Lunar Eclipse : ಯಾವಾಗ ಸಂಭವಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ ?

By Suvarna NewsFirst Published Oct 30, 2022, 10:47 AM IST
Highlights

ಈ ಬಾರಿ ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 8ರಂದು ಸಂಭವಿಸಲಿದೆ. ಭಾರತದಲ್ಲೂ ಚಂದ್ರಗ್ರಹಣ ಗೋಚರವಾಗಲಿದ್ದು, ಯಾವಾಗ ಸೂತಕ ಕಾಲ ಹಾಗೂ ಯಾವಾಗ ಗ್ರಹಣ ಮುಗಿಯಲಿದೆ ಎನ್ನುವ ಮಾಹಿತಿ ಇಲ್ಲಿದೆ. 
 

ಜ್ಯೋತಿಷ್ಯದಲ್ಲಿ ಚಂದ್ರಗ್ರಹಣವನ್ನು ಬಹಳ ಮುಖ್ಯವಾದ ಖಗೋಳ ಘಟನೆ ಎಂದು ಪರಿಗಣಿಸಲಾಗುತ್ತದೆ. ವರ್ಷದ ಕೊನೆಯ ಸೂರ್ಯಗ್ರಹಣದ ನಂತರ ಈಗ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಅಂದರೆ ನವೆಂಬರ್ 8 ರಂದು ಚಂದ್ರಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಲಿದೆ. ಈ ಚಂದ್ರಗ್ರಹಣ ಸಂಪೂರ್ಣ ಗ್ರಹಣವಾಗಿರುತ್ತದೆ. ದೀರ್ಘ ಸಮಯದವರೆಗೆ  ಚಂದ್ರನು ಸಂಪೂರ್ಣವಾಗಿ ಭೂಮಿಗೆ ನೆರಳಾಗುತ್ತಾನೆ. ಚಂದ್ರಗ್ರಹಣದ ಸಮಯ ಯಾವುದು ಹಾಗೂ ಸೂತಕದ ಅವಧಿ ಎಷ್ಟು ಎಂಬುದನ್ನು ನಾವಿಂದು ಹೇಳ್ತೇವೆ. 

ಚಂದ್ರ ಗ್ರಹಣ ಎಂದರೇನು ? : ಸೂರ್ಯ, ಚಂದ್ರ ಮತ್ತು ಭೂಮಿ ನೇರ ರೇಖೆಯಲ್ಲಿದ್ದಾಗ ಮತ್ತು ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ, ಚಂದ್ರಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಕೆಲವೊಮ್ಮೆ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದ್ರಿಂದ ಕೆಂಪು ಬಣ್ಣದಲ್ಲಿ ಆಕರ್ಷಕವಾಗಿ ಕಾಣುತ್ತದೆ. 

Latest Videos

ಚಂದ್ರಗ್ರಹಣದ ಸೂತಕದ ಸಮಯ : ಚಂದ್ರಗ್ರಹಣ ಶುರುವಾಗುವ ಮುನ್ನ 9 ಗಂಟೆಗಳ ಮೊದಲು ಈ ಬಾರಿ ಸೂತಕ ಶುರುವಾಗಲಿದೆ. ಭಾರತದಲ್ಲಿಯೂ ಚಂದ್ರಗ್ರಹಣ ಗೋಚರಿಸುವುದ್ರಿಂದ ಭಾರತದಲ್ಲೂ ಸೂತಕದ ಅವಧಿ ಅನ್ವಯವಾಗುತ್ತದೆ. ಸೂತಕದ ಕಾಲದಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ.  

ಚಂದ್ರ ಗ್ರಹಣ ಸಮಯ : ಮಧ್ಯಾಹ್ನ 1 ಗಂಟೆ 32 ನಿಮಿಷಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ರಾತ್ರಿ7.27ಕ್ಕೆ ಚಂದ್ರಗ್ರಹಣ ಮುಗಿಯಲಿದೆ. ಗ್ರಹಣ ಆರಂಭವಾದ ನಂತ್ರ ಭಾರತದಲ್ಲಿ ಚಂದ್ರೋದಯವಾಗುತ್ತದೆ.

ಎಲ್ಲೆಲ್ಲಿ ಕಾಣಿಸಲಿದೆ ಚಂದ್ರಗ್ರಹಣ : 2022 ರ ಎರಡನೇಯ ಮತ್ತು ಕೊನೆಯ ಚಂದ್ರಗ್ರಹಣ ಭಾರತ, ದಕ್ಷಿಣ ಮತ್ತು ಪೂರ್ವ ಯುರೋಪ್, ಆಸ್ಟ್ರೇಲಿಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಪೆಸಿಫಿಕ್ ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರ ಸೇರಿದಂತೆ ಏಷ್ಯಾದ ಅನೇಕ ದ್ವೀಪಗಳಲ್ಲಿ ಗೋಚರಿಸಲಿದೆ. 

