Zodiacs and nature: ಈ ರಾಶಿಯವರು ಸಿಂಗಲ್ ಆಗಿರೋದೇ ಒಳ್ಳೇದು. ಯಾಕೆ ಗೊತ್ತಾ?

By Suvarna News  |  First Published Dec 27, 2021, 3:45 PM IST

ಕೆಲ ರಾಶಿಯವರ ಸ್ವಭಾವ ಸಂಬಂಧಗಳ ಕಟ್ಟುಪಾಡಿಗೆ ಸೂಕ್ತವಾಗಿರುವುದಿಲ್ಲ. ಅವರು ಕೆಟ್ಟವರಲ್ಲ. ಆದರೆ, ಅವರು ಸಿಂಗಲ್ಲಾಗಿದ್ದಾಗಲೇ ಹೆಚ್ಚು ಖುಷಿಯಾಗಿ ಇರುತ್ತಾರೆ, ಹೆಚ್ಚು ಸಾಧಿಸುತ್ತಾರೆ. ಅಂಥ ರಾಶಿಗಳು ಯಾವುವು ತಿಳ್ಕೋಬೇಕಾ?


ಸಂಬಂಧ ಎಂದ ಮೇಲೆ ಅಲ್ಲೊಂದಿಷ್ಟು ಕಮಿಟ್‌ಮೆಂಟ್ ಇರುತ್ತದೆ. ಸ್ವಲ್ಪ ಅಡ್ಜಸ್ಟ್‌ಮೆಂಟ್ ಕೂಡಾ ಆಗಬೇಕು. ಮತ್ತೆ ಸ್ವಲ್ಪ ಸ್ವಾತಂತ್ರ್ಯ ಕಳೆದುಕೊಳ್ಳಲು ಸಿದ್ಧರಿರಬೇಕು. ಸಂಗಾತಿಯ ತಪ್ಪುಗಳನ್ನು ಕ್ಷಮಿಸುವ ಮನಸ್ಸಿರಬೇಕು, ಬದಲಾವಣೆಗೆ ಕಾಯುವ ತಾಳ್ಮೆ ಬೇಕು. ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧರಿರಬೇಕು. ಆದರೆ, ಇವೆಲ್ಲ ಕೆಲವರಿಗೆ ಹೆಚ್ಚೇ ಸಮಸ್ಯೆಯಾಗಿ ಕಾಡುತ್ತವೆ. ಇಂಥವರು ಜಂಟಿಯಾಗುವುದಕ್ಕಿಂತಾ ಒಂಟಿಯಾಗಿರುವುದೇ ಹೆಚ್ಚು ಒಳ್ಳೆಯದು. ಯಾವೆಲ್ಲ ರಾಶಿಗಳು ಸಿಂಗಲ್ ಆಗಿದ್ರೆ ಒಳ್ಳೇದು ಗೊತ್ತಾ?

ಮಿಥುನ(Gemini)
ಮಿಥುನ ರಾಶಿಯವರನ್ನು ನೋಡಿ ಬಲ್ಲವರು ಈ ಮಾತು ಒಪ್ಪೇ ಒಪ್ತಾರೆ. ಅವರಿಗೆ ಧೀರ್ಘಕಾಲದ ಸಂಬಂಧಗಳು ಅಷ್ಟಾಗಿ ಆಗಿ ಬರುವುದಿಲ್ಲ. ಇದರರ್ಥ ಅವರು ಮತ್ತೊಬ್ಬರ ಸನಿಹ ಬಯಸುವುದೇ ಇಲ್ಲ ಎಂದಲ್ಲ. ಆದರೆ, ಹೆಚ್ಚು ಸಂಕೀರ್ಣವಲ್ಲದ, ಸಾಮಾನ್ಯ ಸಂಬಂಧವನ್ನಷ್ಟೇ ಅವರು ನಿಭಾಯಿಸಬಲ್ಲರು. ತುಂಬಾ ಉತ್ಸಾಹದಲ್ಲಿರುವವರು ಇದ್ದಕ್ಕಿದ್ದಂತೆ ಪೂರ್ತಿ ಉತ್ಸಾಹ ಕಳೆದುಕೊಂಡು ಠುಸ್ ಎನ್ನಲು ಈ ರಾಶಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಹಾಗಾಗಿ, ಸಂಬಂಧ(relationship) ಆರಂಭಿಸುವುದರಲ್ಲಿರುವ ಹುರುಪು ಹೆಚ್ಚು ಕಾಲ ಇವರಲ್ಲಿ ಉಳಿದಿರುವುದಿಲ್ಲ. 

