Sapna Shastra : ಕನಸಿನಲ್ಲಿ ಗಣೇಶ ಬಂದ್ರೆ ಶುಭ ಸಂಕೇತವಾ?

By Suvarna NewsFirst Published Aug 30, 2022, 4:19 PM IST
Highlights

ಗಣೇಶ ಚೌತಿ ಸಂಭ್ರಮ ಮನೆ ಮಾಡಿದೆ. ಗಣಪತಿ ಆರಾಧನೆಗೆ ತಯಾರಿ ನಡೆದಿದೆ. ಈ ಮಧ್ಯೆ ಗಣೇಶ ಕನಸಿನಲ್ಲಿ ಬಂದ್ರೆ? ಸ್ವಪ್ನದಲ್ಲಿ ಬಂದ ಗಣಪತಿ ಯಾವ ಸೂಚನೆ ನೀಡ್ತಿದ್ದಾನೆ ಎಂಬ ಗೊಂದಲ ಕಾಡೋದು ಸಾಮಾನ್ಯ. ಅದಕ್ಕೆ ಉತ್ತರ ಇಲ್ಲಿದೆ.
 

ಕನಸು ಪ್ರತಿಯೊಬ್ಬರಿಗೂ ಬೀಳುತ್ತೆ. ಅನೇಕ ಬಾರಿ ನಾವು ಕಲ್ಪನೆ ಮಾಡಿಕೊಳ್ಳದವರು ನಮ್ಮ ಕನಸಿನಲ್ಲಿ ಬರ್ತಾರೆ. ಯಾವುದೋ ವ್ಯಕ್ತಿ, ಯಾವುದೋ ಸ್ಥಳ ಅಥವಾ ದೇವಸ್ಥಾನಗಳು ಕನಸಿನಲ್ಲಿ ಬರುವುದುಂಟು. ಹಾಗೆಯೇ ಕನಸಿನಲ್ಲಿ ಗಣಪತಿ ಕೂಡ ಕೆಲವೊಮ್ಮೆ ಕಾಣಿಸಿಕೊಳ್ತಾರೆ. ಕನಸಿನಲ್ಲಿ ಮೊದಲು ಪೂಜಿಪ ಗಣೇಶ ಬಂದ್ರೆ ಏನು ಸಂಕೇತ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ವಿಘ್ನವಿನಾಶಕ ಸ್ವಪ್ನದ ಕಾಣಿಸಿಕೊಂಡ್ರೆ ಒಳ್ಳೆಯದಾ ಇಲ್ಲ ಕೆಟ್ಟದ್ದಾ ಎಂಬ ಪ್ರಶ್ನೆ ಮೂಡುತ್ತದೆ. ನಾವಿಂದು ಮಹದೇವ ಹಾಗೂ ಪಾರ್ವತಿ ಪುತ್ರ ಗಣಪತಿ ಕನಸಿನಲ್ಲಿ ಕಂಡ್ರೆ ಯಾವ ಸೂಚನೆ ಎಂಬುದನ್ನು ನಿಮಗೆ ಹೇಳ್ತೇವೆ. 

ಭಗವಂತ ಗಣೇಶ (Ganesha) ಹಾಗೆಲ್ಲ ಎಲ್ಲರ ಕನಸಿ (Dream) ನಲ್ಲಿ ಬರುವುದಿಲ್ಲ. ನಿಮ್ಮ ಕನಸಿನಲ್ಲಿ ಗಣೇಶ ಬಂದ ಅಂದ್ರೆ ಅದು ಮಂಗಳಕರ. ಯಾರ ಸ್ವಪ್ನದಲ್ಲಿ ಭಗವಂತ ಗಣೇಶ ಬರ್ತಾನೋ ಅವರು ಹೆಚ್ಚು ಭಾಗ್ಯಶಾಲಿಗಳು ಎನ್ನಬಹುದು. ಗಣೇಶ ಕನಸಿನಲ್ಲಿ ಬರೋದ್ರಿಂದ ಎಲ್ಲ ಬಾರಿ ಶುಭ ಸಂಕೇತವನ್ನೇ ನೀಡುವುದಿಲ್ಲ. ಕೆಲ ಬಾರಿ ಕೆಟ್ಟ ಸಂಕೇತವನ್ನು ಕೂಡ ನೀಡ್ತಾನೆ. 

