Planetary Influence: ಈ ಗ್ರಹಗಳ ಪ್ರಭಾವದಿಂದ ಅಪರಾಧಿಗಳಾದೀರಿ ಹುಷಾರ್!

By Suvarna NewsFirst Published Dec 19, 2021, 1:04 PM IST
Highlights

ಮನುಷ್ಯನ ಗುಣ-ಸ್ವಭಾವಗಳು ಬೇರೆ ಬೇರೆ ಆಗಿರುತ್ತದೆ. ಒಬ್ಬರು ಸರಳ ಜೀವನ ಇಷ್ಟಪಟ್ಟರೆ, ಮತ್ತೆ ಕೆಲವರು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಒಬ್ಬರು ನ್ಯಾಯ ಮಾರ್ಗದಲ್ಲಿ ನಡೆದರೆ, ಮತ್ತೆ ಕೆಲವರು ಅನ್ಯಾಯದ ಹಾದಿಯನ್ನೇ ಹಿಡಿಯುತ್ತಾರೆ. ಮತ್ ಅದೇ ಸರಿ ಎಂದು ಸಾಗುತ್ತಾರೆ. ಇದಕ್ಕೆ ಜಾತಕದ ಗ್ರಹಗಳೂ ಕಾರಣವಾಗುತ್ತವೆ. ಕ್ರೂರ ಗ್ರಹಗಳಿಂದ ವ್ಯಕ್ತಿಗಳು ಅಪರಾಧಿಗಳಾಗುತ್ತಾರೆ. ಅದರ ಬಗ್ಗೆ ನೋಡೋಣ ಬನ್ನಿ...
 

ವ್ಯಕ್ತಿಯ ಪ್ರತಿ ನಡೆಗೂ ಒಂದೊಂದು ಕಾರಣ, ಪ್ರಭಾವ ಇದ್ದೇ ಇರುತ್ತದೆ. ಜಾತಕದ (Kundli) ಗ್ರಹ (Planet), ದೆಶೆಗಳು ಸಹ ಇದಕ್ಕೆ ಪುಷ್ಟಿ ನೀಡುತ್ತವೆ. ಇವುಗಳ ಪ್ರಭಾವದಿಂದ (Influence) ಕೆಲವೊಮ್ಮೆ ಅಂದುಕೊಂಡ ಕಾರ್ಯಗಳು ಅರ್ಧದಲ್ಲೇ ನಿಂತುಹೋಗುತ್ತವೆ. ಗ್ರಹಗಳು ಉತ್ತಮ ಸ್ಥಿತಿಯಲ್ಲಿ, ಶುಭ ಸ್ಥಾನದಲ್ಲಿ ಸ್ಥಿತವಾಗಿದ್ದರೆ ಜೀವನದಲ್ಲಿ ಅಭಿವೃದ್ಧಿಯನ್ನು, ಸುಖ-ಸಂಪತ್ತನ್ನು (Wealth) ಹೊಂದುವಂತಾಗುತ್ತದೆ. ಅದೇ ಅಶುಭ ಗ್ರಹಗಳು ಅಥವಾ ಗ್ರಹಗಳು ಅಶುಭ ಸ್ಥಾನದಲ್ಲಿದ್ದಾಗ ಅಶುಭ ಪ್ರಭಾವವನ್ನು ಬೀರುತ್ತವೆ. ಒಮ್ಮೊಮ್ಮೆ ಇದು ಅಪರಾಧ (Crime) ಕೃತ್ಯಗಳಲ್ಲಿ ತೊಡುಗುವಂತೆ ಮಾಡುತ್ತದೆ. ದುರ್ಜನರ ಸಹವಾಸ ಮತ್ತು ದುಶ್ಚಟಗಳಿಗೆ (Bad habits) ದಾಸರಾಗುವಂತೆಯೂ ಮಾಡುತ್ತದೆ. 

