ಹುಟ್ಟಿದ ರಾಶಿಗೂ ಲೈಂಗಿಕ ವಾಂಛೆಗೂ ಇದ್ಯಾ ನಂಟು? ಈ ರಾಶಿಯವರಲ್ಲಿ Sex Drive ಹೆಚ್ಚು

Published : Apr 04, 2022, 10:25 AM IST
ಹುಟ್ಟಿದ ರಾಶಿಗೂ ಲೈಂಗಿಕ ವಾಂಛೆಗೂ ಇದ್ಯಾ ನಂಟು? ಈ ರಾಶಿಯವರಲ್ಲಿ Sex Drive ಹೆಚ್ಚು

ಸಾರಾಂಶ

ಲೈಂಗಿಕಾಸಕ್ತಿಗೆ ಲಿಬಿಡೋ ಮಾತ್ರ ಕಾರಣವಲ್ಲ, ಹುಟ್ಟಿದ ರಾಶಿ, ನಕ್ಷತ್ರಗಳೂ ಕಾರಣವಾಗುತ್ತದೆ. ಈ ಆರು ರಾಶಿಯವರಲ್ಲಿ ಲೈಂಗಿಕ ವಾಂಛೆ ಹೆಚ್ಚು. 

ಮನುಷ್ಯನ ಜೀವನದ ಮೇಲೆ ರಾಶಿ-ನಕ್ಷತ್ರಗಳು ವಿಪರೀತ ಪ್ರಭಾವ ಬೀರುತ್ತವೆ. ಅವನ ಏಳು-ಬೀಳಿಗೆ ಜಾತಕದ ಗ್ರಹ ಗತಿಗಳೇ ಕಾರಣ. ಅಷ್ಟೇ ಅಲ್ಲ ಗುಣ ಸ್ವಭಾವಕ್ಕೂ, ರಾಶಿಗೂ ಇವೆ ನಂಟು. ಅದೇ ಪಾಲಿಸಿ ಅವನು ಲೈಂಗಿಕಾಸಕ್ತಿಗೂ ಕಾರಣವಾಗುತ್ತೆ. ಈ ಆರು ರಾಶಿಯವರಲ್ಲಿ ಲೈಂಗಿಕ ವಾಂಛೆಗಳು ಉಳಿದ ರಾಶಿಗಳವರಿಗಿಂತ ಹೆಚ್ಚು. 

ಮೇಷ (Aries) ರಾಶಿ
ಮೇಷ ಎಂದರೆ ಟಗರು. ಇವರಿಗೆ ಟಗರಿನ ಶಕ್ತಿ. ಕಾಮಾಸಕ್ತಿ ಹೆಚ್ಚು. ಎಲ್ಲರಿಗಿಂತ ಹೆಚ್ಚೇ ಎನ್ನುವಷ್ಟು ಲೈಂಗಿಕ ಆಸಕ್ತಿ ಇರುತ್ತದೆ. ಇವರನ್ನು ಒಲಿಸಿಕೊಳ್ಳಬೇಕಾದರೆ,  ಅಥವಾ ಕೆಲಸ ಮಾಡಿಸಿಕೊಳ್ಳಿಸಿಕೊಳ್ಳಬೇಕಾದರೆ ಸೆಕ್ಸ್ ಆಮಿಷ ಒಡ್ಡಿದರಾಗುತ್ತದೆ. ಮಹಿಳೆಯರಿಗೂ, ಪುರುಷರಿಗೂ ಸಮಾನವಾಗಿ ಅನ್ವಯವಾಗುವ ಪಾಲಿಸಿ ಇದು. ಇವರ ದೇಹಕ್ಕೆ ಕಾಮದ ಅಗತ್ಯ ಹೆಚ್ಚು. ಸಂಪೂರ್ಣ ತೃಪ್ತಿಯೂ ಆಗೋಲ್ಲ ಬಿಡಿ. ಅಲ್ಲದೇ ಅದನ್ನು ಪಡೆಯಲು ಏನು ಬೇಕಾದರೂ ಮಾಡುತ್ತಾರೆ ಈ ರಾಶಿಯವರು.

