Mercury Retrograde: 2022ರಲ್ಲಿ 4 ಬಾರಿ ಬುಧ ಹಿಮ್ಮುಖ ಚಲನೆ, ಇದರಿಂದೇನಾಗುತ್ತೆ?

Published : Dec 27, 2021, 05:02 PM IST
Mercury Retrograde:  2022ರಲ್ಲಿ 4 ಬಾರಿ ಬುಧ ಹಿಮ್ಮುಖ ಚಲನೆ, ಇದರಿಂದೇನಾಗುತ್ತೆ?

ಸಾರಾಂಶ

2022ರಲ್ಲಿ ಬುಧ ವಕ್ರಿಯು 4 ಬಾರಿ ಸಂಭವಿಸುತ್ತದೆ. ಇದರ ಪರಿಣಾಮಗಳೇನು, ಆಗೇನು ಮಾಡಬೇಕು ನೋಡಿ.

2022ರಲ್ಲಿ ನಾಲ್ಕು ಬಾರಿ ಬುಧ ವಕ್ರಿ ಸಂಭವಿಸುತ್ತದೆ. ಬುಧ ವಕ್ರಿ ಎಂದರೆ ಬುಧ ಗ್ರಹದ ಹಿಮ್ಮುಖ ಚಲನೆ(retrograde motion). ಮೊಟ್ಟ ಮೊದಲಿಗೆ ವಿಜ್ಞಾನವನ್ನೇ ಮಾತನಾಡೋಣ. ಇಡೀ ಜಗತ್ತಿನ ಯಾವುದೇ ಗ್ರಹಗಳು ಕೂಡಾ ಹಿಮ್ಮುಖವಾಗಿ ಅಲ್ಪ ಸಮಯಕ್ಕೂ ಚಲಿಸುವುದು ಸಾಧ್ಯವಿಲ್ಲ. ಆದರೂ, ಗ್ರಹವೊಂದರ ಹಿಮ್ಮುಖ ಚಲನೆ ಕಾಣಿಸುತ್ತಿದೆ ಎಂದರೆ ಅದು ದೃಷ್ಟಿ ಭ್ರಮೆಯಷ್ಟೇ. ಸಾಮಾನ್ಯವಾಗಿ ಅತಿ ವೇಗವಾಗಿ ಸುತ್ತವ ಬುಧನು ಹೀಗೆ ಹಿಂದೆ ಚಲಿಸಿದಂತೆ, ನಂತರ ನಿಂತಂತೆ ಮತ್ತೆ ಮುಂದೆ ಚಲಿಸಿದಂತೆ 2022ರಲ್ಲಿ 4 ಬಾರಿ ಗೋಚರವಾಗಲಿದೆ. 

ಭೂಮಿಯಿಂದ ನೋಡುವಾಗ ಭೂಮಿಯೂ ಸುತ್ತುತ್ತಿರುವುದರಿಂದ ಬುಧನ ಚಲನೆ ವ್ಯತ್ಯಾಸವಾಗಿ ಕಾಣಬಹುದು. ಉದಾಹರಣೆಗೆ ವಾಹನದಲ್ಲಿ ವೇಗವಾಗಿ ಹೋಗುವಾಗ ಮತ್ತೊಂದು ವಾಹನ ದಾಟುವಾಗ ಕೆಲವೊಮ್ಮೆ ಆ ವಾಹನ ಹಿಂದೆ ಚಲಿಸಿದಂತೆ ಎನಿಸಿಬಹುದು. ಇದೂ ಹಾಗೆಯೇ. ವಿಜ್ಞಾನದ ಕಾರಣ ತಿಳಿದಾಯಿತು. ಆದರೆ, ಗ್ರಹವೊಂದರ ಪ್ರತಿ ಚಲನೆ ಕೂಡಾ ಎಲ್ಲ ರಾಶಿಗಳ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ ಎಂಬುದು ಗೊತ್ತಷ್ಟೇ. ಹಾಗಾಗಿ, ಬುಧನ ಈ ಹಿಮ್ಮುಖ ಚಲನೆ ಯಾವಾಗೆಲ್ಲ ಕಂಡುಬಂದಂತಾಗುತ್ತದೆ, ಹಾಗೂ ಅದರ ಪರಿಣಾಮಗಳೇನು ನೋಡೋಣ. 

