
ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ಮದುವೆ (Tulsi wedding) ಮಾಡಲಾಗುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಇದು ಅತ್ಯಂತ ಪವಿತ್ರ ಮತ್ತು ಶುಭವೆಂದು ಪರಿಗಣಿಸಲಾಗಿದೆ. ಈ ದಿನ ತಾಯಿ ತುಳಸಿ ಭಗವಂತ ಸಾಲಿಗ್ರಾಮ (ವಿಷ್ಣುವಿನ ಒಂದು ರೂಪ)ನನ್ನು ವಿವಾಹವಾಗಿದ್ದ ಎನ್ನುವ ನಂಬಿಕೆ ಇದೆ. ಕಾರ್ತಿಕ ಮಾಸದಲ್ಲಿ ತುಳಸಿ ಗಿಡದ ಕೆಳಗೆ ದೀಪ ಹಚ್ಚುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ತುಳಸಿ ಮದುವೆಯಂದು, ತಾಯಿ ತುಳಸಿ ದೇವಿ ಹಾಗೂ ಸಾಲಿಗ್ರಾಮಕ್ಕೆ ಪೂಜೆ ಮಾಡುವ ಜೊತೆಗೆ ತುಳಸಿ ಗಿಡದ ಬಳಿ ದೀಪಹಚ್ಚುವುದು ಬಹಳ ಶುಭಕರ. ತುಳಸಿ ಮಾತೆಯ ಪೂಜೆಯ ಸಮಯದಲ್ಲಿ, ತುಳಸಿ ಗಿಡದ ಬಳಿ ಶುದ್ಧ ಹಸುವಿನ ತುಪ್ಪದ ದೀಪವನ್ನು ಹಚ್ಚಬೇಕು. ಪ್ರದೋಷ ಕಾಲದಲ್ಲಿ, ಅಂದರೆ ಸೂರ್ಯಾಸ್ತದ ಸಮಯದಲ್ಲಿ ಈ ದೀಪವನ್ನು ಬೆಳಗಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಪೌರಾಣಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡದ ಬಳಿ ಬೆಳಗುವ ದೀಪವು ನಕಾರಾತ್ಮಕ ಶಕ್ತಿಗಳು ಮತ್ತು ಅಶುಭ ಪ್ರಭಾವಗಳನ್ನು ದೂರ ಮಾಡುತ್ತದೆ. ಇದರ ಬೆಳಕು ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ. ಸಕಾರಾತ್ಮಕ ಶಕ್ತಿ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ತುಳಸಿ ವಿವಾಹದ ದಿನದಂದು, ತುಳಸಿ ಗಿಡದ ಬಳಿ ಒಂದು ದೀಪವನ್ನು ಮತ್ತು ಮನೆಯ ಮುಖ್ಯ ದ್ವಾರದಲ್ಲಿ ಇನ್ನೊಂದು ದೀಪವನ್ನು ಬೆಳಗಿಸಿ. ಲಕ್ಷ್ಮಿ ದೇವಿಯ ಸಂತೋಷಕ್ಕೆ ಇದು ಕಾರಣವಾಗುತ್ತದೆ. ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ತುಳಸಿ ವಿವಾಹದ ದಿನದಂದು ದೀಪಗಳನ್ನು ಬೆಳಗಿಸುವಾಗ, "ಓಂ ತುಳಸ್ಯೈ ನಮಃ" ಅಥವಾ "ಓಂ ನಮೋ ಭಗವತೇ ವಾಸುದೇವಾಯ" ಎಂಬ ಮಂತ್ರವನ್ನು ಪಠಿಸಬೇಕು.
ಜನ್ಮದಿನದ ಅನ್ವಯ ನವೆಂಬರ್ ಹೇಗಿದೆ? ಕಚೇರಿ, ಕುಟುಂಬ, ಪ್ರೇಮ, ಮದುವೆ, ಆರೋಗ್ಯ ವಿವರ- ಪರಿಹಾರ
ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ವಿವಾಹದ ದಿನದಂದು 5 ದೀಪಗಳನ್ನು ಬೆಳಗಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಈ ಐದು ದೀಪಗಳು ಐದು ಅಂಶಗಳನ್ನು ಸೂಚಿಸುತ್ತದೆ. ನೀವು ತುಳಸಿ ಸುತ್ತ ಇಡುವ ದೀಪಗಳು, ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶವನ್ನು ಪ್ರತಿನಿಧಿಸುತ್ತದೆ. ತುಳಸಿ ಗಿಡದ ಸುತ್ತಲೂ ಈ ದೀಪಗಳನ್ನು ಹಚ್ಚುವುದ್ರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ದೀಪಗಳ ಸಂಖ್ಯೆಯನ್ನು ಅವಲಂಬಿಸಿ ನೀವು 11, 21, 51, ಅಥವಾ 108 ದೀಪಗಳನ್ನು ಸಹ ಬೆಳಗಿಸಬಹುದು.
