Zodiac Sign: ಅತಿಯಾದ ಸ್ವಪ್ರೀತಿ ಹೊಂದಿದ್ದೀರಾ? ನಿಮ್ದು ಯಾವ ರಾಶಿ?

By Suvarna NewsFirst Published Aug 8, 2022, 5:41 PM IST
Highlights

ನಾವೆಲ್ಲರೂ ಸ್ವಪ್ರೀತಿ ಹೊಂದಿರುವುದು ಸಹಜ. ಆದರೆ, ಕೆಲವು ರಾಶಿಗಳ ಜನ ಮಾತ್ರ ವಿಭಿನ್ನವಾದ ರೀತಿಯಲ್ಲಿ, ಅತಿಯಾಗಿ ಸ್ವಪ್ರೀತಿ ಹೊಂದಿರುತ್ತಾರೆ. ಅದನ್ನು ಬೇರೊಂದು ಮಜಲಿಗೆ ಕೊಂಡೊಯ್ದು ಅನುಭವಿಸುತ್ತಾರೆ. 

ನಾವೆಲ್ಲರೂ ನಮ್ಮನ್ನು ನಾವು ಪ್ರೀತಿಸಿಕೊಳ್ಳುತ್ತೇವೆ. ಸ್ವಪ್ರೀತಿ ಎಲ್ಲರಲ್ಲೂ ಕಂಡುಬರುವ ಸಾಮಾನ್ಯ ವಿಚಾರ. ಎಲ್ಲರೂ ತಮ್ಮನ್ನು ತಾವು ಗೌರವಿಸಿಕೊಳ್ಳುತ್ತಾರೆ, ತಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ. ಜನ ತಮ್ಮನ್ನು ತಾವು ನಿರ್ಲಕ್ಷಿಸುವ ಸಮಯವೂ ಇತ್ತು. ಇತ್ತೀಚಿನ ದಿನಗಳಲ್ಲಿ ಈ ಕುರಿತು ಅರಿವು ಮೂಡಿದ್ದು, ತಮ್ಮ ಬಗ್ಗೆ ಸ್ವಲ್ಪವಾದರೂ ಕಾಳಜಿ ವಹಿಸುವುದು ಕಂಡುಬರುತ್ತದೆ. ಮುಖ್ಯವಾಗಿ ಮಹಿಳೆಯರು ತಮ್ಮದೂ ಒಂದು ಜೀವ ಎಂದು ಭಾವಿಸುತ್ತಿದ್ದರೋ ಇಲ್ಲವೋ ಎನ್ನುವಷ್ಟರ ಮಟ್ಟಿಗೆ ಇನ್ನೊಬ್ಬರ ಸೇವೆಯಲ್ಲಿ ನಿರತರಾಗಿರುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಸ್ವಪ್ರೀತಿ ಹೊಂದಿರುವುದು ಆರೋಗ್ಯಕಾರಿ ವಿಚಾರ. ಆದರೆ, ಕೆಲವು ರಾಶಿಗಳ ಜನ ತಮ್ಮ ಬಗ್ಗೆ ಅತಿಯಾದ ಪ್ರೀತಿ ಹೊಂದಿರುತ್ತಾರೆ. ದೈನಂದಿನ ಜೀವನಕ್ಕೆ ಬಂದರೆ ತಮ್ಮ ಬಗ್ಗೆ ಅತಿಯಾಗಿ ಕಾಳಜಿ ವಹಿಸುತ್ತಾರೆ. ಸ್ವಕಾಳಜಿಯಲ್ಲೇ ಹೆಚ್ಚು ಸಮಯ ನಿರತರಾಗಿರುತ್ತಾರೆ. ನಾಸ್ತಿಕತನವನ್ನೂ ಸ್ವಲ್ಪ ಮಟ್ಟಿಗೆ ಹೊಂದಿರುವ ಇವರು ಅದರಿಂದ ತಮ್ಮ ಮನಸ್ಸನ್ನು ದೂರವಿಡಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ಹಾಗೆಯೇ, ತಮ್ಮ ನಿಲುವಿನಿಂದಾಗಿ ಸಂಗಾತಿ ಮತ್ತು ಪ್ರೀತಿಪಾತ್ರರಿಗೆ ನೋವನ್ನು ಉಂಟು ಮಾಡಬಾರದೆಂದು ತಮ್ಮ ಬಗ್ಗೆ ಅತಿಯಾಗಿ ಕಾಳಜಿ ವಹಿಸುತ್ತಾರೆ. 

