ರಾಯಚೂರು ಜಿಲ್ಲೆಯಲ್ಲಿ ಮೊಹರಂ ಹಬ್ಬದ ಸಂಭ್ರಮ

By Ravi NayakFirst Published Aug 8, 2022, 7:23 PM IST
Highlights
  • ನೋಡುಗರನ್ನು ಕೈಬೀಸಿ ಕರೆಯುತ್ತಿದೆ ಜಾಲಹಳ್ಳಿ ಮೊಹರಂ!
  • ರಾಯಚೂರು ಜಿಲ್ಲೆ ದೇವದುರ್ಗ ತಾ. ಜಾಲಹಳ್ಳಿ ಗ್ರಾಮದಲ್ಲಿ ಮೊಹರಂ ಸಂಭ್ರಮ
  • ಮುದಗಲ್ ಮೊಹರಂ ದೇಶಾದ್ಯಂತ ಪ್ರಸಿದ್ಧಿ
  • ನಾನಾ ಭಾಗಗಳಿಂದ ಮೊಹರಂ ನೋಡಲು ಮುದಗಲ್‌ಗೆ ಬರುತ್ತಾರೆ!

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಆ.8) ಮೊಹರಂ ಹಬ್ಬ ಅಂದ್ರೆ ರಾಯಚೂರು ಜಿಲ್ಲೆಯಲ್ಲಿ ತುಂಬಾ ವಿಶೇಷವಾಗಿ ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ. ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿಯೂ ಮೊಹರಂ(Moharam) ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತೆ. ಲಿಂಗಸೂಗೂರು(Lingasaguru) ತಾಲೂಕಿನ ಮುದಗಲ್(Mudgal) ‌ಮೊಹರಂ ನೋಡಲು ಸಂಭ್ರಮದಿಂದ ಕೂಡಿರುತ್ತೆ.‌ 10 ದಿನಗಳ ಕಾಲ ನಡೆಯುವ ಮೊಹರಂ ಪ್ರತಿ ದಿನವೂ ಒಂದೊಂದು ವಿಶೇಷತೆ ಕಾಣಬಹುದಾಗಿದೆ. ಅದು ಬಿಟ್ಟರೇ ದೇವದುರ್ಗ(Devadurga) ತಾಲೂಕಿನ ಜಾಲಹಳ್ಳಿ(Jalahalli) ಪಟ್ಟಣದಲ್ಲಿಯು ಕೂಡ ತುಂಬಾ ಭಾವೈಕ್ಯತೆಯಿಂದ ಮೊಹರಂ ಅಚರಣೆ ಮಾಡಲಾಗುತ್ತಿದೆ.

ರಾಯಚೂರು: ಎರಡು ವರ್ಷಗಳ ಬಳಿಕ ಮುದಗಲ್‌ನಲ್ಲಿ ಮೊಹರಂ ಸಂಭ್ರಮ..!

 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಕೇವಲ ಒಂದೇ ಮಸೀದಿ ಇದ್ದು, ನಾಲ್ಕು ಹೆಸರಿನ  ದೇವರನ್ನು (ಪೀರಲು) ಹುಸೇನ ಪಾಷಾ, ಸೈಯದ್ ಖಾಸಿಂ, ಇಮಾಮ್ ಖಾಸಿಂ, ಹೈದರ್ ಅಲಿ ಈ ದೇವರನ್ನು ಪ್ರತಿಷ್ಠಾಪಿಸಿ ಭಾರಿ ವಿಜೃಂಭಣೆಯಿಂದ ಮೊಹರಂ ಅಚರಣೆ ಮಾಡಲಾಗುತ್ತದೆ. 7ನೇ ತಾರೀಕ್ ಅಚರಣೆ ಮಾಡಲಾಗುತ್ತೆ. ಅಂದು ಹೈದರ್ ಅಲಿ, ಇಮಾಮ್ ಖಾಸಿಂ ದೇವರ ಸವಾರಿ ಜರುಗುತ್ತವೆ. ಆ ಬಳಿಕ  ಕತಲ್ ರಾತ್ರಿ ಅಂಗವಾಗಿ ಹುಸೇನ್ ಪಾಷ, ಸೈಯದ್ ಖಾಸಿಂ ಈ ಎರಡು ದೇವರ ಸಾವರಿ ಜರುಗುತ್ತೆ.