ಕನಸಿನಲ್ಲಿ ಗಣೇಶನ ಮೂರ್ತಿ (Idol) : ಕನಸಿನಲ್ಲಿ ಗಣೇಶನ ಮೂರ್ತಿ ಕಂಡ್ರೆ ಅರ್ಧಕ್ಕೆ ನಿಂತಿದ್ದ ಕೆಲಸ ಪೂರ್ತಿಯಾಗುತ್ತದೆ ಎಂದರ್ಥ. ಯಾವುದಾದ್ರೂ ಕೆಲಸದಲ್ಲಿ ಹಿನ್ನಡೆಯಾಗ್ತಿದೆ ಇಲ್ಲವೆ ಕೆಲಸ ಅರ್ಥಕ್ಕೆ ನಿಲ್ಲುತ್ತಿದೆ ಎಂದಾದ್ರೆ ಆ ಕೆಲಸ ಇನ್ಮುಂದೆ ಪೂರ್ಣಗೊಳ್ಳುತ್ತದೆ ಎಂದರ್ಥ. ಜೈ ಶ್ರೀ ಗಣೇಶ ನಾಮ ಜಪ ಮಾಡಿ ನೀವು ನಿಂತ ಕೆಲಸವನ್ನು ಮತ್ತೆ ಶುರು ಮಾಡಬಹುದು.

ಆಮೆ ಉಂಗುರ ಸುಮ್ ಸುಮ್ನೆ ಧರಿಸಿದ್ರೆ ಲಕ್ಷ್ಮೀ ದೇವಿ ಕೃಪೆ ಸಿಗಲ್ವಂತೆ !

ಗಣೇಶನ ಪೂಜೆ : ಕನಸಿನಲ್ಲಿ ಗಣೇಶನ ಪೂಜೆ ಮಾಡಿದಂತೆ ಕಂಡ್ರೆ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ ಎಂದರ್ಥ. ಭಾಗ್ಯದ ಬಾಗಿಲು ತೆರೆಯುತ್ತದೆ. ಆರ್ಥಿಕ ವೃದ್ಧಿಯಾಗುತ್ತದೆ. ನೀವೇ ಗಣೇಶನ ಪೂಜೆ ಮಾಡಿದಂತೆ ಕಂಡ್ರೆ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ ಎಂದೇ ಸೂಚನೆ. ಕುಟುಂಬ ಹಾಗೂ ನಿಮ್ಮ ಜೀವನದಲ್ಲಿ ಸುಖ ಪ್ರಾಪ್ತಿಯಾಗುತ್ತದೆ. ಮನೆಯ ಎಲ್ಲ ಕಾರ್ಯಗಳು ನೆರವೇರಲಿವೆ. ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಕೆಲಸವನ್ನು ಮನಸ್ಪೂರ್ವಕವಾಗಿ ಮಾಡಿದ್ರೆ ಮಂಗಳಕರ ಫಲಿತಾಂಶ ನಿಮ್ಮದಾಗುತ್ತದೆ. 

