ನಿಮ್ಮ ಸ್ವಭಾವ ರಾಶಿಗನುಗುಣವಾಗಿರತ್ತದೆ. ನಿಮ್ಮ ಸ್ವಭಾವಕ್ಕೆ ಸರಿಯಾಗಿ ಯಾವ ರೀತಿಯ ಸೆಲ್ಫ್ ಕೇರ್ ಅಭ್ಯಾಸ ರೂಢಿಸಿಕೊಂಡರೆ ನಿಮಗದು ಹೆಚ್ಚು ಹೊಂದುತ್ತದೆ ಎಂಬುದನ್ನು ತಜ್ಞರು ತಿಳಿಸಿದ್ದಾರೆ. 2022ರಲ್ಲಿ ನಿಮ್ಮ ರಾಶಿಗೆ ನೀವು ಅಳವಡಿಸಿಕೊಳ್ಳಬೇಕಾದ ಸೆಲ್ಫ್ ಕೇರ್ ರೂಟೀನ್ ಏನು ಗೊತ್ತಾ?
ಕಳೆದೆರಡು ವರ್ಷಗಳು ಬಹುತೇಕ ಎಲ್ಲರಿಗೂ ಒತ್ತಡದಾಯಕವೇ. ಅದಕ್ಕೇ 2022ನ್ನು ಒಳ್ಳೆಯ ಸೆಲ್ಫ್ ಕೇರ್ ಅಭ್ಯಾಸದಿಂದ ಆರಂಭಿಸುವುದು ಮುಖ್ಯ. ಆರಂಭ ಚೆನ್ನಾಗಿದ್ದರೆ ವರ್ಷವಿಡೀ ಚೆನ್ನಾಗಿಯೇ ಸಾಗುತ್ತದೆ. ಸುಲಭವಾಗಿ ನಿರ್ವಹಿಸಬಲ್ಲ, ನಿರಂತರ ಮುಂದುವರಿಸಿಕೊಂಡು ಹೋಗಲು ಸರಳವಾಗಿರುವ ಈ ಸಲಹೆಗಳನ್ನು ಪಾಲಿಸುವುದರಿಂದ ಪ್ರತಿಯೊಬ್ಬರು ಕೂಡಾ ತಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬಹುದು.
ನಿಮ್ಮ ರಾಶಿಚಕ್ರ(zodiac sign)ಕ್ಕೆ ಯಾವ ರೀತಿಯಲ್ಲಿ ನಿಮ್ಮನ್ನು ನೀವು ಕಾಳಜಿ ವಹಿಸಿಕೊಳ್ಳಬೇಕು, ಏನು ಮಾಡಿದರೆ ವರ್ಷವಿಡೀ ಎನರ್ಜಿಯಿಂದಿರುತ್ತೀರಿ, ಯಾವುದರಿಂದ ನಿಮ್ಮ ಸಾಮರ್ಥ್ಯ ಹೆಚ್ಚಲಿದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಮೇಷ(Aries): ನೀವು ಸದಾ ಚಲನಶೀಲರು. ಕೆಲಸ ಮಾಡುತ್ತಲೇ ಇರುತ್ತೀರಿ, ಯಾವುದೇ ವಿಷಯಕ್ಕೆ ಮುನ್ನುಗ್ಗುತ್ತಿರುತ್ತೀರಿ. ಆದರೆ, ನಿಮಗೆ ನೀವು ಸಮಯವನ್ನು ಕೊಟ್ಟುಕೊಳ್ಳುವುದೇ ಇಲ್ಲ. ನಿಮ್ಮ ಒತ್ತಡ ಕಳೆಯಲು ಅಡಲ್ಟ್ ಕಲರಿಂಗ್ ಬುಕ್(adult coloring books)ಗೆ ಬಣ್ಣ ಹಾಕುವ ಅಭ್ಯಾಸ ರೂಢಿಸಿಕೊಳ್ಳಿ. ನಿಧಾನವಾಗಿ ಇದೆಂಥ ಆತ್ಮಸಂತೋಷ ತಂದುಕೊಡುತ್ತದೆ ಎಂದು ಸ್ವತಃ ಅನುಭವಿಸಿ ನೋಡುವಿರಿ.
