ಚಾಣಕ್ಯನ ಪ್ರಕಾರ, ಮನೆಯಲ್ಲಿ ಇರುವ ಮಹಿಳೆಯರ ಕೆಲವು ವಿಶೇಷ ಸ್ವಭಾವಗಳು ಕುಟುಂಬದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಹಿಳೆಯರು ಈ ಅಭ್ಯಾಸಗಳನ್ನು ಹೊಂದಿದ್ದರೆ, ಅವರ ಕುಟುಂಬ ಯಾವಾಗಲೂ ಸಂತೋಷದಿಂದ, ಪ್ರಗತಿಯಿಂದ ಕೂಡಿರುತ್ತದೆ.
ಆಚಾರ್ಯ ಚಾಣಕ್ಯ ವಿಶ್ವವಿಖ್ಯಾತ ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಅವರು ನುರಿತ ರಾಜತಾಂತ್ರಿಕರು ಮಾತ್ರವಲ್ಲದೆ ಶ್ರೇಷ್ಠ ತಂತ್ರಜ್ಞ ಮತ್ತು ಅರ್ಥಶಾಸ್ತ್ರಜ್ಞರಾಗಿದ್ದರು. ಆಚಾರ್ಯ ಚಾಣಕ್ಯ ಅವರು ಮಹಿಳೆಯರ ಯಶಸ್ಸು, ಅವರ ಸಂಬಂಧ ಮತ್ತು ನಡವಳಿಕೆಯ ಬಗ್ಗೆ ವಿವರವಾದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕುಟುಂಬದ ಹೆಂಗಸರು ಮನೆಯ ಬೆನ್ನೆಲುಬು ಎನ್ನುತ್ತಾರೆ ಚಾಣಕ್ಯ. ಚಾಣಕ್ಯನ ಪ್ರಕಾರ, ಮನೆಯಲ್ಲಿ ಇರುವ ಮಹಿಳೆಯರ ಕೆಲವು ವಿಶೇಷ ಸ್ವಭಾವಗಳು ಕುಟುಂಬದ ಸಂತೋಷದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನೆ ಮಹಿಳೆ ಸಂತೋಷವಾಗಿ, ತೃಪ್ತವಾಗಿದ್ದಷ್ಟೂ ಮನೆಯು ಸಂತೋಷವಾಗಿರುತ್ತದೆ. ಮಹಿಳೆಯರು ಈ ಅಭ್ಯಾಸಗಳನ್ನು ಹೊಂದಿದ್ದರೆ, ಅವರ ಕುಟುಂಬ ಯಾವಾಗಲೂ ಸಂತೋಷದಿಂದ ಮತ್ತು ಪ್ರಗತಿಯಿಂದ ಕೂಡಿರುತ್ತದೆ. ಆ ವಿಶೇಷ ಸ್ವಭಾವಗಳು ಯಾವೆಲ್ಲ ಎಂದು ತಿಳಿಯೋಣ.
ಹಣ ನಿರ್ವಹಣೆ (Money Management)
ಚಾಣಕ್ಯ ಹೇಳುವಂತೆ ಮಹಿಳೆಯರಿಗೆ ಪುರುಷನಿಗಿಂತ ಉತ್ತಮವಾಗಿ ಹಣವನ್ನು ಹೇಗೆ ನಿರ್ವಹಿಸುವುದು ಎಂದು ತಿಳಿದಿರಬೇಕು. ಸಂತೋಷದ ಜೀವನಕ್ಕಾಗಿ, ಮನೆಯ ಮಹಿಳೆಯರು ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಅವಶ್ಯಕ, ಏಕೆಂದರೆ ಅವರ ಈ ನಿರ್ಧಾರವು ಕುಟುಂಬದಲ್ಲಿ ಹಣವನ್ನು ಉಳಿಸುವ ಅಭ್ಯಾಸವನ್ನು ಬೆಳೆಸುತ್ತದೆ. ಮಹಿಳೆಯರ ಈ ಅಭ್ಯಾಸವು ಬಿಕ್ಕಟ್ಟಿನ ಸಮಯದಲ್ಲೂ ಕುಟುಂಬವನ್ನು ಸುರಕ್ಷಿತವಾಗಿರಿಸುತ್ತದೆ, ಕುಟುಂಬವು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಸಂವೇದನಾಶೀಲವಾಗಿ ಕೆಲಸ ಮಾಡುವ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಮಹಿಳೆಯರು ಯಾವಾಗಲೂ ಸ್ವಲ್ಪ ಹಣವನ್ನು ಉಳಿಸುತ್ತಾರೆ, ಅದರ ಬಗ್ಗೆ ಕುಟುಂಬಕ್ಕೆ ಸುಳಿವು ಕೂಡ ಸಿಗುವುದಿಲ್ಲ. ಅಡುಗೆಮನೆಯ ಡಬ್ಬಿಗಳಲ್ಲಿ, ಚೀಟಿಗಳಲ್ಲಿ ಎಲ್ಲಾದರೂ ಕುಟುಂಬಕ್ಕೆ ತಿಳಿಯದಂತೆ ಆಪದ್ಧನವನ್ನು ಅವರು ಇಡುತ್ತಾರೆ.
