'ಮಳೆ ಸಂಪಾದೀತಲೇ ಪರಾಕ್‌' : ಚಿಕ್ಕ ಮೈಲಾರದ ಕಾರ್ಣಿಕ ನುಡಿ

By Kannadaprabha News  |  First Published Feb 7, 2023, 11:26 AM IST

 ‘ಮಳೆ ಸಂಪಾದೀತಲೇ ಪರಾಕ್‌’ ಇದು ಇಲ್ಲಿನ ಹಾವನೂರ (ಚಿಕ್ಕ ಮೈಲಾರ) ಸಮೀಪದ ಜೋಗ ಮರಡಿಯಲ್ಲಿ ಮೈಲಾರ ಲಿಂಗೇಶ್ವರನ ಕಾರ್ಣಿಕದ ನುಡಿಯನ್ನು ಗೊರವಪ್ಪ ಆನಂದ ಬಿಲ್ಲರ ಸೋಮವಾರ ಸಂಜೆ ಹೇಳಿದರು.


ಗುತ್ತಲ (ಫೆ.7) : ‘ಮಳೆ ಸಂಪಾದೀತಲೇ ಪರಾಕ್‌’ ಇದು ಇಲ್ಲಿನ ಹಾವನೂರ (ಚಿಕ್ಕ ಮೈಲಾರ) ಸಮೀಪದ ಜೋಗ ಮರಡಿಯಲ್ಲಿ ಮೈಲಾರ ಲಿಂಗೇಶ್ವರನ ಕಾರ್ಣಿಕದ ನುಡಿಯನ್ನು ಗೊರವಪ್ಪ ಆನಂದ ಬಿಲ್ಲರ ಸೋಮವಾರ ಸಂಜೆ ಹೇಳಿದರು.

ಕಳೆದ 357 ವರ್ಷಗಳಿಂದ ಹಾವನೂರ ಗ್ರಾಮದಲ್ಲಿನ ಚಿಕ್ಕ ಮೈಲಾರದ ಕಾರ್ಣಿಕೋತ್ಸವವು ಮೈಲಾರದ ಡೆಂಕನ ಮರಡಿಯಲ್ಲಿ ನುಡಿಯುವ ಕಾರ್ಣಿಕ ದಿನದ ಹಿಂದಿನ ದಿನ (ಭರತ ಹುಣ್ಣಿಮೆಯ ಮರುದಿನ) ಇಲ್ಲಿ ಕಾರ್ಣಿಕ ಹೇಳುತ್ತಾ ಬರಲಾಗಿದೆ.

Tap to resize

Latest Videos

undefined

ಹೂವಿನಹಡಗಲಿ: ಮೈಲಾರ ಜಾತ್ರೆಗೆ ಭರದ ಸಿದ್ಧತೆ

ಸೋಮವಾರ ಸಂಜೆ ಸಾಂಪ್ರದಾಯಿಕ ಪೂಜೆಗಳ ನಂತರ ಮೈಲಾರಲಿಂಗೇಶ್ವರನನ್ನು ಮೆರವಣಿಗೆಯಲ್ಲಿ ತರಲಾಯಿತು. ನಂತರ ಚಿಕ್ಕ ಮೈಲಾರದಿಂದ ಗಂಗಮಾಳವ್ವ ಮೂರ್ತಿಗಳ ಆಗಮನದ ನಂತರ ಗೊರವಪ್ಪನು 15-20 ಅಡಿ ಎತ್ತರದ ಬಿಲ್ಲನ್ನು ಏರಿ ವರ್ಷ ಭವಿಷ್ಯ ಎಂದೇ ಅರ್ಥೈಸಲಾಗುವ ಕಾರ್ಣಿಕದ ನುಡಿಯನ್ನು ಹೇಳಲು ಬಿಲ್ಲನೇರಿ ಸದ್ದಲೇ ಎನ್ನತ್ತಲೇ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಭಕ್ತರು ಮೌನವಾದರು. ನಂತರ ಒಂದೇ ವಾಕ್ಯದ ವರ್ಷ ಭವಿಷ್ಯವನ್ನು ಹೇಳಿ ಮೇಲಿಂದ ಗೊರವಪ್ಪ ಈಶಾನ್ಯ ದಿಕ್ಕಿನ ಕಡೆ ತಲೆ ಮಾಡಿ ಬಿದ್ದಿದ್ದರಿಂದ ಆ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗುವುದೆಂಬ ನಂಬಿಕೆ ಭಕ್ತರದ್ದು.

