ಪ್ರೇಮಿಗಳ ದಿನವೆಂದರೆ ಅವಿವಾಹಿತರಿಗೆ ಅದೊಂದು ಹಬ್ಬವೇ ಸರಿ. ಈ ದಿನ ಎಲ್ಲೆಡೆ ಅದೆಷ್ಟೋ ರೀತಿಯಲ್ಲಿ, ಅದೆಷ್ಟೋ ಸಂಖ್ಯೆಯಲ್ಲಿ ಲವ್ ಪ್ರಪೋಸಲ್ ನಡೆಯುತ್ತಲೇ ಇರುತ್ತದೆ. ಇದರಲ್ಲಿ ಎಲ್ಲವೂ ಸಕ್ಸಸ್ ಆಗುವುದಿಲ್ಲ. ಸಕ್ಸಸ್ ಆದುದೆಲ್ಲವೂ ನಿಜವಾದ ಪ್ರೀತಿಯೂ ಆಗಿರುವುದಿಲ್ಲ. ಅಂಥದರ ಮಧ್ಯೆಯೂ ನಿಜವಾದ ಪ್ರೀತಿ ಗಳಿಸುವವರೇ ಅದೃಷ್ಟವಂತರು. ಅಂಥ ಅದೃಷ್ಟಶಾಲಿಗಳು ಈ ಬಾರಿ 6 ರಾಶಿಗೆ ಸೇರಿದವರಾಗಿರುತ್ತಾರೆ.
ಯುವ ಸಮೂಹವೆಲ್ಲ ಕಾತರದಿಂದ ಕಾಯುತ್ತಿದ್ದ ಆ ವಿಶೇಷ ದಿನ ಬಂದೇ ಬಿಟ್ಟಿದೆ. ಪ್ರೇಮಿಗಳ ದಿನದ ತಯಾರಿ ಎಲ್ಲೆಡೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಪ್ರಪೋಸ್ ಡೇ, ರೋಸ್ ಡೇ, ಚಾಕೋಲೇಟ್ ಡೇ, ಟೆಡ್ಡಿ ಡೇ ಎಂದು ವಾರದಿಂದ ಪ್ರೇಮಿಗಳ ವಾರ ಆಚರಣೆಯಾಗುತ್ತಿದೆ. ಆದರೂ ಫೆ.14 ಎಂದರೆ ಅಂದು ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಯ ಕ್ಷಣಕ್ಕಾಗಿ ಕಾಯುತ್ತಾರೆ, ಅದರ ಉತ್ತರಕ್ಕಾಗಿ ಕನವರಿಸುತ್ತಾರೆ, ಈ ಬಾರಿ ವ್ಯಾಲೆಂಟೈನ್ಸ್ ಡೇಯಂದು ನಿಜವಾದ ಪ್ರೀತಿ ಗಳಿಸುವ ಅದೃಷ್ಟ 6 ರಾಶಿಗಳಿಗಿದೆ. ಈ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ.
ಮೇಷ ರಾಶಿ (Aries)
ಈ ರಾಶಿಯವರಿಗೆ ಈ ವರ್ಷದ ಪ್ರೇಮಿಗಳ ದಿನ ಬಹಳ ವಿಶೇಷವಾಗಿರಲಿದೆ. ಈ ದಿನ ನಿಜವಾದ ಪ್ರೀತಿ ಸಿಗುತ್ತದೆ. ನಿಮ್ಮ ಪ್ರೀತಿಯ ಜೀವನ ಈ ದಿನದಿಂದ ಪ್ರಾರಂಭವಾಗುತ್ತದೆ. ವಿವಾಹಿತರ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಈ ದಿನಕ್ಕಾಗಿ ನೀವು ಮಾಡಿದ ಪ್ರಯತ್ನಗಳೆಲ್ಲವೂ ಫಲ ಕೊಡಲಿದೆ.
ವೃಷಭ ರಾಶಿ (Taurus)
ಈ ಪ್ರೇಮಿಗಳ ದಿನವು ವೃಷಭ ರಾಶಿಯವರಿಗೆ ತುಂಬಾ ಅದ್ಭುತವಾಗಿರಲಿದೆ. ಅನೇಕ ರೀತಿಯ ಉಡುಗೊರೆಗಳು ಸಿಗಬಹುದು. ಜೊತೆಗೆ, ಬಹು ಕಾಲದ ನಿರೀಕ್ಷೆಯ ಪ್ರೀತಿ ಒಲಿಯಲಿದೆ. ಈಗಾಗಲೇ ಪ್ರೀತಿಯಲ್ಲಿರುವ ಜನರು, ಅವರ ಸಂಬಂಧವು ಈ ದಿನದಲ್ಲಿ ಪ್ರಗತಿ ಹೊಂದಬಹುದು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಮದುವೆ ಕೂಡ ಸ್ಥಿರವಾಗುವ ಸಾಧ್ಯತೆಯಿದೆ.
