Mysuru Dasara 2022: ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಪಟ್ಟಿ ಹೀಗಿದೆ!

By Govindaraj SFirst Published Oct 5, 2022, 9:12 AM IST
Highlights

ವಿಶ್ವವಿಖ್ಯಾತ ನಾಡಹಬ್ಬದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಜಂಬೂಸವಾರಿಯಲ್ಲಿ ಒಟ್ಟು 14 ಆನೆಗಳು ಭಾಗಿಯಾಗಲಿವೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ವಿವರ ಈ ಕೆಳಕಂಡಂತಿದೆ.

ಮೈಸೂರು (ಅ.05): ವಿಶ್ವವಿಖ್ಯಾತ ನಾಡಹಬ್ಬದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಜಂಬೂಸವಾರಿಯಲ್ಲಿ ಒಟ್ಟು 14 ಆನೆಗಳು ಭಾಗಿಯಾಗಲಿವೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ವಿವರ ಈ ಕೆಳಕಂಡಂತಿದೆ.

ಮತ್ತಿಗೋಡು ಆನೆ ಶಿಬಿರದಿಂದ
57 ವರ್ಷದ ಅಭಿಮನ್ಯು, 
22 ವರ್ಷದ ಭೀಮ, 
38 ವರ್ಷದ ಮಹೇಂದ್ರ
39 ವರ್ಷದ ಗೋಪಲಸ್ವಾಮಿ.

ಬಳ್ಳೆ ಆನೆ ಶಿಬಿರದಿಂದ 
63 ವರ್ಷದ ಅರ್ಜುನ. 
ದುಬಾರೆ ಆನೆ ಶಿಬಿರದಿಂದ‌.
59 ವರ್ಷದ ವಿಕ್ರಮ, 
44 ವರ್ಷದ ಧನಂಜಯ, 
45 ವರ್ಷದ ಕಾವೇರಿ, 
41 ವರ್ಷದ ಗೋಪಿ, 
40 ವರ್ಷದ ಶ್ರೀರಾಮ,
63 ವರ್ಷದ ವಿಜಯ ಆನೆ.

ಜಂಬೂ ಸವಾರಿ ಭದ್ರತೆಗೆ 5000 ಪೊಲೀಸರ ನಿಯೋಜನೆ: ಚಂದ್ರಗುಪ್ತ ನೇತೃತ್ವದಲ್ಲಿ ಬಂದೋಬಸ್ತ್!

ರಾಮಾಪುರ ಆನೆ‌ ಶಿಬಿರದಿಂದ
49 ವರ್ಷದ ಚೈತ್ರಾ, 
21 ವರ್ಷದ ಲಕ್ಷ್ಮಿ,
18 ವರ್ಷದ ಪಾರ್ಥಸಾರಥಿ.

ಇನ್ನು ಲಕ್ಷ್ಮೀ ಆನೆ ಗಂಡು ಮರಿಗೆ ಜನ್ಮ ನೀಡಿರುವ ಹಿನ್ನಲೆ ವಿಶ್ರಾಂತಿ ನೀಡಲಾಗಿದ್ದು, ಆರೈಕೆಯನ್ನು ಮಾಡಲಾಗುತ್ತಿದೆ. ಇನ್ನುಳಿದ 13 ಆನೆಗಳಲ್ಲಿ 10 ಆನೆಗಳು ದಸರಾಗೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇನ್ನುಳಿದ ಮೂರು ಆನೆಗಳು ಹೆಚ್ಚುವರಿ ಬಳಕೆಗಾಗಿ ಮೀಸಲು ಮಾಡಿಕೊಳ್ಳಲಾಗಿದ್ದು, ಅಗತ್ಯವಿದ್ದರೆಷ್ಟೇ ಮೂರು ಆನೆಗಳ ಬಳಕೆ ಮಾಡಿಕೊಳ್ಳಲು ತಿರ್ಮಾನಿಸಲಾಗಿದೆ.

ದಸರಾ ಅಂಬಾರಿ ಹೊರುವ ಆನೆ ಅರ್ಜುನನ ತೂಕ 5950 ಕೆಜಿ: ದಸರಾ ಆನೆಗಳ ತೂಕ ಪರೀಕ್ಷೆಯಲ್ಲಿ ಮಾಜಿ ಅಂಬಾರಿ ಆನೆ ಅರ್ಜುನ ಮತ್ತೆ ತಾನೇ ಬಲಶಾಲಿ ಆನೆ ಎಂಬುದನ್ನು ಸಾಬೀತುಪಡಿಸಿದೆ. ಗಜಪಡೆಯ 14 ಆನೆಗಳ ಪೈಕಿ 5950 ಕೆ.ಜಿ. ತೂಕದೊಂದಿಗೆ ಅರ್ಜುನ ಆನೆಯು ಮೊದಲ ಸ್ಥಾನ ಪಡೆದಿದೆ.

