ಸದಾ ಮನಸ್ಸಿನಲ್ಲೊಂದು ತಳಮಳ, ಏನೋ ಕಿರಿಕಿರಿ, ದುರದೃಷ್ಟ ಬೆನ್ನು ಹತ್ತಿದಂಥಾ ಫೀಲಿಂಗ್.. ಹೀಗೆಲ್ಲ ನಿಮಗೆ ಆಗುತ್ತಿದ್ದರೆ ಶಿವನಿಗೆ ಸಂಬಂಧಿಸಿದಂತ ಈ ವಸ್ತುವನ್ನು ಮನೆಯಲ್ಲಿ ತಂದಿರಿಸಿ.. ಮನಸ್ಸು ಶಾಂತವಾಗಿಯೂ, ಮನೆ ಸುಭಿಕ್ಷವಾಗಿಯೂ ಇರುತ್ತದೆ.
ಸದಾ ಒಂದಿಲ್ಲೊಂದು ಆರೋಗ್ಯ ಸಮಸ್ಯೆ, ಮನಸ್ಸಿನಲ್ಲೊಂದು ತಳಮಳ, ಏನೋ ಕಿರಿಕಿರಿ, ದುರದೃಷ್ಟ ಬೆನ್ನು ಹತ್ತಿದಂಥಾ ಫೀಲಿಂಗ್ ಕಾಡುತ್ತಿದ್ರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬಿದೆ ಎಂದರ್ಥ. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ಶ್ರಾವಣದಲ್ಲಿ ಶಿವ ಡಮರುವನ್ನು ಮನೆಗೆ ತನ್ನಿ.
ಹೌದು, ತ್ರಿಕಾಲದರ್ಶಿ ಶಿವನನ್ನು ಎಲ್ಲ ದೇವರುಗಳಲ್ಲಿ ಸರ್ವಶಕ್ತ ಮತ್ತು ಸರಳ-ಕರುಣಾಮಯ ಸ್ವಭಾವದ ಅಧಿಪತಿ ಎಂದು ಪರಿಗಣಿಸಲಾಗಿದೆ. ಶಿವ ಪುರಾಣದ ಪ್ರಕಾರ, ಶಿವನು ತನ್ನ ದೇಹದ ಮೇಲೆ ಧರಿಸಿರುವ ವಸ್ತುಗಳೆಂದರೆ ಕುತ್ತಿಗೆಯಲ್ಲಿ ಹಾವು, ತಲೆಯ ಮೇಲೆ ಚಂದ್ರ, ಕೂದಲಿನಲ್ಲಿ ಗಂಗೆ, ತ್ರಿಶೂಲ ಮತ್ತು ಕೈಯಲ್ಲಿ ಡಮರು. ಆತ ಸದಾ ಕಾಣುವಂತೆ ಕೈಲಿ ಹಿಡವ ತ್ರಿಶೂಲ ಮತ್ತು ಡಮರುಗಳ ಮಹತ್ವ ಮತ್ತು ಪ್ರಯೋಜನಗಳನ್ನು ತಿಳಿಯೋಣ.
ಬ್ರಹ್ಮಾಂಡದ ಸೃಷ್ಟಿಯ ಸಮಯದಲ್ಲಿ ಕಲಿಕೆ ಮತ್ತು ಸಂಗೀತದ ದೇವತೆಯಾದ ಸರಸ್ವತಿ ಕಾಣಿಸಿಕೊಂಡಾಗ, ಆಕೆಯ ಭಾಷಣದಿಂದ ಉತ್ಪತ್ತಿಯಾಗುವ ಧ್ವನಿಯು ಮಾಧುರ್ಯ ಮತ್ತು ಸಂಗೀತದಿಂದ ದೂರವಿತ್ತು. ಶಾಸ್ತ್ರಗಳ ಪ್ರಕಾರ, ಶಿವನು ತನ್ನ ಡಮರು ಮತ್ತು ತಾಂಡವ ನೃತ್ಯದಿಂದ 14 ಬಾರಿ ಸಂಗೀತವನ್ನು ರಚಿಸಿದನು ಮತ್ತು ಅಂದಿನಿಂದ ಅವನನ್ನು ಸಂಗೀತದ ಮೂಲ ಮಾಂತ್ರಿಕ ಎಂದು ಪರಿಗಣಿಸಲಾಗಿದೆ.
ಚಾಣಕ್ಯ ನೀತಿ: ಈ ನಾಲ್ಕು ತಪ್ಪುಗಳಿಂದ ದೂರವಿದ್ರೆ ಯಶಸ್ಸು ನಿಮ್ಮದೇ..
ಈ ಬ್ರಹ್ಮಾಂಡವು ಶುದ್ಧ ಧ್ವನಿ ಮತ್ತು ಬೆಳಕಿನಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ದೇವಾಲಯದ ಗಂಟೆ, ಶಂಖ, ಕೊಳಲು, ವೀಣೆ, ಮಂಜೀರ, ಸಿತಾರ್, ಢೋಲ್, ನಾಗರ, ಮೃದಂಗ, ತಬಲಾ, ಡಮರು ಮುಂತಾದ ಕೆಲವು ಶಬ್ದಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಶಬ್ದಗಳಲ್ಲಿಯೂ ಹಲವು ರಹಸ್ಯಗಳಿವೆ. ವಿಶೇಷವಾಗಿ ಡಮರುವನ್ನು ನೋಡುವುದಾದರೆ ಅದು ಶಿವನಿಗೆ ಪ್ರಿಯ. ಅದನ್ನು ಯಾವಾಗಲೂ ತನ್ನೊಂದಿಗೆ ಒಯ್ಯುತ್ತಾನೆ. ಡಮರು ಋಷಿಗಳು ಮತ್ತು ಸಂತರ ಬಳಿಯೂ ಕಂಡುಬರುತ್ತದೆ. ಇದನ್ನು ಹಿಂದೂ ಧರ್ಮ ಮಾತ್ರವಲ್ಲದೆ ಟಿಬೆಟಿಯನ್ ಮತ್ತು ಬೌದ್ಧ ಧರ್ಮದಲ್ಲಿ ಕೂಡಾ ಬಹಳ ಪೂಜ್ಯವೆಂದು ಪರಿಗಣಿಸಲಾಗಿದೆ.
ಮನೆಯಲ್ಲಿ ಡಮರು ಇಡುವುದರಿಂದ ಆಗುವ ಲಾಭಗಳು
ತ್ರಿಶೂಲ
ತ್ರಿಶೂಲವನ್ನು ರಾಜ, ತಮ ಮತ್ತು ಸತ್ ಗುಣಗಳ ಸಂಕೇತವೆಂದು ಪರಿಗಣಿಸಲಾಗಿದೆ. ಮಹಾಕಾಲ್ ಶಿವನ ತ್ರಿಶೂಲದ ಮುಂದೆ ವಿಶ್ವದಲ್ಲಿ ಯಾವುದೇ ಶಕ್ತಿಯ ಅಸ್ತಿತ್ವವೂ ಉಳಿಯುವುದಿಲ್ಲ. ಶಿವನಿಗೆ ಪ್ರಿಯವಾದ ತ್ರಿಶೂಲವನ್ನು ಮನೆಯಲ್ಲಿ ಪೂಜಾಕರ್ಮಗಳೊಂದಿಗೆ ಇಡುವುದರಿಂದ ಎಲ್ಲ ರೀತಿಯ ದುಷ್ಟ ಶಕ್ತಿಗಳು ನಾಶವಾಗುತ್ತವೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.