ಮಂಗಳ (Mars), ರಾಹು (Rahu), ಶನಿ (Saturn) ಗ್ರಹಗಳನ್ನು ಪಾಪ ಗ್ರಹಗಳು ಎಂದು ಕರೆಯಲಾಗುವುದು. ಇವುಗಳ ಪ್ರಭಾವ ಹೆಚ್ಚಿದರೆ ಅಪರಾಧಿ ಕೃತ್ಯಗಳಲ್ಲಿ ವ್ಯಕ್ತಿಗಳು ತೊಡಗುತ್ತಾರೆ. ಸ್ವಾರ್ಥ (Selfish) ಮನೋಭಾವ (Attitude) ಹೆಚ್ಚುವುದಲ್ಲದೆ, ತಮ್ಮ ಕೆಲಸಕ್ಕಾಗಿ ಎಂಥ ಕೃತ್ಯಕ್ಕೂ ಇಳಿದುಬಿಡುತ್ತಾರೆ. ಇತರರಿಗೆ ದೈಹಿಕ (Physical), ಮಾನಸಿಕ (Mental) ಹಿಂಸೆ (Violence) ಕೊಡುತ್ತಾರೆ. ಹಾಗಿದ್ದರೆ ಜಾತಕದ ಅನುಸಾರ ಯಾವ ಯಾವ ಮನೋಸ್ಥಿತಿಯ ಅಪರಾಧಿಗಳಾಗುತ್ತಾರೆ ಎಂಬುದರ ಬಗ್ಗೆ ತಿಳಿಯೋಣ... 

ವ್ಯಕ್ತಿಯು ಅಪರಾಧ ಕೃತ್ಯವನ್ನು ಎಸೆಗಲು ಜಾತಕದಲ್ಲಿನ ದೋಷ ಪ್ರಮುಖ ಕಾರಣವಾಗಿದ್ದು, ಜಾತಕದಲ್ಲಿ ಲಗ್ನ - ಲಗ್ನಾಧಿಪತಿ, ಸೂರ್ಯ (Sun) ಮತ್ತು ಚಂದ್ರ (Moon) ಈ ಮೂರೂ ಅಶುಭ ಗ್ರಹಗಳ ಪ್ರಭಾವಕ್ಕೆ ಒಳಗಾಗಿದ್ದರೆ ಈ ಸಾಧ್ಯತೆ ಹೆಚ್ಚಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ 8ನೇ ಮನೆಯ ಜೊತೆ ಲಗ್ನದ ಸಂಬಂಧ ಇದ್ದರೆ ವ್ಯಕ್ತಿಯು ನಕಾರಾತ್ಮಕ (Negative)  ಯೋಚನೆಗಳನ್ನು (Think) ಮಾಡುವುದಲ್ಲದೆ, ವಿದ್ವಂಸಕ ಕೃತ್ಯಗಳಲ್ಲಿ ತೊಡಗಲು ಪ್ರೇರೇಪಿಸುತ್ತದೆ. 

Mercury Transit: ಬುಧನ ರಾಶಿ ಪರಿವರ್ತನೆಯಿಂದ ಐದು ರಾಶಿಯವರಿಗೆ ಬಂಪರ್!

ವ್ಯಕ್ತಿಯ ಜಾತಕದಲ್ಲಿ ಲಗ್ನ-ಲಗ್ನಾಧಿಪತಿ, ಚಂದ್ರ ಮತ್ತು ಚಂದ್ರನ ಲಗ್ನಾಧಿಪತಿ ಪುರುಷ ರಾಶಿಯಾಗಿದ್ದರೆ ಮತ್ತು ಪುರುಷ ರಾಶಿಯ ಅಧಿಪತಿ ಸೂರ್ಯ, ಶನಿ ಅಥವಾ ಮಂಗಳ ಗ್ರಹವಾಗಿದ್ದರೆ ಇಂಥವರು ಕ್ರೂರ, ಅಪರಾಧಿ ಕೃತ್ಯಗಳನ್ನು ಎಸಗುತ್ತಾರೆ. 

ಇಲ್ಲಿ ವ್ಯಕ್ತಿಯ ಜಾತಕದಲ್ಲಿ ಲಗ್ನ-ಲಗ್ನಾಧಿಪತಿ, ಚಂದ್ರ ಲಗ್ನ ಮತ್ತು ಚಂದ್ರನ ಲಗ್ನಾಧಿಪತಿ ಎಲ್ಲವೂ ಸ್ತ್ರೀ ರಾಶಿಯಾಗಿದ್ದು, ಇದರ ಅಧಿಪತಿ ಶುಭಗ್ರಹಗಳಾಗಿದ್ದರೆ ಇಂಥವರು ಭಾವುಕ (Emotional) ಅಪರಾಧಿ (Criminal) ಅಥವಾ ಸಭ್ಯ ಅಪರಾಧಿಗಳಾಗುತ್ತಾರೆ. ಇವರು ಶಾಂತ ರೀತಿಯಲ್ಲಿಯೇ ಅಪರಾಧಗಳನ್ನು ಎಸಗುತ್ತಾರೆ. ಇಂಥವರು ತಮ್ಮ ಕೆಲಸ ಆಗಬೇಕೆಂದಾಗ ಹಿಂಸೆ, ಬಲತ್ಕಾರದಂತಹ ದಾರಿ ಹಿಡಿಯದೇ ಸಂಚು ರೂಪಿಸಿ ಶತ್ರುವನ್ನು ನಿರ್ಣಾಮಗೊಳಿಸುತ್ತಾರೆ.

