ಗಣೇಶ ಚತುರ್ಥಿ ಪೂಜೆಗೆ ಮನೆಮನೆಯೂ ಸಜ್ಜಾಗಿದೆ. ಗಣೇಶನನ್ನು ಆರಾಧಿಸುವಾಗ ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೆಯೇ ವ್ರತದ ದಿನ ಮಾಡಬಾರದ ಕೆಲ ಕೆಲಸಗಳಿವೆ. ಅವುಗಳ ಬಗ್ಗೆಯೂ ಗಮನವಿರಲಿ..
ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳ ಎರಡೂ ಪಕ್ಷಗಳ ಚತುರ್ಥಿ ದಿನಾಂಕವನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಇವಲ್ಲದೆ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ಎಲ್ಲಕ್ಕಿಂತ ವಿಶೇಷವೂ, ದೊಡ್ಡ ಹಬ್ಬವೂ ಆಗಿದೆ. ಈ ಬಾರಿ ಆಗಸ್ಟ್ 31ರಂದು ಗಣೇಶ ಚತುರ್ಥಿಯನ್ನು ಜಗತ್ತಿನಾದ್ಯಂತ ಹಿಂದೂಗಳು ಆಚರಿಸುತ್ತಿದ್ದಾರೆ.
ಈ ವರ್ಷ ಗಣಪತಿ ಪ್ರತಿಷ್ಠಾಪನೆಗೆ ಮುಹೂರ್ತವು ಬೆಳಿಗ್ಗೆ 11.05 ರಿಂದ ಮಧ್ಯಾಹ್ನ 1:38 ರವರೆಗೆ ಇರುತ್ತದೆ. ಗಣಪತಿಯ ವ್ರತಾಚರಣೆಯಿಂದ ಬಾಳಿನಿಂದ ಸಂಕಷ್ಟಗಳು ದೂರಾಗಿ ಮಾಡುವ ಕೆಲಸಗಳಲ್ಲಿ ವಿಘ್ನಗಳು ದೂರಾಗುತ್ತವೆ. ಗಣೇಶನನ್ನು ಭಕ್ತಿಯಿಂದ ಬೇಡಿದವರಿಗೆ ಆತ ಸಂಪತ್ತನ್ನೂ, ಬುದ್ಧಿವಂತಿಕೆಯನ್ನೂ ಕೊಡುತ್ತಾನೆ. ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಈ ವಾರ ಬುಧವಾರವೇ ಗಣೇಶ ಚತುರ್ಥಿ ಹಬ್ಬ ಬಂದಿರುವುದು ವಿಶೇಷವಾಗಿದೆ. ಇಂಥದೊಂದು ಅಪರೂಪದ ವಿಶೇಷ ದಿನದಂದು ಭಕ್ತಿಭಾವದಿಂದ ಗಣೇಶನನ್ನು ಪೂಜಿಸಿ, ಬೇಡಿದ ವರ ಪಡೆಯಿರಿ. ಆದರೆ, ಈ ದಿನ ಪೂಜಿಸುವಾಗ, ವ್ರತ ಆಚರಿಸುವಾಗ ಕೆಲ ತಪ್ಪುಗಳಾಗದಂತೆ ನೀವು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಆಭಾಸವಾಗಬಹುದು. ಗಣೇಶನಿಗೆ ಕೋಪ ಬರಬಹುದು. ಗಣೇಶ ಚತುರ್ಥಿಯ ಈ ಶುಭದಿನ ನೀವು ಮಾಡಬಾರದ ಕೆಲಸಗಳೇನು ತಿಳಿಯಿರಿ..
ಇವನ್ನು ನೆನಪಿಡಿ
ಗಣಪತಿ ಪೂಜೆಯ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿ
'ಓಂ ಗಣಪತಯೇ ನಮಃ' ಎಂದು ಪಠಿಸುವುದರಿಂದ ದುಃಖಗಳಿಂದ ಮುಕ್ತಿ ಸಿಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಸಿಗುತ್ತದೆ.
'ಓಂ ವಕ್ರತುಂಡಾಯ ಧೀಮಹೇ, ಏಕದಂತಾಯ ವಿದ್ಮಹೇ' ಎಂಬ ಈ ಮಂತ್ರವನ್ನು ಪಠಿಸುವುದರಿಂದ ಕೆಲಸದಲ್ಲಿನ ಅಡೆತಡೆಗಳು ಗಣೇಶನ ಕೃಪೆಯಿಂದ ದೂರವಾಗುತ್ತವೆ.
'ಓಂ ಶ್ರೀ ಗಂ ಸೌಭಯ ಗಣಪತಯೇ ವರ ವರದ್ ಸರ್ವಜನಂ ಮೇ ವಶ್ಮಾನಾಯ ಸ್ವಾಹಾ' ಎಂಬ ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ವ್ಯಕ್ತಿಯ ಉದ್ಯೋಗದಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ.