ಈ ಮೂರು ರಾಶಿಯವರಿಗೆ ಕಷ್ಟದ ಕೆಲಸ ಇಷ್ಟವಿಲ್ಲ!!!

By Suvarna News  |  First Published Sep 22, 2021, 7:15 PM IST

ರಾಶಿ ಚಕ್ರಗಳು ಹನ್ನೆರಡು. ಪ್ರತಿ ರಾಶಿ ಗುಣಸ್ವಭಾವಗಳು ಭಿನ್ನವಾಗಿರುತ್ತವೆ. ಗ್ರಹ ಮತ್ತು ನಕ್ಷತ್ರಗಳ ಪ್ರಭಾವ ರಾಶಿಗಳ ಮೇಲೆ ಆಗಿರುತ್ತವೆ. ಹಾಗಾಗಿ ಪ್ರತಿ  ರಾಶಿಯವರು ಒಬ್ಬರಿಗಿಂತ ಒಬ್ಬರು ಬೇರೆ ಬೇರೆಯಾಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಯವರಿಗೆ ಕಷ್ಟದ ಕೆಲಸವೆಂದರೆ ಭಯವಂತೆ. ಆ ರಾಶಿಗಳ ಬಗ್ಗೆ ತಿಳಿಯೋಣ....


ರಾಶಿಚಕ್ರಗಳ ಸ್ವಭಾವ ಒಂದಕ್ಕಿಂತ ಒಂದು ಭಿನ್ನ. ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಸ್ವಭಾವವನ್ನು ತಿಳಿಯಲು ಗ್ರಹ, ರಾಶಿ, ನಕ್ಷತ್ರ ಇನ್ನೂ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರತಿ ರಾಶಿಯ ಗುಣ ಸ್ವಭಾವಗಳ ಜತೆಗೆ ಅಧಿಪತಿ ಗ್ರಹಗಳ ಪ್ರಭಾವವು ವ್ಯಕ್ತಿಯ ನಿರ್ದಿಷ್ಟ ಸ್ವಭಾವಕ್ಕೆ ಕಾರಣವಾಗುತ್ತದೆ. 

ವ್ಯಕ್ತಿಯ ಗುಣ, ರೂಪ, ಸ್ವಭಾವ ಮತ್ತು  ವ್ಯಕ್ತಿತ್ವವು ಆಯಾ ಗ್ರಹ, ರಾಶಿ ಮತ್ತು ನಕ್ಷತ್ರಗಳ ಗುಣ ಸ್ವಭಾವಗಳಿಗೆ ತಕ್ಕಂತೆ ಇರುತ್ತದೆ. ಹಾಗಾಗಿ ಕೆಲವರು ನೋಡಲು ಆಕರ್ಷಕವಾಗಿದ್ದರೆ ಮತ್ತೆ ಕೆಲವರು ಸಾಮಾನ್ಯವಾಗಿ ಇರುತ್ತಾರೆ. ಕೆಲವು ರಾಶಿಯವರು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಇನ್ನೂ ಕೆಲವರು ಉತ್ತಮ ವಾಗ್ಮಿಗಳಾಗಿರುತ್ತಾರೆ. ಹೀಗೆಯೇ ಕೆಲವರಿಗೆ ಸೌಮ್ಯ ಸ್ವಭಾವ, ಆದರೆ ಮತ್ತೆ ಕೆಲವರು ಕೋಪಿಷ್ಠರಾಗಿರುತ್ತಾರೆ. ಹೀಗೆ ಬೇರೆ ಬೇರೆ ತಾಮಸ, ಸಾತ್ವಿಕ ಮತ್ತು ರಾಜಸ ಗುಣಗಳನ್ನು ಎಲ್ಲ ರಾಶಿಚಕ್ರದವರೂ ಹೊಂದಿರುತ್ತಾರೆ. ಈ ಎಲ್ಲ ಸ್ವಭಾವಗಳು ಗ್ರಹಗಳ ಪ್ರಭಾವದಿಂದ ಮತ್ತು ನಕ್ಷತ್ರ ರಾಶಿಗಳ ಗುಣದಿಂದ ಬಂದಿರುತ್ತವೆ. ಹಾಗಾಗಿ ಆಯಾ ವ್ಯಕ್ತಿಗಳು ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ. ಗ್ರಹ, ರಾಶಿ ಮತ್ತು ನಕ್ಷತ್ರಗಳ ಪ್ರಭಾವದಿಂದ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ. 

