ಊಟ ಮಾಡುವಾಗ ಈ ತಪ್ಪು ಮಾಡಿದ್ರೆ ಅನ್ನಪೂರ್ಣೇಶ್ವರಿಯ ಕೆಂಗಣ್ಣಿಗೆ ಗುರಿಯಾಗುತ್ತೀರಿ!

By Suvarna News  |  First Published Apr 6, 2022, 11:47 AM IST

ಊಟ ಮಾಡುವಾಗ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಮಾಡುವ ತಪ್ಪುಗಳು ಅನ್ನಪೂರ್ಣೇಶ್ವರಿಯ ಕೋಪಕ್ಕೆ ಕಾರಣವಾಗುತ್ತವೆ. ಇದರಿಂದ ಮನೆಯಲ್ಲಿ ಬಡತನ ಹಾಗೂ ಕಾಯಿಲೆ ಹೆಚ್ಚುತ್ತವೆ. 


ಬಹಳಷ್ಟು ಜನ ಆಹಾರ(food) ಎಂದರೆ ಅಸಡ್ಡೆ ಮಾಡುತ್ತಾರೆ. ಸುಮ್ಮನೆ ಹೊಟ್ಟೆ ತುಂಬಿಸಲು ತಿನ್ನುವುದು ಎಂದುಕೊಳ್ಳುತ್ತಾರೆ. ಆದರೆ, ಉಸಿರಾಟದ ಹೊರತಾಗಿ ನಮಗೆ ಬದುಕಲು ಬೇಕಾಗಿರುವುದು ಆಹಾರವೇ ಆಗಿದೆ. ಹೀಗಾಗಿ, ಆಹಾರವನ್ನು ಅನ್ನಪೂರ್ಣೇಶ್ವರಿ(Annapoorneshwari) ಎಂದು ನಂಬುತ್ತೇವೆ. ಅನ್ನವನ್ನು ಅನ್ನಬ್ರಹ್ಮ ಎನ್ನುತ್ತೇವೆ. ಆಹಾರಕ್ಕೆ ನಮ್ಮ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನವಿದೆ. ಅದಕ್ಕೇ ಏನು ತಿನ್ನುತ್ತೇವೆ, ಹೇಗೆ ತಿನ್ನುತ್ತೇವೆ, ಯಾರೊಂದಿಗೆ ತಿನ್ನುತ್ತೇವೆ, ಎಲ್ಲಿ ತಿನ್ನುತ್ತೇವೆ ಎಂಬೆಲ್ಲ ವಿಷಯಗಳೂ ನಮ್ಮ ಆರೋಗ್ಯ(health) ಹಾಗೂ ಸಮೃದ್ಧಿ(prosperity)ಯ ಮೇಲೆ ಪರಿಣಾಮ ಬೀರುತ್ತವೆ. ಉತ್ತಮ ಆಹಾರ ಹಾಗೂ ಅದನ್ನು ಭಕ್ತಿ, ಗೌರವದಿಂದ ತಿನ್ನುವ ಅಭ್ಯಾಸವು ಆಯಸ್ಸು, ಆರೋಗ್ಯ ಹೆಚ್ಚಿಸುವ ಜೊತೆಗೆ, ಮನೆಯಲ್ಲಿ ಸಮೃದ್ಧಿಗೆ ಕಾರಣವಾಗುತ್ತವೆ. 

ಆದರೆ ನಾವು ಅಸಡ್ಡೆಯಿಂದಲೋ, ಗಡಿಬಿಡಿಯ ಜೀವನಶೈಲಿಯಲ್ಲಿಯೋ ಊಟ ಮಾಡುವಾಗ ಕೆಲವೊಂದು ತಪ್ಪುಗಳನ್ನು(Mistakes) ಮಾಡುತ್ತೇವೆ. ನಮ್ಮ ಈ ತಪ್ಪುಗಳಿಂದಾಗಿ ಅನ್ನಪೂರ್ಣೇಶ್ವರಿಯ ಕೆಂಗಣ್ಣಿಗೆ ಗುರಿಯಾಗುತ್ತೀವಿ. ಈ ರೀತಿಯ ತಪ್ಪಿನಿಂದಾಗಿ ನಮ್ಮ ಮನೆಯಲ್ಲಿ ಆರೋಗ್ಯ ಲಕ್ಷ್ಮೀಯಾಗಲೀ, ಧನಲಕ್ಷ್ಮೀಯಾಗಲೀ ನೆಲೆಸಲು ಬಯಸುವುದಿಲ್ಲ. ನಮ್ಮ ಈ ತಪ್ಪುಗಳ ಕಾರಣದಿಂದಾಗಿ ನಮಗೇ ಗೊತ್ತಿಲ್ಲದೆ ಮನೆಯಲ್ಲಿ ಅಸಂತೋಷ, ಅತೃಪ್ತಿ, ರೋಗಗಳು, ಬಡತನ(poverty) ಹೆಚ್ಚುತ್ತದೆ. ಹಾಗಾದರೆ, ಊಟ ಮಾಡುವಾಗ ಮಾಡಬಾರದ ತಪ್ಪುಗಳೇನೇನು ನೋಡೋಣ. 

