Jupiter Transit: 12 ವರ್ಷಗಳ ಬಳಿಕ ಗುರು ಮೀನಕ್ಕೆ, ಈ 5 ರಾಶಿಗಳಿಗಿನ್ನು ಪರ್ವ ಕಾಲ

By Suvarna News  |  First Published Apr 10, 2022, 11:47 AM IST

ಬರೋಬ್ಬರಿ 12 ವರ್ಷಗಳ ಬಳಿಕ ಗುರು ಗ್ರಹವು ಏಪ್ರಿಲ್ 13ರಂದು ತನ್ನದೇ ರಾಶಿಯಾದ ಮೀನಕ್ಕೆ ಪ್ರವೇಶಿಸುತ್ತಿದೆ. ಇದರಿಂದ 5 ರಾಶಿಯವರ ಬಾಳಿನಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ಕಾಣಬಹುದಾಗಿದೆ. 


ಜ್ಯೋತಿಷ್ಯದ ವಿಚಾರಕ್ಕೆ ಬಂದರೆ ಈ ಏಪ್ರಿಲ್ ಅತ್ಯಂತ ಮಹತ್ವದ ತಿಂಗಳು. ಒಂದಲ್ಲಾ, ಎರಡಲ್ಲಾ.. ಎಲ್ಲ 9 ಗ್ರಹಗಳೂ(planets) ಈ ತಿಂಗಳಲ್ಲಿ ರಾಶಿ ಬದಲಿಸಲಿವೆ. ಇದರ ಪರಿಣಾಮವು ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಅಗಾಧವಾಗಿರುತ್ತದೆ. ಕೆಲವು ರಾಶಿ(zodiac)ಯವರಿಗೆ ಬಹಳಷ್ಟು ಶುಭವಾದರೆ, ಮತ್ತೆ ಕೆಲ ರಾಶಿಗಳಿಗೆ ಈ ಬದಲಾವಣೆಗಳು ಅಶುಭವುಂಟು ಮಾಡುತ್ತವೆ. ಈಗ ಸಧ್ಯ ಏಪ್ರಿಲ್ 13ರಂದು ಬರೋಬ್ಬರಿ 12 ವರ್ಷಗಳ ಬಳಿಕ ದೇವಗುರು ಎನಿಸಿಕೊಂಡ ಗುರು ಗ್ರಹ(Jupiter)ವು ತನ್ನ ಸ್ವಂತ ರಾಶಿಯಾದ ಮೀನ(Pisces)ಕ್ಕೆ ಕಾಲಿಡುತ್ತಿದೆ. ಆ ದಿನ ಬೆಳಗ್ಗೆ 11.23ಕ್ಕೆ ಈ ವಿಶೇಷ ಗೋಚಾರ ನಡೆಯಲಿದೆ. ಬಹಳ ಶುಭ ಗ್ರಹವೆನಿಸಿರುವ ಗುರುವಿನ ಈ ರಾಶಿ ಪರಿವರ್ತನೆಯಿಂದ 5 ರಾಶಿಗಳು ಬಹಳ ಒಳ್ಳೆಯ ದಿನಗಳನ್ನು ನೋಡಲಿವೆ. ಅವು ಯಾವ ರಾಶಿಗಳು ನೋಡೋಣ. 

ಮೇಷ(Aries) 
ಗುರು ಪರಿವರ್ತನೆ ಬಳಿಕ, ಗುರುವು ಮೇಷ ರಾಶಿಯ 12ನೇ ಮನೆಯಲ್ಲಿ ಸಾಗಲಿದ್ದಾನೆ. ಈ ಅವಧಿಯಲ್ಲಿ ಮೇಷ ರಾಶಿಯವರಿಗೆ ವಿದೇಶ ಪ್ರವಾಸದ ಅವಕಾಶಗಳು ದೊರೆಯುತ್ತವೆ. ಧರ್ಮ ಕಾರ್ಯಗಳಲ್ಲಿ(works of religion) ಆಸಕ್ತಿ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ ಮತ್ತು ವ್ಯಾಪಾರದಲ್ಲಿ ಲಾಭ(profit in business)ದ ಸಾಧ್ಯತೆಯಿದೆ.