Zodiacs and nature: ಈ ರಾಶಿಯವರು ಸಿಂಗಲ್ ಆಗಿರೋದೇ ಒಳ್ಳೇದು. ಯಾಕೆ ಗೊತ್ತಾ?

2022ರಲ್ಲಿ 

  • ಜನವರಿಯಲ್ಲಿ ಕುಂಭ(Aquarius) ರಾಶಿಯಲ್ಲಿ ಬುಧ ವಕ್ರಿ ಸಂಭವಿಸುತ್ತದೆ. 
  • ಮೇ ತಿಂಗಳಲ್ಲಿ ಮಿಥುನ(Gemini) ರಾಶಿಯಲ್ಲಿ ಬುಧ ವಕ್ರಿ ನಡೆಯುತ್ತದೆ. 
  • ಸೆಪ್ಟೆಂಬರ್‌ನಲ್ಲಿ ತುಲಾ(Libra) ರಾಶಿಯಲ್ಲಿ ಬುಧ ವಕ್ರಿ ಸಂಭವಿಸುತ್ತದೆ.
  • ಡಿಸೆಂಬರ್‌ನಲ್ಲಿ ಮಕರ(Capricorn) ರಾಶಿಯಲ್ಲಿ ಬುಧ ವಕ್ರಿ ನಡೆಯುತ್ತದೆ. 

ಬುಧ ವಕ್ರಿಯಿಂದೇನಾಗುತ್ತದೆ?

ಹೀಗೆ ಬುಧ ವಕ್ರಿ ಸಂಭವಿಸುವಾಗ ಬುಧನ ಪ್ರವಾಹಗಳು ತಗ್ಗುತ್ತವೆ. ಹಾಗಾಗಿ, ಆ ಸಂದರ್ಭದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಆರಂಭಿಸುವುದು ಸಮಂಜಸವಲ್ಲ. ಏಕೆಂದರೆ, ಆ ಕೆಲಸಗಳು ಮುಂದೆ ಸಾಗದೇ ಹಾಗೇ ಉಳಿದು ಬಿಡುವ ಸಂಭವಗಳಿರುತ್ತವೆ. ಬುಧ ವಕ್ರಿ ಸಂಭವಿಸಿದ ಮೂರು ವಾರಗಳ ಕಾಲ ತಪ್ಪುಗಳು ಹೆಚ್ಚುವುದು, ಕೆಲಸಗಳು ತಡವಾಗುವುವು, ತಾಂತ್ರಿಕ ತೊಂದರೆಗಳು(technical glitches) ಎದುರಾಗುವುವು. 

ಈ ರಾಶಿಯ ಹುಡುಗರು good husband ಎನಿಸಿಕೊಳ್ಳಲಿದ್ದಾರೆ, ನಿಮ್ಮ ಪಾರ್ಟ್ನರ್‌ ಈ ರಾಶಿಯವರಾ ನೋಡಿ..

