ಮಾಘ ಗುಪ್ತ ನವರಾತ್ರಿಯು ಸಿದ್ಧಿ ಯೋಗದಲ್ಲಿ ಪ್ರಾರಂಭವಾಗುತ್ತದೆ. ದಿನಾಂಕ, ಕಲಶ ಸ್ಥಾಪನಾ ಮುಹೂರ್ತ ಮತ್ತು ಧಾರ್ಮಿಕ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.
ನವರಾತ್ರಿಯು ವರ್ಷದಲ್ಲಿ ಕೇವಲ ಒಂದು ಬಾರಿಯಲ್ಲ, 4 ಬಾರಿ ಬರುತ್ತದೆ. ಇದರಲ್ಲಿ ಅಶ್ವಿನ್ ಮಾಸದ ಎರಡು ಗುಪ್ತ ನವರಾತ್ರಿ, ಚೈತ್ರ ನವರಾತ್ರಿ ಮತ್ತು ಶಾರದೀಯ ನವರಾತ್ರಿಗಳಿವೆ. ಇದರಲ್ಲಿ ಎರಡು ಸಾತ್ವಿಕ ನವರಾತ್ರಿಗಳಾದರೆ, ಎರಡು ತಾಂತ್ರಿಕ ನವರಾತ್ರಿಗಳಿವೆ. ಈ ಗುಪ್ತ ನವರಾತ್ರಿಯು ತಾಂತ್ರಿಕರಿಗೆ ಮಹತ್ವದ್ದಾಗಿದೆ.
ಈ ವರ್ಷದ ಮಾಘ ಗುಪ್ತ ನವರಾತ್ರಿಯು(Magh Gupt Navratri) ಜನವರಿ 22ರ ಭಾನುವಾರದಿಂದ ಪ್ರಾರಂಭವಾಗುತ್ತಿದೆ. ಈ ದಿನಗಳಲ್ಲಿ 10 ಮಹಾವಿದ್ಯೆಗಳು (ಮಾ ಕಾಳಿ, ತಾರಾ ದೇವಿ, ತ್ರಿಪುರ ಸುಂದರಿ, ಭುವನೇಶ್ವರಿ, ಮಾತಾ ಚಿನ್ನಮಸ್ತ, ತ್ರಿಪುರ ಭೈರವಿ, ಮಾ ಧ್ರುಮಾವತಿ, ಮಾ ಬಂಗ್ಲಾಮುಖಿ, ಮಾತಂಗಿ ಮತ್ತು ಕಮಲಾ ದೇವಿ) ಪೂಜಿಸಲಾಗುತ್ತದೆ. ಅದೇ ಸಮಯದಲ್ಲಿ ಸಿದ್ಧಿ ಯೋಗದಲ್ಲಿ ಈ ಬಾರಿ ಮಾಘ ಗುಪ್ತ ನವರಾತ್ರಿ ಆರಂಭವಾಗುತ್ತಿದೆ. ಇದರಿಂದ ಗುಪ್ತ ನವರಾತ್ರಿಯ ಮಹತ್ವ ಈ ಬಾರಿ ಇನ್ನಷ್ಟು ಹೆಚ್ಚಿದೆ. ಕಲಶವನ್ನು ಪ್ರತಿಷ್ಠಾಪಿಸುವ ಶುಭ ಸಮಯ(Kalash sthapana Shubh samay) ಮತ್ತು ದಿನಾಂಕದ ವಿವರ ಇಲ್ಲಿದೆ.
ಎಲ್ಲವೂ ಗುಪ್ತ್ ಗುಪ್ತ್
ಗುಪ್ತ ನವರಾತ್ರಿ ರಹಸ್ಯ ಆಚರಣೆಗಳಿಗೆ ಹೆಚ್ಚು ಮಹತ್ವದ್ದಾಗಿದೆ. ಇದರಲ್ಲಿ ಅಡೆ ತಡೆಗಳನ್ನು ನಾಶಪಡಿಸುವ ವರ ಪಡೆಯಬಹುದು. ಉತ್ತರ ಭಾರತದಲ್ಲಂತೂ ಇದರ ಆಚರಣೆ ಜೋರು. ಗುಪ್ತ ನವರಾತ್ರಿಯಲ್ಲಿ ಗುಟ್ಟಾಗಿ ಪೂಜೆ ನಡೆಯುತ್ತದೆ. ಈ ದಿನಗಳಲ್ಲಿ ಮಾಡುವ ಪೂಜೆಯನ್ನು ಬೇರೆ ಯಾರಿಗಾದರೂ ಹೇಳಿದರೆ ಅದರ ಫಲವು ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ. ಗುಪ್ತ ನವರಾತ್ರಿಯಲ್ಲಿ, ತಾಂತ್ರಿಕರು, ಸಾಧಕರು ಅಥವಾ ಅಘೋರಿಗಳು ತಂತ್ರ-ಮಂತ್ರವನ್ನು ಮಾಡಿ, ಸಿದ್ಧಿಯನ್ನು ಪಡೆಯಲು ಮಾ ದುರ್ಗೆ(Maa Durga)ಯನ್ನು ಪೂಜಿಸುತ್ತಾರೆ.
