ವ್ಯಕ್ತಿಯ ಸ್ವಭಾವಕ್ಕೂ ರಾಶಿಗೂ ಸಂಬಂಧವಿರುತ್ತದೆ ಎಂಬುದು ಗೊತ್ತಲ್ಲ.. ನಿಮ್ಮ ಸ್ವಭಾವಕ್ಕೆ ಹೊಂದುವ ಸಾಕು ಪ್ರಾಣಿ ಯಾವುದು ಕಂಡುಕೊಳ್ಳಿ.
ಮನೆಗೆ ಸಾಕು ಪ್ರಾಣಿ(pet) ತರುವುದೆಂದರೆ ಮಗುವೊಂದನ್ನು ತಂದಷ್ಟೇ ಜವಾಬ್ದಾರಿ ಎನ್ನುವುದು ಎಷ್ಟು ನಿಜವೋ, ಮನೆಗೆ ಮಗುವಿನಷ್ಟೇ ಜೀವಂತಿಕೆ ತರುತ್ತವೆ ಪ್ರಾಣಿಗಳು ಎನ್ನುವುದೂ ಅಷ್ಟೇ ನಿಜ. ಎಲ್ಲರಿಗೂ ಎಲ್ಲ ಪ್ರಾಣಿಗಳೂ ಆಗಿ ಬರುವುದಿಲ್ಲ. ಕೆಲವು ಪ್ರಾಣಿಗಳ ಸ್ವಭಾವಕ್ಕೂ ಕೆಲವು ರಾಶಿಯವರ ಜನ್ಮಜಾತಸ್ಯ ಸ್ವಭಾವಕ್ಕೂ ಹೊಂದಿಕೆಯಾಗುವುದಿಲ್ಲ. ಹೀಗಾಗಿ, ನಿಮ್ಮ ರಾಶಿಗೆ ಯಾವ ಸಾಕುಪ್ರಾಣಿ ಹೆಚ್ಚು ಹೊಂದುತ್ತದೆ ಎಂಬುದನ್ನು ನೋಡಿಯೇ ಮನೆಗೆ ಅದನ್ನು ಆಹ್ವಾನಿಸಿ.
ಮೇಷ(Aries)
ಎಲ್ಲ ರಾಶಿಯವರಿಗಿಂತ ಹೆಚ್ಚು ಬೋಲ್ಡ್ ಆಗಿರುವ ಮೇಷ ರಾಶಿಯವರು ಚೈತನ್ಯಶೀಲರು. ಚಲನಶೀಲರು ಕೂಡಾ. ಸದಾ ಜನರ ನಡುವೆ ಇರುತ್ತಾ ಜೋರಾಗಿ ನಗುತ್ತಾ ಇರಲು ಬಯಸುವವರು. ಹೀಗಾಗಿ, ನಿಮ್ಮಷ್ಟೇ ಚೈತನ್ಯ ಹೊಂದಿರುವ ಮಧ್ಯಮ ಗಾತ್ರದ ನಾಯಿ(dog) ನಿಮಗೆ ಆಗಿ ಬರುತ್ತದೆ. ಅದು ನಿಮ್ಮ ಕೋಪವನ್ನೂ ಕಡಿಮೆ ಮಾಡಿಸುತ್ತದೆ. ಜೊತೆಗೆ, ನೀವೆಲ್ಲೇ ಹೋದರೂ ಜೊತೆಯಾಗಬಲ್ಲದು.
undefined
ವೃಷಭ(Taurus)
ಬಾರ್ಡರ್ ಕೊಲ್ಲೀಸ್, ವೈಮರೇನರ್ಸ್ ಹಾಗೂ ಇತರೆ ಪ್ರಾಮಾಣಿಕ ಸದಾ ಅಂಟಿಕೊಂಡಿರ ಬಯಸುವ ನಾಯಿಗಳು ನಿಮಗೆ ಅತ್ಯುತ್ತಮ ಕಂಪನಿಯಾಗುತ್ತವೆ. ನಿಮ್ಮನ್ನು ಸದಾ ನಗಿಸುವ ಶಕ್ತಿ ಇವಕ್ಕಿದೆ. ನಿಮ್ಮ ಉದ್ಯೋಗ ಸ್ಥಳದಲ್ಲಿ ಇಟ್ಟುಕೊಳ್ಳಲು ಅವಕಾಶವಿದ್ದರೆ ಮಾತಾಡುವ ಹಕ್ಕಿ(talking bird) ಕೂಡಾ ನಿಮಗೆ ಬಹಳ ಚೆನ್ನಾಗಿ ಹೊಂದಿಕೆಯಾಗುತ್ತದೆ.
