ಹೋಳಿ ಹಬ್ಬದ ದಿನ ಈ ಬಣ್ಣದ ಬಟ್ಟೆ ಧರಿಸಿದರೆ ಸಮಾಜದಲ್ಲಿ ಗೌರವ ಹಾಗೂ ಹೆಸರು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಅದು ಯಾವ ಬಣ್ಣ?
ಫಾಲ್ಗುಣ(Falgun) ಮಾಸ ಶುರುವಾಗುತ್ತಿದ್ದಂತೆಯೇ ಹೋಳಿ ಆಚರಣೆಗೆ ಸಿದ್ಧತೆಗಳು ಶುರುವಾಗುತ್ತವೆ. ಇಡೀ ಭಾರತವೇ ಬಣ್ಣಗಳಲ್ಲಿ ಮಿಂದೇಳುವ ಸಂಭ್ರಮದ ಈ ಹಬ್ಬಕ್ಕೆ ಇನ್ನೆರಡೇ ದಿನ ಬಾಕಿ ಇವೆ. ಹೋಳಿ(Holi) ಹಬ್ಬದ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೂ ಅದು ಕಾಮನಬಿಲ್ಲಿನಂತೆ ಹಲವು ಬಣ್ಣಗಳ ಸಮನ್ವಯವಾಗುವುದಂತೂ ಹೌದು. ಆದರೂ ಅಂದು ಯಾವ ಬಣ್ಣದ ಬಟ್ಟೆ ಧರಿಸಿದರೆ ಸಮಾಜದಲ್ಲಿ ಗೌರವ(respect), ಯಶಸ್ಸು(success) ಹೆಚ್ಚಾಗುತ್ತದೆ ಎಂಬ ಬಗ್ಗೆ ನಾವು ಹೇಳುತ್ತೇವೆ.
ಹೋಳಿ ಹಬ್ಬದ ದಿನ ಸಾಮಾನ್ಯವಾಗಿ ಬಹುತೇಕರು ಬಿಳಿಯ ಬಣ್ಣದ ಬಟ್ಟೆ ಧರಿಸುವುದನ್ನು ನೀವು ನೋಡಿರಬಹುದು. ಕನಿಷ್ಠ ಪಕ್ಷ ನಾವು ನೋಡಿರುವ ಚಲನಚಿತ್ರಗಳಲ್ಲಂತೂ ಹೋಳಿಯ ದಿನ ಬಿಳಿಬಣ್ಣದ ಬಟ್ಟೆ(white clothes)ಯನ್ನೇ ಧರಿಸಿರುತ್ತಾರೆ. ಈ ಬಣ್ಣವೇ ಅಂದು ತೊಡುವುದು ಶುಭವಾಗಿದೆ. ಹೋಳಿಯಂದು ಬಿಳಿ ಬಣ್ಣದ ಬಟ್ಟೆಗಳನ್ನು ತೊಡುವುದಕ್ಕೆ ಸಾಕಷ್ಟು ಕಾರಣಗಳಿವೆ. ಹಾಗಾದರೆ ಹೋಳಿಯ ದಿನ ಶ್ವೇತವರ್ಣದ ಬಟ್ಟೆ ಧರಿಸುವುದು ಏಕೆಂದು ತಿಳಿಯೋಣ.
ಮನಸ್ಸು ತಿಳಿಗೊಳಿಸುವ ಹೋಳಿ
ಬಣ್ಣ ಎರಚಾಡುವ ಹೋಳಿ ಹಬ್ಬದ ಹಿಂದಿನ ದಿನ ಹೋಲಿಕಾ ದಹನ್ ನಡೆಯುತ್ತದೆ. ಅಂದು ದಹನದಲ್ಲಿ ಸುಟ್ಟು ಹೋಗುವ ಸಾಮಗ್ರಿಗಳಂತೆ ಮನಸ್ಸಿನಲ್ಲಿರುವ ಕಲ್ಮಶಗಳನ್ನೆಲ್ಲ ಭಸ್ಮ ಮಾಡಬೇಕು. ಹಾಗೆ ಮನಸ್ಸು(Mind) ಸ್ವಚ್ಛವಾದ ಮೇಲೆ ಮನಸಿನಂತೆಯೇ ಬಿಳಿಯಾಗಿ ದೇಹವೂ ಇರಲೆಂದು ಬಿಳಿ ಬಣ್ಣದ ಬಟ್ಟೆ ಧರಿಸಲಾಗುತ್ತದೆ. ಹಾಗಾಗಿ, ಬಣ್ಣ ಎರಚಿದಾಗ ಅದು ಬಹಳ ಧನಾತ್ಮಕವಾಗಿಯೂ, ವರ್ಣಮಯವಾಗಿಯೂ ಕಾಣಿಸುತ್ತದೆ. ಹಾಗಾಗಿಯೇ ಹೋಳಿಯ ದಿನ ಬಿಳಿ ಬಣ್ಣ ಧರಿಸುವುದು ಶುಭವಾಗಿದೆ.
