ಆಶೋಕ್ ಬಚಾವತ್, ಚತುರ್ಥಿ ದಿನ ಗಣೇಶನ ಪ್ರತಿಷ್ಠಾಪನೆ ಮಾಡೋದ್ರ ಜೊತೆ ಗಣೇಶನ ಮೂರ್ತಿಗಳನ್ನು ಸಂಗ್ರಹ ಮಾಡೋ ಹವ್ಯಾಸ ಹೊಂದಿದ್ದಾರೆ. ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಗಣೇಶನ ಮೂರ್ತಿಗಳನ್ನು ಸಂಗ್ರಹ ಮಾಡಿಕೊಳ್ಳುತ್ತಾ ಬಂದಿರೋ ಬಚಾವತ್ ಅವರ ಮನೆಯಲ್ಲಿ ಸರಿಸುಮಾರು ಸಾವಿರಕ್ಕೂ ಹೆಚ್ಚು ಗಣೇಶನ ಮೂರ್ತಿಗಳಿವೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಳ್ಳಾರಿ
ಬಳ್ಳಾರಿ(ಆ.30): ವಿಘ್ನ ವಿನಾಯಕ ಗಣೇಶ ಅಂದ್ರೇ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ…? ಗಣೇಶ ಹಬ್ಬ ಬಂದ್ರೇ, ಸಾಕು ರಾಜ್ಯದ ಜನರಷ್ಟೇ ಅಲ್ಲ ದೇಶಾದ್ಯಾಂತ ಗಣೇಶನ ಭಕ್ತರು ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇನ್ನೂ ಮನೆಯಲ್ಲಷ್ಟೇ ಅಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡೋ ಮೂಲಕ ಬಂದಿರೋ ಸಂಕಷ್ಟವನ್ನೇಲ್ಲ ಪಾರು ಮಾಡಿ ಎಂದು ಬೇಡಿಕೊಳ್ಳುತ್ತಾರೆ. ಆದ್ರೇ, ಬಳ್ಳಾರಿ ನಗರದ ವ್ಯಕ್ತಿಯೊಬ್ಬರು ಹಬ್ಬಕ್ಕೆ ಮಾತ್ರವಲ್ಲ ನಿತ್ಯವೂ ಗಣೇಶನ ಧ್ಯಾನ ಮಾಡ್ತಾರೆ. ಇವರ ಮನೆಯಲ್ಲಿ ಒಂದೆರಡಲ್ಲ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳಿವೆ. ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಗಣೇಶನ ಮೂರ್ತಿಗಳಿರೋ ಈ ಮನೆಯೆ ಗಣೇಶನ ಮ್ಯೂಜಿಯಂ ಆಗಿದೆ.
undefined
ಸಾವಿರಕ್ಕೂ ಹೆಚ್ಚು ಬಗೆ ಬಗೆಯ ಗಣೇಶ ಮೂರ್ತಿ ಸಂಗ್ರಹ
ಒಂದು ಕಡೆ ಬ್ಯಾಟಿಂಗ್, ಮತ್ತೊಂದು ಕಡೆ ಚೆಸ್, ಇನ್ನೊಂದು ಕಡೆ ಗಾಳಿಪಟ ಹಾರಿಸುತ್ತಿರೋ ಗಣೇಶ. ಬಂಗಾರ, ಬೆಳ್ಳಿ, ಕಂಚು, ಹಿತ್ತಾಳೆ, ಪಿಓಪಿ,ಕಟ್ಟಿಗೆ ಮಣ್ಣಿನ ಗಣಪತಿ ಸೇರಿದಂತೆ ಎಲ್ಲ ಮಾದರಿಯ ಗಣಪತಿ ಇರೋ ಗಣೇಶನ ಮನೆ ಇದು. ಹೌದು, ಸಾಮಾನ್ಯವಾಗಿ ಗಣೇಶ ಚತುರ್ಥಿ ಬಂದ್ರೇ, ಗಣೇಶನ ಮೂರ್ತಿಯನ್ನು ವಾಡಿಕೆಯಂತೆ ಮನೆಯಲ್ಲಿ ಒಂದು, ಮೂರು ಅಥವಾ ಐದು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡುತ್ತಾರೆ.ಆದ್ರೇ, ಬಳ್ಳಾರಿಯ ರೆಡಿಯೋ ಪಾರ್ಕ್ ಬಳಿ ಇರೋ ಆಶೋಕ್ ಬಚಾವತ್ ಅವರು, ಚತುರ್ಥಿ ದಿನ ಗಣೇಶನ ಪ್ರತಿಷ್ಠಾಪನೆ ಮಾಡೋದ್ರ ಜೊತೆ ಗಣೇಶನ ಮೂರ್ತಿಗಳನ್ನು ಸಂಗ್ರಹ ಮಾಡೋ ಹವ್ಯಾಸವನ್ನು ಹೊಂದಿದ್ದಾರೆ. ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಗಣೇಶನ ಮೂರ್ತಿಗಳನ್ನು ಸಂಗ್ರಹ ಮಾಡಿಕೊಳ್ಳುತ್ತಾ ಬಂದಿರೋ ಬಚಾವತ್ ಅವರ ಮನೆಯಲ್ಲಿ ಸರಿಸುಮಾರು ಸಾವಿರಕ್ಕೂ ಹೆಚ್ಚು ಗಣೇಶನ ಮೂರ್ತಿಗಳಿವೆ. ಒಂದಕ್ಕಿಂತಲೂ ಒಂದು ಭಿನ್ನವಿಭಿನ್ನ ವಾಗಿರೋ ಮೂರ್ತಿಗಳನ್ನು ನೋಡುವುದೇ ಒಂದು ಆನಂದದಾಯಕವಾದ ವಿಷಯವಾಗಿದೆ.
