24ರಂತ ಅರ್ಥವನ್ನೇ ಕೊಡುತ್ತದೆ. ಇದೇ ಕಾರಣಕ್ಕೆ ಜಪಾನಿ(Japan)ನ ಯಾವುದೇ ಆಸ್ಪತ್ರೆಯಲ್ಲಿ 43 ಸಂಖ್ಯೆಯ ವಾರ್ಡ್ ಕಾಣಲಾರಿರಿ. 

ಸಂಖ್ಯೆ 7
ಬಹುತೇಕ ಕಡೆ ಸಂಖ್ಯೆ 7ನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಆದರೆ, ಚೀನಾ, ವಿಯೆಟ್ನಾಂ ಹಾಗೂ ಥೈಲ್ಯಾಂಡ್‌(Thailand)ಗಳ ಜನರಿಗೆ 7 ಕಂಡರೆ ಆಗುವುದಿಲ್ಲ. ಇದಕ್ಕೆ ಕಾರಣ 7ನೇ ತಿಂಗಳು ಗೋಸ್ಟ್ ಮಂತ್(Ghost month) ಎಂಬ ಅವರ ನಂಬಿಕೆ. ಈ ತಿಂಗಳಲ್ಲಿ ನರಕದ ಬಾಗಿಲು ತೆರೆದಿರುತ್ತದೆ ಹಾಗೂ ದೆವ್ವಗಳು ಭೂಮಿಗೆ ಬರುತ್ತವೆ ಎಂದು ಇವರು ನಂಬಿದ್ದಾರೆ. 

ಸಂಖ್ಯೆ 8
ಸಂಖ್ಯೆ 8 ಕೆಲ ದೇಶಗಳಿಗೆ ಲಕ್ಕಿ ಎನಿಸಿದ್ದರೆ, ಭಾರತೀಯರಿಗೆ ಮಾತ್ರ ದುರದೃಷ್ಟ ಎನಿಸಿದೆ. ಇದು ಶನಿ(saturn) ಗ್ರಹಕ್ಕೆ ಸಂಬಂಧಿಸಿರುವುದೇ ಇದಕ್ಕೆ ಕಾರಣ. ಹೀಗಾಗಿ, ಸಂಖ್ಯೆ 8 ಎಂದರೆ ಸಂಬಂಧಗಳನ್ನು ಹಾಳು ಮಾಡುತ್ತದೆ, ಕೆಟ್ಟದೇ ಮಾಡುತ್ತದೆ ಎಂಬ ನಂಬಿಕೆ ಇದೆ. 

ಸಂಖ್ಯೆ 666
ಕ್ರೈಸ್ತ ದೇಶಗಳಿಗೆ ಆಗಿ ಬರದ ಮತ್ತೊಂದು ಸಂಖ್ಯೆ ಎಂದರೆ 666. ಅವರು ಸಂಖ್ಯೆಯನ್ನು ದೆವ್ವದ ಸಂಖ್ಯೆ(number of the beast) ಎನ್ನುತ್ತಾರೆ. ಬೈಬಲ್‌ನಲ್ಲಿ ಈ ವಿಷಯವಿದ್ದು, ಕ್ರಿಶ್ಚಿಯನ್ನರಿಗೆ ಈ ಸಂಖ್ಯೆ ದುರದೃಷ್ಟದ್ದಾಗಿದೆ. 
 

PREV
Read more Articles on
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