Kampli Utsav: ಅದ್ಧೂರಿಯಾಗಿ ನಡೆದ ಗತಕಾಲದ ವೈಭವ ಸಾರುವ ಕಂಪ್ಲಿ ಉತ್ಸವ

By Suvarna NewsFirst Published Feb 13, 2023, 10:47 AM IST
Highlights

ಐತಿಹಾಸಿಕ ಹಂಪಿಯಷ್ಟೇ ಕಂಪ್ಲಿ ಪಟ್ಟಣಕ್ಕೂ ಕೂಡ ತನ್ನದೇ ಆದ ಇತಿಹಾಸವಿದೆ. ಅದನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕಂಪ್ಲಿ ಕಲಾರತಿ ಉತ್ಸವ ಆಯೋಜನೆ ಮಾಡಲಾಗಿತ್ತು. ತಡರಾತ್ರಿವರೆಗೂ ನಡೆದ  ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.  

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ಬಳ್ಳಾರಿ (ಫೆ13): ಐತಿಹಾಸಿಕ ಹಂಪಿಯಷ್ಟೇ ಕಂಪ್ಲಿ ಪಟ್ಟಣಕ್ಕೂ ಕೂಡ ತನ್ನದೇ ಆದ ಇತಿಹಾಸವಿದೆ. ಅದನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕಂಪ್ಲಿ ಕಲಾರತಿ ಉತ್ಸವ ಆಯೋಜನೆ ಮಾಡಲಾಗಿತ್ತು. ತಡರಾತ್ರಿವರೆಗೂ ನಡೆದ  ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.  ಇನ್ನೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮುನ್ನ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಬಳ್ಳಾರಿ ಉಸ್ತುವಾರಿ ಶ್ರೀರಾಮುಲು,  ಭಾರತದ ಸಂಸ್ಕೃತಿಯಲ್ಲಿ  ಗತವೈಭವದ  ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕಂಪ್ಲಿ ಐತಿಹಾಸಿಕ ಕುರುಹುಗಳನ್ನು ಹೊಂದಿದೆ. ಕಂಪ್ಲಿ ಇತಿಹಾಸವನ್ನು ಮರುಕಳಿಸುವ ಉತ್ಸವ ಇದಾಗಿದೆ ಎಂದರು.

Latest Videos

ಬಳ್ಳಾರಿ ಜಿಲ್ಲೆ ವಿಭಜನೆಯಾದ ನಂತರ ಜಿಲ್ಲೆಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಜನವರಿ 21, 22 ರಂದು ಬಳ್ಳಾರಿ ಉತ್ಸವವನ್ನು ನಡೆಸಲಾಗಿತ್ತು, ಅದೇ ರೀತಿಯಾಗಿ ಫೆಬ್ರವರಿ.11, 12 ರಂದು ಕಂಪ್ಲಿ ಉತ್ಸವ ಆಚರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ  ಈ ಉತ್ಸವಗಳನ್ನು ಶಾಶ್ವತವಾಗಿ ಆಚರಿಸಲಾಗುತ್ತದೆ ಎಂದು ಶ್ರೀರಾಮುಲು ಭರವಸೆ ನೀಡಿದ್ರು. ಕಂಪ್ಲಿಯು ಕಂಪಲಿರಾಯ ಮತ್ತು ಗಂಡುಗಲಿ ಕುಮಾರರಾಮ ರಂತಹ ಮಹಾವೀರರ ಶೌರ್ಯ, ಪರಾಕ್ರಮ ಗುಣಗಳನ್ನು ಹೊಂದಿರುವಂತಹ ಭೂಮಿ ಇದಾಗಿದೆ ಎಂದರು.

ಕಂಪ್ಲಿ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಬದ್ಧ;
ಸಾಂಸ್ಕೃತಿಕ ವೇದಿಕೆಯಲ್ಲೂ ಒಂದಷ್ಟು ರಾಜಕೀಯ ಮಾತುಗಳನ್ನಾಡಿದ ಶ್ರೀರಾಮುಲು, ಕಂಪ್ಲಿ ಅಭಿವೃದ್ಧಿ ನಮ್ಮ ಸರ್ಕಾರ ಬದ್ಧ ಎಂದರು. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಎಂದೇ ಕರೆಯಲಾಗುವ ಕಂಪ್ಲಿ ಕೋಟೆಯಲ್ಲಿ 21 ಫಿರಂಗಿ ಗುಂಡುಗಳು ಪತ್ತೆಯಾಗಿವೆ. ಅವುಗಳನ್ನು ಪುರಾತತ್ವ ಇಲಾಖೆಯು ಸಂಶೋಧನೆ ನಡೆಸುತ್ತಿದೆ. ಇದರಿಂದ ವಿಜಯನಗರ ಸಾಮ್ರಾಜ್ಯದ ಇತಿಹಾಸದಷ್ಟೇ  ಪುರಾತನ ಇತಿಹಾಸ ಕಂಪ್ಲಿ ಹೊಂದಿದೆ ಎಂದರು