ರಾಹು-ಕೇತು ಪ್ರಭಾವ (Rahu – Ketu)
ಜಾತಕದಲ್ಲಿ (Horoscope) ರಾಹುಗ್ರಹದ ಸ್ಥಿತಿ ಮತ್ತು ಗ್ರಹ ಸ್ಥಿತವಾಗಿರುವ ಸ್ಥಾನ ಬಹಳ ಮುಖ್ಯವಾಗುತ್ತದೆ. ರಾಹು ಗ್ರಹವು 3ನೇ ಅಥವಾ 10ನೇ ಮನೆಯಲ್ಲಿ ಇದ್ದರೆ ಅಂಥವರು ಅಪರಾಧವನ್ನು ಎಸಗುತ್ತಲೇ ಇರುತ್ತಾರೆ. ಜಾತಕದಲ್ಲಿ 2ನೇ ಅಥವಾ 8ನೇ ಮನೆಯಲ್ಲಿ ರಾಹುಗ್ರಹವಿದ್ದರೆ ಅಂತವರು ಇತರರ ಹಣ (Money) ಮತ್ತು ಸಂಪತ್ತನ್ನು ಕೊಳ್ಳೆಹೊಡೆಯುತ್ತಾರೆ.

Color and Personality: ನೀವಿಷ್ಟ ಪಡೋ ಬಣ್ಣಗಳು ನಿಮ್ಮ ಗುಣ ಹೇಳುತ್ತವೆ..

ಅಪರಾಧಿಯಾಗಲು ಬಿಡದ ಗ್ರಹ 
ನೆಮ್ಮದಿಯ ವಿಷಯವೆಂದರೆ ಜಾತಕದಲ್ಲಿ ಗುರು ಶುಭ ಸ್ಥಿತಿಯಲ್ಲಿದ್ದು, ಬಲವಾಗಿದ್ದರೆ ಅಂಥವರ ಮನಸ್ಸು ಸ್ಥಿರವಾಗಿರುತ್ತದೆ. ಗುರುಗ್ರಹದ ಪ್ರಭಾವವು ವ್ಯಕ್ತಿಯು ಅಪರಾಧವನ್ನೆಸಗಲು ಆಸ್ಪದ ಕೊಡದು. ಆದರೆ, ಗುರುಗ್ರಹ ನೀಚವಾಗಿ, ಪಾಪ ಗ್ರಹಗಳ ಸ್ಥಿತಿ ಬಲವಾಗಿದ್ದರೆ ಪರಿಸ್ಥಿತಿಯ ಒತ್ತಡಕ್ಕೆ (Stress) ಸಿಲುಕಿ ಅಪರಾಧಿಗಳಾಗುತ್ತಾರೆ.

ಏನು ಮಾಡಬಹುದು..
ಜಾತಕದಲ್ಲಿ ಶುಭಗ್ರಹಗಳು ನೀಚ ಸ್ಥಿತಿಯಲ್ಲಿದ್ದು, ಅಶುಭ ಗ್ರಹಗಳ ಪ್ರಭಾವ ಹೆಚ್ಚಿದ್ದರೆ ಮಕ್ಕಳಿದ್ದಾಗಲೇ (Child) ಅವರ ಮೇಲೆ ವಿಶೇಷ ನಿಗಾ ವಹಿಸಬೇಕು. ಉತ್ತಮ ವಿಷಯಗಳು (Subject), ಪುರಾಣ (Purana), ಮಹಾಪುರುಷರ ಕಥೆಗಳನ್ನು (Story) ಹೇಳಿಕೊಡಬೇಕು. ಶುಭ ಗ್ರಹಗಳ ಸ್ಥಿತಿ ಬಲಪಡಿಸಿಸಲು ಪೂಜೆ (Worship), ಧ್ಯಾನ (Meditation), ಅನುಷ್ಠಾನ, ಮಂತ್ರೋಚ್ಛಾರಣೆಗಳನ್ನು (Chanting Mantras) ಮಾಡಿಸಬೇಕು.

click me!