ಸಂಬಂಧವೊಂದು ಉಳಿಯಬೇಕೆಂದರೆ ಇಬ್ಬರ ಕಡೆಯಿಂದಲೂ ಬದ್ಧತೆ ಇರಬೇಕು. ಯಾರೊಬ್ಬರ ಬದ್ಧತೆಯ ಭಯಕ್ಕೆ ಎಷ್ಟೋ ಪ್ರೇಮಸಂಬಂಧಗಳು ಬಾಡಿ ಹೋಗುತ್ತವೆ. ಹೀಗೆ ಕಮಿಟ್‌ಮೆಂಟ್ ಕೊಡಲು ಹೆದರುವ ರಾಶಿಚಕ್ರಗಳು ಯಾವೆಲ್ಲ ನೋಡೋಣ..
ಪ್ರೀತಿಯ ಕೆಲವು ಹಂತಗಳೇ ಹಾಗಿರುತ್ತದೆ. ಪ್ರೀತಿಸುವಾಗ ಎಲ್ಲವೂ ಚೆನ್ನಾಗಿರುತ್ತದೆ. ಅದೇ ಕಮಿಟ್ ಆಗಬೇಕು ಎಂದಾಗ ಭಯವಾಗುತ್ತದೆ. ಯಾವುದೇ ಕಮಿಟ್‌ಮೆಂಟ್ ಇಲ್ಲದ ಪ್ರೀತಿ ಬಯಸುವವರು ಕೆಲವರು. ಅವರಿಗೆ ಬದ್ಧತೆ ಕೊಡುವುದು ಇಷ್ಟವಿಲ್ಲ. ಪ್ರೀತಿಸುವ ಸಮಯ ಎಂಜಾಯ್ ಮಾಡುತ್ತಾರೆ. ಆದರೆ ಅದಕ್ಕೇ ಬದ್ಧನಾಗಿರುತ್ತೇನೆ ಎಂದವರು ಮಾತು ಕೊಡಲಾರರು. ಅಥವಾ ಕಮಿಟ್ ಆಗಬೇಕು ಎಂದಾಗ ಸಂಬಂಧದಿಂದ ಹೊರ ಬರುವ ಸ್ವಭಾವದವರು. ಅದೇನು ಅವರು ಬದ್ಧತೆಗೆ ಸಿಕ್ಕಾಪಟ್ಟೆ ಹೆದರುತ್ತಾರೆ. ಅದನ್ನು ತಮ್ಮಿಂದ ನಿರ್ವಹಿಸಲು ಸಾಧ್ಯವಿಲ್ಲ ಎಂದುಕೊಳ್ಳುತ್ತಾರೆ. ಇಂಥವರ ಜೊತೆ ಪ್ರೀತಿಯಲ್ಲಿ ಬಿದ್ದವರ ಪಾಡು ಹೇಳತೀರದು. ಬದ್ಧತೆಗೆ ಹೆದರುವ ರಾಶಿಚಕ್ರ ಚಿಹ್ನೆಗಳು ಯಾವೆಲ್ಲ ನೋಡೋಣ.
1. ತುಲಾ(Libra)
ತುಲಾ ರಾಶಿಯವರು ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ. ಅವರಿಗೆ ಸಹಜವಾದ ಮಿಡಿತವನ್ನು ಮರೆಮಾಚುವುದು ಸವಾಲೆನಿಸುತ್ತದೆ. ಅವರು ತುಂಬಾ ಭಾವನಾತ್ಮಕವಾಗಿ ಸೂಕ್ಷ್ಮವಾಗಿರುತ್ತಾರೆ ಮತ್ತು ಇತರರನ್ನು ಸಂತೋಷಪಡಿಸಲು ಸದಾ ಟ್ರೈ ಮಾಡುತ್ತಿರುತ್ತಾರೆ. ತುಲಾ ರಾಶಿಯವರು ಏಕಪತ್ನಿತ್ವದ ಪರವಾಗಿ ಒಲವು ತೋರುತ್ತಾರೆ. ಅವರು ಅಪ್ರಾಮಾಣಿಕರೂ ಅಲ್ಲ. ಹಾಗಿದ್ದೂ ಕಮಿಟ್‌ಮೆಂಟ್ ಅಂದಾಗ ಅದೇನೋ ಭಯ ಅವರೊಳಗೆ ಹುಟ್ಟಿಕೊಳ್ಳುತ್ತದೆ. ತುಲ ರಾಶಿಯವರು ದಿನನಿತ್ಯದ ಸಾಮಾಜಿಕ ಸಂವಹನದಲ್ಲಿ ತಜ್ಞರು. ನೀವವರನ್ನು ಕಣ್ಣು ಮುಚ್ಚಿ ನಂಬಬಹುದು. ಆದರೆ, ಪ್ರೀತಿಗೆ ಬಿದ್ದ ಮೇಲೆ ಕಮಿಟ್ ಆಗುವಾಗ ಕೊಂಚ ಹಿಂಜರಿಕೆ ತೋರುತ್ತಾರೆ. ಈ ಪ್ರವೃತ್ತಿಯಿಂದಾಗಿ ಹಠಾತ್ ಉಲ್ಟಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
Tarot Readings: ವೃತ್ತಿ ಸಂಬಂಧಿ ಬಯಸಿದ ಬದಲಾವಣೆ ಈ ರಾಶಿಗೆ..