ತುಳಸಿಗೆ ದೀಪವನ್ನು ಸದಾ ತುಪ್ಪ ಅಥವಾ ಎಳ್ಳೆಣ್ಣೆಯಿಂದ ಬೆಳಗಿಸಬೇಕು. ತುಳಸಿ ಬಳಿ ನೀವು ಹಚ್ಚುವ ದೀಪಕ್ಕೆ ಎಂದೂ ಸಾಸಿವೆ ಎಣ್ಣೆಯನ್ನು ಬಳಸಬಾರದು. ತುಳಸಿ ವಿವಾಹದ ದಿನದಂದು ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ. ತುಳಸಿ ಗಿಡದ ಮುಂದೆ ಅಥವಾ ಹತ್ತಿರ ದೀಪವನ್ನು ಸ್ವಚ್ಛ ಮತ್ತು ಪವಿತ್ರ ಸ್ಥಳದಲ್ಲಿ ಇಡಬೇಕು. ಎಂದಿಗೂ ತುಳಸಿ ಗಿಡದ ಹಿಂದೆ ದೀಪವನ್ನು ಬೆಳಗಿಸಬೇಡಿ. ಇದು ಪೂಜೆಯ ಪ್ರಯೋಜನವನ್ನು ನಿಮಗೆ ನೀಡುವುದಿಲ್ಲ.
200 ವರ್ಷದ ಬಳಿಕ ನವೆಂಬರ್‌ನಲ್ಲಿ 4 ಅದ್ಭುತ ರಾಜಯೋಗ, ಈ ರಾಶಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು
ಭಾನುವಾರ ತುಳಸಿ ಮದುವೆ ಸೂಕ್ತವೇ ? :
ಭಾನುವಾರ, ಅಂದ್ರೆ ನವೆಂಬರ್ 2 ರಂದು ತುಳಸಿ ಮದುವೆಯನ್ನು ಮಾಡಲಾಗ್ತಿದೆ. ಶಾಸ್ತ್ರಗಳ ಪ್ರಕಾರ, ತುಳಸಿಯನ್ನು ಭಾನುವಾರ ಮುಟ್ಟಬಾರದು, ಅದಕ್ಕೆ ನೀರನ್ನು ಹಾಕಬಾರದು. ಹಾಗಿರುವಾಗ ತುಳಸಿ ಮದುವೆ ಮಾಡೋದು ಹೇಗೆ ಎನ್ನುವ ಪ್ರಶ್ನೆ ಬರುತ್ತದೆ. ಪಂಡಿತರ ಪ್ರಕಾರ, ಧಾರ್ಮಿಕ ಹಬ್ಬದ ದಿನಾಂಕ ಬಹಳ ಮುಖ್ಯವಾಗಿದೆ. ದಿನಕ್ಕಿಂತ ಅದು ಮಹತ್ವದ್ದಾಗಿರುವ ಕಾರಣ, ತುಳಸಿ ವಿವಾಹ ಭಾನುವಾರದಂದು ಬಂದರೆ, ಆ ದಿನ ತುಳಸಿ ಪೂಜೆ ಮಾಡಬಹುದು. ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಭಾನುವಾರ ತುಳಸಿ ಮದುವೆ ಮಾಡುವವರು, ತುಳಸಿ ಗಿಡವನ್ನು ಮುಟ್ಟಬೇಡಿ. ದೂರದಿಂದ ಅಥವಾ ಶಂಖದಿಂದ ನೀರನ್ನು ಅರ್ಪಿಸಿ. ಭಕ್ತರು ಮೊದಲು ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ ಅವನ ಅನುಮತಿ ಪಡೆದು ನಂತ್ರ ತುಳಸಿ ಪೂಜೆ ಮಾಡಿ.