Raksha Bandhan: ಸಹೋದರನಿಗೆ ಕಟ್ಟಬೇಕು ರಾಖಿ, ಆದ್ರೆ ಇಂಥದ್ದಲ್ಲ

By Suvarna NewsFirst Published Jul 27, 2022, 3:00 PM IST
Highlights

ಮಾರ್ಕೆಟ್ ನಲ್ಲಿ ಚಂದದ ರಾಖಿಗಳು ಲಗ್ಗೆಯಿಟ್ಟಿವೆ. ಗಂಟೆಗಟ್ಟಲೆ ನಿಂತು ಸುಂದರ ರಾಖಿಯನ್ನು ಸಹೋದರನಿಗೆ ತರ್ತೇವೆ. ಆದ್ರೆ ಆ ರಾಖಿ ಅಶುಭ ಸಂಕೇತವಾಗಿರುತ್ತದೆ. ಸಹೋದರ ಬಾಳಿನಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ರಾಖಿ ಖರೀದಿ ಮೊದಲು ಕೆಲ ಸಂಗತಿ ತಿಳಿದಿರಬೇಕು.
 

ಸಹೋದರ – ಸಹೋದರಿಯ ಪ್ರೀತಿಯ ಪ್ರತೀಕ ರಕ್ಷಾ ಬಂಧನ. ಇಲ್ಲಿ ರಾಖಿ ಬೆಲೆಗಿಂತ, ಇಬ್ಬರ ಮಧ್ಯೆ ಇರುವ ಪ್ರೀತಿಗೆ ಹೆಚ್ಚು ಮಹತ್ವ. ಸಹೋದರನ ಮಣಿಕಟ್ಟಿಗೆ ಸಹೋದರಿ ರಾಖಿ ಕಟ್ಟಿ, ಆತನ ದೀರ್ಘಾಯಸ್ಸಿಗೆ ಪ್ರಾರ್ಥನೆ ಮಾಡ್ತಾಳೆ. ಈ ಬಾರಿ ಆಗಸ್ಟ್ 12ರಂದು ರಕ್ಷಾ ಬಂಧನವನ್ನು ಆಚರಿಸಲಾಗ್ತಿದೆ. ಈಗಾಗಲೇ ಮಾರುಕಟ್ಟೆಗೆ ವೆರೈಟಿ ರಾಖಿಗಳು ಲಗ್ಗೆ ಇಟ್ಟಿವೆ. ಆಧುನಿಕ ಯುಗದಲ್ಲಿ ನಾನಾ ರೀತಿಯ ರಾಖಿಗಳಿಗೆ ಬೇಡಿಗೆ ಇದೆ. ಸಹೋದರಿಯರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ರಾಖಿಗಳನ್ನು ಖರೀದಿ ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ರಕ್ಷಾ ಬಂಧನವನ್ನು ದೊಡ್ಡ ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದರೆ ಧರ್ಮಗ್ರಂಥಗಳಲ್ಲಿ  ರಾಖಿಯ ಬಗ್ಗೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಹೇಳಲಾಗಿದೆ. ರಾಖಿ ಕಟ್ಟುವ ಮುನ್ನ ಏನೆಲ್ಲ ಕಾಳಜಿವಹಿಸಬೇಕು ಎನ್ನುವುದನ್ನು ನಾವಿಂದು ನಿಮಗೆ ಹೇಳ್ತೇವೆ. 

ರಾಖಿ (Rakhi )ಖರೀದಿಸುವಾಗ ಈ ತಪ್ಪು ಮಾಡ್ಬೇಡಿ: ರಾಖಿ ಪವಿತ್ರ ಬಂಧನದ ಸಂಕೇತ. ಹಾಗಾಗಿ ರಾಖಿ ಖರೀದಿ (Purchase) ಮಾಡುವ ವೇಳೆ ಅದರ ಮೇಲೆ ಯಾವ ಚಿಹ್ನೆಯಿದೆ ಎಂಬುದನ್ನು ಗಮನಿಸಿ. 

Latest Videos

ರಾಖಿ ಮೇಲೆ ಈ ಫೋಟೋ (Photo) ಇರಬಾರದು : ದೇವರ (God) ಚಿತ್ರವಿರುವ ರಾಖಿ ಕಟ್ಟಬಾರದು. ದೇವರ ಚಿತ್ರವಿರುವ ರಾಖಿಯನ್ನು ಕಟ್ಟಿದರೆ ಅದು ದೇವರಿಗೆ ಅವಮಾನ ಮಾಡಿದಂತೆ. 

NAG PANCHAMI 2022: ನಾಗರ ಹಾವಿನ ಕುರಿತ ಮೂಢನಂಬಿಕೆಗಳು ಒಂದೆರಡಲ್ಲ..

ಹಾಳಾದ, ಹರಿದ ರಾಖಿ : ರಾಖಿ ಖರೀದಿಸುವಾಗ ನೀವು ಈ ವಿಷ್ಯವನ್ನೂ ಗಮನದಲ್ಲಿ ಇಡಬೇಕು. ರಾಖಿ ಹರಿದಿರಬಾರದು. ಅಥವಾ ಅದಕ್ಕೆ ಹಾಕಿದ ಯಾವುದೇ ವಸ್ತು ಹಾಳಾಗಿರಬಾರದು. ಮುರಿದಿರಬಾರದು. ಇಂಥಹ ರಾಖಿಗಳನ್ನು ಶಾಸ್ತ್ರಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. 