Tap to resize

Latest Videos

undefined

ಧನು(Sagittarius)
ಯಾವುದೇ ಸಂಬಂಧದಲ್ಲೂ ಸ್ವಾತಂತ್ರ್ಯ(freedom) ಬಯಸುವ ಸ್ವಭಾವ ಧನಸ್ಸಿನವರದು. ಇವರಿಗೆ ಕಮಿಟ್ ಆಗಲು ಭಯವಿಲ್ಲ. ಆದರೆ, ಸಿಕ್ಕವರನ್ನು ನೋಡಿದಾಗ, ಇವರೇ ತನಗೆ ಶೇ.100ರಷ್ಟು ಸರಿಯಾಗುವವರು ಎಂಬುದು ಮನಸ್ಸಿಗೆ ಹೊಳೆಯಬೇಕು. ಆಗ ಪರವಾಗಿಲ್ಲ. ಸಿಂಗಲ್ಲಾಗಿದ್ದಾಗ ಸಿಕ್ಕಾಪಟ್ಟೆ ಸ್ವಾತಂತ್ರ್ಯ ಅನುಭವಿಸುವ ಇವರಿಗೆ ಸಂಬಂಧಕ್ಕಾಗಿ ಸ್ವಾತಂತ್ರ್ಯ ಕಳೆದುಕೊಳ್ಳಬೇಕಾಗಿ ಬಂದರೆ ಉಸಿರುಗಟ್ಟಿದಂತಾಗುತ್ತದೆ. ತಮ್ಮ ಸಂಗಾತಿಯಾದವರು ಅತಿಯಾಗಿ ತಮ್ಮ ವಿಷಯದಲ್ಲಿ ಮೂಗು ತೂರಿಸುವುದು, ಸಿಕ್ಕಾಪಟ್ಟೆ ಹಚ್ಚಿಕೊಳ್ಳುವುದು ಅದೆಲ್ಲ ಇವರಿಗೆ ಇಷ್ಟವಾಗುವುದಿಲ್ಲ. ಇವರ ಸ್ವಭಾವ, ಯೋಚನೆ, ಹವ್ಯಾಸ(hobbies)ಗಳೇ ಹೊಂದಿರುವ ಸಂಗಾತಿಯಾದರೆ ಅಡ್ಡಿ ಇಲ್ಲ. 

Astrology And Personality Traits: ಈ ರಾಶಿಯವರು ಉತ್ತಮ ಸಲಹೆ ನೀಡೋದ್ರಲ್ಲಿ ನಿಸ್ಸೀಮರು!

ಕುಂಭ(Aquarius)
ಸಂಬಂಧದಲ್ಲಿ ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಳ್ಳುವವರು ಇವರು. ಎಲ್ಲ ರಾಶಿಗಳಿಗಿಂತ ಹೆಚ್ಚು ಸ್ವತಂತ್ರರಾಗಿರುವವರು. ಕುಂಭ ರಾಶಿಯವರಿಗೆ ತಮ್ಮಷ್ಟಕ್ಕೆ ತಮ್ಮ ಕೆಲಸ, ಹವ್ಯಾಸ ಮಾಡಿಕೊಂಡಿರುವುದು ಇಷ್ಟ. ಅದನ್ನೆಲ್ಲ ಯಾರಾದರೂ ಪ್ರಶ್ನಿಸುವುದು ಬೇಕಿಲ್ಲ. ಇವರು ಪ್ರೀತಿಪಾತ್ರರ ಮೇಲೆ ಬಹಳ ಕಾಳಜಿ(caring), ಪ್ರೀತಿ ತೋರಿಸುತ್ತಾರೆಂಬುದು ನಿಜವೇ ಆದರೂ, ಅದರೊಂದಿಗೇ ತಮ್ಮ ಯೋಚನೆ, ಯೋಜನೆಗಳಿಗಾಗಿ ಶಾಂತಿ, ಸಮಯ ಬೇಡುವವರಿವರು. ಸಂಬಂಧದಿಂದ ತಾವು ನಿರೀಕ್ಷಿಸಿದ್ದು ಸಿಗುತ್ತಿಲ್ಲ ಎಂದಾದಾಗ ಅಂಥದ್ದರಲ್ಲಿ ಇದ್ದೇನು ಪ್ರಯೋಜನ ಎಂಬ ಮನೋಧರ್ಮ ಹೊಂದಿರುವವರು. 