ಆನೆಗಳ ತೂಕ: ಅರ್ಜುನ- 5950 ಕೆ.ಜಿ, ಗೋಪಾಲಸ್ವಾಮಿ- 5460 ಕೆ.ಜಿ, ಅಭಿಮನ್ಯು- 5000, ಧನಂಜಯ- 4890, ಸುಗ್ರೀವ- 4785, ಗೋಪಿ- 4670, ಶ್ರೀರಾಮ- 4475, ಮಹೇಂದ್ರ- 4450, ಭೀಮ- 4345, ಪಾರ್ಥಸಾರಥಿ- 3445, ಕಾವೇರಿ- 3245, ಚೈತ್ರ- 3235, ಲಕ್ಷ್ಮೀ- 3150, ವಿಜಯ- 2760 ಕೆ.ಜಿ. ತೂಕವಿದೆ.

ಕುಶಾಲತೋಪು ಶಬ್ದಕ್ಕೆ ಜಗ್ಗದೇ ನಿಂತ ದಸರಾ ಗಜಪಡೆ: ದಸರಾ ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಗಜಪಡೆಯು ಶುಕ್ರವಾರ ಮೂರನೇ ಹಾಗೂ ಅಂತಿಮ ಹಂತದ ಕುಶಾಲತೋಪು ಸಿಡಿತ ತಾಲೀಮಿನಲ್ಲಿ ಭಾಗವಹಿಸಿ, ಕುಶಾಲತೋಪು ಶಬ್ದಕ್ಕೆ ಜಗ್ಗದ ನಿಲ್ಲುವ ಮೂಲಕ ದಸರೆಗೆ ಸಿದ್ಧವಾಗಿರುವ ಸಂದೇಶ ರವಾನಿಸಿದವು. ಜಂಬೂಸವಾರಿಯಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ 21 ಸುತ್ತು ಕುಶಾಲತೋಪು ಸಿಡಿಸುವ ಸಂಪ್ರದಾಯವಿದ್ದು, ಈ ವೇಳೆ ದಸರಾ ಆನೆಗಳು ಹಾಗೂ ಅಶ್ವದಳ ಬೆದರದಂತೆ ಅಭ್ಯಾಸ ಮಾಡಿಸುವ ಸಲುವಾಗಿ ವಸ್ತುಪ್ರದರ್ಶನದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಅಂತಿಮ ಹಂತದ ಕುಶಾಲತೋಪು ತಾಲೀಮು ನಡೆಸಲಾಯಿತು.

Mysuru Dasara 2022: ಅಂಬಾರಿಗೆ 2ನೇ ಬಾರಿ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ!

ಫಿರಂಗಿ ದಳದ ಸಿಬ್ಬಂದಿ 7 ಫಿರಂಗಿಗಳ ಮೂಲಕ ಮೂರು ಸುತ್ತಿನಲ್ಲಿ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಿದರು. ಈ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ, ವಿಜಯ, ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಗೋಪಿ, ಭೀಮ, ಮಹೇಂದ್ರ, ಶ್ರೀರಾಮ, ಸುಗ್ರೀವ ಮತ್ತು ಪಾರ್ಥಸಾರಥಿ ಆನೆ ಸೇರಿದಂತೆ 12 ಆನೆಗಳು ಹಾಗೂ ಅಶ್ವಾರೋಹಿ ದಳದ 34 ಕುದುರೆಗಳು ಭಾಗವಹಿಸಿದ್ದವು. ಲಕ್ಷ್ಮೀ ಆನೆ ಮರಿಗೆ ಜನ್ಮ ನೀಡಿರುವ ಹಿನ್ನೆಲೆಯಲ್ಲಿ ಲಕ್ಷ್ಮೀ ಆನೆಯೊಂದಿಗೆ ಚೈತ್ರ ಇದ್ದಿದ್ದರಿಂದ ತಾಲೀಮಿನಲ್ಲಿ ಚೈತ್ರಾ ಸಹ ಭಾಗವಹಿಸಿರಲಿಲ್ಲ.

click me!