ಶನಿ-ರಾಹು ಸಂಯೋಗ; ಈ 3 ರಾಶಿಯವರಿಗೆ ನರಕ ದರ್ಶನ, ಅಕ್ಟೋಬರ್‌ವರೆಗೆ ಜಾಗೃತೆ..!

Published : Jul 24, 2023, 11:35 AM IST
 ಶನಿ-ರಾಹು ಸಂಯೋಗ; ಈ 3 ರಾಶಿಯವರಿಗೆ ನರಕ ದರ್ಶನ, ಅಕ್ಟೋಬರ್‌ವರೆಗೆ ಜಾಗೃತೆ..!

ಸಾರಾಂಶ

ಶನಿ ಹಾಗೂ ರಾಹುವಿನ ಮೈತ್ರಿಯು ಅಕ್ಟೋಬರ್‌ 17ರವರೆಗೆ ಇರುತ್ತದೆ. ಈ ಅಶುಭ ಯೋಗವು ಮೂರು ರಾಶಿ ಚಕ್ರ (zodiac) ಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಈ ಕುರಿತು ಇಲ್ಲಿದೆ ಡೀಟೇಲ್ಸ್.

ಶನಿ ಹಾಗೂ ರಾಹುವಿನ ಮೈತ್ರಿಯು ಅಕ್ಟೋಬರ್‌ 17ರವರೆಗೆ ಇರುತ್ತದೆ. ಈ ಅಶುಭ ಯೋಗವು ಮೂರು ರಾಶಿ ಚಕ್ರ (zodiac) ಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಈ ಕುರಿತು ಇಲ್ಲಿದೆ ಡೀಟೇಲ್ಸ್.

ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯಾಧೀಶ ಎಂದು ಕರೆಯಲಾಗುತ್ತದೆ ಮತ್ತು ರಾಹುವನ್ನು ಪಾಪ ಗ್ರಹ ಎಂದು ಕರೆಯಲಾಗುತ್ತದೆ. ಈ ಎರಡು ಗ್ರಹಗಳು ಜಾತಕ (Horoscope) ದಲ್ಲಿ ಅಶುಭ ಸ್ಥಾನದಲ್ಲಿದ್ದರೆ, ಅವು ದೊಡ್ಡ ಹಾನಿಯನ್ನುಂಟು ಮಾಡುತ್ತವೆ. ಕೆಲವು ಸಂದರ್ಭಗಳಲ್ಲಿ, ಈ ಗ್ರಹಗಳು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತವೆ ಎಂದು ಹೇಳಬಹುದು. ಈ ಗ್ರಹಗಳ ಸಂಯೋಜನೆಯು ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. 

ಜ್ಯೋತಿಷ್ಯ (Astrology) ದಲ್ಲಿ ಶನಿ ಮತ್ತು ರಾಹುವನ್ನು ಅತ್ಯಂತ ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗಿದೆ. ಶನಿ ಮತ್ತು ರಾಹು (Rahu) ವಿನ ಚಲನೆಯಲ್ಲಿನ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಒಂದೆಡೆ ಶನಿ (Saturn) ಯು ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ರಾಹು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತದೆ. ಶನಿಯು ಪ್ರಸ್ತುತ ಕುಂಭ ಸಂಕ್ರಮಣದಲ್ಲಿದ್ದು, ರಾಹು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ಶನಿಯು ಅಕ್ಟೋಬರ್‌ 17ರವರೆಗೆ ಶತಾಭಿಷಾ ನಕ್ಷತ್ರದಲ್ಲಿ ಇರುತ್ತಾನೆ. ಈ ರೀತಿಯಾಗಿ ಅಕ್ಟೋಬರ್‌ 17ರವರೆಗೆ ಶನಿ-ರಾಹುವಿನ ಮೈತ್ರಿಯು ಅಶುಭ (Inauspicious)  ಯೋಗವನ್ನು ಸೃಷ್ಟಿಸಿದೆ. ಇದು ಯಾವ ರಾಶಿ ಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಇಲ್ಲಿದೆ.