•    ಕನ್ಯಾ (Vigro)
ಸ್ವಪ್ರೀತಿ (Self Love) ಎಂದರೆ ನಮ್ಮ ಭಾವನೆಗಳನ್ನು (Emotions) ಒಪ್ಪಿಕೊಳ್ಳುವುದು, ಅವುಗಳನ್ನು ಗೌರವಿಸುವುದು (Respect). ಭಾವನೆಗಳನ್ನು ಹತ್ತಿಕ್ಕದೆ ಸರಾಗವಾಗಿ ಬಿಡುವುದು. ಆದರೆ, ಕನ್ಯಾ ರಾಶಿಯ ಜನ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ. ತಮಗೆ ಅಪಾಯಕಾರಿಯಾಗುವ ಮಟ್ಟಿಗೆ ಕೆಲವು ಅಭ್ಯಾಸ (Habit) ಹೊಂದಿರುತ್ತಾರೆ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವುದು, ಆತ್ಮಾವಲೋಕನ (Introspect) ಮಾಡಿಕೊಳ್ಳುವುದು ಅಗತ್ಯವಾದರೂ ಅದು ಹೆಚ್ಚಾದರೂ ನೋವು (Pain) ತಪ್ಪಿದ್ದಲ್ಲ. ಸಾಮಾನ್ಯವಾಗಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಆದರೆ, ಕನ್ಯಾ ರಾಶಿಯವರು ತಮಗೆ ನೋವಾಗುವಷ್ಟು ತಮ್ಮನ್ನು ತಾವು ವಿಮರ್ಶಿಸಿಕೊಳ್ಳುತ್ತಾರೆ. ಇವರು ಎಷ್ಟರಮಟ್ಟಿಗೆ ಅನಗತ್ಯ ವಿಚಾರ ಮಾಡುತ್ತಾರೆ ಎಂದರೆ ಅದು ಅವರಿಗೆ ಗೀಳಾಗಿ ಕಾಡುವಷ್ಟು ಚಿಂತಿಸುತ್ತಾರೆ. ಹೀಗಾಗಿ, ಕೆಲವೊಮ್ಮೆ ಅವರು ಕುಟುಂಬದ ಸದಸ್ಯರ ಕುರಿತಾಗಿಯೇ ದ್ವೇಷದ (Grudge) ಭಾವನೆ ಹೊಂದಬಹುದು. ಸ್ನೇಹಿತರ ವಲಯದಲ್ಲಿ ಯಾರನ್ನಾದರೂ ದ್ವೇಷ ಮಾಡಲು ಆರಂಭಿಸಬಹುದು. 

Self-love Tips: ಬೇರೆಯವರ ಚಿಂತೆ ನಿಮಗ್ಯಾಕೆ? ನಿಮ್ಮನ್ನ ನೀವು ಪ್ರೀತಿಸಿ ನೋಡಿ

Latest Videos

•    ಧನು (Sagittarius)
ಕೆಲವೊಮ್ಮೆ ಧನು ರಾಶಿಯವರು ತಮ್ಮನ್ನು ತಪ್ಪಾಗಿ ಅಂದಾಜಿಸಿಕೊಳ್ಳುತ್ತಾರೆ. ಸ್ವಪ್ರೀತಿ ಎಂದರೆ ತಮ್ಮ ತಪ್ಪನ್ನು (Mistake) ಒಪ್ಪಿಕೊಳ್ಳುವುದಲ್ಲ, ಯಾವುದೇ ನಿಲುವನ್ನು ತೆಗೆದುಕೊಂಡಿದ್ದರೂ ಅದಕ್ಕೆ ಬದ್ಧರಾಗಿರುವುದು ಉತ್ತಮ ಎಂದು ಭಾವಿಸುತ್ತಾರೆ. ಆದರೆ, ಕೆಲವೊಮ್ಮೆ ಈ ಭಾವನೆ ತಪ್ಪಾಗಬಹುದು. ಒಮ್ಮೆ ತೆಗೆದುಕೊಂಡಿರುವ ನಿರ್ಧಾರವನ್ನು ಒಪ್ಪಿಕೊಳ್ಳುವುದು ಉತ್ತಮವೇ ಆದರೂ ತಪ್ಪು ಮಾಡಿದಾಗ ಕ್ಷಮೆ ಕೇಳದಿರುವುದು ಸೂಕ್ತವಲ್ಲ. ಕ್ಷಮೆ ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾವಿಸುತ್ತಾರೆ. ಕ್ಷಮೆ ಕೇಳುವುದು ಎಂದರೆ ತಮ್ಮನ್ನು ತಾವು ಬೈದುಕೊಳ್ಳುವುದಲ್ಲ ಎನ್ನುವುದನ್ನು ಧನು ರಾಶಿಯವರು ಅರಿತುಕೊಳ್ಳುವುದಿಲ್ಲ. ಇನ್ನೂ ಅಪಾಯ ಯಾವುದೆಂದರೆ, ತಾವು ತಪ್ಪೇ ಮಾಡಿಲ್ಲ ಎಂದು ಭಾವಿಸುವ ನಾಸ್ತಿಕ ಮನೋಸ್ಥಿತಿಗೆ ತಲುಪುತ್ತಾರೆ. ತಮ್ಮ ಪ್ರೀತಿಪಾತ್ರರನ್ನು ಓಲೈಸುವ ಭರದಲ್ಲಿ ಅವರು ಈ ತಪ್ಪು ಮಾಡುತ್ತಾರೆ. ಈ ಗುಣ ಹೊರತುಪಡಿಸಿದರೆ ಧನು ರಾಶಿಯವರಿಗೆ ತಮ್ಮ ಮೇಲೆಯೇ ತಮಗೆ ಭಾರೀ ಪ್ರೀತಿ ಇರುತ್ತದೆ.

