ಸಲಹೆ ಕೊಡೋದು ಕೂಡಾ ಒಂದು ಟ್ಯಾಲೆಂಟೇ. ಎಲ್ಲರೂ ಕೊಡೋ ಸಲಹೆಗಳು ಕೆಲಸ ಮಾಡಲ್ಲ. ಆದರೆ, ಕೆಲವರು ನೀಡುವ ಸಲಹೆಗಳು ಸರಳವೆನಿಸಿದರೂ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಯಾವ ರಾಶಿಯವರು ಅತ್ಯುತ್ತಮ ಸಲಹೆ ಕೊಡ್ತಾರೆ ಗೊತ್ತಾ?
ಸಲಹೆಗಳನ್ನು ಎಲ್ರೂ ಕೊಡ್ತಾರೆ. ಆದ್ರೆ ಕೆಲವರು ಕೊಡೋ ಸಲಹೆ(advice)ಗಳು ಮಾತ್ರ ಪ್ರಾಕ್ಟಿಕಲಿ ಸರಿಯಾಗಿದೆ ಅಂತ ಅನ್ನಿಸೋದು. ಮತ್ತೆ ಕೆಲವರು ನೀಡಿದ ಸಲಹೆಗಳು ಪಡೆದವರ ಬದುಕನ್ನೇ ಬದಲಿಸಬಲ್ಲದು. ಮತ್ತೆ ಕೆಲವರು ನೀಡುವ ಸಲಹೆಗಳು ಖುಷಿ ನೀಡಬಹುದು. ಹೀಗೆ ಸಲಹೆಗಳನ್ನು ಕೂಡಾ ಎಲ್ಲರೂ ಚೆನ್ನಾಗಿ ಕೊಡೋಕಾಗಲ್ಲ. ಹೀಗೆ ಚೆನ್ನಾಗಿ ಸಲಹೆ ನೀಡೋರ ನಡುವೆ ಇರೋ ಸಾಮ್ಯತೆ ಎಂದರೆ ಅವರ ಜನ್ಮರಾಶಿ(zodiac sign). ಯಾವ ರಾಶಿಯವರು ಯಾವ ವಿಷಯಗಳ ಬಗ್ಗೆ ಚೆನ್ನಾಗಿ ಸಲಹೆ ನೀಡಬಲ್ಲರು ಎಂಬ ಅರಿವಿದ್ದರೆ ಮುಂದೆ ಗೊಂದಲಗಳು ಎದುರಾದಾಗ ಇಂಥ ರಾಶಿಯ ಗೆಳೆಯರನ್ನೋ, ಹಿರಿಯರನ್ನೋ ಹೋಗಿ ಸಲಹೆ ಕೇಳ್ಬೋದು. ಏನಂತೀರಾ?
ಧನು(Sagittarius)
ಸಾಹಸ ಹಾಗೂ ಅನ್ವೇಷಣೆಗಳನ್ನು ಇಷ್ಟ ಪಡುವವರು ಧನಸ್ಸು ರಾಶಿಯವರು. ನೀವು ಕೆಲಸ- ಮನೆ ಅಂತ ಅಲ್ಲೇ ಸುತ್ತು ಹೊಡೀತಾ ಖಿನ್ನತೆಗೊಳಗಾದಾಗ ಈ ಧನು ರಾಶಿಯವರೊಂದಿಗೆ ಮಾತಿಗಿಳಿಯಿರಿ. ಅವರು ನಿಮಗೆ ಆ ಸರ್ಕಲ್ಲಿನಿಂದ ಹೊರಬರುವುದು ಇಲ್ಲವೇ, ಅದನ್ನು ಸರಿಯಾಗಿ ಬ್ಯಾಲೆನ್ಸ್ ಮಾಡುವುದು ಹೇಗೆಂದು ಹೇಳುತ್ತಾರೆ. ಕೇವಲ ಹೇಳುವುದಲ್ಲ, ಖಿನ್ನರಾಗಿರುವ ನಿಮ್ಮನ್ನು ಎಳೆದುಕೊಂಡು ಚಾರಣವೋ, ಪ್ರವಾಸವೋ ಹೋಗುತ್ತಾರೆ. ಮನರಂಜನೆಯ ತಾಣಗಳಿಗೆ ಕರೆದೊಯ್ಯುತ್ತಾರೆ. ಇವರು ಮೊದಲೇ ಬಹಳ ಧನಾತ್ಮಕವಾಗಿ ಯೋಚಿಸುವವರು(optimist) ಜೊತೆಗೆ ಚೈತನ್ಯಶೀಲರು. ಹಾಗಾಗಿ, ನೀವು ಯಾವಾಗ ಬೇಜಾರು. ದುಃಖದಲ್ಲಿದ್ದರೂ ಇವರ ಬಳಿ ಹೋದರೆ ಖಂಡಿತಾ ತಮ್ಮ ಎನರ್ಜಿಯನ್ನು ನಿಮಗೆ ಪಾಸ್ ಮಾಡಬಲ್ಲರು.