ತುಲಾ (Libra) ರಾಶಿ
ಮಂಚದ ಮೇಲೆ ಭಯಂಕರ ಸಾಮರ್ಥ್ಯ ತೋರಬಲ್ಲ ಇವರು, ತಮ್ಮ ಸಂಗಾತಿಯನ್ನೂ (Companion) ತೃಪ್ತಿ ಪಡಿಸಬಲ್ಲರು. ಮೇಷಕ್ಕಿಂತ ವಿಭಿನ್ನ ಇವರು. ತಾವೂ ತೃಪ್ತರಾಗುತ್ತಾರೆ ಬೇಗ. ಸಂಗಾತಿ ದೊರೆಯದಿದ್ದರೂ  ಇವರು ತಮ್ಮ ಕಾಮಾಸಕ್ತಿಯನ್ನು ತಣಿಸಿಕೊಳ್ಳುವ ನಾನಾ ಕಲೆಗಳನ್ನು ಬಲ್ಲರು. ಕಲಾತ್ಮಕವಾಗಿಯೂ ಅವನ್ನು ಅವರು ಅಭಿವ್ಯಕ್ತಪಡಿಸುತ್ತಾರೆ. ಪ್ರೇಮ ನಿವೇದನೆಯಲ್ಲಿ ಕರಾತಲಮಲಕ. 

Astrology: ರಸ್ತೆಯಲ್ಲಿ ದುಡ್ಡು ಸಿಕ್ಕರೆ ಏನು ಅರ್ಥ..?!!

ವೃಷಭ (Taurus) ರಾಶಿ
ವೃಷಭದಂತೆಯೇ ಇವರು. ನಂಬರ್ ಒನ್ ಸ್ಥಾನಕ್ಕೆ ಸ್ಪರ್ಧಿಸಬಲ್ಲರು. ಇವರ ಜನ್ಮರಾಶಿಯ ಅರ್ಥವೇ ಗೂಳಿ ಅಲ್ಲವೇ?  ಗೂಳಿಗೆ ಲೈಂಗಿಕ ಸಾಮರ್ಥ್ಯ (Sexual Power) ಅತ್ಯಧಿಕ ಎಂಬುವುದು universal truth ಅಲ್ಲವೇ? ಹಾಗೆಯೇ ಇವರು ತಮ್ಮ ಮಂಚದ ಸಂಗಾತಿಗಳ ಜೊತೆ ಹೆಚ್ಚಿನ ಎಮೋಷನಲ್ ಅಟ್ಯಾಚ್ಮೆಂಟ್ (Emotional Attachment) ಕೂಡ ಇಟ್ಟುಕೊಳ್ಳಲಾರರು. ಒಳ್ಳೆಯ ಪ್ರೇಮಿಗಳಾಗೋದು ಇವರಿಗೆ ಹೇಳಿ ಮಾಡಿಸಿದ್ದಲ್ಲ. ಆದರೆ, ಸುಖಪುರುಷರು. 

ಮಕರ (Capricorn) ರಾಶಿ
ಕಾಮಕ್ಕಾಗಿ ಸದಾ ಹಾತೊರೆಯುತ್ತಾರೆ. ಲೈಂಗಿಕ ತೃಪ್ತಿಗಾಗಿ ಏನು ಬೈಕಾದರೂ ಮಾಡಲು ಸಿದ್ಧರಿರುತ್ತಾರೆ. ಆದರೆ ಅವರ ಮನಸ್ಸಿನ ಆಸಕ್ತಿಯಂತೆಯೇ ಅವರ ದೇಹವೂ ಸಹಕರಿಸುತ್ತೆ ಎನ್ನುವುದು ಕಷ್ಟ ಬಿಡಿ. ತಮ್ಮ ಬಯಕೆಗಳನ್ನು ತಣಿಸುವುದಕ್ಕಾಗಿ ಚಿತ್ರ ವಿಚಿತ್ರ ತಂತ್ರ, ಸಾಧನಗಳ ಮೊರೆ ಹೋಗಲೂ ಈ ರಾಶಿಯವರು ರೆಡಿ. ಹಾಗೆಯೇ ತಮಗೆ ಇಂಥದೇ ಸಂಗಾತಿಗಳಾಗಬೇಕು ಎಂಬ ನಿರ್ದಿಷ್ಟ  ಬಯಕೆಯೂ ಇರೋಲ್ಲ. ಆ ಕ್ಷಣಕ್ಕೆ ಯಾರು ಸಿಗತ್ತಾರೋ ಅವರನ್ನು ಪ್ರೇಮಿಸಲು ಇವರು ಸಿದ್ಧರಾಗಿ ಬಿಡುತ್ತಾರೆಂದರೆ ನಂಬಲೇ ಬೇಕು.