ವೃಷಭ(Taurus): ನಿಮ್ಮ ರಾಶಿ ಗಂಟಲ ಚಕ್ರವನ್ನು ಆಳುತ್ತದೆ. ಹಾಗಾಗಿ, ಹಾಡುವುದು, ಗುನುಗುವುದು ಅಥವಾ ಮಾತನಾಡುವುದೇ ನಿಮ್ಮ ದೇಹಕ್ಕೆ ಅತ್ಯುತ್ತಮ ಜೈವಿಕ ಥೆರಪಿ. ಇದರಿಂದ ನೀವು ಪ್ರಾಮಾಣಿಕವಾಗಿ ಬದುಕಲು ಸಾಧ್ಯವಾಗುತ್ತದೆ. ನಿಮ್ಮ ಭಾವನೆಗಳನ್ನು ಹೊರ ಹಾಕಲು ಸಾಧ್ಯವಾಗುತ್ತದೆ.
ಮಿಥುನ(Gemini): ನಿಮಗೆ ದೈನಂದಿನ ಬದುಕಿನಲ್ಲಿ ದಿನಚರಿ(routine) ಇರುವುದು ಮುಖ್ಯ. ಹಾಗಾಗಿ, ಪ್ರತಿ ದಿನ 10 ನಿಮಿಷ ನಿಮ್ಮ ಸೌಂದರ್ಯಕ್ಕಾಗಿ ಮೀಸಲಡಿ. ತಲೆಕೂದಲ ಆರೈಕೆ, ತ್ವಚೆಯ ಆರೈಕೆ ಸೇರಿದಂತೆ ಸೌಂದರ್ಯಕ್ಕೆ ಸಂಬಂಧಿಸಿದ ಉತ್ತಮ ಅಭ್ಯಾಸಗಳನ್ನು ದಿನಚರಿಯಾಗಿಸಿಕೊಳ್ಳಿ. ಇದೇ ನಿಮಗೆ ಅತ್ಯುತ್ತಮ ಸೆಲ್ಫ್ ಕೇರ್ ಅಭ್ಯಾಸ ಆಗಲಿದೆ.
Daily Horoscope: ವೃಶ್ಚಿಕ ರಾಶಿಗೆ ಧನನಷ್ಟ, ವೃಷಭಕ್ಕೆ ಕೈ ಹಿಡಿವುದು ಅದೃಷ್ಟ
undefined
ಕಟಕ(Cancer): ವಾರಕ್ಕೊಮ್ಮೆ ಉಪ್ಪು ನೀರು ಹಾಗೂ ಹೂವುಗಳನ್ನು ಹಾಕಿಕೊಂಡು ಸಮಯ ತೆಗೆದುಕೊಂಡು ಮಾಡುವ ಸ್ನಾನ ನಿಮಗೆ ಬಹಳ ರಿಲ್ಯಾಕ್ಸೇಶನ್ ನೀಡುತ್ತದೆ. ವರ್ಷವಿಡೀ ಈ ಅಭ್ಯಾಸ ಮುಂದುವರಿಸಿ. ಇದರಿಂದ ನಿಮ್ಮ ಒತ್ತಡಗಳು, ಕಿರಿಕಿರಿ ಹತೋಟಿಗೆ ಬಂದು ಪ್ರತಿ ಸ್ನಾನದ ಬಳಿಕ ಹೊಸ ನಿಮ್ಮನ್ನು ನೀವು ಕಂಡುಕೊಳ್ಳುವಿರಿ.
