ನಮ್ಮ ಆಯಸ್ಸು ಹಾಗೂ ಬದುಕಿನ ಗುಣಮಟ್ಟವು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಹಾಗಾಗಿ, ಬರುವ ವರ್ಷ ನಮ್ಮ ಆರೋಗ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಂಡರೆ, ಯಾವ ಸಂದರ್ಭದಲ್ಲಿ ಹೇಗೆ ಕಾಳಜಿ ಮಾಡಿ ಆರೋಗ್ಯ ಸರಿ ಪಡಿಸಿಕೊಳ್ಳಬೇಕು ಎಂದು ಮುಂಚಿತವಾಗಿ ಕ್ರಮ ತೆಗೆದುಕೊಳ್ಳಬಹುದು.
ಆರೋಗ್ಯವೇ ಭಾಗ್ಯ. ನಮ್ಮ ಆರೋಗ್ಯ ಚೆನ್ನಾಗಿಟ್ಟುಕೊಂಡರೆ ಬದುಕಿನಲ್ಲಿ ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಬಹುದು. ಅಂದುಕೊಂಡಿದ್ದೆಲ್ಲ ಸಾಧಿಸಿ ಅದನ್ನು ಅನುಭವಿಸಲು ಆರೋಗ್ಯವೇ ಇಲ್ಲವಾದರೆ ಮಾತ್ರ ಕಷ್ಟ. ಹೀಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. 2022ರಲ್ಲಿ ಯಾವ ರಾಶಿಯವರ ಆರೋಗ್ಯ ಹೇಗಿರಲಿದೆ, ಯಾವ ಸಂದರ್ಭದಲ್ಲಿ ಯಾರು ಹೆಚ್ಚು ಆರೋಗ್ಯ ಕಾಳಜಿ ಮಾಡಬೇಕು, ಯಾವ ಸಮಯದಲ್ಲಿ ದೇಹವು ಸಂಪೂರ್ಣ ಸಹಕಾರ ಕೊಡುತ್ತದೆ ಎಂಬ ಮಾಹಿತಿ ಇಲ್ಲಿದೆ.
ಮೇಷ(Aries)
ನೀವು ಆರೋಗ್ಯದ ಬಗ್ಗೆ ಕೊಂಚ ಹೆಚ್ಚೇ ಕಾಳಜಿ ವಹಿಸಬೇಕು. ಆರೋಗ್ಯ(Health)ವನ್ನು ಹಗುರವಾಗಿ ಪರಿಗಣಿಸಬೇಡಿ. ನಿಮ್ಮ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗುವ ಜಂಕ್ ಫುಡ್‌ಗಳನ್ನು ಸಂಪೂರ್ಣ ದೂರವಿಡಿ. ಮನೆಯಲ್ಲೇ ತಯಾರಿಸಿದ ಆರೋಗ್ಯಕರ ಆಹಾರ ಸೇವಿಸಿ. ವರ್ಷ ಪೂರ್ತಿ ತರಕಾರಿ, ಹಣ್ಣುಗಳ ಸೇವನೆ ಹೆಚ್ಚಿಸಿ.
ವೃಷಭ(Taurus)
ವಿವಾಹಿತರು ತಮ್ಮ ತಂದೆತಾಯಿಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆಗಾಗ ಅವರ ಆರೋಗ್ಯ ತಪಾಸಣೆ ಮಾಡಿಸಿ. ಸಮಯಕ್ಕೆ ಸರಿಯಾಗಿ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಾರಾ ಎಂದು ಪರಿಶೀಲಿಸಿ. ಅರಲ್ಲಿ ವೀಕ್ನೆಸ್ ಅಥವಾ ಏನಾದರೂ ಸುಸ್ತು ಕಂಡು ಬಂದಾಗ ಕೂಡಲೇ ವೈದ್ಯರನ್ನು ಕಾಣಿ. ವೈದ್ಯರ ಯಾವುದೇ ಮಾತನ್ನು ನಿರ್ಲಕ್ಷ್ಯ ಮಾಡಬೇಡಿ.
Self care tips for 2022: ನಿಮ್ಮ ರಾಶಿಗೆ ಈ ಅಭ್ಯಾಸ ಒಳ್ಳೇದು..
ಮಿಥುನ(Gemini)
ಈ ವರ್ಷ ನೀವು ಆರೋಗ್ಯವನ್ನು ಎಲ್ಲಕ್ಕಿಂತ ಹೆಚ್ಚು ಪ್ರಾಮುಖ್ಯತೆ ಕೊಟ್ಟು ನೋಡಿಕೊಳ್ಳಬೇಕು. ಆರೋಗ್ಯ, ಫಿಟ್ನೆಸ್(fitness) ಹಾಗೂ ಆಹಾರ(diet)ವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದಿರಿ. ಇವುಗಳಲ್ಲಿ ಯಾವುದರಲ್ಲಿ ಕೊಂಚ ಕಾಂಪ್ರಮೈಸ್ ಮಾಡಿಕೊಂಡರೂ ನಿಮ್ಮ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಬಹುದು. ಬಿಪಿ, ಸಕ್ಕರೆ ಕಾಯಿಲೆ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿರುವವರು ಕೊಂಚ ಹೆಚ್ಚೇ ಎಚ್ಚರಿಕೆಯಿಂದಿರಬೇಕು.
