ಶನಿ ದೇವರ ಕೃಪೆಗಾಗಿ ಎಲ್ಲರೂ ಭಕ್ತಿ ಭಾವದಿಂದ ಶನಿಯನ್ನು ಆರಾಧಿಸಿಸುತ್ತಾರೆ. ಶನಿ ದೇವರು ಕರ್ಮಕ್ಕೆ ತಕ್ಕ ಫಲವನ್ನು ನೀಡುವ ದೇವರಾಗಿದ್ದಾನೆ, ಹಾಗಾಗಿ ಪಾಪ ಕರ್ಮಗಳಿಗೆ ಶಿಕ್ಷೆಯನ್ನು ಧರ್ಮ ಕಾರ್ಯಗಳಿಗೆ ವರವನ್ನು ನೀಡುತ್ತಾನೆ. ಅಷ್ಟೆ ಅಲ್ಲದೆ ಶನಿ ದೇವರು ಒಳಿತನ್ನು ಮಾಡುವ ಮುನ್ನ ಕೆಲವು ಸಂಕೇತಗಳನ್ನು ನೀಡುತ್ತಾನೆ ಆ ಸಂಕೇತಗಳ ಬಗ್ಗೆ ತಿಳಿಯೋಣ....
ಕರ್ಮಕ್ಕೆ ತಕ್ಕ ಫಲ ನೀಡುವ ಶನಿದೇವ, ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಒಳ್ಳೆಯದನ್ನೇ ಮಾಡುತ್ತಾನೆ. ಸಮಯ (Time) ಬಂದಾಗ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿಗೆ ತಕ್ಕ ಫಲವನ್ನು ನೀಡುತ್ತಾನೆ. ಕೇವಲ ವಕ್ರ ದೃಷ್ಟಿಯನ್ನು ಬೀರುತ್ತಾ ಎಲ್ಲರನ್ನು ಭಯಗೊಳಿಸುವ ಶನಿದೇವರು ಶುಭವನ್ನು ನೀಡುತ್ತಾನೆ. ಜನರಿಗೆ ಒಳಿತನ್ನು ಉಂಟುಮಾಡುವ ದೇವರಾಗಿದ್ದಾನೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ (Saturn) ದೇವರು ಒಳಿತು ಮಾಡುವ ಮುನ್ನ ಕೆಲವು ಸಂಕೇತಗಳನ್ನು ನೀಡಿರುತ್ತಾನೆ. ಆ ಸಂಕೇತಗಳಿಂದಲೇ ಮುಂದೆ ಒಳ್ಳೆಯ ದಿನಗಳು ಕಾದಿದೆ ಎಂಬುದನ್ನು ತಿಳಿಯಬಹುದಾಗಿದೆ. ಹಾಗಾದರೆ ಆ ಸಂಕೇತಗಳ ಬಗ್ಗೆ ತಿಳಿಯೋಣ .....
ಕುದುರೆಯ ನಾಳ : ಶನಿವಾರದ ದಿನ ದಾರಿಯಲ್ಲಿ ಹೋಗುತ್ತಿರುವಾಗ ಕುದುರೆಯ ನಾಳ ಕಂಡರೆ ಅದನ್ನು ತೆಗೆದುಕೊಂಡು ಮನೆಯ ಬಾಗಿಲಿಗೆ ನೇತು (Hang) ಹಾಕಬೇಕು. ಇದರಿಂದ ಮನೆ ಸಮಸ್ಯೆಗಳು ದೂರವಾಗುವ ಮತ್ತು ಒಳಿತಾಗುವ ಸೂಚನೆಯನ್ನು ಇದು ನೀಡುತ್ತದೆ. ಅಷ್ಟೆ ಅಲ್ಲದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ (Negative energy) ಪ್ರವೇಶವಾಗುವುದಿಲ್ಲ. ಹಾಗಾಗಿ ಇದು ಶನಿಯು ನೀಡುವ ಶುಭ ಸಂಕೇತವಾಗಿದೆ.
ಇದನ್ನು ಓದಿ : Astrology Tips: ಶನಿ ದೋಷದಿಂದ ಮುಕ್ತಿ ಪಡೆಯಲು ಈ ರತ್ನ ಧರಿಸಿ
ಕಾಗೆ (crow) : ಶನಿವಾರದ ದಿನ ಮನೆಯಿಂದ ಹೊರಗೆ ನೀರು ಕುಡಿಯುತ್ತಿರುವ ಕಾಗೆ ಕಣ್ಣಿಗೆ ಬಿದ್ದರೆ ಇದು ಅತ್ಯಂತ ಶುಭ ಸಂಕೇತವಾಗಿದೆ. ಸದ್ಯದಲ್ಲಿಯೇ ಶುಭ ಸಮಾಚಾರ ಸಿಗಲಿದೆ ಎಂಬುದರ ಅರ್ಥ ಇದಾಗಿದೆ. ಅಷ್ಟೇ ಅಲ್ಲದೆ ಶನಿವಾರ (Saturn) ಮನೆಯ ಮಹಡಿಯ ಮೇಲೆ ಕಾಗೆ ಕುಳಿತಿರುವುದನ್ನು ನೋಡಿದರೂ ಸಹ ಇದು ಶುಭದ ಸಂಕೇತವೆಂದು ಆಗಿರುತ್ತದೆ.