ಭಾರತದಲ್ಲಿ ಎಲ್ಲಿ ಕಾಣಿಸಿಕೊಳ್ಳಲಿದೆ ಚಂದ್ರ ಗ್ರಹಣ : ಭಾರತದ ಕೋಲ್ಕತ್ತಾ, ಪಾಟ್ನಾ, ರಾಂಚಿ, ಗುವಾಹಟಿ ಮುಂತಾದ ಸ್ಥಳಗಳಲ್ಲಿ ಚಂದ್ರಗ್ರಹಣ ಕಾಣಿಸಲಿದೆ. 

ಚಂದ್ರಗ್ರಹಣದಿಂದ ಯಾವ ರಾಶಿಗೆ ಲಾಭ : ಚಂದ್ರಗ್ರಹಣವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ವವೆಂದು ಪರಿಗಣಿಸಲಾಗಿದೆ. ಗ್ರಹಣದ ಪ್ರಭಾವ ಪ್ರತಿಯೊಂದು ರಾಶಿ ಮೇಲೆ ಪ್ರಭಾವ ಬೀರುತ್ತದೆ. ಈ ಬಾರಿಯ ಚಂದ್ರಗ್ರಹಣದಿಂದಾಗಿ ಮಿಥುನ ರಾಶಿ, ಮಕರ ರಾಶಿ ಹಾಗೂ ಕುಂಭ ರಾಶಿಯವರಿಗೆ ಲಾಭವಾಗಲಿದೆ.

ವಿಷ್ಣು ತುಳಸಿಯನ್ನು ಮದುವೆಯಾಗಿದ್ದೇಕೆ? ತುಳಸಿ ವಿವಾಹದ ಕತೆ ಇಲ್ಲಿದೆ..

ಚಂದ್ರಗ್ರಹಣದಿಂದ ಈ ರಾಶಿಗೆ ನಷ್ಟ : ಇನ್ನು ಚಂದ್ರಗ್ರಹಣದಿಂದ ಕೆಲ ರಾಶಿಯವರ ಮೇಲೆ ಅಶುಭ ಪರಿಣಾಮ ಬೀರಲಿದೆ. ಮೇಷ ರಾಶಿ, ವೃಷಭ ರಾಶಿ, ಕರ್ಕ, ಸಿಂಹ, ಕನ್ಯಾ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ ಹಾಗೂ ಮೀನ ರಾಶಿಯವರಿಗೆ ಅಶುಭ ಫಲ ಪ್ರಾಪ್ತಿಯಾಗಲಿದೆ.

ಮನಸ್ಸಿಗೆ ಮುದ ನೀಡುವ 58 ಅಡಿಯ ಗಂಗಾಧರೇಶ್ವರ

ಚಂದ್ರಗ್ರಹಣದ ಸಮಯದಲ್ಲಿ ಯಾವೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು ? : ಚಂದ್ರಗ್ರಹಣಕ್ಕಿಂತ ಮೊದಲೇ ಸೂತಕ ಕಾಲ ಶುರುವಾಗುತ್ತದೆ. ಈ ಸಂದರ್ಭದಲ್ಲಿ ಯಾರೂ ನಿದ್ರೆ ಮಾಡಬಾರದು. ಯಾವುದೇ ಆಹಾರ ಸೇವನೆ ಮಾಡಬಾರದು. ಅನಾರೋಗ್ಯ ವ್ಯಕ್ತಿಗಳು, ವೃದ್ಧರು ಮತ್ತು ಗರ್ಭಿಣಿಯರು ಆಹಾರ ಸೇವನೆ ಮಾಡಬಹುದು. ಮನೆ ಹಾಗೂ ದೇವಸ್ಥಾನದಲ್ಲಿ ಈ ಸಮಯದಲ್ಲಿ ಪೂಜೆ ನಡೆಯುವುದಿಲ್ಲ. ಆಹಾರ ಹಾಳಾಗಬಾರದು ಅಂದ್ರೆ ಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಆಹಾರಕ್ಕೆ ಹಾಕಿಡಬೇಕು. ಗ್ರಹಣ ಮುಗಿದ ಮೇಲೆ ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು. ಚಂದ್ರಗ್ರಹಣದ ಸಂದರ್ಭದಲ್ಲಿ ದಾನ ಮತ್ತು ಸ್ನಾನಕ್ಕೆ ಮಹತ್ವವಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಚಂದ್ರಗ್ರಹಣದ ಸಮಯದಲ್ಲಿ ಸಾದ್ಯವಾದಷ್ಟು ಮನೆಯಲ್ಲಿಡಿ. ಯಾವುದೇ ಕಾರಣಕ್ಕೂ ಪ್ರಯಾಣ ಬೆಳೆಸಬೇಡಿ.
 

click me!