Vaastu for debt free life: ಸಾಲ ಮುಕ್ತರಾಗೋಕೆ ಸುಲಭ ಪರಿಹಾರಗಳು..

By Suvarna News  |  First Published Dec 20, 2021, 2:46 PM IST

ವಾಸ್ತುಶಾಸ್ತ್ರ ನಮ್ಮ ಬದುಕನ್ನೇ ಆವರಿಸಿದೆ. ನಾವು ಮಾಡುವ ತಪ್ಪುಗಳಿಂದ ಸಾಲ ಹೆಚ್ಚಬಹುದು, ಅದನ್ನು ಸರಿಪಡಿಸಿಕೊಂಡಾಗ ಸಮೃದ್ಧಿಯನ್ನೂ ಕಾಣಬಹುದು. ಹಾಗಿದ್ದರೆ ಸಾಲಮುಕ್ತರಾಗಲು ಏನು ಮಾಡಬೇಕು?


ವಾಸ್ತುಶಾಸ್ತ್ರ(Vastu-shastra) ನಮ್ಮ ಬದುಕಿನ ಅದೆಷ್ಟು ಭಾಗಗಳನ್ನು ಆವರಿಸಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಸಣ್ಣ ಸೂಜಿಯಿಂದ ಹಿಡಿದು ಗೋಡೆಯ ಬಣ್ಣದವರೆಗೆ ಎಲ್ಲವೂ ವಾಸ್ತುಶಾಸ್ತ್ರದಲ್ಲಿ ಪ್ರಾಮುಖ್ಯತೆ ಪಡೆದಿವೆ. ನಾವು ನಮಗೇ ಗೊತ್ತಿಲ್ಲದೆ ಮಾಡುವ ಕೆಲ ಅಭ್ಯಾಸಗಳು, ತಪ್ಪುಗಳು(mistakes) ವಾಸ್ತು ದೋಷಕ್ಕೆ ಕಾರಣವಾಗುತ್ತವೆ. ಅದರಿಂದ ಬದುಕಿನಲ್ಲಿ ಸಾಲ ಹೆಚ್ಚುತ್ತದೆ. 
ಬದುಕು ಸಾಲ ಮುಕ್ತವಾಗಿದ್ದಾಗ ಸುಲಭವಾಗಿ ಉಸಿರಾಡಬಹುದು. ಆ ಸ್ವಾತಂತ್ರ್ಯದ ಅನುಭವ ಪಡೆದವರಿಗೇ ಗೊತ್ತು. ಹೀಗೆ ಸಾಲಮುಕ್ತರಾಗಿರಬೇಕೆಂದರೆ, ವಾಸ್ತುವಿನ ಈ ಸಲಹೆಗಳನ್ನು ಪರಿಗಣಿಸಬೇಕು. 

ಹಾಸಿಗೆಯ ಮೇಲೆ ತಿನ್ನುವುದು
ಜನರು ಹಾಸಿಗೆ ಮೇಲೆ ಕುಳಿತೇ ಊಟ, ತಿಂಡಿ ಮಾಡುವುದನ್ನು ನಾವು ನೋಡುತ್ತಲೇ ಇರುತ್ತೇವೆ. ವಾಸ್ತು ಪ್ರಕಾರ ಇದು ಬಹಳ ಕೆಟ್ಟ ಅಭ್ಯಾಸ. ಹೀಗೆ ಹಾಸಿಗೆ ಮೇಲೆ ಕುಳಿತು ಊಟ ಮಾಡುವವರ ಮನೆಯಲ್ಲಿ ಲಕ್ಷ್ಮೀ ನಿಲ್ಲುವುದಿಲ್ಲ. ಯಶಸ್ಸಿನ ಹಾದಿಗೆ ಅಡ್ಡಿಗಳನ್ನು ತರುತ್ತದೆ ಈ ಹಾಸಿಗೆ ಮೇಲೆ ತಿನ್ನುವ ಅಭ್ಯಾಸ. ಇಂಥವರು ಸಾಲದಲ್ಲಿ ಮುಳುಗಿರುವ ಸಾಧ್ಯತೆ ಹೆಚ್ಚು. ಹಾಗಾಗಿ ಇನ್ನು ಮುಂದೆ ಹಾಸಿಗೆ ಮೇಲೆ ಕುಳಿತು ಏನನ್ನೂ ತಿನ್ನಬೇಡಿ. ತಿನ್ನುವಾಗ ನೆಲದ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತು ಬಾಗಿ ತಿನ್ನುವುದು ಉತ್ತಮ ಅಭ್ಯಾಸ. ಅನ್ನಪೂರ್ಣೇಶ್ವರಿಗೆ ಗೌರವ ತೋರಿದಂತಿರುತ್ತದೆ. 