ಕನ್ಯಾ ರಾಶಿ (Virgo) 

ಶನಿದೇವನು ಕನ್ಯಾ ರಾಶಿಯ ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದಾಗ ಕನ್ಯಾ ರಾಶಿಯ ಜನರು ಹೆಚ್ಚು ಜಾಗರೂಕರಾಗಿರಬೇಕು. ನಿಮ್ಮ ಖರ್ಚುಗಳು ಹಲವಾರು ಪಟ್ಟು ಹೆಚ್ಚಾಗಬಹುದು. ಹಣದ ನಷ್ಟ ಉಂಟಾಗಬಹುದು. ಕಾರ್ಯಗಳಲ್ಲಿ ನಿರಂತರ ವೈಫಲ್ಯವು ಮಾನಸಿಕ ಒತ್ತಡ (Mental stress) ಕ್ಕೆ  ಕಾರಣವಾಗಬಹುದು. ಅನಗತ್ಯ ವಿವಾದಗಳನ್ನು ತಪ್ಪಿಸಿ. ವ್ಯಾಪಾರದಲ್ಲಿ ಯಾವುದೇ ಹೊಸ ಯೋಜನೆಯಲ್ಲಿ ಕೆಲಸ ಮಾಡಬೇಡಿ. 

ಶುಕ್ರನ ಹಿಮ್ಮುಖ ಚಲನೆ; ಈ ವೇಳೆ ನಿಮ್ಮ ಬದುಕೇ ಬಂಗಾರ..!

 

ವೃಶ್ಚಿಕ ರಾಶಿ (Scorpio) 

ವೃಶ್ಚಿಕ ರಾಶಿಯಲ್ಲಿ ಶನಿ-ರಾಹುವಿನ ಸಂಯೋಗದಿಂದಾಗಿ ವೃಶ್ಚಿಕ ರಾಶಿಯ ಜನರು ಕೆಲವು ಸಣ್ಣ ನಷ್ಟಗಳನ್ನು ಅನುಭವಿಸಬೇಕಾಗಬಹುದು. ವೃತ್ತಿ (career) ಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು, ಕಚೇರಿಯಲ್ಲಿ ಹಿರಿಯ ಪಾಲುದಾರರೊಂದಿಗೆ ವಾಗ್ವಾದ  (quarrel) ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.

ಮೀನ ರಾಶಿ (Pisces) 

ಈ ಸಮಯದಲ್ಲಿ ಮೀನ ರಾಶಿಯವರ ಮೇಲೆ ಕೆಟ್ಟ ಪರಿಣಾಮಗಳನ್ನು ಕಾಣಬಹುದು. ಮನೆಯ ಸದಸ್ಯರೊಬ್ಬರು ಅನಾರೋಗ್ಯ (illness) ಕ್ಕೆ ಒಳಗಾಗಬಹುದು. ಆಸ್ಪತ್ರೆ ಸುತ್ತಬೇಕು. ಉದ್ಯೋಗಸ್ಥರಿಗೆ ಮುಂದಿನ ಕೆಲವು ದಿನಗಳವರೆಗೆ ಉದ್ವಿಗ್ನತೆ ಉಂಟಾಗಬಹುದು. ಅನಗತ್ಯ ಖರ್ಚು (Unnecessary expenditure) ಗಳು ಹೆಚ್ಚಾಗಬಹುದು.

ಅಧಿಕ ಮಾಸ ಆರಂಭ; ಏನು ಮಾಡಬೇಕು? ಏನು ಮಾಡಬಾರದು ?

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ವೃಶ್ಚಿಕ ರಾಶಿಯಲ್ಲಿ ಡಬಲ್ ರಾಜಯೋಗ, ಈ 3 ರಾಶಿಗೆ ಅದೃಷ್ಟ ಚಿನ್ನದಂತೆ, ಫುಲ್‌ ಜಾಕ್‌ಪಾಟ್‌
ನಾಳೆ ಡಿಸೆಂಬರ್ 10 ರವಿಯೋಗ, ಬುಧವಾರ ಐದು ರಾಶಿಗೆ ಅದೃಷ್ಟ, ಸಂಪತ್ತು