ಮಾದಪ್ಪನ ದೀಪಾವಳಿ ಜಾತ್ರೆ: ಮದ್ವೆಯಾಗೋಕೆ ಹೆಣ್ಣು ಸಿಕ್ಕಿಲ್ಲವೆಂದು ರೈತರ ಪಾದಯಾತ್ರೆ!

By Govindaraj SFirst Published Nov 10, 2023, 11:59 PM IST
Highlights

ಎಪ್ಪತ್ತೇಳು ಮಲೆಯ ಒಡೆಯ, ಮುದ್ದು ಮಾದಪ್ಪನ ಸನ್ನಿಧಿಯಲ್ಲಿ ನಡೆಯುವ ದೀಪಾವಳಿ ಜಾತ್ರೆ ಮಹೋತ್ಸವಕ್ಕೆ ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದು ಅವ್ರೆಲ್ಲಾ ಮಾದಪ್ಪನ ಸನ್ನಿಧಾನಕ್ಕೆ ಪಾದಯಾತ್ರೆ ಹೊರಟಿದ್ರು ಹೀಗೆ ಹೋಗುತ್ತಿರುವ ಯಾತ್ರಿಗಳ ಕೋರಿಕೆ ಮಾತ್ರ ವಿಶೇಷವಾಗಿತ್ತು.

ವರದಿ: ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ನ.10): ಎಪ್ಪತ್ತೇಳು ಮಲೆಯ ಒಡೆಯ, ಮುದ್ದು ಮಾದಪ್ಪನ ಸನ್ನಿಧಿಯಲ್ಲಿ ನಡೆಯುವ ದೀಪಾವಳಿ ಜಾತ್ರೆ ಮಹೋತ್ಸವಕ್ಕೆ ಪ್ರತಿವರ್ಷ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದು ಅವ್ರೆಲ್ಲಾ ಮಾದಪ್ಪನ ಸನ್ನಿಧಾನಕ್ಕೆ ಪಾದಯಾತ್ರೆ ಹೊರಟಿದ್ರು ಹೀಗೆ ಹೋಗುತ್ತಿರುವ ಯಾತ್ರಿಗಳ ಕೋರಿಕೆ ಮಾತ್ರ ವಿಶೇಷವಾಗಿತ್ತು. ಮದ್ವೆಯಾಗೋಕೆ ಹೆಣ್ಣು ಸಿಗ್ತಾಯಿಲ್ಲ ಅನ್ನೋ ಕಾರಣಕ್ಕೆ ಹರಕೆ ಹೊತ್ತಿದ್ದು ನೂರಾರು ರೈತರು ರಾಜ್ಯದ ನಾನ ಭಾಗದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ.  ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

Latest Videos

ದೀಪಾವಳಿ ಮಾದಪ್ಪನ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಮಹದೇಶ್ವರನ ಬೆಟ್ಟಕ್ಕೆ ಆಗಮಿಸುವ ಭಕ್ತರಲ್ಲಿ ಬೆಂಗಳೂರು, ಕನಕಪುರ ಹಾಗು ಮಂಡ್ಯ ಜಿಲ್ಲೆಯ ಭಕ್ತರು  ಪಾದಯಾತ್ರೆ ಮೂಲಕ ಮಾದಪ್ಪಪ ಸನ್ನಿಧಾನಕ್ಕೆ ಹೊರಟ ನೂರಾರು ರೈತರು. ಹೀಗೆ ಪಾದಯಾತ್ರೆಗೆ ಹೊರಟಿರುವ  ಭಕ್ತರಲ್ಲಿ ಒಬ್ಬೊಬ್ಬರದು ಒಂದೊಂದು ಹರಕೆ ಕೆಲವರು ನೆಮ್ಮದಿ, ಉದ್ಯೋಗ, ವ್ಯವಹಾರ ಹೀಗೆ ವಿವಿಧ ಬೇಡಿಕೆಗಳಿಗೆ ಮಾದಪ್ಪನ ಬೆಟ್ಟಕ್ಕೆ ನಡೆದು ಹೋಗಿ ಮೊರೆ ಇಟ್ಟರೆ, ಇಲ್ಲಿ ಕೆಲವು ಭಕ್ತರು ಹಾಗು  ಯುವ ರೈತರು ಹಾಗೂ ರೈತ ಮಹಿಳೆಯರ ಕೊರಿಕೆ ಒಂದೆಯಾಗಿದೆ ಅದು ಬೇರೇನು ಅಲ್ಲ. ಮದ್ವೆಯಾಗೋಕೆ ಹೆಣ್ಣು ಸಿಗ್ತಾಯಿಲ್ಲ ಅನ್ನೋದು. 