ಗರ್ಭಿಣಿಯರು ಇಷ್ಟನೇ ತಿಂಗಳಿಂದ ಗಾಜಿನ ಬಳೆಗಳನ್ನು ಧರಿಸಿದ್ರೆ ಮಗು ಮೆದುಳು ಚುರುಕಾಗುತ್ತೆ!
ತೃಪ್ತ ಮಹಿಳೆ (Staying satisfied)
ಇದ್ದದ್ದು ಸಾಕು ಎಂಬ ಭಾವನೆ ಇರುವ ಮಹಿಳೆಯರ ಸಂಸಾರ ಸದಾ ಸುಖಮಯವಾಗಿರುತ್ತದೆ. ಸಂತೃಪ್ತ ಮಹಿಳೆಯರು ಕುಟುಂಬದ ಗೌರವ ಮತ್ತು ಘನತೆಯನ್ನು ಎಂದಿಗೂ ದಾಟುವುದಿಲ್ಲ, ಅಂತಹ ಮಹಿಳೆಯರು ಕುಟುಂಬದ ಸ್ಥಾನಮಾನಕ್ಕೆ ಅನುಗುಣವಾಗಿ ತಮ್ಮ ಆಸೆಗಳನ್ನು ಪೂರೈಸುತ್ತಾರೆ. ಕಷ್ಟದ ಸಮಯದಲ್ಲಿಯೂ ಕುಟುಂಬದೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳುತ್ತಾಳೆ. ಈ ಅಭ್ಯಾಸವನ್ನು ಹೊಂದಿರುವ ಮಹಿಳೆಯರು, ಅದರ ಪರಿಣಾಮವು ಅವರ ಮುಂದಿನ ಪೀಳಿಗೆಯ ಮೇಲೂ ಗೋಚರಿಸುತ್ತದೆ. ಆಸೆ- ಆಕಾಂಕ್ಷೆಗಳನ್ನು ಕೊಲ್ಲುವುದು ಸರಿಯಲ್ಲ, ಆದರೆ ಕುಟುಂಬದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಯಾರ ಮುಂದೆಯೂ ಕೈ ಚಾಚುವ ಅಗತ್ಯವಿರುವುದಿಲ್ಲ ಮತ್ತು ಗೌರವದಿಂದ ರಾಜಿ ಮಾಡಿಕೊಳ್ಳಬೇಕಾಗಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಆಗ ಕುಟುಂಬ ಯಾವಾಗಲೂ ಸಮೃದ್ಧವಾಗಿರುತ್ತದೆ.
ತಾಳ್ಮೆ ಮತ್ತು ಬಲವಾದ ಇಚ್ಛೆ (Patience and strong will)
ಆಚಾರ್ಯ ಚಾಣಕ್ಯ ಹೇಳುವಂತೆ ಮಹಿಳೆಯರು ಹೆಚ್ಚು ಭಾವುಕರಾಗಿರುತ್ತಾರೆ, ಆದರೆ ಬಲವಾದ ಇಚ್ಛಾಶಕ್ತಿಯುಳ್ಳ ಮಹಿಳೆಯರು ತಮ್ಮ ಭಾವನೆಗಳನ್ನು ನಿಯಂತ್ರಿಸುತ್ತಾರೆ ಮತ್ತು ಭವಿಷ್ಯದಲ್ಲಿ ಮುಂದುವರಿಯಲು ಯೋಚಿಸುತ್ತಾರೆ. ತಾಳ್ಮೆಯ ಪ್ರಜ್ಞೆಯನ್ನು ಹೊಂದಿರುವ ಮಹಿಳೆಯರು ತಮ್ಮ ಕುಟುಂಬಕ್ಕೊಂದು ಶಕ್ತಿಯಾಗುತ್ತಾರೆ. ಕುಟುಂಬದಲ್ಲಿ ಏನೇ ಅಚಾತುರ್ಯವಾಗಲಿ, ಭಿನ್ನಾಭಿಪ್ರಾಯ ಬರಲಿ, ಕಷ್ಟಗಳು ಕಾಡಲಿ- ಇವರ ತಾಳ್ಮೆಯ ಮುಂದೆ ಅವೆಲ್ಲವೂ ಸೋತು ಹೋಗುತ್ತವೆ. ಆಚಾರ್ಯ ಚಾಣಕ್ಯ ಅವರ ಪ್ರಕಾರ, ಮನೆಯಲ್ಲಿ ಬಲವಾದ ಇಚ್ಛಾಶಕ್ತಿಯುಳ್ಳ ಮಹಿಳೆಯರಿದ್ದರೆ, ಕಷ್ಟದ ಸಮಯದಲ್ಲಿಯೂ ಕುಟುಂಬವು ನಗುತ್ತಿರುತ್ತದೆ.
Mahashivratri 2023: ರಾಶಿಗನುಗುಣವಾಗಿ ಶಿವನನ್ನು ಪೂಜಿಸಿ, ಪ್ರಾರ್ಥನೆಯ ಫಲ ನೋಡಿ..
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.