Thursday Astro: ಈ ದಿನ ಈ ವಸ್ತುಗಳ ದಾನದಿಂದ ದುಪ್ಪಟ್ಟು ಸಮೃದ್ಧಿ ನಿಮ್ಮದಾಗುತ್ತೆ!
ಮಾಘ ಗುಪ್ತ ನವರಾತ್ರಿ ತಿಥಿ(Magh Gupt Navratri tithi)
ವೈದಿಕ ಪಂಚಾಂಗದ ಪ್ರಕಾರ, ಈ ವರ್ಷ ಪ್ರತಿಪದ ತಿಥಿ ಜನವರಿ 21ರ ರಾತ್ರಿ ಪ್ರಾರಂಭವಾಗಲಿದೆ ಮತ್ತು ಮರುದಿನ ಜನವರಿ 22ರ ರಾತ್ರಿ 10.30ರವರೆಗೆ ಇರುತ್ತದೆ. ಅದಕ್ಕಾಗಿಯೇ ಈ ವರ್ಷ ಮಾಘ ಶುಕ್ಲ ಪ್ರತಿಪದ ತಿಥಿ ಜನವರಿ 22 ರಂದು ಮತ್ತು ನವಮಿ ತಿಥಿ ಜನವರಿ 30ರಂದು. ಅದಕ್ಕಾಗಿಯೇ ಭಕ್ತರು 9 ದಿನಗಳ ಕಾಲ ತಾಯಿಗೆ ರಹಸ್ಯವಾಗಿ ಪೂಜೆ ಸಲ್ಲಿಸುತ್ತಾರೆ.
ಕಲಶ ಸ್ಥಾಪನೆಗೆ ಶುಭ ಸಮಯ
ಜನವರಿ 22ರಂದು ಅಭಿಜಿತ್ ಮುಹೂರ್ತದಲ್ಲಿ ಕಲಶ ಸ್ಥಾಪನೆ ನಡೆಯಲಿದೆ. ಈ ದಿನದಂದು ಅಭಿಜಿತ್ ಮುಹೂರ್ತವು ಮಧ್ಯಾಹ್ನ 12.10 ರಿಂದ ಪ್ರಾರಂಭವಾಗಿ 12.54 ರವರೆಗೆ ಇರುತ್ತದೆ. ಅಭಿಜಿತ್ ಮುಹೂರ್ತದಲ್ಲಿ ಕಲಶವನ್ನು ಸ್ಥಾಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
8ರ ಪುಟಾಣಿ ಇನ್ನು ಮುಂದೆ ಸನ್ಯಾಸಿನಿ, ಇಲ್ಲಿದೆ ದೀಕ್ಷಾಧಾರಣೆಯ ವೈಭವದ ಫೋಟೋಗಳು
ಶುಭ ಯೋಗ
ಪಂಚಾಂಗದ ಪ್ರಕಾರ ಈ ವರ್ಷ ಜನವರಿ 22ರಂದು ಸಿದ್ಧಿ ಯೋಗದಲ್ಲಿ(Siddhi Yoga) ಮಾಘ ಗುಪ್ತ ನವರಾತ್ರಿ ಆರಂಭವಾಗಲಿದೆ. ಈ ದಿನ ಬೆಳಿಗ್ಗೆ 10.07 ರವರೆಗೆ ವಜ್ರಯೋಗವು ರೂಪುಗೊಳ್ಳುತ್ತದೆ. ಮತ್ತು ಇದರ ನಂತರ ಸಿದ್ಧಿ ಯೋಗವಿದೆ, ಇದು ಮರುದಿನ ಬೆಳಿಗ್ಗೆ 05:41 ರವರೆಗೆ ಇರುತ್ತದೆ. ಈ ಯೋಗಗಳನ್ನು ಜ್ಯೋತಿಷ್ಯದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಈ ಯೋಗಗಳಲ್ಲಿ ಪೂಜಿಸುವುದರಿಂದ ದುಪ್ಪಟ್ಟು ಫಲ ಸಿಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.