ಸಿಂಹ(Leo): ನಿಮ್ಮ ಚಕ್ರಗಳನ್ನು ಸ್ವಚ್ಛ ಮಾಡಲು ಅತ್ಯುತ್ತಮ ಸ್ವ ಕಾಳಜಿಯ ಅಭ್ಯಾಸ ಎಂದರೆ ನೃತ್ಯ. ಹೊಸ ವರ್ಷವಿಡೀ ಪ್ರತಿದಿನ ಸ್ವಲ್ಪ ಸಮಯವಾದರೂ ಡ್ಯಾನ್ಸ್(dance) ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ, ಮೆದುಳು ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುತ್ತದೆ.
ಕನ್ಯಾ(Virgo): ಬಹಳಷ್ಟು ಬಾರಿ ಶಾಂತಿ ಬೇಕೆಂದರೆ ನಿಮ್ಮ ಗಂಟಲಿಗೆ ಬಂದ ಮಾತನ್ನು ಮತ್ತೆ ನುಂಗಿಕೊಳ್ಳುವಂತೆ ನಿಮಗಾಗುತ್ತದೆ. ಹಾಗಾಗಿ, ನಿಮ್ಮ ಭಾವನೆಗಳೆಲ್ಲ ಅಭಿವ್ಯಕ್ತಿಯೇ ಇಲ್ಲದೆ ಸ್ನಾಯುಗಳ ಸೆಳೆತ, ನೋವು ಕಂಡುಬರುತ್ತದೆ. ಹಾಗಾಗಿ, ಹೊಸ ವರ್ಷದಲ್ಲಿ ಪ್ರತಿ ವಾರ ಮಸಾಜ್ ಮಾಡಿಕೊಳ್ಳಿ. ಸಾಧ್ಯವಾದರೆ ಮಾಡಿಸಿಕೊಳ್ಳಿ. ಉತ್ತಮ ಮಸಾಜರ್ ಬಳಕೆಯು ನಿಮ್ಮ ಸಹಾಯಕ್ಕೆ ಬರಬಹುದು.
ಶೀಘ್ರವೇ ಕಲ್ಯಾಣ ಪ್ರಾಪ್ತಿಯಾಗಲು ಇಲ್ಲಿವೆ ಜ್ಯೋತಿಷ್ಯ ಸಲಹೆಗಳು
ತುಲಾ(Libra): ನೀವು ಇನ್ನೊಬ್ಬರಿಗೆ ಕಾಳಜಿ ಮಾಡುವಷ್ಟು ನಿಮಗೆ ಸಿಗುವುದಿಲ್ಲ. ಅದಕ್ಕೇ ನೀವು ಹೊಸ ವರ್ಷದಲ್ಲಿ ಸಾಧ್ಯವಾದಷ್ಟು ಫೋನ್‌ನಿಂದ ದೂರ ಉಳಿಯಿರಿ. ಇನ್ನೊಬ್ಬರ ಸಮಸ್ಯೆಯನ್ನು ತಲೆ ಮೇಲೆ ಹೊತ್ತು ತಿರುಗುವುದು ತಪ್ಪುತ್ತದೆ. ಆ ಸಮಯವನ್ನು ನಿಮ್ಮ ಬೆಳವಣಿಗೆ ಕಡೆಗೆ ಮೀಸಲಿಡಬಹುದು. ಇದೇ ನೀವು 2022ರಲ್ಲಿ ಅಭ್ಯಾಸ ಮಾಡಿಕೊಳ್ಳಬೇಕಾದ ಸೆಲ್ಫ್ ಕೇರ್ ರೂಟಿನ್.
ವೃಶ್ಚಿಕ(Scorpio): ನಿಮ್ಮ ತಲೆಯ ಎಲ್ಲ ಗಜಿಬಿಜಿಗಳಿಂದ ಹೊರಬರಲು ನಿಮಗೆ ನೆರವಾಗುವುದು ದೇಹಕ್ಕೆ ಕಸರತ್ತು. ಚಾರಣ(trekking, hiking)ಗಳು, ಲಾಂಗ್ ವಾಕ್‌ಗಳು ನಿಮ್ಮ ನೆರವಿಗೆ ಬರುತ್ತವೆ. ಹಾಗಾಗಿ, ಹೊಸ ವರ್ಷದಲ್ಲಿ ಪ್ರತಿ ದಿನ ವಾಕಿಂಗ್, ತಿಂಗಳಿಗೊಮ್ಮೆ ಚಾರಣ ಅಭ್ಯಾಸ ಮಾಡಿಕೊಳ್ಳಿ.