Temple Special: ಈ ಶ್ರೀಮಂತ ದೇವಸ್ಥಾನಗಳ ಆಸ್ತಿ ಎಷ್ಟು ಬಲ್ಲಿರಾ?
undefined
ಮಕರ(Capricorn)
ಇಲ್ ಕೇಳಿ, ಯಾವುದಕ್ಕೂ ಎನರ್ಜಿಯೇ ಇಲ್ಲ, ಯಾವ ಕೆಲಸ ಮಾಡಲೂ ಮೂಡ್ ಇಲ್ಲ, ಪ್ರೇರಣೆ ಇಲ್ಲ.. ಬದುಕಲ್ಲಿ ಯಾವ ಗುರಿ, ಆಸೆಗಳನ್ನು ಸಾಧಿಸಲಾಗುತ್ತಿಲ್ಲ ಎಂದು ಕೊರಗುತ್ತಾ ಕೂರುವ ಆ ಸಮಯವನ್ನು ಎಲ್ಲರೂ ಒಂದಿಲ್ಲೊಮ್ಮೆ ಎದುರಿಸುತ್ತಾರೆ. ಹಾಗೆ ನಿಮಗನಿಸಿದಾಗ ಮೊದಲು ಮಕರ ರಾಶಿಯ ಸ್ನೇಹಿತರ ಹತ್ತಿರ ಓಡಿ. ಸಿಕ್ಕಾಪಟ್ಟೆ ಶ್ರಮಜೀವಿಗಳು ಹಾಗೂ ಉತ್ತಮ ಸಂವಹನಕಾರರಾಗಿರುವ ಮಕರ ರಾಶಿಯವರು ಬಿಸ್ನೆಸ್ ವಿಷಯಕ್ಕೆ ಬಂದರೆ ಉತ್ತಮ ಸಲಹೆಗಳನ್ನು ತಮ್ಮ ಬತ್ತಳಿಕೆಯಲ್ಲಿಟ್ಟುಕೊಂಡಿರುತ್ತಾರೆ. ನಿಮ್ಮ ಬಿಸ್ನೆಸ್ ಐಡಿಯಾ ಕಾರ್ಯರೂಪಕ್ಕೆ ಬರದೇ ವಿಳಂಬವಾಗುತ್ತಿದ್ದರೆ, ಮಕರ ರಾಶಿಯ ಫ್ರೆಂಡ್‌ಗೆ ಕೇಳಿ. ಬಿಸ್ನೆಸ್ ಪ್ಲ್ಯಾನ್ ಬರೆಯೋದು, ಆ ಬಗ್ಗೆ ಸಂಶೋಧನೆ(research) ಮಾಡುವುದು, ನಿಮ್ಮ ಉದ್ಯಮಕ್ಕೆ ಯಾವೆಲ್ಲ ಕಂಪನಿಗಳು ಸಾಥ್ ನೀಡಬಹುದು, ನಿಮ್ಮ ಉತ್ಪನ್ನಗಳನ್ನು ಎಲ್ಲಿ ಮಾರ್ಕೆಟಿಂಗ್ ಮಾಡಿದರೆ ಸೇಲ್ ಆಗುತ್ತದೆ ಎಲ್ಲವನ್ನೂ ಇವರು ಹೇಳಬಲ್ಲರು. ನೀವು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ವ್ಯವಧಾನ ಇವರಲ್ಲುಂಟು.