ಹಂಪಿ ಸರ್ಕೀಟ್ ನಲ್ಲಿ ಸೇರ್ಪಡೆ  ಸಂಸ್ಕೃತಿಯನ್ನು ಬಿಂಬಿಸುವ ಉತ್ಸವಗಳಾದ ಬಾದಾಮಿ, ಐಹೊಳೆ, ಲಕ್ಕುಂಡಿ ಉತ್ಸವಗಳಂತೆ ಮುಂಬರುವ ದಿನಗಳಲ್ಲಿ ಕಂಪ್ಲಿ ಉತ್ಸವವನ್ನು ಆಚರಿಸುವ ಮೂಲಕ ಇತಿಹಾಸ ತಿಳಿಸುವುದು ಮತ್ತು ಪ್ರವಾಸೋದ್ಯಮ ಅಭಿವೃದ್ದಿಯ ಹಂಪಿ ಸರ್ಕೀಟ್ ನಲ್ಲಿ ಕಂಪ್ಲಿ ಸೇರಿಸಲು ಚಿಂತನೆ ನಡೆಸಲಾಗುತ್ತದೆ ಎಂದು ಶ್ರೀರಾಮುಲು ಹೇಳಿದರು.

Kalyana Karnataka Utsava: ಕಲಬುರಗಿಯಲ್ಲಿ ಫೆಬ್ರವರಿ 24 ರಿಂದ 26ರ ವರೆಗೆ ಮೂರು ದಿನಗಳ ಉತ್ಸವ

ಕಂಪ್ಲಿ ವಿಜಯನಗರ ಜಿಲ್ಲೆ ಸೇರ್ಪಡೆಗೆ ತಾಂತ್ರಿಕ ತೊಂದರೆ:
ವಿಜಯನಗರ ಜಿಲ್ಲೆ ಯೊಂದಿಗೆ ಕಂಪ್ಲಿ ಸೇರಲಿಲ್ಲ ಎಂಬ ಬೇಸರ ಇಲ್ಲಿನ ಜನರಲ್ಲಿ ಇರಬಹುದು. ಆದರೆ ತಾಂತ್ರಿಕ ತೊಂದರೆಯಿಂದ ವಿಜಯನಗರದೊಂದಿಗೆ ಸೇರಲಿಲ್ಲ ಹೊರತು ಬೇರಾವುದೇ ಉದ್ದೇಶ ಇಲ್ಲವೆಂದು ಸಚಿವ ಆನಂದ ದಿಂಗ್ ಹೇಳಿದರು.   
ಕಂಪ್ಲಿ ನನ್ನ ಜನ್ಮಭೂಮಿಯಾಗಿದೆ  ನನ್ನ ತಂದೆಯ ಬಹುತೇಕ ಜೀವಿತ ಅವಧಿಯನ್ನು ಇಲ್ಲಿಯೇ ಕಳೆದಿದ್ದಾರೆ. ಕಂಪ್ಲಿ ಅಭಿವೃದ್ಧಿಗೆ ನಾನು ಸದಾಕಾಲವೂ ಸಿದ್ಧವಾಗಿದ್ದೇನೆ.ಹುಟ್ಟಿದ ಊರಿಗೆ ಏನಾದರೂ ಅಭಿವೃದ್ದಿ ಮಾಡಬೇಕೆಂಬ ತುಡಿತವಿದೆ. ಈ ಹಿಂದೆ ಆಸ್ಪತ್ರೆ ಮೇಲ್ದರ್ಜೆಗೇರಿಸಲು 20 ಕೋಟಿ ಅನುದಾನ ನೀಡಲಾಗಿದೆ. ಮತ್ತು ಕಂಪ್ಲಿ ಉತ್ಸವಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 75 ಲಕ್ಷ ನೀಡಲಾಗಿದೆ ಎಂದು ಆನಂದ ಸಿಂಗ್ ವಿವರಣೆ ನೀಡಿದರು.

ಕಂಪ್ಲಿ ಕಲಾರತಿ ಉತ್ಸವದ ಸಂಭ್ರಮ, ಸಾಂಸ್ಕೃತಿಕ ಇತಿಹಾಸ ಮರುಕಳಿಸಿದ ವೈಭವ ಮೆರವಣಿಗೆ

ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಕಂಪ್ಲಿ ಮತ್ತು ಕುರುಗೋಡು ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮೊದಲ ಬಾರಿಗೆ ನಡೆಸಲಾಗುತ್ತಿರುವ ಉತ್ಸವವು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು, ಅದು ಈಗ ಕೂಡಿ ಬಂದಿದೆ. ಇದಕ್ಕೆ ಸಹಕರಿಸಿದ ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿದರು.

click me!