ಬುಧ ವಕ್ರಿಯ ಸಮಯದಲ್ಲಿ ಜನರು ಅನಿಶ್ಚಿತತೆ, ಕೆಟ್ಟ ಸನ್ನಿವೇಶಗಳು, ಮನಸ್ಥಿತಿ ಬದಲಾವಣೆಗಳು, ಹಠಾತ್ ಜೀವನ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಇವೆಲ್ಲವೂ ಹೆಚ್ಚಿನ ಬಾರಿ ನಕಾರಾತ್ಮಕ ಫಲಿತಾಂಶವೇ ಆಗಿರುತ್ತವೆ. ಈ ಸಂದರ್ಭದಲ್ಲಿ ಮೂರು ವಾರಗಳ ಅವಧಿಗೆ ಅನಿರೀಕ್ಷಿತ ಘಟನೆಗಳು ನಡೆಯಬಹುದು, ಇಲ್ಲವೇ ಕೆಲಸ ನಿಧಾನವಾಗಬಹುದು. ಹೀಗಾಗಿ, ಈ ಸಂದರ್ಭದಲ್ಲಿ ಆಗುವ ಎಲ್ಲ ಬದಲಾವಣೆಗಳು, ಸಂಗಾತಿಯೊಂದಿಗಿನ ಮನಸ್ತಾಪ, ಸೋಲು(failure), ಹತಾಶೆಗಳನ್ನು ಗಂಭೀರವಾಗಿ ಪರಿಗಣಿಸಿ ನಿರ್ಧಾರಕ್ಕೆ ನುಗ್ಗುವ ಬದಲು ಮೂರರಿಂದ ನಾಲ್ಕು ವಾರ ತಾಳ್ಮೆ ವಹಿಸಬೇಕು. ಏಕೆಂದರೆ, ನಂತರ ಎಲ್ಲ ಸರಿ ದಾರಿಗೆ ಬರುತ್ತವೆ. 

ಈ ಸಂದರ್ಭದಲ್ಲಿ ಹೀಗಾಗುತ್ತದೆ ಎಂಬುದು ನಿಮಗೀಗಾಗಲೇ ತಿಳಿದಿರುವುದರಿಂದ, ಬುಧ ವಕ್ರಿ ಸಂಭವಿಸುವ ಮೊದಲೇ ನಿಮ್ಮ ಎಲ್ಲ ಪ್ರಮುಖ ಕೆಲಸ ಕಾರ್ಯಗಳು, ನಿರ್ಧಾರಗಳು(decisions), ಸ್ಥಳ ಬದಲಾವಣೆ ಇತ್ಯಾದಿಯನ್ನು ಮುಗಿಸಿಕೊಳ್ಳುವುದು ಉತ್ತಮ. ಭವಿಷ್ಯದ ಬಗ್ಗೆ ಚಿಂತಿಸದೆ ವರ್ತಮಾನದಲ್ಲಿ ಶ್ರಮ ಹಾಕುವ ಕಡೆ ಗಮನ ವಹಿಸಿ. 

ಬುಧನು ಸಂವಹನಕ್ಕೆ ಸಂಬಂಧಿಸಿದ ಗ್ರಹವಾದ್ದರಿಂದ ಆತ ಹಿಮ್ಮುಖವಾಗಿ ಚಲಿಸುವಾಗ ನಮ್ಮ ಯೋಚನೆಗಳು, ಕೆಲಸಗಳ ಬಗ್ಗೆ ನಾವೂ ಕೂಡಾ ಹಿಮ್ಮುಖವಾಗಿ ಚಲಿಸಿ ಆತ್ಮವಿಮರ್ಶೆ(introspect) ಮಾಡಿಕೊಳ್ಳುವುದು, ನಿರ್ಧಾರಗಳನ್ನು ಮರು ಪರಿಶೀಲಿಸುವುದು(revise), ನೆನಪುಗಳನ್ನು ಕೆದಕುವುದು, ಎಲ್ಲಿ ಎಡವಿದ್ದೇವೆ ನೋಡುವುದು ಮಾಡಬಹುದು. 

ಇದೊಂತರಾ ರಸ್ತೆ ಮಧ್ಯೆ ಸಿಗುವ ಹಂಪ್ ತರಾ. ಹೆದರುವ ಅಗತ್ಯವಿಲ್ಲ. ಸ್ವಲ್ಪ ನಿಧಾನಿಸಿದರೆ ಸಾಕು. 
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