Tap to resize

Latest Videos

ಆಹಾರವನ್ನು ಅವಮಾನಿಸಬೇಡಿ(insult)
ಜಗತ್ತಿನಲ್ಲೇ ಎಷ್ಟೋ ಜನ ಆಹಾರವೇ ಸಿಗದೆ ಒಂದು ತುತ್ತಿನ ಊಟಕ್ಕೂ ಗತಿಯಿಲ್ಲದೆ ಒದ್ದಾಡುತ್ತಿದ್ದಾರೆ. ಆದರೆ, ಮನೆಯಲ್ಲಿ ಆಹಾರ ಸಮೃದ್ಧಿ ಇರುವವರು ಅದರ ಬೆಲೆ ಗೊತ್ತಿಲ್ಲದೆ ಅವಮಾನಿಸುತ್ತಾರೆ. ಹೊತ್ತು ಹೊತ್ತಿಗೆ ಊಟ ಸಿಗುತ್ತಿದೆ ಎಂದರೆ ಅದು ಅದೃಷ್ಟವೆಂದೇ ಹೇಳಬೇಕು. ಅಂಥ ಸಂದರ್ಭದಲ್ಲಿ ಊಟದ ರುಚಿಯ ಬಗ್ಗೆ ಇನ್ನಿಲ್ಲದಂತೆ ಕೆಟ್ಟ ಮಾತುಗಳನ್ನಾಡುವುದು, ಥೂ ಎನ್ನುವುದು, ಚಪ್ಪಲಿ ಹಾಕಿಕೊಂಡು ಊಟ ಮಾಡುವುದು ಇತ್ಯಾದಿ ನಡತೆಯಿಂದ ನಿಮಗೆ ದೊರೆತ ಅದೃಷ್ಟವನ್ನೇ ಅವಮಾನಿಸಿದಂತಾಗುತ್ತದೆ. ಅಷ್ಟೆಲ್ಲ ಆದ ಮೇಲೆ ಅದು ನಿಮ್ಮೊಂದಿಗೆ ಉಳಿಯಬೇಕಾದರೂ ಏಕೆ?

ಕೆಟ್ಟ ಯೋಚನೆ ಮಾಡಬೇಡಿ
ಊಟ ಮಾಡುವಾಗ ಕೆಟ್ಟ ಯೋಚನೆಗಳನ್ನು ಮಾಡಬೇಡಿ. ಆಹಾರವನ್ನು ನೋಡುತ್ತಿದ್ದಂತೆಯೇ ಅದು ಸರಿಯಿಲ್ಲ, ಇದು ಸರಿಯಿಲ್ಲ, ಬಣ್ಣವಿಲ್ಲ, ರುಚಿಯಿಲ್ಲ, ಇದನ್ನು ತಿಂದರೆ ಏನೋ ಆಗಿಬಿಡುತ್ತದೆ ಎಂಬಂಥ ಯೋಚನೆಗಳು ಬಂದರೆ ತಿಂದ ಆಹಾರ ಜೀರ್ಣವಾಗುವುದಿಲ್ಲ. ಇದಲ್ಲದೆ ಮತ್ತೊಬ್ಬರಿಗೆ ಕೆಡುಕು ಬಯಸುವಂಥ ಯೋಚನೆಗಳನ್ನು ಊಟ ಮಾಡುವಾಗ ಮಾಡಿದಿರಾದರೆ ಅಂಥ ಕೆಡುಕು ನಿಮಗೇ ಆಗುವುದರಲ್ಲಿ ಅನುಮಾನವಿಲ್ಲ.

ಗಂಟೆಗಳಿಂದ Negative Energy ತೆಗೀಬಹುದು.. ಆದರೆ ಈ ವಿಷಯಗಳ ಬಗ್ಗೆ ಇರಲಿ ಗಮನ!