ಈ ಬಾರಿಯ ಭವಿಷ್ಯವು ಅನೇಕ ರೀತಿಯಲ್ಲಿ ಅರ್ಥೈಸಲಾಗಿದ್ದು ಪ್ರಸ್ತಕ ವರ್ಷ ರೈತರಿಗೆ ಈ ಕಾರ್ಣಿಕ ಹೆಚ್ಚು ಮಹತ್ವ ನೀಡಿದ್ದು, ಈ ವರ್ಷದ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿ ಆಗುವುದು. ಕಳೆದ 2-3 ವರ್ಷಗಳಿಂದ ಉತ್ತಮ ಮಳೆಯಾಗುತ್ತಿದ್ದು, ಈ ವರ್ಷ ಪುನಃ ಉತ್ತಮ ಮಳೆಯಾಗುವುದೆಂಬ ಭವಿಷ್ಯವಾಣಿಯನ್ನು ಹೇಳಿದ ಗೊರವಪ್ಪ ಕಾರ್ಣಿಕದ ನುಡಿಯನ್ನು ವಿವಿಧ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಈ ವರ್ಷ ಎಲ್ಲ ರೀತಿಯಲ್ಲೂ ಸಹ ಸಮೃದ್ಧಿಯಾಗಲಿದೆ. ಮಳೆ, ಬೆಳೆ ಸಂಪಾಗುವುದು. ವಿಧಾನಸಭೆ ಚುನಾವಣೆಯೂ ಬರುತ್ತಿರುವುದರಿಂದ ವಿವಿಧ ಪಕ್ಷಗಳ ಪ್ರಮುಖರು ತಮ್ಮ ತಮ್ಮ ಪಕ್ಷದ ಪರವಾಗಿ ಈ ಭವಿಷ್ಯವನ್ನು ಅರ್ಥೈಸುತ್ತಿದ್ದಾರೆ.

ಚಿಕ್ಕಮಗಳೂರು: ಚುನಾವಣೆ ಸಮಿಪಿಸುತ್ತಿದೆ, ಅಧಿಕಾರಕ್ಕಾಗಿ ಕಿತ್ತಾಟ ಹೆಚ್ಚಾಗಲಿವೆ: ಕಾರ್ಣಿಕದ ಭವಿಷ್ಯ ನುಡಿ..!

ಈ ಸಂದರ್ಭದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಕೃಷ್ಣಭಟ್‌ ಪೂಜಾರ, ಗ್ರಾ.ಪಂ. ಅಧ್ಯಕ್ಷ ಭೋಜಪ್ಪ ಭಂಡಾರಿ, ಸುಭಾಸ ಮೈಲಾರ, ಚನ್ನಯ್ಯ ಕರಸ್ಥಳಮಠÜ, ವಿಲಾಸ ಜೋಗ, ನಾರಾಯಣಪ್ಪ ಕಮ್ಮಾರ, ಚನ್ನವೀರಪ್ಪ ಸಜ್ಜನಶೆಟ್ರ, ಮಲ್ಲಿಕಾರ್ಜುನ ಮುಷ್ಠಿಗೇರಿ, ಖಾಜಾಸಾಬ ಗಾಟೀನ, ಶೇಖಣ್ಣ ಹಾಲಣ್ಣನವರ ಸೇರಿದಂತೆ ಗ್ರಾ.ಪಂ ಸದÜಸ್ಯರು, ಹಾವನೂರ ಸೇರಿದಂತೆ ಗುತ್ತಲ, ಹರಳಹಳ್ಳಿ, ಹುರುಳಿಹಾಳ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರು.

click me!