
ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸದಷ್ಟೇ ಕಾರ್ತಿಕ ಪೂರ್ಣಿಮೆ (Kartika Purnima) ಕೂಡ ಮಹತ್ವ ಪಡೆದಿದೆ. ಕಾರ್ತಿಕ ಪೂರ್ಣಿಮೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ಸಾಕಷ್ಟು ವಿಶೇಷತೆ ಪಡೆದಿದೆ. ಈ ಬಾರಿ ನವೆಂಬರ್ 5 ರಂದು ಕಾರ್ತಿಕ ಮಾಸವನ್ನು ಆಚರಣೆ ಮಾಡಲಾಗ್ತಿದೆ. ನಿಮಗೆಲ್ಲ ತಿಳಿದಿರುವಂತೆ ಕಾರ್ತಿಕ ಮಾಸದಲ್ಲಿ ಗಂಗೆ ಸ್ನಾನಕ್ಕೆ ಆದ್ಯತೆ ನೀಡಲಾಗುತ್ತದೆ. ಅದ್ರಲ್ಲೂ ಕಾರ್ತಿಕ ಪೂರ್ಣಿಮೆ ದಿನ ನೀವು ಮಾಡುವ ಸ್ನಾನ, ಪುಣ್ಯ ಪ್ರಾಪ್ತಿಗೆ ಕಾರಣವಾಗುತ್ತದೆ. ಈ ಬಾರಿ ನವೆಂಬರ್ 4, 2025 ರಾತ್ರಿ 10:36 ಕ್ಕೆ ಪೂರ್ಣಿಮೆ ತಿಥಿ ಶುರುವಾಗಲಿದೆ. ನವೆಂಬರ್ 5, 2025, ಸಂಜೆ 6:48 ಕ್ಕೆ ಪೂರ್ಣಿಮೆ ಪೂರ್ಣಗೊಳ್ಳಲಿದೆ. ನವೆಂಬರ್ 5 ರಂದು ಕಾರ್ತಿಮ ಪೂರ್ಣಿಮೆ ಜೊತೆ ದೇವ ದೀಪಾವಳಿಯನ್ನೂ ಆಚರಿಸಲಾಗುತ್ತದೆ. ಈ ದಿನ ತಾಯಿ ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆ ಜೊತೆ ಈಶ್ವರನ ಆರಾಧನೆ ನಡೆಯಲಿದೆ. ಈ ಬಾರಿ ಕಾರ್ತಿಕ ಪೂರ್ಣಿಗೆ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಈ ದಿನ ಶಿವವಾಸ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗದ ಸಂಯೋಜನೆಯೂ ಆಗ್ತಿದೆ. ಅಲ್ಲದೆ ಇದೇ ದಿನ ಭದ್ರನ ಅಶುಭ ನೆರಳು ಕೂಡ ಇರಲಿದ್ದು, ಆದ್ರೆ ಇದ್ರ ಪರಿಣಾಮ ಭೂಮಿಯ ಮೇಲೆ ಆಗೋದಿಲ್ಲ. ಕಾರ್ತಿಕ ಪೂರ್ಣಿಮೆ ದಿನ ಸಂಭವಿಸಲಿರುವ ಈ ವಿಶೇಷ ಯೋಗದಲ್ಲಿ ಕೆಲ ರಾಶಿಯವರ ಅದೃಷ್ಟ ಬದಲಾಗಲಿದೆ.
ವೃಷಭ : ಕಾರ್ತಿಕ ಪೂರ್ಣಿಮೆ ವೃಷಭ ರಾಶಿಯ ಜನರಿಗೆ ಸಾಕಷ್ಟು ಲಾಭವನ್ನು ತರಲಿದೆ. ಈ ದಿನ ತಾಯಿ ಲಕ್ಷ್ಮಿಯ ಕೃಪೆ ಈ ರಾಶಿಯವರ ಮೇಲಿರಲಿದೆ. ಆರ್ಥಿಕ ವಿಚಾರದಲ್ಲಿ ಸಾಕಷ್ಟು ಲಾಭ ಪ್ರಾಪ್ತಿಯಾಗಲಿದೆ. ಅರ್ಧದಲ್ಲಿ ನಿಂತಿದ್ದ ಹಣ ನಿಮ್ಮ ಕೈ ಸೇರಲಿದೆ. ನೌಕರಿ ಮಾಡುವ ಜನರಿಗೆ ಸನ್ಮಾನ, ಗೌರವ ಪ್ರಾಪ್ತಿಯಾಗಲಿದೆ. ಹಣ ಸಂಪಾದನೆಗೆ ಹೊಸ ದಾರಿ ತೆರೆಯಲಿದೆ.
