Astrology Tips : ಸಂಪತ್ತು ಮನೆಗೆ ಬರಬೇಕೆಂದ್ರೆ ಕಾರ್ತಿಕ ಹುಣ್ಣಿಮೆ ದಿನ ಈ ಕೆಲಸ ಮಾಡಿ

By Suvarna NewsFirst Published Oct 30, 2022, 10:49 AM IST
Highlights

ಲಕ್ಷ್ಮಿ ಸದಾ ಮನೆಯಲ್ಲಿ ನೆಲೆಸಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಲಕ್ಷ್ಮಿ ಸುಲಭವಾಗಿ ಒಲಿಯೋದಿಲ್ಲ. ಅದಕ್ಕೊಂದಿಷ್ಟು ಪ್ರಯತ್ನ ನಡೆಸಬೇಕು. ತಾಯಿ ನಿಮ್ಮ ಮೇಲೆ ಕೃಪೆ ತೋರಬೇಕೆಂದ್ರೆ ಏನು ಮಾಡ್ಬೇಕು ಗೊತ್ತಾ?
 

ಕಾರ್ತಿಕ ಮಾಸವಿಡಿ ದೇವಾನುದೇವತೆಗಳನ್ನು ಪ್ರಸನ್ನಗೊಳಿಸಲು ಭಕ್ತರು ಪ್ರಯತ್ನ ನಡೆಸ್ತಾರೆ. ಅದ್ರಲ್ಲೂ ಕಾರ್ತಿಕ ಮಾಸದ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಕಾರ್ತಿಕ ಪೂರ್ಣಿಮೆಯಂದು ಭಗವಂತ ವಿಷ್ಣುವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.  ತಾಯಿ ಲಕ್ಷ್ಮಿ ಭಗವಂತ ವಿಷ್ಣುವಿನ ಪತ್ನಿ. ಲಕ್ಷ್ಮಿಯನ್ನು ಒಲಿಸಿಕೊಳ್ಳಬೇಕೆಂದ್ರೆ ಜನರು ತುಳಸಿ ಪೂಜೆ ಕೂಡ ಮಾಡಬೇಕು. ನಾವಿಂದು ಕಾರ್ತಿಕ ಮಾಸದ ಹುಣ್ಣಿಮೆ ದಿನ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಏನೆಲ್ಲ ಮಾಡಬೇಕು ಎಂಬುದನ್ನು ಹೇಳ್ತೇವೆ.

ಕಾರ್ತಿಕ (Kartik) ಪೂರ್ಣಿಮೆ (Purnima) ದಿನ ಮಾಡಿ ಈ ಕೆಲಸ :

Latest Videos

ಗಂಗೆಯ ತಟದಲ್ಲಿ ದೀಪದಾನ : ಕಾರ್ತಿಕ ಪೂರ್ಣಿಮೆಯ ದಿನ ಸಂಜೆ ಗಂಗೆ (Ganga)ಯ ತಟದಲ್ಲಿ ದೀಪ ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ನೀವು ಯಾವುದೇ ನದಿ ದೀಪ (Lamp) ದಾನ ಮಾಡಬಹುದು. ಹೀಗೆ ಮಾಡಿದ್ರೆ ಆರ್ಥಿಕ ಸಂಕಷ್ಟದಿಂದ ಮುಕ್ತಿ ಸಿಗುತ್ತದೆ. ಎಲ್ಲ ತೊಂದರೆಯಿಂದ ಪರಿಹಾರ ಸಿಗುತ್ತದೆ.

ತುಳಸಿ (Tulsi) ಪೂಜೆ : ಕಾರ್ತಿಕ ಮಾಸದ ಪ್ರತಿ ದಿನ ತುಳಸಿಗೆ ಪೂಜೆ ಮಾಡಬೇಕು. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ದೀಪವನ್ನು ಬೆಳಗಬೇಕು. ಇದು ಸಾಧ್ಯವಾಗಿಲ್ಲ ಎನ್ನುವವರು ಕಾರ್ತಿಕ ಮಾಸದ ಹುಣ್ಣಿಮೆ ದಿನ ತುಳಸಿ ಮುಂದೆ ದೀಪ ಬೆಳಗಬೇಕು. ತುಳಸಿ ಪೂಜೆ ಮಾಡಬೇಕು.

ಮನೆ ತುಂಬ ದೀಪ ಬೆಳಗಿ, ಮಾವಿನ ತೋರಣ ಹಾಕಿ : ಕಾರ್ತಿಕ ಮಾಸದ ಹುಣ್ಣಿಮೆಯನ್ನು ನೀವು ದೀಪಾವಳಿಯಂತೆ ಆಚರಣೆ ಮಾಡಬೇಕು. ಮನೆಯ ಮುಖ್ಯ ದ್ವಾರಕ್ಕೆ ನೀವು ಮಾವಿನ ಎಲೆಗಳಿಂದ ಮಾಡಿದ ತೋರಣವನ್ನು ಹಾಕಬೇಕು. ನಂತ್ರ ಮನೆ ತುಂಬ ದೀಪ ಬೆಳಗಬೇಕು. ಇದ್ರಿಂದ ಹಣದ ಸಮಸ್ಯೆ ಕಡಿಮೆಯಾಗುತ್ತದೆ. ಸುಖ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ.