ಕನಸಿನಲ್ಲಿ ಬಾಲ ಗಣೇಶ ಕಂಡ್ರೆ ಏನರ್ಥ ಗೊತ್ತಾ? : ಕನಸಿನಲ್ಲಿ ಬಾಲ ಗಣೇಶ ಕಂಡ್ರೆ ಜೀವನದ ಹೊಸ ಆರಂಭ, ಹೊಸ ಜೀವನ ಶುರುವಾಗುತ್ತದೆ ಎಂಬ ಸೂಚನೆಯಾಗಿದೆ. ಕುಟುಂಬದಲ್ಲಿ ಯಾರಿಗಾದ್ರೂ ಹೊಸ ಜೀವನ ಸಿಗಲಿದೆ. ಕುಟುಂಬದಲ್ಲಿ ದೀರ್ಘ ಕಾಲದಿಂದ ಕಾಣಿಸಿಕೊಳ್ತಿದ್ದ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂಬ ಸೂಚನೆಯಾಗಿದೆ. ಅನೇಕ ದಿನಗಳಿಂದ ಕಾಯಿಲೆಯಿಂದ ಬಳಲುತ್ತಿದ್ದವರ ರೋಗ ಗುಣವಾಗಲಿದೆ. ಹಾಗೆ ಮನೆಯಲ್ಲಿ ಹೊಸ ಮಗುವಿನ ಪ್ರವೇಶವಾಗಲಿದೆ. ಗರ್ಭಿಣಿ ಕನಸಿನಲ್ಲಿ ಬಾಲ ಗಣೇಶನನ್ನು ನೋಡಿದ್ರೆ ಶೇಕಡಾ 90ರಷ್ಟು ಆಕೆಗೆ ಪುತ್ರ ಪ್ರಾಪ್ತಿಯಾಗ್ತಾನೆ ಎಂಬ ಸೂಚನೆಯಾಗಿದೆ. ಗಣೇಶನಂತೆ ಆತ ಕೂಡ ಚುರುಕಾದ ಬುದ್ಧಿ ಹೊಂದಿರುತ್ತಾನೆ ಎಂಬ ಸೂಚನೆಯಾಗಿದೆ.

ಕನಸಿನಲ್ಲಿ ಗಣಪತಿ ವಾಹನ ಇಲಿ ಕಂಡರೆ : ಕನಸಿನಲ್ಲಿ ಗಣಪತಿ ವಾಹನ ಇಲಿ ಕಾಣಿಸಿಕೊಂಡ್ರೆ ಅಶುಭ ಸಂಕೇತವಾಗಿದೆ. ಇಲಿ ಕಂಡ್ರೆ ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ ಎಂಬ ಸೂಚನೆಯಾಗಿದೆ. ಮನೆಯಲ್ಲಿರುವ ಎಲ್ಲ ವಸ್ತುಗಳನ್ನು ಹಾಳು ಮಾಡುವುದು ಇಲಿಯ ಸ್ವಭಾವ. ಹಾಗಾಗಿ ಇಲಿ ಕನಸಿನಲ್ಲಿ ಕಂಡ್ರೆ ಮನೆಯಲ್ಲಿರುವ ಎಲ್ಲ ವಸ್ತುಗಳು ನಷ್ಟವಾಗುತ್ತದೆ ಎಂಬ ಸೂಚನೆಯಾಗಿದೆ. ಈ ಕನಸು ಬಿದ್ರೆ ನೀವು ಎಚ್ಚೆತ್ತುಕೊಳ್ಳಿ. ಮನೆ ಹತ್ತಿರದ ಗಣಪತಿ ದೇವಸ್ಥಾನಕ್ಕೆ ಹೋಗಿ ಗಣೇಶನಿಗೆ ಲಡ್ಡನ್ನು ಅರ್ಪಿಸಿ. ಹಾಗೆ 10 ಜನರಿಗೆ ಇದ್ರ ಪ್ರಸಾದ ನೀಡಿ. 

ಕನಸಲ್ಲಿ ದೀಪ ಕಂಡ್ರೆ ಶುಭವೋ? ಅಶುಭವೋ?

ಗಣೇಶನ ದೇವಸ್ಥಾನ : ಕನಸಿನಲ್ಲಿ ಗಣೇಶನ ದೇವಸ್ಥಾನ ನೋಡುವುದು ಶುಭ ಸಂಕೇತವಾಗಿದೆ. ಹತ್ತಿರದ ಗಣೇಶನ ದೇವಸ್ಥಾನಕ್ಕೆ ಹೋಗಿ, ಗಣಪತಿ ದರ್ಶನ ಪಡೆಯುವುದು ಒಳ್ಳೆಯದು. ಗಣೇಶ ಲಡ್ಡು ತಿನ್ನುತ್ತಿದ್ದಂತೆ ಕನಸು ಬಿದ್ರೆ ಆತನಿಗೆ ಲಡ್ಡಿನ ಅರ್ಪಣೆ ಮಾಡಿ. 
 

click me!