2. ಕುಂಭ(Aquarius)
ಕುಂಭ ರಾಶಿಯಡಿಯಲ್ಲಿ ಜನಿಸಿದ ಜನರು ತಮ್ಮ ದೈನಂದಿನ ಜೀವನವನ್ನು ನಡೆಸುತ್ತಿರುವಾಗ ಅವರ ಮಿದುಳಿನಲ್ಲಿ ಆದರ್ಶ ಸಂಗಾತಿಯ ಬಗ್ಗೆ ಪದೇ ಪದೇ ಹಗಲುಗನಸು ಕಾಣುತ್ತಾರೆ. ಈ ಚಿತ್ರಣವು ಸಂಪೂರ್ಣವಾಗಿ ಕಾಲ್ಪನಿಕವಾಗಿರುತ್ತದೆ. ಆದರ್ಶ ವಿವಾಹವು ಹೇಗಿರಬೇಕು ಎಂಬುದರ ಕುರಿತು ತಮ್ಮ ಪರಿಕಲ್ಪನೆಗಳನ್ನು ಹೊಂದಿರುತ್ತಾರೆ. ಆದರೆ, ಪ್ರೀತಿಯಲ್ಲಿ ಬಿದ್ದ ಮೇಲೆ ಸಂಗಾತಿಯು ಅವರ ನಿರೀಕ್ಷೆಗಳಿಗೆ ತಕ್ಕಂತೆ ಬದುಕದಿದ್ದರೆ, ಅವರು ಕಮಿಟ್ ಆಗಲು ಹೆದರಿ ದೂರ ಹೋಗಬಹುದು.
ಕುಂಭ ರಾಶಿಯವರಿಗೆ ಬೌದ್ಧಿಕ ಪ್ರಚೋದನೆಯ ಅಗತ್ಯವಿದೆ. ಏಕೆಂದರೆ ಅವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಅವರು ತನ್ನ ಪ್ರೇಮಿಯಿಂದ ಅದನ್ನು ಪಡೆಯದಿದ್ದಾಗ ಜೀವನವಿಡೀ ಹೀಗೆ ಕಳೆಯಲು ಸಾಧ್ಯವಿಲ್ಲವೆಂದು ಕಮಿಟ್ ಆಗಲು ಹಿಂಜರಿಯಬಹುದು.
3. ಕನ್ಯಾ(Virgo)
ಕನ್ಯಾ ರಾಶಿಯವರು ಪರಿಪೂರ್ಣತಾವಾದಿಗಳು. ಅವರು ಸ್ವತಃ ತಮ್ಮ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ತಾವು ಸಾಧ್ಯವಾದಷ್ಟು ಪರ್ಫೆಕ್ಟ್ ಆಗಲು ಪ್ರಯತ್ನಿಸುತ್ತಾರೆ. ದುರದೃಷ್ಟವಶಾತ್, ಅವರು ತಮ್ಮ ಈ ಮಾನದಂಡಗಳನ್ನು ಅನುಸರಿಸಿ ನಿಮ್ಮನ್ನು ಕೂಡಾ ಮೌಲ್ಯಮಾಪನ ಮಾಡುತ್ತಾರೆ. ಹೌದು, ಕನ್ಯಾ ರಾಶಿಯವರೊಂದಿಗೆ ಪ್ರೀತಿಗೆ ಬಿದ್ದವರು ಬಹಳಷ್ಟು ತಮ್ಮನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅವರು ಹಾಗೆ ಬದಲಾಗಲು ತಯಾರಿಲ್ಲದಿದ್ದರೆ ಕನ್ಯಾ ರಾಶಿಗೆ ಮುಂದುವರಿಯಲು ಭಯವಾಗುತ್ತದೆ.