ಈ ದಿನ ಮಾಡಿ ದಾನ : ಕಾರ್ತಿಕ ಪೂರ್ಣಿಮೆ ದಿನ ದೀಪದಾನ ಮಾತ್ರವಲ್ಲ ಬೇರೆ ದಾನಕ್ಕೂ ಮಹತ್ವವಿದೆ. ನೀವು ಅನ್ನ ದಾನ, ಬಟ್ಟೆ, ಹಣ ಸೇರಿದಂತೆ ನಿಮ್ಮ ಕೈಲಾದ ಸಹಾಯ ಮಾಡಬಹುದು. ಇದ್ರಿಂದ ಮನೆಯ ಎಲ್ಲ ಸಮಸ್ಯೆ ಬಗೆಹರಿಯುತ್ತದೆ.

ಕಾರ್ತಿಕ ಪೂರ್ಣಿಮೆ ದಿನ ಮಾಡಿ ವೃತ : ಈ ದಿನ ವೃತ ಮಾಡುವುದಕ್ಕೂ ಹೆಚ್ಚಿನ ಮಹತ್ವವಿದೆ. ಕಟ್ಟುನಿಟ್ಟಾಗಿ ವೃತ ಮಾಡುವ ಜೊತೆಗೆ ನೀವು ಅಂದಿನಿಂದ ಪ್ರತಿ ಹುಣ್ಣಿಮೆ ದಿನ ವೃತ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ. 

Foreign Festival : ಹ್ಯಾಲೋವೀನ್ ಹಬ್ಬದ ಬಗ್ಗೆ ಇಲ್ಲಿದೆ ಕುತೂಹಲಕಾರಿ ವಿಷ್ಯ

ಲಕ್ಷ್ಮಿ (Lakshmi) ಪೂಜೆ : ಕಾರ್ತಿಕ ಮಾಸದ ಹುಣ್ಣಿಮೆ ದಿನ ಚಂದ್ರ ಕಾಣ್ತಿದ್ದಂತೆ ಖೀರ್ ಜೊತೆ ಗಂಗಾಜಲವನ್ನು ತಾಯಿ ಲಕ್ಷ್ಮಿಗೆ ನೈವೇದ್ಯ ಮಾಡಿ, ಪೂಜೆ ಮಾಡಿದ್ರೆ ತಾಯಿ ಪ್ರಸನ್ನಳಾಗ್ತಾಳೆ. 

ಶಿವನ ಆರಾಧನೆ ಮಾಡಿ : ಶಿವ ಭಕ್ತರು ಕಾರ್ತಿಕ ಪೂರ್ಣಿಮೆ ದಿನ ಶಿವಲಿಂಗಕ್ಕೆ ಹಾಲು, ಗಂಗಾಜಲ ಅಥವಾ ಜೇನು ತುಪ್ಪವನ್ನು ಅಭಿಷೇಕ ಮಾಡಬೇಕು. ಇದ್ರಿಂದ ಶಿವ ಪ್ರಸನ್ನನಾಗ್ತಾನೆ. ನೀವು ಕೇಳಿದ ವರವನ್ನು ನೀಡ್ತಾನೆ.

ಅಶ್ವತ್ಥ ಪೂಜೆ : ಕಾರ್ತಿಕ ಮಾಸದ ಹುಣ್ಣಿಮೆ ದಿನ ನೀವು ನೀರಿಗೆ ಹಾಲು ಬೆರೆಸಿ ಅದನ್ನು ಅಶ್ವತ್ಥ ಮರಕ್ಕೆ ಅರ್ಪಿಸಬೇಕು. ಹೀಗೆ ಮಾಡಿದ್ರೆ ತಾಯಿ ಲಕ್ಷ್ಮಿ ಖುಷಿಯಾಗ್ತಾಳೆ. ಸುಖ, ಸಂಪತ್ತಿನ ಆಶೀರ್ವಾದ ಮಾಡ್ತಾಳೆ.

Vastu Tips: ರೋಗ ಬಿಡ್ತಿಲ್ಲವೆಂದ್ರೆ ಅಡುಗೆ ಮನೆ ವಾಸ್ತು ಚೆಕ್ ಮಾಡಿ

ವಿಷ್ಣು ಜೊತೆ ಲಕ್ಷ್ಮಿ ಪೂಜೆ : ಈ ದಿನ ನೀವು ವಿಷ್ಣುವಿನ ಜೊತೆ ಲಕ್ಷ್ಮಿ ಮೂರ್ತಿ ಇಟ್ಟು ಪೂಜೆ ಮಾಡಬೇಕು. ಬೆಳಿಗ್ಗೆ ಬೇಗ ಎದ್ದು, ನಿತ್ಯ ಕರ್ಮ ಮುಗಿಸಿ ನಂತ್ರ ಮನೆಯನ್ನು ಸ್ವಚ್ಛಗೊಳಿಸಬೇಕು. ಸ್ನಾನ ಮಾಡಿ, ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆ ಮಾಡಬೇಕು. ಆರತಿ ಮಾಡಿ, ನೈವೇದ್ಯ ಅರ್ಪಿಸಿ. 
 

click me!