Chanakya Niti: ಈ ವಿಷಯಗಳಿಗೆ ಹಣ ಖರ್ಚು ಮಾಡಿದರೆ ಕೊಟ್ಟಿದ್ದಕ್ಕಿಂತ ಪಡೆದದ್ದೇ ಹೆಚ್ಚಾಗಿರಲಿದೆ!

ಮೀನ (Pisces) ರಾಶಿ 
ತಮ್ಮ ಬ್ಗಗೆ ಹೆಚ್ಚಿನ ಆತ್ಮಾಭಿಮಾನ ಹೊಂದಿರುವ ಮೀನ ರಾಶಿಯವರು ಅಷ್ಟು ಸುಲಭವಾಗಿ ಸಂಗಾತಿಗಳನ್ನು ಒಪ್ಪುವುದಿಲ್ಲ. ತಮ್ಮ ಸಂಗಾತಿ ಕೂಡ ತಮ್ಮಷ್ಟೇ ಪ್ರೇಮಿಯಾಗಿರಬೇಕು ಎಂದೇ ಆಶಿಸುತ್ತಾರೆ. ಮಂಚದಲ್ಲಿ ಇವರಿಗೆ ತೋರುವ ದೈಹಿಕ ಸಾಮರ್ಥ್ಯಕ್ಕಿಂತಲೂ ತಮ್ಮ ದೇಹದ ಬಗ್ಗೆ ಸಂಗಾತಿ ಹೆಚ್ಚಿನ ಮೆಚ್ಚುಗೆ, ಪ್ರೀತಿ ವ್ಯಕ್ತಪಡಿಸಬೇಕು ಎಂದು ಬಯಸುತ್ತಾರೆ. ಈ ರಾಶಿಯವರನ್ನು ನೀವು ಒಲಿಸಿಕೊಳ್ಳಬೇಕೆಂದಿದ್ದರೆ, ಹೊಗಳದೆ ನಿಮಗೆ ಬೇರೆ ಉಪಾಯವೇ ಇಲ್ಲ. ಹೊಗಳಿಕೆ ಬೇಗ ಬೋಲ್ಡ್ ಆಗುವ ರಾಶಿಯವರು ಇವರು.

ಸಿಂಹ (Leo) ರಾಶಿ
ಹೆಸರೇ ಸೂಚಿಸುವಂತೆ ಅಧಿಕಾರ ಸ್ಥಾಪಿಸುವ ಸ್ವಭಾವವನ್ನು ಹೆಚ್ಚು ಸಿಂಹ ರಾಶಿಯವರು ಹೊಂದಿರುತ್ತಾರೆ. ಅವರ ಈ ಸ್ವಭಾವ ಮಂಚದ ಮೇಲೂ ಕಾಣಿಸಿಕೊಳ್ಳುತ್ತದೆ. ಇವರು ತಮ್ಮ ಸಂಗಾತಿಗಿಂತ ತುಸು ಕೆಳಗೆ ಎನಿಸಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಹೆಚ್ಚಿನ ಸಾಮರ್ಥ್ಯ ತೋರಿಸಲು ಮುಂದಾಗುತ್ತಾರೆ. ಸಂಗಾತಿಯನ್ನು ತೃಪ್ತಿಪಡಿಸುವುದರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಗಳಿಸಿಕೊಳ್ಳುತ್ತಾರೆ. ಮಂಚದಲ್ಲಿ ಸೋಲಾದರೆ ಮತ್ತೇನಿಲ್ಲ. ಚಿಂತೆ ಇವರನ್ನು ಕಾಡಲು ಶುರುವಾಗುತ್ತದೆ.

PREV
Read more Articles on
click me!

Recommended Stories

ಉಡುಪಿಯಲ್ಲಿ ಮಿನಿ ಕುಂಭ.. ಶ್ರೀಲ ಪ್ರಭುಪಾದರಿಗೆ 'ವಿಶ್ವಗುರು' ಗೌರವ: ಪುತ್ತಿಗೆ ಮಠದಲ್ಲಿ ಐತಿಹಾಸಿಕ ಕ್ಷಣ
Ramayana: ಲಕ್ಷ್ಮಣನ ವಿಜಯದ ಹಿಂದೆ ಊರ್ಮಿಳೆಯ ನಿದ್ರೆಯ ರಹಸ್ಯ!