Kartik Purnima 2025 : ಪುಣ್ಯ ಸ್ನಾನ, ದಾನದ ಜೊತೆ ಕಾರ್ತಿಕ ಪೂರ್ಣಿಮೆ ದಿನ ಮರೆಯದೆ ಈ ವಸ್ತು ಮನೆಗೆ ತನ್ನಿ
ಮಿಥುನ : ಮಿಥುನ ರಾಶಿಯ ಜನರಿಗೆ ಕಾರ್ತಿಕ ಪೂರ್ಣಿಮೆ ಸೌಭಾಗ್ಯವನ್ನು ತರಲಿದೆ. ಅನೇಕ ಕ್ಷೇತ್ರಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಭಗವಂತ ವಿಷ್ಣುವಿನ ಕೃಪೆಯಿಂದ ನಿಮ್ಮ ಆರೋಗ್ಯ ಸುಧಾರಿಸಲಿದೆ. ಮಾನಸಿಕ ಶಾಂತಿ ಸಿಗಲಿದೆ. ಕಾರ್ಯಸ್ಥಳಗಳಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಪ್ರಮೋಷನ್, ಸಂಬಳದಲ್ಲಿ ಹೆಚ್ಚಳ ಸೇರಿದಂತೆ ಕಚೇರಿಯಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ ಸಿಗಲಿದೆ.
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೂ ಕಾರ್ತಿಕ ಪೂರ್ಣಿಮೆ ಖುಷಿ ತರಲಿದೆ. ತಾಯಿ ಲಕ್ಷ್ಮಿ ಹಾಗೂ ವಿಷ್ಣುವಿನ ಆಶೀರ್ವಾದ ನಿಮಗೆ ಸಿಗಲಿದೆ. ಧನ, ಸಮೃದ್ಧಿ ನಿಮಗೆ ಸಿಗಲಿದೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ದೊಡ್ಡ ಲಾಭವಾಗಲಿದೆ. ನೌಕರರಿಗೆ ಕಚೇರಿಯಲ್ಲಿ ನೆಮ್ಮದಿ, ಏಳ್ಗೆ ಸಿಗಲಿದೆ. ಹಳೆ ಕೆಲ್ಸ ಮತ್ತೆ ಯಶಸ್ವಿಯಾಗಲಿದೆ.
ಈ ದಿನಾಂಕಗಳಲ್ಲಿ ಜನಿಸಿದವರಿಗೆ ಅನೇಕ ಕಷ್ಟ ಎದುರು, ರಾಹುನಿಂದ ಸಮಸ್ಯೆ
ಕಾರ್ತಿಕ ಪೂರ್ಣಿಮೆ ದಿನ ಎಷ್ಟು ದೀಪ ಹಚ್ಚಬೇಕು? : ಕಾರ್ತಿಕ ಪೂರ್ಣಿಮೆ ದಿನ ನೀವು ಪುಣ್ಯ ಸ್ನಾನ, ದಾನ, ಪೂಜೆ ಜೊತೆ ದೀಪ ಹಚ್ಚಬೇಕು. ಮನೆಯಲ್ಲಿ 5, 7, 11, 21, 51 ಇಲ್ಲವೆ 101 ದೀಪವನ್ನು ನೀವು ಹಚ್ಚಬೇಕು. ಈ ದಿನ 365 ಬತ್ತಿಯ ದೀಪ ಬೆಳಗಿಸುವುದು ಬಹಳ ಮಂಗಳಕರ. ಹೀಗೆ ಮಾಡಿದ್ರೆ ಎಲ್ಲ ಪೂರ್ಣಿಮೆ ಮಾಡಿದ ಮತ್ತು ದೀಪದಾನ ಮಾಡಿದ ಪುಣ್ಯ ಸಿಗುತ್ತದೆ.