Baba Vanga predictions: 2022ರಲ್ಲಿ ಮತ್ತೊಂದು ವೈರಸ್ ದಾಳಿ, ಬಾಬಾ ವಾಂಗಾ ಭವಿಷ್ಯ

ಮೀನ(Pisces)
ಇವರು ಉಳಿದ ರಾಶಿಗಳಿಗಿಂತ ಹೆಚ್ಚು ಭಿನ್ನ. ಇವರಿಗೆ ಮತ್ತೊಬ್ಬರ ಗಮನ(attention), ಕಾಳಜಿ(care) ಎಲ್ಲವೂ ಬೇಕು. ಇವರು ಕೂಡಾ ಸಂಗಾತಿಗೆ ತುಂಬಾ ಪ್ರೀತಿ ತೋರುತ್ತಾರೆ, ಬದ್ಧತೆ ನೀಡುತ್ತಾರೆ. ಆದರೆ, ಅಂಥ ಒಳ್ಳೆ ಸಂಗಾತಿಗೆ ನಾನಲ್ಲ, ತಾನು ಅವರಿಗಿಂತ ಕಡಿಮೆ ಎಂಬೆಲ್ಲ ಯೋಚನೆಗಳು ಇವರನ್ನು ಆಗಾಗ ಬಾಧಿಸಿ ಅದರಿಂದ ಸಮಸ್ಯೆಗಳಾಗುವುದುಂಟು. ಸುಖಾ ಸುಮ್ಮನೆ ಎಲ್ಲ ತಪ್ಪನ್ನೂ ತಮ್ಮ ಮೇಲೆ ಹಾಕಿಕೊಂಡು ಕೊರಗುತ್ತಾರೆ. ಅದೂ ಅಲ್ಲದೆ ಚಿಕ್ಕ ವಿಷಯಗಳನ್ನು ದೊಡ್ಡದು ಮಾಡಿ ಜಗಳಕ್ಕಿಳಿವ ಸ್ವಭಾವವೂ ಇವರದು. ಜಗಳದ ನಂತರ ತಪ್ಪೆಲ್ಲ ತನ್ನದೇ ಎಂದು ಕೊರಗುತ್ತಾ ಕೂರುತ್ತಾರೆ.

ಕನ್ಯಾ(Virgo)
ಮೀನ ತನ್ನ ಬಗ್ಗೆಯೇ ಅತಿಯಾಗಿ ವಿಮರ್ಶೆಗೆ ತೊಡಗಿದರೆ, ಕನ್ಯಾ ಇತರರ ಬಗ್ಗೆ ಅತಿಯಾದ ಕಟು ವಿಮರ್ಶೆಯಲ್ಲಿ ತೊಡಗುತ್ತದೆ. ಕನ್ಯಾ ರಾಶಿಯವರು ಪರ್ಫೆಕ್ಟ್ ಸಂಬಂಧದ ಕಲ್ಪನೆಯಲ್ಲಿರುತ್ತಾರೆ. ವಾಸ್ತವ ಬೇರೆ ಎಂದಾದಾಗ ಅದರ ಸಂಪೂರ್ಣ ತಪ್ಪು, ಹೊಣೆಯನ್ನು ಸಂಗಾತಿಯ ತಲೆಗೆ ಕಟ್ಟುತ್ತಾರೆ. ಸಂಗಾತಿ ಮಾಡುವ ಸಣ್ಣ ಸಣ್ಣ ತಪ್ಪುಗಳನ್ನೂ ಅತಿಯಾದ ವಿಮರ್ಶೆಗೆ ಹಚ್ಚಿ ದೊಡ್ಡದು ಮಾಡಿ ಬಿಡುತ್ತಾರೆ. ಕೇವಲ ಸಂಗಾತಿಯಲ್ಲ, ಅವರ ಮನೆಯವರು, ಸಂಬಂಧಿಕರು ಎಲ್ಲರ ತಪ್ಪನ್ನೂ ಭೂತಗನ್ನಡಿ ಹಾಕಿ ತೋರುತ್ತಾರೆ. 

click me!