ಕಟಕ(Cancer)
ಹವಾಮಾನ ಬದಲಾವಣೆಯಾದಂತೆ ಕಾಣಿಸಿಕೊಳ್ಳುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಬರದಂತೆ ಮೊದಲೇ ಎಚ್ಚರಿಕೆ ವಹಿಸಿ. ನಿಮ್ಮ ಜೊತೆ ನಿಮ್ಮ ಕುಟುಂಬದ ಆರೋಗ್ಯದ ಹೊಣೆಯನ್ನೂ ತೆಗೆದುಕೊಳ್ಳಿ. ಏಕೆಂದರೆ ಸಾಂಕ್ರಾಮಿಕ ರೋಗಗಳು ಕಾಣಿಸಬಹುದಾದ ಸಾಧ್ಯತೆಗಳಿವೆ. ಮೂರು ದಿನಕ್ಕಿಂತ ಹೆಚ್ಚು ದಿನ ಸಣ್ಣ ಆರೋಗ್ಯ ಸಮಸ್ಯೆಗಳಿದ್ದರೆ, ಅವನ್ನು ಸಣ್ಣದೆಂದು ನಿರ್ಲಕ್ಷ್ಯ ವಹಿಸದಿರಿ.
Traits and Zodiac signs: ಶ್, ಮಾತಾಡುವಾಗ ಜಾಗ್ರತೆ! ಈ ರಾಶಿಗಳ ಬಾಯಲ್ಲಿ ಗುಟ್ಟು ನಿಲ್ಲೋಲ್ಲ
ಸಿಂಹ(Leo)
ಈ ವರ್ಷ ಸಿಂಹ ರಾಶಿಯವರೆಲ್ಲರೂ ತಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಬದುಕನ್ನು ತುಂಬಾ ಚೆನ್ನಾಗಿ ಅನುಭವಿಸಲಿದ್ದಾರೆ. ಇದು ಸಿಂಹ ರಾಶಿಯವರಿಗೆ ದೊಡ್ಡ ಆಶೀರ್ವಾದವೇ ಆಗಿದೆ. ವಾರಾಂತ್ಯಗಳನ್ನು ಕುಟುಂಬದೊಂದಿಗೆ ಕಳೆಯಲು ಪ್ರಯತ್ನಿಸಿ. ಆದಷ್ಟು ಪ್ರವಾಸ, ಡಿನ್ನರ್ ಆಯೋಜಿಸಿ. ಈ ವರ್ಷ ಆರೋಗ್ಯಕರವಾಗಿದ್ದು, ನೆನಪಿನಲ್ಲುಳಿಯುವಂಥ ಸನ್ನಿವೇಶಗಳು ಸೃಷ್ಟಿಯಾಗಲಿವೆ.
ಕನ್ಯಾ(Virgo)
ನಿಮ್ಮ ಆರೋಗ್ಯ 2022ರಲ್ಲಿ ಬಹಳ ಚೆನ್ನಾಗಿರಲಿದೆ. ಆದರೆ, ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಅವರ ಆರೋಗ್ಯವನ್ನು ಮತ್ತೆ ಮತ್ತೆ ತಪಾಸಣೆ ಮಾಡಿಸಿ. ಮಕ್ಕಳು ಹಾಗೂ ಸಂಗಾತಿಯ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯ ಧೋರಣೆ ಬೇಡ.
ತುಲಾ(Libra)
ನಿಮ್ಮ ಆರೋಗ್ಯ ಈ ವರ್ಷ ಸಂಪೂರ್ಣ ಸಾಥ್ ಕೊಡುತ್ತದೆ. ನಿಮ್ಮ ಅನಾರೋಗ್ಯಕಾರಿ ತಿನ್ನುವ ಅಭ್ಯಾಸ ಬಿಟ್ಟು ಫಿಟ್ನೆಸ್‌ನತ್ತ ಗಮನ ಹರಿಸಿ. ಇದರಿಂದ ಫಿಟ್ ಆಗುವುದಷ್ಟೇ ಅಲ್ಲ, ಹೆಚ್ಚು ಉತ್ಸಾಹದಿಂದ ಬದುಕಲು ಸಾಧ್ಯವಾಗುತ್ತದೆ. ಫಿಟ್ನೆಸ್‌ನೆಡೆಗಿನ ಪಯಣವನ್ನು ಅರ್ಧಕ್ಕೇ ನಿಲ್ಲಿಸಬೇಡಿ.