ಧನುಸ್ಸು(Sagittarius): ಈ ವರ್ಷ ಅತಿಯಾಗಿ ಕೆಲಸ ಮಾಡಿ ಎನರ್ಜಿ ಕಳೆದುಕೊಂಡಿದ್ದೀರಿ. ಹಾಗಾಗಿ, 2022ರಲ್ಲಿ ಚೆನ್ನಾಗಿ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಿ. ನಿಮ್ಮ ದೇಹಕ್ಕೆ ಬೇಕಾದ ವಿಶ್ರಾಂತಿಯನ್ನು ಒದಗಿಸಿಕೊಡಿ. ಕೆಲಸ ಮಾಡುವಾಗಲೂ ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಂಡು ಸಣ್ಣದೊಂದು ವಾಕ್ ಮಾಡುವುದನ್ನು ಮರೆಯದಿರಿ.
ಮಕರ(Capricorn): 2022 ಆರಂಭದಲ್ಲಿ ನಿಮಗೆ ಸ್ವಲ್ಪ ಒತ್ತಡದಾಯಕವಾಗಲಿದೆ. ಹಾಗಾಗಿ, ಹೊಸ ವರ್ಷದಲ್ಲಿ ನೀವು ಅನುಸರಿಸಬೇಕಾದ ಸ್ವಕಾಳಜಿಯ ಸಲಹೆ ಎಂದರೆ, ಯಾವುದೇ ಜಗಳ, ನಾಟಕಗಳಿಗೆ ತಲೆ ಹಾಕದೆ, ಕೇವಲ ನಿಮ್ಮ ಪಾಡಿಗೆ ನೀವಿರುವುದನ್ನು ಅಭ್ಯಾಸ ಮಾಡಿಕೊಳ್ಳುವುದು.
ಕುಂಭ(Aquarius): ನೀವು ಮಾತನ್ನು ಬಯಸುವವರು. ಹಾಗಾಗಿ, ನಿಮಗೆ 2022ರಲ್ಲಿ ಉತ್ತಮ ಹೀಲಿಂಗ್ ಆ್ಯಕ್ಟಿವಿಟಿ ಎಂದರೆ ಸೌಂಡ್ ಥೆರಪಿ. ಉತ್ತಮ ಮ್ಯೂಸಿಕ್‌ಗಳನ್ನು ಕೇಳಿ, ಮನೆಯ ಸ್ಪೀಕರ್‌ಗಳಲ್ಲಿ ಸದಾ ಸಂಗೀತ ಹೊಮ್ಮುತ್ತಿರಲಿ. ಇದರಿಂದ ನಿಮ್ಮ ಕೋಪ, ಖಿನ್ನತೆ, ಇತರೆ ಕಿರಿಕಿರಿಗಳು ಶಮನವಾಗುವುವು.
ಮೀನ(Pisces): ನಿಮಗೆ ಹಲವು ವಿಷಯಗಳಲ್ಲಿ ಗೊಂದಲ ಕಾಡುತ್ತಲೇ ಇರುತ್ತದೆ. ಯಾವುದನ್ನೂ ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ. ಅದಕ್ಕೇ, ನಿಮ್ಮ ನೆರವಿಗೆ ಬರುವ ಸೆಲ್ಫ್ ಕೇರ್ ಎಂದರೆ ಧ್ಯಾನ(meditation). ಪ್ರತಿ ದಿನ ಧ್ಯಾನ ರೂಢಿಸಿಕೊಳ್ಳಿ. ಮನಸ್ಸನ್ನು ಸ್ವಚ್ಛವಾಗಿಸಿಕೊಳ್ಳಿ.