Gemstones: ಹವಳ ಧಾರಣೆಯಿಂದ ಈ ರಾಶಿಯವರಿಗೆ ಸಖತ್ ಲಕ್..!

By Suvarna NewsFirst Published Jan 6, 2022, 9:14 AM IST
Highlights

ರತ್ನ ಧಾರಣೆಯು ವ್ಯಕ್ತಿಯ ಅದೃಷ್ಟವನ್ನು ಬಲಗೊಳಿಸುತ್ತದೆ. ಅಂತಹ ರತ್ನಗಳಲ್ಲಿ ಹವಳವು ಒಂದಾಗಿದೆ. ಹವಳ ಧಾರಣೆಯಿಂದ ಮಾನಸಿಕ ಒತ್ತಡ ನಿವಾರಣೆ ಸೇರಿದಂತೆ ಅನೇಕ ಲಾಭಗಳಿವೆ. ಹವಳ ಧಾರಣೆ ಯಾವ ರಾಶಿಯವರಿಗೆ ಸೂಕ್ತ ಮತ್ತು ಧರಿಸುವುದರಿಂದ ಉಂಟಾಗುವ ಲಾಭಗಳ ಬಗ್ಗೆ ತಿಳಿಯೋಣ...

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ರತ್ನಗಳು (Gemstones) ವ್ಯಕ್ತಿಯ ಶಕ್ತಿಯನ್ನು (Strength) ಮತ್ತು ಅದೃಷ್ಟವನ್ನು (Luck) ಹೆಚ್ಚಿಸುವಲ್ಲಿ ಸಹಾಯಕವಾಗುತ್ತವೆ. ಗ್ರಹಗಳ ಸ್ಥಿತಿಯನ್ನು ಬಲಪಡಿಸಲು ರತ್ನ ಧಾರಣೆ (Wearing Gemstone) ಉತ್ತಮ ಉಪಾಯವಾಗಿದೆ. ರತ್ನಗಳಲ್ಲಿ ಒಂದಾದ ಹವಳವು ಮಂಗಳ ಗ್ರಹವನ್ನು (Mars Planet) ಪ್ರತಿನಿಧಿಸುವ ರತ್ನವಾಗಿದೆ. ಹವಳವನ್ನು ಧರಿಸುವುದರಿಂದ ಜಾತಕದಲ್ಲಿನ (Horoscope) ಮಂಗಳಗ್ರಹವನ್ನು ಬಲಪಡಿಸಿಕೊಳ್ಳಬಹುದಾಗಿದೆ. ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ನೀಚ ಸ್ಥಿತಿಯಲ್ಲಿದ್ದು, ಅಶುಭ ಪ್ರಭಾವಗಳನ್ನು (Bad Effects) ನೀಡುತ್ತಿದ್ದರೆ ಅದರ ಪರಿಹಾರಾರ್ಥವಾಗಿ ಹವಳವನ್ನು ಧರಿಸಬೇಕಾಗುತ್ತದೆ. ಈ ಹವಳವನ್ನು ಯಾವ ರಾಶಿಯವರು ಧರಿಸಿದರೆ ಉತ್ತಮ? ಮತ್ತು ಹೇಗೆ ಧರಿಸಬೇಕು ಎಂಬುದರ ಬಗ್ಗೆ ತಿಳಿಯೋಣ.....

ಹವಳ ಕೆಂಪು (Red), ಕೇಸರಿ (Saffron), ಬಿಳಿ (White) ಮತ್ತು ಕಪ್ಪು (Black) ಬಣ್ಣಗಳಲ್ಲಿ (Colour) ದೊರಕುತ್ತದೆ. ಹವಳವನ್ನು ಧರಿಸುವುದರಿಂದ ಮಂಗಳ ಗ್ರಹವು ಬಲವಾಗುತ್ತದೆ. ಮಂಗಳ ಗ್ರಹದ ಶುಭ ಪ್ರಭಾವಗಳು ವೃದ್ಧಿಯಾಗುತ್ತವೆ. ಮಾನಸಿಕ ಒತ್ತಡಗಳಿಗೆ (Mental Stress), ಮಾನಸಿಕ ರೋಗಗಳ ನಿವಾರಣೆಗೆ ಹವಳವು ಉತ್ತಮ ರತ್ನವಾಗಿದೆ. 

Latest Videos

ಹವಳ ಧರಿಸುವುದರಿಂದ ಉಂಟಾಗುವ ಲಾಭಗಳು (Benefits) 

• ಹವಳ ಮಂಗಳಗ್ರಹದ ಪ್ರತಿನಿಧಿ ರತ್ನವಾಗಿದೆ. ಶಕ್ತಿ, ಸಾಹಸ, ಬಲ ಇವುಗಳ ಕಾರಕ ಮಂಗಳಗ್ರಹವಾಗಿದೆ. ಇದು ಪೊಲೀಸ್ (Police), ಸೇನೆ, ನಾಯಕತ್ವ, ರಾಜಕಾರಣ (Political), ಮೆಡಿಕಲ್ (Medical), ರಿಯಲ್ ಎಸ್ಟೇಟ್, ಇತ್ಯಾದಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. 

• ರಕ್ತ ಸಂಬಂಧಿ (Blood Related) ಸಮಸ್ಯೆಗಳಿಗೆ (Problems) ಹವಳವನ್ನು ಧರಿಸುವುದರಿಂದ ಉತ್ತಮ ಲಾಭಗಳು ಉಂಟಾಗುತ್ತವೆ. 

