ಸಾಲ ಎಂದರೆ ಅದೊಂದು ತಲೆ ಶೂಲೆ. ಹಾಸಿಗೆಗಿಂತಾ ಹೆಚ್ಚು ಕಾಲು ಚಾಚಿದ ಪರಿಣಾಮ. ಸಾಲದ ಹೊರೆಯಿಂದ ಕಳಚಿಕೊಳ್ಳಲು ಯಾವ ದೇವರನ್ನು ಹೇಗೆ ಒಲಿಸಿಕೊಳ್ಳಬೇಕು ಎಂದು ನಾವು ಹೇಳುತ್ತೇವೆ.
ಬ್ಯಾಂಕ್‌ನಿಂದ ಪದೇ ಪದೇ ಲೋನ್(loan) ಕೊಡ್ತೀವಿ ಅಂತ ಫೋನ್ ಬರುತ್ತಲೇ ಇರುತ್ತದೆ. ಅವರ ಮಾತನ್ನು ಕೇಳುವಾಗ ಎಂಥ ಆಪ್ತರಪ್ಪಾ ಇವರು ಅನ್ನಿಸ್ಬಹುದು. ಹೌದು, ಬೈಕು, ಕಾರು, ಮನೆ ಮತ್ತೊಂದು ಅಂತ ಕನಸಿನ ಎಲ್ಲವನ್ನೂ ಖರೀದಿಸಲು ಈಗ ಬ್ಯಾಂಕ್ ಸಾಲ ನೀಡುತ್ತದೆ. ಆದರೆ, ಒಮ್ಮೆ ನೀವು ಸಾಲ ವಾಪಸ್ ನೀಡಲು ತಡ ಮಾಡಿದಿರೋ ಮುಂಚೆ ಬಂದಂತೆ ಪದೇ ಪದೇ ಕಾಲ್‌ಗಳೇನೋ ಬರುತ್ತವೆ. ಆದರೆ, ಮಾತನಾಡುವ ರೀತಿ ಬೇರೆ ಇರುತ್ತದೆ ಅಷ್ಟೇ!
ಈಗೀಗ ಸಾವಿರ ರುಪಾಯಿ ವಸ್ತುವನ್ನೂ ಇಎಂಐ ಮೂಲಕ ತೀರಿಸುವ ಆಯ್ಕೆಗಳಿರುತ್ತವೆ. ಅಕೌಂಟ್‌ನಲ್ಲಿ ದುಡ್ಡಿಲ್ಲದಿದ್ದರೂ ಮುಂದಿನ ತಿಂಗಳು ಬರುವ ಸಂಬಳ ನಂಬಿ ಉಜ್ಜಲು ಕ್ರೆಡಿಟ್ ಕಾರ್ಡ್ ಇರುತ್ತದೆ. ಇವೆಲ್ಲ ನಮ್ಮ ಕೊಳ್ಳುಬಾಕ ಮನಸ್ಥಿತಿಗೆ ಧಾರಾಳ ನೀರೆರೆಯುತ್ತವೆ. ಕಷ್ಟ ಪಟ್ಟು ದುಡಿದ ಹಣ ಕೈಲಿಲ್ಲದೆಯೇ ಕೊಳ್ಳಬಹುದು ಎಂದರೆ ಯಾರಿಗೆ ತಾನೇ ಆಸೆಯಾಗೋಲ್ಲ? ಆದರೆ, ಬಂದ ಸಂಬಳವೆಲ್ಲ ತಿಂಗಳಾರಂಭದಲ್ಲಿ ಇಎಂಐ ಕಟ್ಟಲು, ಕ್ರೆಡಿಟ್ ಕಾರ್ಡ್‌ಗಾಗಿ ಹೋದರೆ, ಸಾಮಾನ್ಯ ಜೀವನ ನಡೆಸುವುದಾದರೂ ಹೇಗೆ? ಕಡೆಕಡೆಗೆ ಸಾಲ ತಲೆ ಶೂಲೆಯಾಗುತ್ತದೆ. ಒತ್ತಡ(mental stress) ತರುತ್ತದೆ. ಮಾನಸಿಕ ನೆಮ್ಮದಿಯನ್ನೇ ಕೆಡಿಸಿ ಬದುಕನ್ನೇ ಬವಣೆಯಾಗಿಸುತ್ತದೆ. ಲಕ್ಷುರಿ ಬದುಕಿಗಾಗಿ ಮಾಡಿಕೊಂಡ ಸಾಲಗಳು, ಲಕ್ಷುರಿಯ ರುಚಿ ತೋರಿಸಿ ಭಿಕ್ಷುಕನಾಗುವ ಭಯ ಹುಟ್ಟು ಹಾಕುತ್ತವೆ. ಕಡೆಕಡೆಗೆ ಆತ್ಮಹತ್ಯೆಯ ಯೋಚನೆಗಳು ಸುಳಿದಾಡಿದರೂ ಆಶ್ಚರ್ಯವಿಲ್ಲ. ಅದಕ್ಕೇ ಹೇಳೋದು ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕೆಂದು.
January Born: ಜನವರಿಯಲ್ಲಿ ಹುಟ್ಟಿದವರು ಹೇಗೆ ಗೊತ್ತಾ?
ಸಾಲ ಮುಕ್ತರಾಗೋದು ಹೇಗೆ?
ಕಷ್ಟ ಪಟ್ಟು ದುಡಿಯದೆ, ಹೊಸ ಹೊಸ ಯೋಚನೆಗಳ ಮೂಲಕ, ಹೊಸ ಆರ್ಥಿಕ ಮೂಲಗಳನ್ನು ಕಂಡುಕೊಳ್ಳುವ ಮೂಲಕವಷ್ಟೇ ಸಾಲದಿಂದ ಮುಕ್ತರಾಗಬಹುದು ಎಂಬುದೇನೋ ನಿಜ. ಆದರೆ, ಅದರ ಜೊತೆಗೆ ಹಣ ಗಳಿಕೆಗೆ ದೇವರ ಆಶೀರ್ವಾದ, ಅದೃಷ್ಟವೂ ಇರಬೇಕಲ್ಲ.. ಹೀಗೆ ಸಾಲಮುಕ್ತ ಜೀವನ ಸಾಧಿಸಲು ಕೆಲ ದಾರಿಗಳನ್ನು ಜ್ಯೋತಿಷ್ಯ ಹೇಳುತ್ತದೆ. ನೀವು ಕೂಡಾ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರೆ ಪ್ರಯತ್ನದ ಜೊತೆ ಭಗವಂತನ ಅನುಗ್ರಹ ಪಡೆಯಲು ಈ ಕೆಳಗೆ ನೀಡಿದ ಜ್ಯೋತಿಷ್ಯದ ಮಾರ್ಗ(astrological remedies)ಗಳನ್ನು ಅನುಸರಿಸಿ ನೋಡಿ. ಇದರಿಂದ ನಿಮ್ಮ ಸಾಲಗಳೆಲ್ಲ ತೀರುವ ಜೊತೆಗೆ ಹಣ ಸಂಬಂಧಿ ಸಮಸ್ಯೆಗಳೆಲ್ಲ ನಿವಾರಣೆಯಾಗಲಿವೆ.
Saturn Transit: ಶನಿಯ ರಾಶಿ ಪರಿವರ್ತನೆಯಿಂದ ಈ ಎಂಟು ರಾಶಿಗಳ ಮೇಲೆ ಅಗಾಧ ಪರಿಣಾಮ