ಗಣಪತಿ ಇಬ್ಬರಿಗೆ ಪತಿ! ಬಪ್ಪ ಎರಡೆರಡು ಮದುವೆಯಾದದ್ದು ಯಾಕಪ್ಪಾ?
ಗಣೇಶ ಮೂರ್ತಿ ಸಂಗ್ರಹ ಮಾಡೋದಕ್ಕೆ ವಿಶೇಷ ಶೋಕೆಸ್
ಇನ್ನೂ ಆರಂಭದಲ್ಲಿ ಒಂದೆರಡು ಭಿನ್ನವಿಭಿನ್ನ ಮೂರ್ತಿಗಳನ್ನು ಮನೆಯಲ್ಲಿ ತಂದಿಡುತ್ತಿದ್ರು. ಅದು ನಿಧಾನವಾಗಿ ಹವ್ಯಾಸವಾಗಿ ಮಾರ್ಪಾಡಾಗಿ ಯಾವುದೇ ಊರಿಗೆ ಹೋದ್ರು ಬಂದ್ರು ಅಲ್ಲಿ ಕಾಣುವ ವಿಶೇಷ ಗಣೇಶ ಮೂರ್ತಿಯನ್ನು ತಂದು ಮನೆಯಲ್ಲಿಟ್ಟಿದ್ದಾರೆ. ಕೇವಲ ರಾಜ್ಯವಷ್ಟೇ ಅಲ್ಲ ಹೊರ ರಾಜ್ಯ, ಯುಎಇ ಮತ್ತು ಆಸ್ಟೇಲಿಯಾದಿಂದ ತಂದಿರೋ ಗಣಪತಿ ಮೂರ್ತಿಗಳನ್ನು ಮನೆಯಲ್ಲಿಟ್ಟಿದ್ದಾರೆ. ಇವರ ಹವ್ಯಾಸವನ್ನು ಕಂಡಿರೋ ಸ್ನೇಹಿತರು ಮತ್ತು ಸಂಬಂಧಿಗಳು ಆಶೋಕ ಬಚಾವತ್ ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ರು, ಅಥವಾ ಅವರಿಗೆ ಉಡುಗೊರೆ ಕೊಡಬೇಕೆಂದ್ರು ಗಣೇಶನ ಮೂರ್ತಿಗಳನ್ನೆ ಕೊಡ್ತಾರಂತೆ. ವಿಶೇವೆಂದ್ರೇ ಇವರಲ್ಲಿರೋ ಗಣೇಶ್ ಮೂರ್ತಿಗಳಲ್ಲಿ ಮಹಿಳೆ ರೂಪದ ಗಣೇಶ ಮತ್ತು ಒಂಟೆಯ ಎಲುಬಿನಿಂದ ತಯಾರಿಸಿದ ಮೂರ್ತಿಗಳಿವೆ ಇವು ಸಾಮಾನ್ಯವಾಗಿ ಎಲ್ಲಿಯೂ ಸಿಗೋದಿಲ್ಲವಂತೆ. ಇನ್ನೂ ಇದರ ಜೊತೆ ಅಕ್ಕಿ, ಅಡಿಕೆ, ಕಪ್ಪೆಚಿಪ್ಪು, ತೆಂಗಿನ ಚಿಪ್ಪು, ಹವಳ, ಸೇರಿದಂತೆ ಹಲವು ಬಗೆಯ ಮೂರ್ತಿಗಳಿವೆ.
ಸಂಗ್ರಹ ಮಾಡೋದಷ್ಟೇ ಅಲ್ಲ ನಿರ್ವಹಣೆ ಮಾಡೋದು ಅಷ್ಟು ಸುಲಭವಲ್ಲ
ಒಟ್ಟಾರೆ ವರ್ಷಕ್ಕೊಮ್ಮೆ ಗಣೇಶ ಮೂರ್ತಿ ಪ್ರತಿಷ್ಠಾನೆ ಮಾಡಿ ಹಬ್ಬವನ್ನು ಆಚರಿಸೋ ಜನರ ಮಧ್ಯೆ ನಿತ್ಯವೂ ಗಣೇಶನ್ನು ಆರಾಧಿಸೋ ಮತ್ತು ಗಣೇಶನ ಮೂರ್ತಿಗಳನ್ನು ಸಂಗ್ರಹ ಮಾಡೋ ಆಶೋಕ ಬಜಾವತ್ ವಿಭಿನ್ನವಾಗಿ ನಿಲ್ಲುತ್ತಾರೆ. ಮೂರ್ತಿಗಳನ್ನು ಕೊಳ್ಳಬಹುದು, ಸಂಗ್ರಹ ಮಾಡಬಹುದು ಆದ್ರೇ, ಅವುಗಳ ನಿರ್ವಹಣೆ ಕೂಡ ದೊಡ್ಡ ಜವಾಬ್ದಾರಿ ಯಾಗಿರುತ್ತದೆ. ಅದೆಲ್ಲವನ್ನು ಇಳಿವಯಸ್ಸಿನಲ್ಲಿ ಮಾಡೋ ಮೂಲಕ ಗಣೇಶನ್ನು ನಿತ್ಯವೂ ಇಲ್ಲಿ ಆರಾಧನೆ ಮಾಡುತ್ತಿರೋದು ಮಾತ್ರ ವಿಶೇಷವಾಗಿದೆ.