ಇದನ್ನು ಓದಿ: ಹಸ್ತಾ, ಚಿತ್ತಾ, ಸ್ವಾತಿ, ವಿಶಾಖಾ ಮತ್ತು ಅನುರಾಧ ನಕ್ಷತ್ರದಲ್ಲಿ ಜನಿಸಿದವರ ಗುಣ ಹೇಗಿರುತ್ತೆ?

ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಈ ಮೂರು ರಾಶಿಯವರಿಗೆ ಶ್ರಮ ಪಡುವುದು ಅಂದರೆ, ಕಷ್ಟದ ಕೆಲಸಗಳನ್ನುಮಾಡುವುದೆಂದರೆ ಇಷ್ಟವಿಲ್ಲವಂತೆ. ಆ ರಾಶಿಗಳು ಯಾವುದು ಎಂಬುದನ್ನು ತಿಳಿಯೋಣ....

ಸಿಂಹ ರಾಶಿ, ಧನು ರಾಶಿ ಮತ್ತು ಮೀನ ರಾಶಿಯ ವ್ಯಕ್ತಿಗಳಿಗೆ ಕಷ್ಟದ ಕೆಲಸವನ್ನು ಮಾಡುವುದೆಂದರೆ ಭಯ ಪಡುತ್ತಾರೆ ಎಂದು ಹೇಳಲಾಗುತ್ತದೆ. ಸಾಧಿಸಬೇಕೆಂಬ ಆಸೆ ಇರುತ್ತದೆ. ಆದರೆ ಕಷ್ಟಪಡುವುದು ಈ ರಾಶಿಯವರಿಗೆ ಬೇಕಿರುವುದಿಲ್ಲ. ಕಷ್ಟಪಡದೆ ಸೋಮಾರಿತನದಿಂದ ಇರುವುದು ಇಷ್ಟವಾಗಿರುತ್ತದೆ. ಹಾಗಾದರೆ ಈ ರಾಶಿಗಳ ಬಗ್ಗೆ ನೋಡೋಣ..
 

Latest Videos

undefined



ಸಿಂಹ ರಾಶಿ 
ಸಿಂಹ ರಾಶಿಯ ವ್ಯಕ್ತಿಗಳು ದೊಡ್ಡ ಕನಸನ್ನು ಕಾಣುತ್ತಾರೆ. ಅಷ್ಟೇ ಅಲ್ಲದೆ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಗಳು ಇವರಾಗಿರುತ್ತಾರೆ. ಹಾಗಂತ ಕಷ್ಟಪಡುವುದು ಇವರಿಗೆ ಇಷ್ಟವಿಲ್ಲ. ಎಲ್ಲವೂ ಸರಳವಾಗಿರಬೇಕೆಂದು ಆಸೆಪಡುತ್ತಾರೆ. ಯಾವುದೇ ಶ್ರಮವಿಲ್ಲದೆ ಸಾಧಿಸುವ ಬಗ್ಗೆ ಕನಸು ಕಾಣುತ್ತಾರೆ. ತಮ್ಮದೇ ಆದ ಒಂದು ಚೌಕಟ್ಟನ್ನು ಹಾಕಿಕೊಂಡು ಅದರಲ್ಲೇ ಜೀವಿಸುತ್ತಾರೆ. ಆ ಚೌಕಟ್ಟಿನಿಂದ ಹೊರಬಂದು ಶ್ರಮದಿಂದ ಗುರಿಯನ್ನು ತಲುಪುವ ಬಗ್ಗೆ ಇವರು ಯೋಚಿಸುವುದಿಲ್ಲ ಮತ್ತು ಪ್ರಯತ್ನವನ್ನು ಸಹ ಪಡುವುದಿಲ್ಲ. ತಮಗೆ ಎಲ್ಲ ತಿಳಿದಿದೆ ಎಂಬ ಹೆಚ್ಚುಗಾರಿಕೆಯನ್ನು ಹೊಂದಿರುವುದಲ್ಲದೆ,  ಯಶಸ್ಸು ಮತ್ತು ಕೀರ್ತಿ ತಮ್ಮ ಸ್ವತ್ತು ಎನ್ನುವ ರೀತಿ ವರ್ತಿಸುತ್ತಾರೆ. ಹಾಗಾಗಿ ಶ್ರಮ ಪಟ್ಟು ಕಷ್ಟದ ಕೆಲಸಗಳನ್ನು ಮಾಡುವುದಿಲ್ಲ.