3 ರಾಶಿಗಳಿಗೆ ಹಣದ ಹೊಳೆ ಹರಿಸುವ ತ್ರಿಗ್ರಾಹಿ ಯೋಗ
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯವರು ಪ್ರೇಮಿಗಳ ದಿನದಂದು ಅನೇಕ ಆಶ್ಚರ್ಯಗಳನ್ನು ಪಡೆಯುತ್ತಾರೆ. ಈ ದಿನ ನೀವು ಬಯಸಿದ ಜೀವನ ಸಂಗಾತಿಯನ್ನು ಪಡೆಯುವ ಎಲ್ಲಾ ಸಾಧ್ಯತೆಗಳನ್ನು ಹೊಂದಿರುತ್ತೀರಿ. ನೀವು ಯಾರನ್ನಾದರೂ ಇಷ್ಟಪಟ್ಟರೆ, ಪ್ರೇಮಿಗಳ ದಿನದಂದು ಖಂಡಿತವಾಗಿಯೂ ನಿಮ್ಮ ಹೃದಯದ ಮಾತನ್ನು ಅವರಿಗೆ ತಿಳಿಸಿ. ನಿಮ್ಮ ಪ್ರಸ್ತಾಪವನ್ನು ಸ್ವೀಕರಿಸುವ ಸಾಧ್ಯತೆಯಿದೆ.
ಕನ್ಯಾ ರಾಶಿ (Virgo)
ಪ್ರೇಮಿಗಳ ದಿನದಂದು ಕನ್ಯಾ ರಾಶಿಯವರ ಜೀವನದಲ್ಲಿ ಹೊಸ ವ್ಯಕ್ತಿ ಬರಬಹುದು. ಈ ವಿಶೇಷ ವ್ಯಕ್ತಿ ನಿಮ್ಮ ಜೀವನದಲ್ಲಿ ಪ್ರೀತಿಯನ್ನು ತರಬಹುದು. ಈ ರಾಶಿಯವರಿಗೆ ಪ್ರೇಮಿಗಳ ದಿನವು ಸಂತಸದಿಂದ ಕೂಡಿರಲಿದೆ. ಇಂದು ನೀವು ಮನಸ್ಸು ಬಿಚ್ಚಿ ಮಾತನಾಡುವುದರಿಂದ ಹೆಚ್ಚಿನ ಲಾಭ ಅನುಭವಿಸುವಿರಿ.
ತುಲಾ ರಾಶಿ (Libra)
ಈ ರಾಶಿಯವರಿಗೆ ಪ್ರೇಮಿಗಳ ದಿನವು ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ. ಪ್ರೇಮಿಗಳ ನಡುವಿನ ಪ್ರೀತಿ ಬಲವಾಗಿರುತ್ತದೆ. ನೀವಿಬ್ಬರೂ ಒಟ್ಟಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಒಂಟಿ ಜನರು ಈ ದಿನದಂದು ಬಯಸಿದ ಪ್ರೀತಿಯನ್ನು ಪಡೆಯಬಹುದು. ಇದರಿಂದಾಗಿ ಈ ದಿನ ಜೀವನದಲ್ಲೇ ಎಂದೂ ಮರೆಯದ ದಿನವಾಗಿ ಅಚ್ಚೊತ್ತಬಹುದು.
ಈ ನಾಲ್ಕು ರಾಶಿಯ ಹುಡುಗಿಯರಿಗೆ ಲಕ್ಷ್ಮಿ, ಸರಸ್ವತಿ ಇಬ್ಬರ ಕೃಪೆಯೂ ಇದೆ!
ಧನು ರಾಶಿ (Sagittarius)
ಈ ವರ್ಷದ ಪ್ರೇಮಿಗಳ ದಿನವು ಧನು ರಾಶಿಯವರಿಗೆ ತುಂಬಾ ಅದೃಷ್ಟವನ್ನು ನೀಡುತ್ತದೆ. ಪ್ರೇಮಿಗಳ ದಿನದಂದು, ನೀವು ಹುಡುಕುತ್ತಿರುವ ಯಾರನ್ನಾದರೂ ನೀವು ಭೇಟಿ ಮಾಡಬಹುದು. ಈ ದಿನದಂದು ನೀವು ನಿಜವಾದ ಪ್ರೀತಿಯನ್ನು ಕಂಡುಕೊಳ್ಳುತ್ತೀರಿ. ನಿಮ್ಮನ್ನು ಪ್ರೀತಿಸುವ ವ್ಯಕ್ತಿ ನಿಮ್ಮ ಗಮನ ಸೆಳೆಯಲು, ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಬಹುದು. ಇದರಿಂದ ಮನಸ್ಸಿನಲ್ಲಿ ಹಬ್ಬದ ವಾತಾವರಣ ತುಂಬಿಕೊಳ್ಳುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.