Latest Videos

undefined

ತೊಳೆಯದ ಪಾತ್ರೆಗಳು(unclean utensils)
ರಾತ್ರಿ ಊಟವಾದ ನಂತರ ಬಹಳಷ್ಟು ಮನೆಗಳಲ್ಲಿ ಪಾತ್ರೆ ತೊಳೆಯುವುದಿಲ್ಲ. ಬೆಳಗ್ಗೆ ಎದ್ದು ತೊಳೆದರಾಯ್ತು ಎಂದೋ, ಕೆಲಸದಾಕೆ ಬರುವವರೆಗೆ ಇಡುವುದೋ ಅಭ್ಯಾಸ. ಆದರೆ ಹೀಗೆ ಸ್ವಚ್ಛ ಮಾಡದೆ ಬಿಡುವ ಪಾತ್ರೆಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಹಾಗಾಗಿ, ರಾತ್ರಿ ಮಲಗುವಾಗ ಎಲ್ಲ ಪಾತ್ರೆಗಳನ್ನು ತೊಳೆದು ಮುಗಿಸಿಯೇ ಹಾಸಿಗೆಗೆ ಹೋಗುವುದರಿಂದ ಬದುಕಿನಲ್ಲಿ ಮುಂದೆ ಬರುವ ಹಣದ ಅಡಚಣೆಗಳನ್ನು ತಡೆಯಬಹುದು. 

Success Mantras For Children: ಮಕ್ಕಳ ಯಶಸ್ಸಿಗೆ ಹೀಗ್ ಮಾಡಿ ಅನ್ನುತ್ತೆ ಜ್ಯೋತಿಷ್ಯ

ಬಕೆಟ್‌ನಲ್ಲಿ ನೀರು
ರಾತ್ರಿ ಮಲಗುವಾಗ ಬಾತ್‌ರೂಂ ಹಾಗೂ ಅಡುಗೆ ಮನೆಯಲ್ಲಿ ಬಕೆಟ್ ಪೂರ್ತಿ ನೀರನ್ನು ತುಂಬಿಡುವುದರಿಂದ ಮನೆಯಲ್ಲಿ ಇರಬಹುದಾದ ನಕಾರಾತ್ಮಕ ಶಕ್ತಿಗಳು ತೊಲಗುತ್ತವೆ. ಲಕ್ಷ್ಮೀ ಒಲಿಯುತ್ತಾಳೆ. 

ಹಾಲು, ಮೊಸರು, ಉಪ್ಪು
ಯಾರಾದರೂ ಕೇಳಿದಾಗ ಹಾಲು(milk), ಮೊಸರು(curd) ಹಾಗೂ ಉಪ್ಪನ್ನು ಕೊಟ್ಟು ಬಿಡಬೇಡಿ. ಇದರಿಂದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಸಾಲ ಮಾಡಬೇಕಾಗುತ್ತದೆ. ಬದಲಿಗೆ ಅವನ್ನು ಕೊಳ್ಳಲು ಬೇಕಿದ್ದರೆ ಹಣ ಕೊಡಿ.

Astro Remedies For Pitra Dosh: ಪಿತೃದೋಷವಿದ್ದರೆ ಹೀಗ್ ಮಾಡಿ ಪರಿಹಾರ ಕಂಡ್ಕೊಳ್ಳಿ..