ಊಟ ಮಾಡುವಾಗ ಮಾತನಾಡಬೇಡಿ
ಊಟ ಮಾಡುವಾಗ ಮಾತನಾಡದೆ, ಶ್ರದ್ಧೆಯಿಂದ ತಿನ್ನುವ ಆಹಾರದ ಮೇಲೆ ಗಮನವಿರಿಸುವುದು ಒಳ್ಳೆಯ ಅಭ್ಯಾಸವಾಗಿದೆ. ಇದು ಆಹಾರಕ್ಕೆ ನಾವು ಕೊಡುವ ಗೌರವವಾಗಿದೆ. ಅಲ್ಲದೆ, ಒಂದು ವೇಳೆ ಮಾತನಾಡಿದರೂ, ಸಾತ್ವಿಕ ಯೋಚನೆಯ ಮಾತುಗಳು ಒಳಿತು ಮಾಡುತ್ತವೆ. 

ಓಡಾಡುತ್ತಾ ಊಟ ಮಾಡಬೇಡಿ
ಈಗಂತೂ ಇದು ಸಾಮಾನ್ಯವಾಗಿದೆ. ಉಳಿದೆಲ್ಲ ಕೆಲಸ ಮಾಡಲು ಜನರಿಗೆ ಸಮಯವಿರುತ್ತದೆ. ಆದರೆ, ತಾವು ಸೇವಿಸುವ ಆಹಾರಕ್ಕಾಗಿ ಕೊಂಚ ಸಮಯ ಮೀಸಲಿಡಲು ಸಾಧ್ಯವಾಗುವುದಿಲ್ಲ. ಕೆಲಸ ಮಾಡುತ್ತಲೇ ಅಲ್ಲಿಯೇ ಒಂದೊಂದು ತುತ್ತು ಬಾಯಿಗೆ ಹಾಕಿಕೊಳ್ಳುವುದು, ಪುಸ್ತಕ ಓದುತ್ತಾ ಊಟ ಮಾಡುವುದು, ತಟ್ಟೆಯನ್ನು ಕೈಲಿ ಹಿಡಿದು ಓಡಾಡುತ್ತಾ ಊಟ ಮಾಡುವುದು, ಟಿವಿಯಲ್ಲಿ ಬೇಡದ ಧಾರವಾಹಿಗಳನ್ನು ನೋಡುತ್ತಾ ಊಟ ಮಾಡುವುದರಿಂದ ಅನ್ನಪೂರ್ಣೇಶ್ವರಿಯ ಮುನಿಸಿಗೆ ಕಾರಣವಾಗುತ್ತೀರಿ. ಇದರಿಂದ ಮನೆಯಲ್ಲಿ ಮಾನಸಿಕ, ದೈಹಿಕ ಸಮಸ್ಯೆಗಳು ಹೆಚ್ಚುತ್ತವೆ. ಜೊತೆಗೆ ಬಡತನವೂ ಆವರಿಸುತ್ತದೆ. 

Foods And Zodiac: ನಿಮ್ಮ ರಾಶಿಗೆ ಈ ಆಹಾರ ತಿಂದ್ರೆ ಅಜೀರ್ಣ ಗ್ಯಾರಂಟಿ!

ಕೋಪವನ್ನು ಮಾಡಿಕೊಂಡು ಊಟ ಮಾಡಬೇಡಿ
ಊಟ ಮಾಡುವಾಗ ಕೋಪ ತೋರುವುದು, ಅರ್ಧಕ್ಕೇ ತಟ್ಟೆಯಲ್ಲಿ ಕೈ ತೊಳೆದು ಎದ್ದು ಹೋಗುವುದು, ಕೋಪದಲ್ಲಿ ತಟ್ಟೆಯನ್ನು ಎತ್ತಿ ಬಿಸಾಡುವುದು, ಆಹಾರವನ್ನು ವ್ಯರ್ಥ ಮಾಡುವುದು- ಇಂಥ ಅಭ್ಯಾಸಗಳು ಕೂಡಾ ಅನ್ನಪೂರ್ಣೇಶ್ವರಿಯನ್ನೇ ಅವಮಾನಿಸುತ್ತವೆ. ಹೀಗೆ ಮಾಡಿದರೆ, ಆಹಾರದ ಬೆಲೆಯನ್ನು ಅರ್ಥ ಮಾಡಿಸದೆ ಬಿಡಳು ಆಕೆ. ಜೊತೆಗೆ ಮನೆಯಲ್ಲಿ ದರಿದ್ರಲಕ್ಷ್ಮೀ ಬಂದು ಸೇರಿಕೊಳ್ಳುವುದು ಖಚಿತ.
 

click me!