Numerology: ನಿಮ್ಮ ಜನ್ಮದಿನ ಆಧರಿಸಿ 2022ರಲ್ಲಿ ನಿಮ್ಮ ಭವಿಷ್ಯ ಹೀಗಿರುತ್ತೆ!
ಮಿಥುನ(Gemini)
ಸಿಯಾಮೀಸ್ ಬೆಕ್ಕುಗಳು(Siamese cats) ಮಿಥುನ ರಾಶಿಯವರಿಗೆ ಹೇಳಿ ಮಾಡಿಸಿದ್ದು. ಇವು ಚೆನ್ನಾಗಿ ಯೋಚಿಸಬಲ್ಲವು. ಒಂದು ವೇಳೆ ನೀವಿದನ್ನು ಮನೆಗೆ ತರುವುದಾದರೆ ಎರಡನ್ನು ತನ್ನಿ. ಆಗ ಇಡೀ ದಿನ ಅವುಗಳನ್ನು ಮನರಂಜಿಸುವ ಕೆಲಸ ಮಾಡುತ್ತಾ ಕೂರುವ ಅಗತ್ಯ ಇರುವುದಿಲ್ಲ.
ಕಟಕ(Cancer)
ಕಟಕ ರಾಶಿಯವರ ಮನೆಯಲ್ಲಿ ಖುಷಿಯಾಗಿರುವ ಪ್ರಾಣಿ ಎಂದರೆ ಗೋಲ್ಡನ್ ರಿಟ್ರೀವರ್ ಹಾಗೂ ಲ್ಯಾಬ್ರಡಾರ್(Labrador). ಅವು ನಿಮ್ಮ ಕುಟುಂಬವನ್ನು ರಕ್ಷಿಸುವ ಜೊತೆಗೆ, ನಿಮಗೆ ಅಪರಿಮಿತ ಪ್ರೀತಿಯನ್ನೂ ಕೊಡುತ್ತವೆ.
ಸಿಂಹ(Leo)
ಉದ್ದ ಕೂದಲಿನ, ದೊಡ್ಡ ಗಾತ್ರದ ಪರ್ಶಿಯನ್ ಬೆಕ್ಕುಗಳು ನಿಮಗೆ ಹೊಂದುತ್ತವೆ. ಇಲ್ಲದಿದ್ದಲ್ಲಿ, ಸಣ್ಣ ಗಾತ್ರದ ನಾಯಿ ಕೂಡಾ ನಿಮ್ಮ ಬದುಕಿಗೆ ಬೆಳಕು ತರುತ್ತವೆ. ಹಸು, ಕರುಗಳು ಲಾಭ ತರುವ ಜೊತೆಗೆ ಮನಸ್ಸಿನ ಜೊತೆ ಮಾತನಾಡುತ್ತವೆ.
Success Mantras For Children: ಮಕ್ಕಳ ಯಶಸ್ಸಿಗೆ ಹೀಗ್ ಮಾಡಿ ಅನ್ನುತ್ತೆ ಜ್ಯೋತಿಷ್ಯ
ಕನ್ಯಾ(Virgo)
ಹೆಚ್ಚು ಮೇಂಟೇನೆನ್ಸ್ ಬೇಡದ, ಪ್ರಾಮಾಣಿಕ ನಾಯಿಗಳು ನಿಮಗೆ ಉತ್ತಮ ಸಂಗಾತಿಯಾಗುತ್ತವೆ. ಬೀದಿ ನಾಯಿಗಳಾದರೂ ಸರಿ, ಇವು ನಿಮ್ಮ ಸ್ನೇಹಿತನ ಸ್ಥಾನ ತುಂಬುತ್ತವೆ. ಇದಲ್ಲದೆ, ಮೀನು(fish) ಕೂಡಾ ನಿಮ್ಮ ಮಾತುಗಳನ್ನು ಕೇಳುತ್ತಾ ಮನೆಗೆ ಲವಲವಿಕೆ ತರುತ್ತದೆ.