ಬಿಳಿಯು ಸಮೃದ್ಧಿ, ಸಹೋದರತ್ವ(brotherhood)ದ ಪ್ರತೀಕ
ಬಿಳಿ ಬಣ್ಣವು ನಮಗೆ ಅಲ್ಲಿವರೆಗಿನ ಎಲ್ಲ ಮುನಿಸು, ಜಗಳಗಳನ್ನು ಮರೆತು ನಮ್ಮ ಪ್ರೀತಿಪಾತ್ರರನ್ನು ಪ್ರೀತಿಯಿಂದಲೇ ಕಾಣಲು ಕಲಿಸುತ್ತದೆ. ಬಿಳಿಯು ಶಾಂತಿ, ಸಂತೋಷ ಹಾಗೂ ಸಮೃದ್ಧಿಯ ಪ್ರತೀಕವಾಗಿದೆ. ಈ ಬಣ್ಣವು ಮನಸ್ಸನ್ನು ಶಾಂತವಾಗಿರಿಸುತ್ತದೆ. ಕೋಪ ಜಾಸ್ತಿ ಇರುವವರು ಹೋಳಿಯ ದಿನವೂ ಸೇರಿದಂತೆ ಇತರೆ ದಿನಗಳಲ್ಲಿಯೂ ಬಿಳಿ ಬಟ್ಟೆಗಳನ್ನು ಧರಿಸುವ ಮೂಲಕ ತಮ್ಮಲ್ಲಾಗುವ ಬದಲಾವಣೆಯನ್ನು ಕಾಣಬಹುದಾಗಿದೆ.
Gemology: ಸಿಂಹ, ಮೇಷ ರಾಶಿಗೆ ಮಂಗಳಕರ ಮಾಣಿಕ್ಯ, ಆದರೆ ಈ ರಾಶಿಯವರು ಮಾತ್ರ ಧರಿಸಲೇಬಾರದು!
ಒಳಿತಿನ ಜಯ ಆಚರಿಸಲು ಬಿಳಿಯೇ ಸೂಕ್ತ
ಹೋಳಿ ಹಬ್ಬವೆಂದರೆ ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತ. ಹೋಲಿಕಾ ದಹನ್ ನಡೆಸುವುದೇ ಈ ಒಳಿತಿನ ಜಯ ಆಚರಿಸಲು. ಹಾಗಿದ್ದಾಗ ಬಿಳಿ ಬಣ್ಣದ ಬಟ್ಟೆ ಧರಿಸಿ ಹಬ್ಬ ಆಚರಿಸುವುದರಿಂದ ಸಮಾಜದಲ್ಲಿ ನಮ್ಮ ಗೌರವ ಹೆಚ್ಚುತ್ತದೆ.
ಗ್ರಹಗಳ ನಕಾರಾತ್ಮಕ ಪರಿಣಾಮ(negativity of planets) ತಗ್ಗಿಸುತ್ತದೆ
ಹೋಳಿ ಹಬ್ಬಕ್ಕೂ 8 ದಿನ ಮುಂಚೆ ಹೋಲಾಸ್ಟಕ್ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಎಲ್ಲ ಶುಭ ಕಾರ್ಯಗಳನ್ನು ನಿಲ್ಲಿಸಲಾಗುತ್ತದೆ. ಅಂದರೆ ಈ ಸಮಯದಲ್ಲಿ ವಾತಾವರಣದಲ್ಲಿ ಗ್ರಹಗಳ ನಕಾರಾತ್ಮಕತೆ ಹೆಚ್ಚಿರುತ್ತದೆ ಎಂಬುದು ಕಾರಣ. ಇದನ್ನು ಕಡಿಮೆ ಮಾಡಲು ಬಿಳಿ ಬಣ್ಣದ ವಸ್ತ್ರ ಧರಿಸುವುದು ಉತ್ತಮ ಪರಿಹಾರವಾಗಿದೆ.
Holi 2022: ಬಣ್ಣದ ಜೊತೆ ಹಣ ಮನೆಗೆ ಬರ್ಬೇಕೆಂದ್ರೆ ಹೋಳಿ ದಿನ ಮಾಡಿ ಈ ಕೆಲಸ
ಸೂರ್ಯನ ಝಳದಿಂದ ಕೊಂಚ ನಿರಾಳತೆ
ಹೋಳಿಯು ಧಗಧಗ ಬೇಸಿಗೆಯಲ್ಲಿ ಬರುತ್ತದೆ. ಸೂರ್ಯ ಹೆಚ್ಚು ಪ್ರಕಾಶಮಾನವಾಗಿ ಮೈ ಸುಡುತ್ತಾನೆ. ಹೆಚ್ಚಿದ ತಾಪಮಾನದ ನಡುವೆ ನಿರಾಳತೆ ಪಡೆಯಲು ಬಿಳಿಯ ಬಣ್ಣವೇ ಉತ್ತಮ. ಇದು ತಂಪು ತಾಜಾತನ ನೀಡುತ್ತದೆ.
ಸಹಬಾಳ್ವಿಕೆ ಕಲಿಸುತ್ತದೆ
ಬಿಳಿ ಬಣ್ಣವು ಏಳು ಬಣ್ಣಗಳು ಸೇರಿ ಆಗಿದೆ. ಹಾಗಾಗಿ, ಅದು ಸಹಬಾಳ್ವೆಯ ಪಾಠ ಹೇಳುತ್ತದೆ.