ವೃಶ್ಚಿಕ(Scorpio)
ಈ ವರ್ಷ ಪೂರ್ತಿ ಹವಾಮಾನ ಕಾರಣಗಳಿಗಾಗಿ ಸಣ್ಣ ಪುಟ್ಟದೇ ಆದರೂ ಆರೋಗ್ಯ ಸಮಸ್ಯೆಗಳು ನಿಲ್ಲುವುದಿಲ್ಲ. ನೀವು ಬೇಕೆಂದಿದ್ದೆಲ್ಲ ತಿನ್ನಲು ಸಾಧ್ಯವಾಗುವುದಿಲ್ಲ. ಹಾಗಾಗಿ, ನಾಲಿಗೆಯನ್ನು ಕಡೆಗಣಿಸಿ, ಆರೋಗ್ಯಕ್ಕೇನು ಬೇಕೋ ಅದನ್ನೇ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಪಥ್ಯ, ಆಹಾರದ ಬಗ್ಗೆ ಹೆಚ್ಚು ಗಮನ ವಹಿಸಿ.
ಧನು(Sagittarius)
ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾದು ಕೊಳ್ಳಲು ಸ್ವಲ್ಪ ಹೆಚ್ಚು ಪ್ರಯತ್ನವನ್ನು ಹಾಕಬೇಕಾದೀತು. ಅತಿಯಾಗಿ ಫಿಟ್ನೆಸ್ ರೂಟೀನ್ ಬೇಡ. ಎಲ್ಲವೂ ಮಿತಿಯಲ್ಲಿದ್ದರೇ ಚೆನ್ನ. ದೇಹವನ್ನು ಅರ್ಥ ಮಾಡಿಕೊಂಡು ಅದಕ್ಕೆಷ್ಟು ಬೇಕೋ ಅಷ್ಟೇ ಕೊಡಿ. ಅತಿಯಾಗಿ ತೂಕ ಎತ್ತಿ ದೇಹ ಬೆಳೆಸುವ ಬದಲು ಸಾಮಾನ್ಯ ಫಿಟ್ನೆಸ್ ಕಾದುಕೊಳ್ಳುವ ಕಡೆ ಗಮನ ಹರಿಸಿ.
ಮಕರ(Capricorn)
ಶನಿಯ ಧನಾತ್ಮಕ ಪರಿಣಾಮಗಳ ಫಲವಾಗಿ ವರ್ಷದ ಮೊದಲಾರ್ಧ ನಿಮ್ಮ ಎನರ್ಜಿ ಹೆಚ್ಚಿರುತ್ತದೆ. ಕಾಯಿಲೆಗಳ ಭಯ ಬೇಡ. ಆದರೆ, ನವೆಂಬರ್ ನಂತರ ಆರೋಗ್ಯದಲ್ಲಿ ಕೆಲ ಅನಿರೀಕ್ಷಿತ ಸಮಸ್ಯೆಗಳು ಕಾಣಿಸಬಹುದು. ನೀವೇ ಮನೆಯೌಷಧಿ ಮಾಡುತ್ತಾ ಕೂರಬೇಡಿ. ವೈದ್ಯರ ಬಳಿ ಹೋಗಿ.
ಕುಂಭ(Aquarius)
2022ರಲ್ಲಿ ವರ್ಕ್- ಲೈಫ್ ಬ್ಯಾಲೆನ್ಸ್ ಚೆನ್ನಾಗಿರುತ್ತದೆ. ನೀವು ಗಮನ ಹರಿಸಬೇಕಾಗಿರುವುದು ನಿಮ್ಮ ಡಯಟ್ ಬಗ್ಗೆಯಷ್ಟೇ. ಆರೋಗ್ಯಕರ ಆಹಾರ ಸೇವಿಸಿ. ಸಾಕಷ್ಟು ಹಣ್ಣುತರಕಾರಿಗಳ ಸೇವನೆ ಮಾಡಿ. ಊಟದಲ್ಲಿ ಹಸಿರು ಸೊಪ್ಪು ತರಕಾರಿಗಳ ಸೇವನೆ ಹೆಚ್ಚಿಸಿ.
ಮೀನ(Pisces)
ಬರುವ ವರ್ಷ ನಿಮಗೆ ಒತ್ತಡ ಮುಕ್ತ ಜೀವನವಿದೆ. ತಲೆ ಕೆಡಿಸಿಕೊಳ್ಳುವಂಥ ಆರೋಗ್ಯ ಸಮಸ್ಯೆಗಳು ಎದುರಾಗಲಾರವು. ಆದರೆ, ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ. ಯೋಗಾಭ್ಯಾಸ ಇಟ್ಟುಕೊಳ್ಳಿ.