ತುಲಾ(Libra)
ತುಲಾ ರಾಶಿಗೆ ಚೆಂದದ ಮೇಲೆ ಹೆಚ್ಚು ಪ್ರೀತಿ. ಹಾಗಾಗಿ, ಸಾಕುಪ್ರಾಣಿಯನ್ನು ಆರಿಸುವಾಗ ನೋಡಲು ಸುಂದರವಾಗಿರುವ ಪ್ರಾಣಿಯನ್ನೇ ಆರಿಸಿ. ಜೊತೆಗೆ, ಮನೆಯನ್ನು ಹೆಚ್ಚು ಗಜಿಬಿಜಿ ಮಾಡದವಾಗಿರಬೇಕು. ಆ ರೀತಿಯಲ್ಲಿ ನೋಡಿದಾಗ ಉತ್ತಮ ತಳಿಯ ಬೆಕ್ಕು ಇಲ್ಲವೇ ಗಿಳಿ ಸಾಕಬಹುದು.
ವೃಶ್ಚಿಕ(Scorpio)
ಬೆಕ್ಕು ಅಥವಾ ನಾಯಿ- ಹೆಚ್ಚು ನಾಟಕ, ತುಂಟತನ ಮಾಡುವಂಥವು ನಿಮ್ಮನ್ನು ಸಂತುಷ್ಠವಾಗಿಡುತ್ತವೆ. ಬುದ್ಧಿವಂತಿಕೆ ಹೆಚ್ಚಿರುವ ಸಿಯಾಮೀಸ್ ಕ್ಯಾಟ್ ಅಥವಾ ಗ್ರೇಟ್ ಡೇನ್ ಸಾಕಿ ನೋಡಿ.
ಧನು(Sagittarius)
ಎಲ್ಲೇ ಹೋದರೂ ಕಂಪನಿ ಬೇಕೆನ್ನುವವರು ಇವರು. ಹಾಗಾಗಿ, ಹೋದಲ್ಲೆಲ್ಲ ಜೊತೆಗೆ ಬರುವಂಥ ನಾಯಿ ಸಾಕಬಹುದು. ಬುಲ್‌ಡಾಗ್ ಅಥವಾ ರಿಟ್ರೀವರ್ ಉತ್ತಮ.
ಮಕರ(Capricorn)
ಅತಿ ಕಾಳಜಿ ಬೇಡದ, ತಮ್ಮಷ್ಟಕ್ಕೆ ಸಂತುಷ್ಠವಾಗಿರುವ ಪ್ರಾಣಿಗಳು ಮಕರ ರಾಶಿಗೆ ಹೊಂದುತ್ತವೆ. ಮೇಕೆ(goat)ಗಳು ಸಾಕಣೆಗೆ ಉತ್ತಮ. ಇನ್ನು ತಮ್ಮಷ್ಟಕ್ಕೆ ಮನೆಯೊಳಗೆ ಓಡಾಡಿಕೊಂಡಿರುವ ದೇಸಿ ಬೆಕ್ಕುಗಳು ಕೂಡಾ ಆಗಿ ಬರುತ್ತವೆ.
ಕುಂಭ(Aquarius)
ನಾಯಿ, ಬೆಕ್ಕಿನಂಥ ಸಾಮಾನ್ಯ ಸಾಕುಪ್ರಾಣಿಗಳು ಇವರಿಗೆ ಅಷ್ಟೇನು ಖುಷಿ ನೀಡುವುದಿಲ್ಲ. ಹಾವು, ಅಳಿಲು(squirrel), ಒಂಟೆ, ಜೇನು, ಮಂಗ(monkey)ಗಳನ್ನು ಸಾಕಬಹುದು. ಇವುಗಳೊಂದಿಗೆ ಮಾತನಾಡುವ ಕಲೆ ಕುಂಭ ರಾಶಿಯವರಿಗಿದೆ.
ಮೀನ(Pisces)
ಇವರಿಗೆ ಎಲ್ಲ ಸಾಕು ಪ್ರಾಣಿಗಳೂ ಇಷ್ಟ. ಪ್ರಾಣಿ ಪ್ರಿಯರೇ ಇವರು. ಅದರಲ್ಲೂ ಭಾವನೆಗಳನ್ನು ಪ್ರತಿಬಿಂಬಿಸುವ ಪ್ರಾಣಿಗಳು ಇವರ ಅಚ್ಚುಮೆಚ್ಚು. ಆ ಲೆಕ್ಕದಲ್ಲಿ ನಾಯಿ, ಹಸು, ಬೆಕ್ಕು ಯಾವುದನ್ನು ಬೇಕಾದರೂ ಸಾಕಬಹುದು.