ಇದನ್ನು ಓದಿ: ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ…

ಧನು ರಾಶಿ 
ಧನು ರಾಶಿಯವರು ಜೀವನವನ್ನು ನೋಡುವ ರೀತಿಯೇ ಬೇರೆ. ಜೀವಿಸುವಷ್ಟು ದಿನ ಸಂತೋಷದಿಂದ ಜೀವಿಸಬೇಕೆಂಬುದು ಈ ರಾಶಿಯವರ ಆಶಯ. ಹಾಗಾಗಿ ಸುಮ್ಮನೆ ಕಷ್ಟ ಪಡುವುದು ಇವರಿಗೆ ಇಷ್ಟವಿಲ್ಲ.     ಜೀವನವೊಂದು ಸಾಹಸವಿದ್ದಂತೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಹಗುರವಾಗಿ ಪರಿಗಣಿಸಿ ಸಂತೋಷದಿಂದ ಜೀವಿಸಬೇಕು. ಅಷ್ಟೇ ಅಲ್ಲದೆ ಏನನ್ನೊ ಸಾಧಿಸಬೇಕೆಂದು  ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ದುಡಿಯುವುದು ಈ ರಾಶಿಯವರ ಸ್ವಭಾವವಲ್ಲ. ಹಾಗಾಗಿ ಈ ರಾಶಿಯವರಿಗೆ ಕಷ್ಟದ ಕೆಲಸಗಳು ಮತ್ತು ಶ್ರಮದಿಂದ ಗುರಿ ಸಾಧಿಸುವುದು ಇಷ್ಟವಿರುವುದಿಲ್ಲ. 

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಿತವ್ಯಯಿಗಳು..

ಮೀನ ರಾಶಿ 
ಮೀನ ರಾಶಿಯವರು ಕಲ್ಪನಾ ಲೋಕದಲ್ಲಿ ವಿಹರಿಸುವ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯವರು ಕಲಾತ್ಮಕ, ಸೃಜನಶೀಲ ಮತ್ತು ಕಲ್ಪನಾ ಜೀವಿಗಳು ಆಗಿರುತ್ತಾರೆ. ಮೀನ ರಾಶಿಯವರು ಭ್ರಮಾ ಲೋಕದಲ್ಲಿ ಜೀವಿಸುತ್ತಾರೆ. ತಾವು ಹೆಚ್ಚು ಬುದ್ಧಿವಂತಿಕೆಯನ್ನು ಉಳ್ಳವರು ಹಾಗಾಗಿ ಯಶಸ್ಸು ಗಳಿಸಲು ಕಷ್ಟ ಪಡುವ ಅಗತ್ಯವಿಲ್ಲ ಎಂದುಕೊಂಡಿರುತ್ತಾರೆ. ಹಾಗಾಗಿ ಈ ರಾಶಿಯವರಿಗೆ ಕಷ್ಟದ ಕೆಲಸಗಳು ಎಂದರೆ ಆಗುವುದಿಲ್ಲ. 

click me!