Weekly Horoscope: ಈ ವಾರ ಮಕರಕ್ಕೆ ಅದೃಷ್ಟ ಖುಲಾಯಿಸಲಿದೆ, ಉಳಿದ ರಾಶಿಗಳ ಫಲವೇನಿದೆ ಗೊತ್ತಾ?
ವೃಶ್ಚಿಕ(Scorpio)
ತನಿಖೆ ಮಾಡೋದು, ವಿಚಾರಣೆ ಮಾಡೋದ್ರಲ್ಲಿ ವೃಶ್ಚಿಕ ರಾಶಿಯವರು ಒಂದನೇ ನಂಬರ್. ಪ್ರೀತಿಪ್ರೇಮದ ವಿಷಯದ ಸಮಸ್ಯೆಗಳು, ವಿವಾಹ ಬದುಕಿನ ಸಮಸ್ಯೆಗಳು- ಸಂಗಾತಿ ಎಲ್ಲಿ ಮೋಸ ಮಾಡುತ್ತಿರಬಹುದು, ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವುದು ಹೇಗೆ ಎಲ್ಲದಕ್ಕೂ ವೃಶ್ಚಿಕ ರಾಶಿಯವರ ಬಳಿ ಸಲಹೆಗಳಿರುತ್ತವೆ. ಹಾಗಂಥ ಅವರು ದ್ವೇಷಸಾಧನೆ ಹೇಳಿಕೊಡುತ್ತಾರೆಂದಲ್ಲ.. ಮೋಸಗಳನ್ನು ಬಯಲಿಗೆಳೆಯಲು ಸಹಾಯ ಮಾಡುತ್ತಾರೆ. ಇನ್ನು ಸಂಸಾರ ಜೀವನ ನೀರಸವಾಗಿದ್ದರೆ ಅದನ್ನು ವಿಶೇಷವಾಗಿಸುವುದು ಹೇಗೆಂಬ ಅತ್ಯುತ್ತಮ ಸಲಹೆ ಕೂಡಾ ಇವರು ನೀಡಬಲ್ಲರು. ಲೈಂಗಿಕ ಬದುಕಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಇವರಲ್ಲಿ ಸಲಹೆಗಳಿರುತ್ತವೆ.
ಕಟಕ(Cancer)
ಈ ರಾಶಿಯವರು ಮಾಸ್ಟರ್ ಆಫ್ ಆಲ್ ಇದ್ದಂತೆ. ಇವರ ಬಳಿ ಇಂಥದ್ದೇ ವಿಷಯ ಎಂದೇನಿಲ್ಲ, ನಿಮ್ಮ ಬಾಯ್‌ಫ್ರೆಂಡ್ ಸಮಸ್ಯೆ(problem)ಯಿಂದ ಹಿಡಿದು, ಯಾವ ಪಾಡ್‌ಕಾಸ್ಟ್ ಚೆನ್ನಾಗಿರುತ್ತದೆ, ಯಾವ ಮೂವಿ ನೋಡಬೇಕು, ಪ್ರಪೋಸ್ ಮಾಡೋದು ಹೇಗೆ- ಹೀಗೆ ಎಲ್ಲದಕ್ಕೂ ಸಲಹೆ ಕೇಳ್ಬಹುದು. ನಿಮಗೆ ಸಲಹೆಗಳೇನೂ ಬೇಡ, ನಿಮ್ಮ ಮಾತುಗಳನ್ನು ಯಾರಾದರೂ ಕೇಳಿಸಿಕೊಂಡರೂ ಸಾಕು, ಹಗುರಾಗುತ್ತೀರಿ ಎನಿಸಿದರೆ ಆಗ ಕೂಡಾ ಕಟಕ ರಾಶಿಯವರ ಬಳಿಯೇ ಹೋಗಿ. ಅವರು ತಾಳ್ಮೆಯಿಂದ ಮಾತನ್ನು ಕೇಳಿಸಿಕೊಳ್ಳುವುದರಲ್ಲಿ ಕೂಡಾ ನಿಸ್ಸೀಮರೇ.