•    ತುಲಾ (Libra)
ತಮಗೆ ಬೇಕಾದ ಆಹಾರ (Food) ಸವಿಯುವುದು ಸಾಮಾನ್ಯವಾಗಿ ಎಲ್ಲರ ಅಭ್ಯಾಸ. ತಮಗಿಷ್ಟವಾದ, ಆರೋಗ್ಯಕ್ಕೆ ಪೂರಕವಾದ ಉತ್ತಮ ಆಹಾರ ಸೇವನೆ ಮಾಡುವುದರಲ್ಲಿ ಜೀವನಪ್ರೀತಿ ಹಾಗೂ ಸ್ವಪ್ರೀತಿ ಎರಡೂ ಇದೆ. ಸಾಕಷ್ಟು ಜನ ಆಹಾರವನ್ನು ಎಂಜಾಯ್‌ ಮಾಡುತ್ತಾರೆ. ತುಲಾ ರಾಶಿಯವರಿಗೂ ಆಹಾರವನ್ನು ಎಂಜಾಯ್‌ (Enjoy) ಮಾಡುವುದೆಂದರೆ ಭಾರೀ ಇಷ್ಟ. ಅವರ ಪ್ರಕಾರ, ಸ್ವಪ್ರೀತಿ ಎಂದರೆ ತಮಗೆ ಬೇಕಾದ ಆಹಾರ ಸೇವಿಸುವುದು. ಹೀಗಾಗಿ, ತಮ್ಮ ಆದಾಯದ ಬಹುದೊಡ್ಡ ಪಾಲನ್ನು ಆಹಾರಕ್ಕಾಗಿ ವೆಚ್ಚ ಮಾಡುತ್ತಾರೆ. ಆಹಾರದ ವಿಚಾರದಲ್ಲಿ ಮಿತಿಮೀರಿ, ಅಳತೆ ಇಲ್ಲದಂತೆ ವರ್ತಿಸುತ್ತಾರೆ. ಜಂಕ್‌ ಫುಡ್‌ (Junk Food), ಕ್ಯಾಂಡಿಗಳ (Candy) ಸೇವನೆ ಇವರಿಗೆ ಭಾರೀ ಇಷ್ಟ. ಇಂತಹ ಆಹಾರ ಪದ್ಧತಿಯಿಂದಾಗಿ ಕೆಲವು ಆರೋಗ್ಯ ಸಮಸ್ಯೆಗಳನ್ನೂ (Health Problem) ತಂದುಕೊಂಡು ಫಜೀತಿ ಅನುಭವಿಸುತ್ತಾರೆ.  

'ನಿಮ್ಮನ್ನು ನೀವು ಹೆಚ್ಚು ಪ್ರೀತಿಸಿ' ಸ್ಫೂರ್ತಿದಾಯಕ ಸಾಲುಗಳ ಜೊತೆಗೆ ಸುಂದರ ಫೋಟೋ ಶೇರ್ ಮಾಡಿದ ರಾಧಿಕಾ ಪಂಡಿತ್

click me!