ಪ್ರತಿಯೊಬ್ಬರ ಮನೆಯಲ್ಲಿ ಈ‌ ಹಬ್ಬ ಅಚರಣೆ ಮಾಡಲಾಗುತ್ತೆ. ಹಿಂದೂ‌-ಮುಸ್ಲಿಂ ಎನ್ನುವ ಯಾವುದೇ ಬೇಧ-ಭಾವ ಇಲ್ಲದೇ ಎಲ್ಲರೂ ಈ ಹಬ್ಬಕ್ಕೆ‌ ಮೆರಗು ನೀಡುತ್ತಾರೆ. ಹಬ್ಬಕ್ಕೆ ಚಾಲನೆ ಸಿಗುವುದೇ ಉಪ್ಪಾರ್ ಸಮಾಜದ ಬಂಡಿ ಕುಟುಂಬದವರು ಗುದ್ದಲಿ(ಕುಣಿ) ಅಗೆಯುವುದರಿಂದ ಪ್ರಾರಂಭವಾಗುತ್ತೆ. ದೇವರ ಉತ್ಸವ ಮೂರ್ತಿಗಳನ್ನು ತೊಳೆಯುವುದು, ಶೀಲವಂತರ ಭಾವಿಯ ನೀರಿನಿಂದ ತೊಳೆದುಕೊಂಡು ಮೆರವಣಿಗೆ ಮೂಲಕ‌ ಮಸೀದಿಗೆ ತರಲಾಗುತ್ತೆ. ಅ ದೇವರನ್ನು ಹಿಡಿಯುವ ಪೂಜಾರಿಗಳನ್ನು ಸ್ನಾನ ಮಾಡಿಸಲು ಬಸಲಿಂಗಪ್ಪನ ಬಾವಿಗೆ ಕರೆತಂದು‌ ಸ್ನಾನ ಮಾಡಿಸಿಯೇ ನಂತರ ಮಸೀದಿಗೆ ಕರೆ ತರುತ್ತಾರೆ. ಅಲ್ಲದೇ ಗ್ರಾಮದ ಪ್ರಮುಖ ಐದೂ ಮನೆತನದ ಮುಖಂಡರಾದ ದೊರೆ,ದೇಸಾಯಿ, ಪೋಲಿಸ್ ಪಾಟೀಲ್, ಮಾಲೀ ಪಾಟೀಲ್, ಕುಲಕರ್ಣಿ ಇವರ ನೇತೃತ್ವದಲ್ಲಿಯೇ ಹಬ್ಬ ಅಚರಣೆ ಮಾಡಿ ನಂತರ ದೇಸಾಯಿ ಅವರ ತೋಟದಲ್ಲಿ ಮಂಗಳವಾರ ದಫನ್ ಕಾರ್ಯ ಪೂರ್ಣಗೊಳಿಸಿ ಹಬ್ಬಕ್ಕೆ ತೆರೆ ಬೀಳುತ್ತದೆ. ಇದು ಜಾಲಹಳ್ಳಿ ಮೊಹರಂ ಆಗಿದೆ. 

ರಾಯಚೂರು ಜಿಲ್ಲೆಯಾದ್ಯಂತ ಮೊಹರಂ ‌ಸಂಭ್ರಮ, ಹಿಂದೂ-ಮುಸ್ಲಿಂ ಒಟ್ಟಾಗಿ ಆಚರಣೆ

 ಮುದಗಲ್ ಮೊಹರಂನಲ್ಲಿ 6 ಅಡಿ ಅಗರಬತ್ತಿಗೆ ಪಿಎಸ್ ಐ ಚಾಲನೆ : 

 ಮುದಗಲ್ ನಲ್ಲಿ ಮೊಹರಂ ಸಂಭ್ರಮ ಮನೆ ಮಾಡಿದೆ. ಮೊಹರಂ ಕಿಲ್ಲಾ ಹುಸೇನ್ ಆಲಂ ದರ್ಗಾದಲ್ಲಿ ಇಂದು ಮುದಗಲ್ ಪಿಎಸ್ ಐ ಪ್ರಕಾಶ್ ರೆಡ್ಡಿ ಡಂಬಳ 6 ಅಡಿ ಎತ್ತರದ ಊದುಬತ್ತಿಗೆ ಚಾಲನೆ ನೀಡಿದರು. ಈ ಊದುಬತ್ತಿ ನಾಳೆವರೆಗೂ ನಿರಂತರವಾಗಿ ಉರಿಯಲಿದೆ. ಇಂದು ರಾತ್ರಿ ಮೊಹರಂ ಕತಲ್ ರಾತ್ರಿ ಇರುವುದರಿಂದ ಮುದಗಲ್ ಮೊಹರಂ ನೋಡಲು ದೇಶದ ನಾನಾ ಕಡೆಗಳಿಂದ ನೂರಾರು ಜನರು ಮುದಗಲ್ ಪಟ್ಟಣಕ್ಕೆ ಬಂದು ದರ್ಶನ ಪಡೆದು ವಾಪಸ್ ಆಗುತ್ತಿದ್ದಾರೆ.  ಒಟ್ಟಿನಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಯಾವುದೇ ತಂಟೆ-ತಗದೇ ಇಲ್ಲದೆ ಶಾಂತಿಯುತವಾಗಿ ಮೊಹರಂ ಹಬ್ಬವನ್ನು ಅಚರಣೆ ಮಾಡಲಾತ್ತದೆ.

click me!