ಬಿಜೆಪಿಗೆ ಬರುವಾಗ ಜಾಮೂನು ನೀಡ್ತಾರೆ, ಬಳಿಕ ವಿಷ ಕೊಡ್ತಾರೆ: ಶಾಸಕ ಎಸ್.ಟಿ.ಸೋಮಶೇಖರ್

ಹೌದು ರೈತ ಅನ್ನೋ ಒಂದೇ ಒಂದು ಕಾರಣಕ್ಕೆ ಮದ್ವೆಯಾಗೋಕೆ ಹೆಣ್ಣು ಸಿಗ್ತಾಯಿಲ್ಲ ಹಾಗಾಗಿ ರೋಸಿ ಹೋದ ರೈತರು ಈಗ ಮಾದಪ್ಪನ ಮೊರೆ ಹೋಗುತ್ತಿದ್ದಾರೆ. ಇನ್ನು ದೊಡ್ಡ ಮೂಲುಗೋಡು ಗ್ರಾಮದಿಂದಲೇ ಬರೋಬ್ಬರಿ ನೂರಾರು ಸಂಖ್ಯೆಯಲ್ಲಿ ಪಾದಯಾತ್ರೆಗೆ ಹೊರಟಿದ್ದು ಈ ಬಾರಿಯ ವಿಶೇಷವಾಗಿದೆ. ದೇಶ ಕಾಯೋ ಯೋಧ ಹೇಗೆ ಮುಖ್ಯಾನೊ ಅದೇ ರೀತಿ ಬೆಳೆ ಬೆಳೆಯೋ ಅನ್ನಧಾತ ಅಷ್ಟೇ ಮುಖ್ಯ. ಈಗ ಬರಿ ಸರ್ಕಾರಿ ನೌಕರರಿಗೆ ಮಾತ್ರ ಹೆಣ್ಣು ನೀಡುತ್ತಿದ್ದು ನಮ್ಮಂತ ರೈತರಿಗೆ ಯಾರು ಹೆಣ್ಣು ನೀಡ್ತಾಯಿಲ್ಲ ಹೀಗೆ ಆದ್ರೆ ನಾವೇನು ಮಾಡ್ಬೇಕು ಎಂದು ತಮ್ಮ ಅಸಹಾಯಕತೆಯನ್ನ ಹೊರ ಹಾಕುತ್ತಿದ್ದಾರೆ. 

ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದೇ ಬಿಜೆಪಿ-ಜೆಡಿಎಸ್ ಮೈತ್ರಿ ಆದ್ಯತೆ: ಎಚ್‌ಡಿಕೆ

ಅದಕ್ಕಾಗಿ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಮಾದಪ್ಪನಿಗೆ ತಮ್ಮ ಅಣ್ನ ತಮ್ಮಂದರಿಗೆ ಹೆಣ್ಣು ಸಿಕ್ಕಿ ಮದುವೆಯಾಗಲಿ ಎಂದು ಕೋರಿ ಪಾದಯಾತ್ರೆ ಮಾಡ್ತಾ ಇದ್ದರೆ ಇನ್ನು ಕೆಲವು ರೈತ ಹುಡುಗರು ನನಗೆ ಮದುವೆಗೆ ಹೆಣ್ಣನ್ನು ಕರುಣಿಸು ಮಹದೇವ ಎಂದು  ಪಾದಯಾತ್ರೆ ಮೂಲಕ ಬೇಡಿಕೊಳ್ಳುತ್ತಿದ್ದಾರೆ. ಇನ್ಮುಂದೆಯಾದ್ರು ರೈತರಿಗೆ ಹೆಣ್ಣು ಮಕ್ಕಳನ್ನ ನೀಡಿ ನಾವು ಮನುಷ್ಯರೆ ಎಂದು ರೈತರು ತಮ್ಮ ಮನದಾಳದ ಮಾತನ್ನ ಹೊರ ಹಾಕಿದ್ರು. ಒಟ್ಟಾರೆ ದೀಪಾವಳಿ ಹಬ್ಬದ ಬೆಳಕು ಮಾದಪ್ಪನ ಕರುಣೆಯಿಂದ ಹುಡುಗಿ ಹುಡುಕುತ್ತಿರುವವರ ಬಾಳಲ್ಲಿ ಬೆಳಕಾಗಲಿ.  ಅದೇನೆ ಹೇಳಿ ಬಾಯ್ಬಿಟ್ರೆ ರೈತ ನಮ್ಮ ದೇಶದ ಬೆನ್ನೆಲೆಬು ಎಂದು ಉದ್ದೂದ್ದ ಭಾಷಣ ಮಾಡುವವರು ಅದೇ ರೈತನಿಗೆ ಹೆಣ್ಣು ನೀಡಿ ಮದ್ವೆ ಮಾಡಿಕೊಡೋಕೆ ಮಾತ್ರ ಮುಂದು ಬಾರದೆ ಇರುವುದು ನಿಜಕ್ಕೂ ದುರಂತವೇ ಸರಿ.

click me!