
ಗೋವು ನಮ್ಮ ತಾಯಿ. ತಾಯಿ ಹಾಲಿಗಿಂತ ಹೆಚ್ಚಾಗಿ ಗೋವಿನ ಹಾಲು ಕುಡಿದು ಬೆಳೆಯುತ್ತಾರೆ ಮನುಷ್ಯರು. ಗೋವು ಕಾಮಧೇನು. ಕೇಳಿದ್ದೆಲ್ಲ ಕರುಣಿಸುವ ದೇವತೆ. ಆಕೆಯ ಮೇಲೆ ಮುಕ್ಕೋಟಿ ದೇವರು ನೆಲೆಸಿದ್ದಾರೆ. ಆಕೆ ಉಳುವುದರಿಂದ ಹಿಡಿದು ಹೊಟ್ಟೆ ತುಂಬಿಸುವಲ್ಲಿ ತನಕ ಮನುಷ್ಯರಿಗೆ ನೆರವಾಗುತ್ತಾಳೆ. ಹಾಗಾಗಿಯೇ ಹಿಂದೂ ಧರ್ಮದಲ್ಲಿ ಹಸುವನ್ನು ತಾಯಿಯ ರೂಪವೆಂದು ಪರಿಗಣಿಸಲಾಗುತ್ತದೆ.
ಗೋವು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ತರುವ ಮೂಲವಾಗಿದೆ. ಹಸುವಿನ ಪೂಜೆ ಮತ್ತು ಸಣ್ಣ ಕ್ರಮಗಳು ನಿಮ್ಮ ಜೀವನವನ್ನು ಸಂತೋಷದಿಂದ ತುಂಬುತ್ತವೆ. ನೀವು ಪ್ರತಿದಿನ ಬೆಳಿಗ್ಗೆ ಎದ್ದು ಹಸುವಿಗೆ ಸಂಬಂಧಿಸಿದ ಕ್ರಮಗಳನ್ನು ಮಾಡಿದರೆ, ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಕ್ಕುತ್ತದೆ.
ಗೋವು ಮತ್ತು ಗೋವಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳು ಬಹಳ ಪವಿತ್ರವಾಗಿವೆ. ಹಾಲು, ಗೋಮೂತ್ರ, ಸಗಣಿ ಎಲ್ಲವೂ ಅತ್ಯಂತ ಪವಿತ್ರ. ಅವನ್ನು ಪೂಜೆ ಹವನದಲ್ಲಿ ಸೇರಿಸಿಕೊಳ್ಳುತ್ತೇವೆ. ಗೃಹಪ್ರವೇಶದಲ್ಲಿ ಮನೆಯಲ್ಲಿ ಸಮೃದ್ಧಿ ತುಂಬಲೆಂದು ಗೋವನ್ನು ಮನೆಯೊಳಗೆ ನುಗ್ಗಿಸುತ್ತೇವೆ. ಗೋಮೂತ್ರದಿಂದ ಹಲವು ಕಾಯಿಲೆಗಳು ಗುಣವಾಗುತ್ತವೆ.
Chanakya Niti: ಮಹಿಳೆಯಲ್ಲಿ ಈ 3 ಸ್ವಭಾವವಿದ್ದರೆ, ಕುಟುಂಬದಲ್ಲಿ ಸಂತೋಷಕ್ಕೆಂದೂ ಕೊರತೆ ಇರುವುದಿಲ್ಲ..
ನೀವು ಪವಿತ್ರ ಹಸುವಿನ ಜೊತೆಗೆ ಸಂಪರ್ಕ ಸಾಧಿಸಿ, ನಿಮ್ಮ ಜೀವನದಲ್ಲಿ ಈ ಕ್ರಮಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಸಂತೋಷ ತುಂಬಿ ತುಳುಕುತ್ತದೆ. 84 ಲಕ್ಷ ಜನ್ಮಗಳ ಮೂಲಕ ಪ್ರಯಾಣಿಸಿದ ನಂತರ, ಆತ್ಮವು ಕೊನೆಯ ಜನ್ಮವಾಗಿ ಗೋವಾಗುತ್ತದೆ ಎಂದು ನಂಬಲಾಗಿದೆ. ಗೋವು ಲಕ್ಷಾಂತರ ಜೀವಗಳ ನಿಲ್ದಾಣವಾಗಿದೆ, ಅಲ್ಲಿ ಆತ್ಮವು ವಿಶ್ರಾಂತಿ ಪಡೆಯುತ್ತದೆ ಮತ್ತು ಮುಂದಿನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ ಬೆಳಿಗ್ಗೆ ಹಸುವಿಗೆ ಸಂಬಂಧಿಸಿದ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ನೀವು ನಿಮ್ಮ ಜೀವನದಲ್ಲಿ ಅದೃಷ್ಟ, ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು. ನಿಮ್ಮ ದಿನಚರಿಯಲ್ಲಿ ಇದನ್ನು ಸೇರಿಸಿಕೊಳ್ಳಿ, ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.
ಹಸುವಿಗೆ ಸಂಬಂಧಿಸಿದ ಕ್ರಮಗಳು