• ಆಲಸ್ಯ (Lazy) ಮತ್ತು ಮಾನಸಿಕ ಕಿರಿಕಿರಿ ಗಳಿಂದ ಮುಕ್ತಿ ಪಡೆಯಲು ಹವಳವನ್ನು ಧರಿಸುವುದು ಉತ್ತಮ. 

• ಭಯ (Fear) ಮತ್ತು ಮಾನಸಿಕ ಒತ್ತಡಗಳ ನಿವಾರಣೆಗೆ ಹವಳ ಧಾರಣೆ ರಾಮಬಾಣವಾಗಿದೆ. 

ಇದನ್ನು ಓದಿ: January Born: ಜನವರಿಯಲ್ಲಿ ಹುಟ್ಟಿದವರು ಹೇಗೆ ಗೊತ್ತಾ?

ಯಾವ ರಾಶಿಯವರು ಧರಿಸಿದರೆ ಉತ್ತಮ?

ಮೇಷ ರಾಶಿ
(Aries) ಅಥವಾ ಮೇಷ ಲಗ್ನದಲ್ಲಿ ಜನಿಸಿದವರ ಅಧಿಪತಿ ಗ್ರಹ ಮಂಗಳವಾಗಿದೆ. ಹಾಗಾಗಿ ಈ ವ್ಯಕ್ತಿಗಳು ಹವಳವನ್ನು ಧರಿಸಬಹುದಾಗಿದೆ. ಇದರಿಂದ ಮಂಗಳ ಗ್ರಹದ ಬಲ ವೃದ್ಧಿಸುತ್ತದೆ. ಇದರಿಂದ ಶುಭ ಪ್ರಭಾವಗಳನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ರೋಗಗಳ ನಿವಾರಣೆಗೆ ಆಕರ್ಷಕ (Attractive) ವ್ಯಕ್ತಿತ್ವ ಮತ್ತು ಬಲವೃದ್ಧಿಗೊಳ್ಳಲು ಹವಳದ ಧಾರಣೆ ಅತ್ಯಂತ ಉಪಯುಕ್ತವಾಗಿದೆ. 

ವೃಶ್ಚಿಕ ರಾಶಿ (Scorpio) ಮತ್ತು ವೃಶ್ಚಿಕ ಲಗ್ನದಲ್ಲಿ ಜನಿಸಿದವರ ಅಧಿಪತಿ ಗ್ರಹ ಮಂಗಳ. ಹಾಗಾಗಿ ಈ ರಾಶಿ ಮತ್ತು ಲಗ್ನದಲ್ಲಿ ಜನಿಸಿದವರಿಗೆ ಹವಳ ಧಾರಣೆ ಮಾಡಬಹುದಾಗಿದೆ. 

ಸಿಂಹ ರಾಶಿ (Leo) ಮತ್ತು ಸಿಂಹ ಲಗ್ನದಲ್ಲಿ ಜನಿಸಿದವರಿಗೆ ಹವಳ ಹೆಚ್ಚಿನ ಅದೃಷ್ಟವನ್ನು (Luck) ತಂದುಕೊಡುತ್ತದೆ. ಸಿಂಹ ರಾಶಿಯವರಿಗೆ ಪರಿಶ್ರಮಕ್ಕೆ (Effort) ತಕ್ಕ ಫಲ ಸಿಗದಿದ್ದಾಗ ಅಂದುಕೊಂಡ ಲಾಭವನ್ನು ಪಡೆಯಲು ಹವಳವನ್ನು ಧರಿಸುವುದು ಉತ್ತಮ. ಸಿಂಹ ರಾಶಿಯವರ ಅದೃಷ್ಟ ಹವಳ ಧಾರಣೆಯಿಂದ ಮತ್ತಷ್ಟು ಹೆಚ್ಚಲಿದೆ. 

ಇದನ್ನು ಓದಿ: Personality Trait: ಬುಧವಾರ ಹುಟ್ಟಿದವರು ಹೀಗಿರ್ತಾರೆ..

ಹವಳ ಧಾರಣೆಗೆ ಇರುವ ನಿಯಮವೇನು? (Wearing Rules)

ಹವಳವನ್ನು ಬಂಗಾರ (Gold), ಬೆಳ್ಳಿ (Silver) ಅಥವಾ ತಾಮ್ರದ (copper) ಉಂಗುರದಲ್ಲಿ ಸೇರಿಸಿ ಧರಿಸಬಹುದಾಗಿದೆ. ಹವಳದ ಉಂಗುರವನ್ನು ಮೊದಲು ಹಾಲಿನಲ್ಲಿ (Milk) ಅಥವಾ ಗಂಗಾ ಜಲದಲ್ಲಿ ತೊಳೆಯಬೇಕು. ನಂತರ ಮಂಗಳವಾರ ಪ್ರಾತಃಕಾಲದಿಂದ ಮಧ್ಯಾಹ್ನದ ಒಳಗೆ ಯಾವ ಸಮಯದಲ್ಲಾದರೂ ಧರಿಸಬಹುದು. ಹವಳದ ಉಂಗುರವನ್ನು ಪುರುಷರು ಬಲಗೈ ಉಂಗುರದ ಬೆರಳಿಗೆ ಧರಿಸಬೇಕು. ಮಹಿಳೆಯರು ಎಡಗೈ ಉಂಗುರದ ಬೆರಳಿಗೆ ಧರಿಸಿದರೆ ಉತ್ತಮ. ಇದನ್ನು ಧರಿಸಿದ ನಂತರ “ಕ್ರಾಂ ಕ್ರಿಂ ಕ್ರೌಂ ಸಃ ಭೌಮಾಯ ನಮಃ” ಮಂತ್ರವನ್ನು ಜಪಿಸಬೇಕು.

click me!