ಕನ್ಯಾರಾಶಿಯು ಮೋಸ ಮಾಡುವ ಸಾಧ್ಯತೆಯಿಲ್ಲ, ಏಕೆಂದರೆ ಅವರು ನೈತಿಕತೆಯ ಬಲವಾದ ಪ್ರಜ್ಞೆಯನ್ನು ಹೊಂದಿದ್ದಾರೆ. ಆದರೆ ನೀವು ಅವರ ಬೇಡಿಕೆಗಳಿಗೆ ಮಣಿಯಲು ನಿರಾಕರಿಸಿದರೆ, ನಿಮ್ಮ ಸಂಬಂಧದಲ್ಲಿ ವಿಷಯಗಳು ಕಷ್ಟಕರವಾಗಬಹುದು.
4. ವೃಶ್ಚಿಕ(Scorpio)
ವೃಶ್ಚಿಕ ರಾಶಿಯವರು ಆಗಾಗ್ಗೆ ನಂಬಲಾಗದಷ್ಟು ಭಾವೋದ್ರಿಕ್ತ ಮತ್ತು ನಿಷ್ಠಾವಂತ ಪಾಲುದಾರರಾಗಿದ್ದಾರೆ. ಜೊತೆಗೆ ಅವರು ಸಂಬಂಧದಲ್ಲಿ ಪ್ರಾಬಲ್ಯ ಹೊಂದಿರಲು ಇಷ್ಟಪಡುತ್ತಾರೆ. ಹಾಗಂಥ ಅವರ ನಿಜವಾದ ಮನಸ್ಥಿತಿ ತಕ್ಷಣಕ್ಕೆ ಪ್ರತಿಫಲನವಗುವುದಿಲ್ಲ. ಸಂಬಂಧ ಮುಂದುವರಿದಂತೆಲ್ಲ ನಿಮಗೆ ಅವರ ಮತ್ತಷ್ಟು ರಹಸ್ಯ ಜೀವಿಗಳಾಗಿ ಕಾಣಬಹುದು. ಅತಿಯಾಗಿ ನಂಬುವ ಪಾಲುದಾರರ ಬಳಿಯೂ ಗುಟ್ಟು ಮಾಡುವ ಸ್ವಭಾವ ಇವರದು. ಹೀಗಾಗಿ, ಅವರು ಬದ್ಧತೆ ಕೊಡಲು ಏಕೆ ಹೆದರುತ್ತಾರೆಂಬುದು ಸಾಮಾನ್ಯವಾಗಿ ತಿಳಿಯುವುದೇ ಇಲ್ಲ.
Weekly Love Horoscope: ಕುಂಭದ ಅವಿವಾಹಿತರಿಗೆ ಈ ವಾರ ವಿಶೇಷ ವ್ಯಕ್ತಿಯ ಭೇಟಿ
ಬದ್ಧತೆಗೆ ಹೆದರುತ್ತಾರೆಂದ ಮಾತ್ರಕ್ಕೆ ಮೇಲೆ ತಿಳಿಸಿದ ರಾಶಿಚಕ್ರಗಳು ಎಂದಿಗೂ ಯಶಸ್ವಿ ದೀರ್ಘಕಾಲೀನ ಸಂಬಂಧವನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂಬುದು ಸತ್ಯವಲ್ಲ. ಸರಿಯಾದ ಸಂಗಾತಿ ಮತ್ತು ಸ್ವಲ್ಪ ಹೆಚ್ಚುವರಿ ಪ್ರಯತ್ನದಿಂದ, ಎಲ್ಲವೂ ಯೋಗ್ಯವಾಗಿರುತ್ತದೆ.