ವಾಸ್ತು ತಪ್ಪು
ಮನೆಯ ಈಶಾನ್ಯ ದಿಕ್ಕಿನಲ್ಲಿ ಸರಕು ಸಾಮಾನು, ಡಸ್ಟ್‌ಬಿನ್, ಶೌಚಾಲಯ, ಒಳಚರಂಡಿ ವ್ಯವಸ್ಥೆ, ಪೊರಕೆ ಇದ್ದರೆ ಇದರಿಂದ ದೂರದೃಷ್ಟಿಯ ಕೊರೆತೆ, ಆರ್ಥಿಕ ಯೋಜನೆಯಲ್ಲಿ ಸೋಲು, ಸಾಲದ ಸುಳಿಯಲ್ಲಿ ಸಿಲುಕುವಂತ ನಿರ್ಧಾರಗಳು ಹೆಚ್ಚುತ್ತವೆ.  ಹಾಗಾಗಿ, ಈಶಾನ್ಯ(north-east) ದಿಕ್ಕಿನಲ್ಲಿ ಇವೇನೂ ಇರದಂತೆ ನೋಡಿಕೊಳ್ಳಿ. ಬದಲಿಗೆ ಧ್ಯಾನಭಂಗಿಯಲ್ಲಿರುವ ಬುದ್ಧ(Buddha)ನನ್ನು ಈಶಾನ್ಯದಲ್ಲಿಡಿ. ಈ ಬುದ್ಧ ಬರೀ ತಲೆ ಭಾಗವಿರಬಾರದು. ಇಡೀ ದೇಹ ಇರಬೇಕು. 

ಗೋಡೆಗಳು
ಮನೆಯ ಗೋಡೆಗಳು ಮನೆಯಲ್ಲಿ ವಾಸಿಸುವ ವ್ಯಕ್ತಿಯ ಗುಣವನ್ನು ಬಿಂಬಿಸುತ್ತದೆ. ಆದ್ದರಿಂದ ಮನೆಯ ಗೋಡೆಗಳನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಮನೆಯ ಮೂಲೆಗಳಲ್ಲಿ ಯಾವುದೇ ಬಲೆ(spider web)ಗಳು ಇರದಂತೆ ಗಮನ ಹರಿಸಿ. ವಾರಕ್ಕೆ 2ರಿಂದ 3 ಬಾರಿಯಾದರೂ ಬಲೆಯನ್ನು ಸ್ವಚ್ಛಗೊಳಿಸುತ್ತಿರಬೇಕು. ಇದರಿಂದ ಮನೆಯಲ್ಲಿ ಸಂಪತ್ತಿನ ಕೊರತೆ ಇರುವುದಿಲ್ಲ.
 
ಸಂಜೆ ಮಲಗುವುದು
ಆರೋಗ್ಯದ ದೃಷ್ಟಿಯಿಂದ ನಿದ್ರೆ ಮಾಡುವುದೇನೋ ಒಳ್ಳೆಯದು. ಆದರೆ ಸಂಜೆ(evening) ಮಲಗುವ ಅಭ್ಯಾಸ ಒಳ್ಳೆಯದಲ್ಲ. ಲಕ್ಷ್ಮೀ ಬರುವ ಸಂದರ್ಭದಲ್ಲಿ ಮಲಗುವುದರಿಂದ ಮನೆಯಲ್ಲಿ ಬಡತನವು ಉಂಟಾಗುತ್ತದೆ. ಆದ್ದರಿಂದ ಸಂಜೆಯನ್ನು ದೇವರ ಪೂಜೆಯಲ್ಲಿ ಕಳೆಯಬೇಕು. ಈ ಸಮಯದಲ್ಲಿ ದೀಪ ಹಚ್ಚಿ ಶ್ಲೋಕ, ಭಜನೆ ಹೇಳಿದರೆ ಶುಭ ಫಲಗಳು ಸಿಗುತ್ತದೆ.

click me!