ಕರಿ ಶ್ವಾನ (Black dog) : ಶನಿವಾರದ ದಿನ ಬೆಳಗಿನ ಸಮಯದಲ್ಲಿ ಕಪ್ಪು ನಾಯಿಯು ಕಾಣಿಸಿದರೆ ಅತ್ಯಂತ ಶುಭ ಸಂಕೇತ ಎಂದು ಹೇಳಲಾಗುತ್ತದೆ. ಈ ದಿನ ಶನಿ ದೇವಸ್ಥಾನದ ಎದುರು ಕರಿ ಶ್ವಾನ ಎದುರಾದರೆ ಅದಕ್ಕೆ ಆಹಾರವನ್ನು (Food) ನೀಡಬೇಕು. ಹೀಗೆ ಮಾಡುವುದರಿಂದ ಶನಿದೇವನ ವಿಶೇಷ ಕೃಪೆ ಪ್ರಾಪ್ತವಾಗುತ್ತದೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಶುಭವಾಗುತ್ತದೆ ಎಂಬುದರ ಸಂಕೇತ ಸಹ ಆಗಿರುತ್ತದೆ.
ಕಪ್ಪು ಹಸು (Black cow) : ಶನಿವಾರದ ದಿನ ಒಳ್ಳೆಯ ಕೆಲಸಕ್ಕಾಗಿ ಹೊರಟ ಸಮಯದಲ್ಲಿ ಕಪ್ಪು ಹಸು ಕಂಡರೆ ಅದು ಶುಭವಾಗುತ್ತದೆ ಎಂಬುದರ ಸಂಕೇತ ಆಗಿರುತ್ತದೆ. ಕೆಲಸದಲ್ಲಿ ಯಶಸ್ಸು (Success) ದೊರಕುತ್ತದೆ ಎಂಬುದರ ಸೂಚನೆ ಸಹ ಇದಾಗಿರುತ್ತದೆ. ಶನಿವಾರದಂದು ಮನೆಯ ಬಾಗಿಲಿಗೆ ಕಪ್ಪು ಹಸು ಬಂದರೆ ಸಂಕಷ್ಟಗಳು ನಿವಾರಣೆಯಾಗಿ ನೆಮ್ಮದಿ ನೆಲೆಸುತ್ತದೆ.
ಅರಳಿ ಮರ : ಶನಿವಾರದ ದಿನ ಉತ್ತಮ (Good) ಕೆಲಸಕ್ಕಾಗಿ ಹೊರಗಡೆ ಹೋದಾಗ ಅರಳಿ ಮರ ಕಾಣಿಸಿದರೆ ಅದು ಶುಭ ಸೂಚನೆಯಾಗಿರುತ್ತದೆ. ಆ ದಿನ ಶುಭವಾಗಿರಲಿದೆ ಮತ್ತು ಹೋದ ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ.
ಇದನ್ನು ಓದಿ : ಹಸ್ತ ರೇಖೆಯಿಂದ ತಿಳಿಯಿರಿ ವಿದೇಶ ಪ್ರಯಾಣ ಯೋಗ..
ಕಾರ್ಮಿಕರನ್ನು ನೋಡುವುದು (Service Man) : ಶನಿವಾರದಂದು ಬೆಳಗಿನ ಸಮಯದಲ್ಲಿ ಕಸ ಗುಡಿಸುತ್ತಿರುವ ಅಥವಾ ಇನ್ನಿತರ ಸ್ವಚ್ಚತೆಯ ಕಾರ್ಯಗಳನ್ನು ಮಾಡುತ್ತಿರುವವರನ್ನು ನೋಡಿದರೆ ಅಂದು ಎಲ್ಲವೂ ಒಳ್ಳೆಯದಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಮನೆಯನ್ನು ಸ್ವಚ್ಛ ಗೊಳಿಸುವ ಸಲುವಾಗಿ ಬರುವವರಿಗೆ ಶನಿವಾರದಂದು ದಾನವಾಗಿ ಏನನ್ನಾದರೂ ನೀಡಿದರೆ ಶುಭ ಫಲ ದೊರಕುತ್ತದೆ. ಇದರಿಂದ ಮನೆಯಲ್ಲಿ ಧನ (Wealth) ಧಾನ್ಯ ವೃದ್ಧಿಯಾಗುತ್ತದೆ.
ನಿರ್ಗತಿಕರು : ಶನಿವಾರದ ದಿನ ಭಿಕ್ಷುಕರು ಅಥವಾ ನಿರ್ಗತಿಕರು ಮನೆಯ ಮುಂದೆ ಬಂದರೆ ಅದು ನಿಮ್ಮ ಅದೃಷ್ಟವೆಂದೇ (Luck) ತಿಳಿಯ ಬೇಕು. ಈ ಈ ದಿನ ಆ ವ್ಯಕ್ತಿಗಳನ್ನು ಬರಿಗೈಯಲ್ಲಿ ಕಳಿಸುವುದು ಶುಭವಲ್ಲ. ಹಾಗಾಗಿ ದಾನವಾಗಿ (Donate) ಯಾವುದಾದರೂ ವಸ್ತುವನ್ನು ನೀಡುವುದರಿಂದ ಶನಿ ದೇವರ ಕೃಪೆ ಪ್ರಾಪ್ತವಾಗುತ್ತದೆ.