ಕಪ್ಪು (Black) ಬಣ್ಣದ ರಾಖಿ : ಸಹೋದರ (Brother) ನಿಗೆ ಕಟ್ಟುವ ರಾಖಿ ಕಪ್ಪು ಬಣ್ಣದ್ದಾಗಿರಬಾರದು. ಸಾಮಾನ್ಯವಾಗಿ ಕಪ್ಪು ಬಣ್ಣದ ರಾಖಿಯನ್ನು ಅಶುಭ (Inauspicious)ವೆಂದು ಪರಿಗಣಿಸಲಾಗುತ್ತದೆ. ಕಪ್ಪು ಬಣ್ಣ (Color) ವನ್ನು ನಕಾರಾತ್ಮಕತೆ ಮತ್ತು ಸಕಾರಾತ್ಮಕತೆ ಎರಡರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪೂಜಾ ಸಾಮಗ್ರಿಗಳಲ್ಲಿ ಕಪ್ಪು ಬಣ್ಣವನ್ನು ಬಳಸುವುದಿಲ್ಲ. ಹಾಗಾಯೇ ಸಹೋದರನಿಗೂ ಕಪ್ಪು ಬಣ್ಣದ ರಾಖಿಯನ್ನು ಕಟ್ಟಬಾರದು. 

ಹಳೆಯ ರಾಖಿಯನ್ನು ಎಸೆಯಬೇಡಿ :  ಸಾಮಾನ್ಯವಾಗಿ ರಾಖಿ ಕಟ್ಟಿದ ಮೂರ್ನಾಲ್ಕು ದಿನಗಳ ನಂತ್ರ ಅದನ್ನು ಕೈನಲ್ಲಿ ಇಟ್ಟುಕೊಳ್ಳುವುದಿಲ್ಲ. ಕೆಲ ರಾಖಿಗಳು ಬೇಗ ಹಾಳಾಗುತ್ತವೆ. ಕೈನಲ್ಲಿ ಕಟ್ಟಿಕೊಳ್ಳುವುದು ಸಮಸ್ಯೆ ಎನ್ನುವ ಕಾರಣಕ್ಕೆ ಅನೇಕರು ರಾಖಿಯನ್ನು ಬಿಚ್ಚುತ್ತಾರೆ. ಬಿಚ್ಚಿದ ರಾಖಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಅದನ್ನು ಎಸೆಯುತ್ತೇವೆ. ಆದ್ರೆ ರಾಖಿ ಎಸೆಯುವುದು ಗ್ರಂಥಗಳ ಪ್ರಕಾರ ಶುಭವಲ್ಲ. ರಾಖಿಯನ್ನು ಎಂದಿಗೂ ಕಸಕ್ಕೆ ಹಾಕಬಾರದು. ಒಂದು ವೇಳೆ ಅನಿವಾರ್ಯವಾದ್ರೆ ರಾಖಿಯನ್ನು ನದಿ (river) ಅಥವಾ ಹರಿಯುವ ನೀರಿನಲ್ಲಿ ಎಸೆಯಬಹುದು.

Vastu for Kitchen: ಉಪ್ಪು ತೆರೆದಿಟ್ಟರೆ ಹೆಚ್ಚುತ್ತೆ ಸಾಲ.. ಅಡುಗೆಮನೆಯಲ್ಲಿ ಈ ಮಿಸ್ಟೇಕ್ಸ್ ಮಾಡ್ಬೇಡಿ

ಸಹೋದರನನ್ನು ನೆಲಕ್ಕೆ ಕುಳಿಸಬೇಡಿ : ರಾಖಿ ಕಟ್ಟುವ ಮುನ್ನ ಒಂದೊಂದು ಕಡೆ ಒಂದೊಂದು ಪದ್ಧತಿ ಪಾಲನೆ ಮಾಡಲಾಗುತ್ತದೆ. ಸಹೋದರನಿಗೆ ಆರತಿ ಬೆಳಗಿ, ಸಿಹಿ ತಿನ್ನಿಸಿ ನಂತ್ರ ರಾಖಿ ಕಟ್ಟುವ ಪದ್ಧತಿಯಿದೆ. ಈ ಸಂದರ್ಭದಲ್ಲಿ ಸಹೋದರನನ್ನು ನೆಲಕ್ಕೆ ಕುಳಿಸಿ ರಾಖಿ ಕಟ್ಟಬಾರದು. ಸಹೋದರನನ್ನು ಎತ್ತರದ ಸ್ಥಳದಲ್ಲಿ ಕೂರಿಸಬೇಕು. ಅಲ್ಲದೆ ಅವನ ತಲೆಯ ಮೇಲೆ ಕರವಸ್ತ್ರ ಅಥವಾ ಬಟ್ಟೆ ಹಾಕಬೇಕು  ಎಂಬುದನ್ನು ನೆನಪಿನಲ್ಲಿಡಿ. 

ದೊಡ್ಡ ಗಾತ್ರದ ರಾಖಿ : ರಾಖಿಯನ್ನು ಖರೀದಿಸಿದಾಗ  ತುಂಬಾ ದೊಡ್ಡ ಗಾತ್ರದ ರಾಖಿ ಖರೀದಿಸುವುದನ್ನು ತಪ್ಪಿಸಿ. ಗಾತ್ರದಲ್ಲಿ ದೊಡ್ಡದಾಗಿದ್ದರೆ, ಅದು ಸುಲಭವಾಗಿ ಹಾಳಾಗುತ್ತದೆ. ಇದರಿಂದಾಗಿ ಸಹೋದರ ತನ್ನ ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದೊಡ್ಡ ಗಾತ್ರದ ರಾಖಿಯು ಸಹೋದರ-ಸಹೋದರಿ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
 

click me!