Tap to resize

Latest Videos

ವೃಷಭ(Taurus) 
ಗುರುವು ಈ ರಾಶಿಚಕ್ರದ 11ನೇ ಮನೆಯಲ್ಲಿ ಸಾಗಲಿದ್ದಾನೆ. ಈ ಮನೆಯು ಆದಾಯಕ್ಕೆ ಸಂಬಂಧಿಸಿದೆ. ಆದಾಯದ ಸ್ಥಳದಲ್ಲಿ ಗುರುವನ್ನು ಹೊಂದುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಗೋಚಾರ ಅವಧಿಯಲ್ಲಿ ಕೆಲವು ದೊಡ್ಡ ಲಾಭಗಳ ಸಾಧ್ಯತೆಯಿದೆ. ರಹಸ್ಯ ಮೂಲಗಳಿಂದ ಲಾಭದ ಅವಕಾಶವೂ ಇದೆ. ಕೌಟುಂಬಿಕ ಸಂಬಂಧ(family relationships)ಗಳಲ್ಲಿ ಮಾಧುರ್ಯವಿರುತ್ತದೆ ಮತ್ತು ಈ ಸಮಯವು ವಿದ್ಯಾರ್ಥಿಗಳಿಗೂ ಪ್ರಯೋಜನಕಾರಿಯಾಗಿದೆ.

Chaitra Navratri 2022: ನವಮಿಯಂದು ಸಿದ್ಧಿಧಾತ್ರಿಯ ಆರಾಧನೆ ಮಾಡಿ

ಮಿಥುನ(Gemini) 
ಗುರು ಸಂಕ್ರಮಣದಿಂದ ಮಿಥುನ ರಾಶಿಗೆ ಸಾಕಷ್ಟು ಲಾಭ ಕಂಡುಬರುವುದು. 10ನೇ ಮನೆಯನ್ನು ಕರ್ಮ ಎಂದು ಪರಿಗಣಿಸಲಾಗುತ್ತದೆ. ಈ ಮನೆಯಲ್ಲಿ ಗುರುವಿನ ಪ್ರವೇಶವಾಗುವುದರಿಂದ ನೀವು ಉದ್ಯೋಗದಲ್ಲಿ ಯಶಸ್ಸನ್ನು ಪಡೆಯಬಹುದು. ಔಷಧಿ, ಕಾನೂನು ಮತ್ತು ಆಹಾರಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿ ತೊಡಗಿರುವ ಜನರಿಗೆ ಈ ಚಲನೆ ಅನುಕೂಲಕರವಾಗಿರುತ್ತದೆ. ನೀವು ವೃತ್ತಿಜೀವನದಲ್ಲಿ ಯಾವುದೇ ಉನ್ನತ ಸ್ಥಾನವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಸಾಮಾಜಿಕವಾಗಿ ಗೌರವ ಹೆಚ್ಚುತ್ತದೆ.

ಕರ್ಕಾಟಕ(Cancer)
ಗುರು ಗ್ರಹವು ಕರ್ಕಾಟಕದ 9ನೇ ಮನೆಯಲ್ಲಿ ಸಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 9ನೇ ಮನೆ ಅದೃಷ್ಟ(Luck)ಕ್ಕೆ ಸಂಬಂಧಿಸಿದ್ದು. ಹಾಗಾಗಿ, ಗುರು ಗೋಚಾರದ ಸಂಪೂರ್ಣ ಅವಧಿಯು ಈ ರಾಶಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ಉದ್ಯೋಗ ಸ್ಥಳದಲ್ಲಿ ಮಾಡಿದ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಸಂಬಳವೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಈ ಸಾಗಣೆಯು ವ್ಯಾಪಾರಸ್ಥರಿಗೂ ಪ್ರಯೋಜನಕಾರಿಯಾಗಿದೆ. ವ್ಯಾಪಾರದಲ್ಲಿ ದೈನಂದಿನ ಆದಾಯ ಹೆಚ್ಚಾಗುತ್ತದೆ.

ಬುಧ ಗೋಚಾರ 2022: ಕಟಕ, ಕನ್ಯಾ ಸೇರಿ ಈ ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ!

ಸಿಂಹ(Leo)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವಿನ ಸಂಚಾರವು ಸಿಂಹ ರಾಶಿಯ 8ನೇ ಮನೆಯಲ್ಲಿರುತ್ತದೆ. ಈ ಕಾರಣದಿಂದಾಗಿ, ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಸುಧಾರಿಸುತ್ತದೆ. ಪ್ರಗತಿಯ ಅನೇಕ ಹೊಸ ಮಾರ್ಗಗಳು ಕಂಡು ಬರುತ್ತವೆ. ಈ ಅವಧಿಯಲ್ಲಿ ವೈವಾಹಿಕ ಜೀವನದಲ್ಲಿ ಬೇರೆಯವರ ಹಸ್ತಕ್ಷೇಪವು ಸಂಬಂಧದಲ್ಲಿ ಬಿರುಕು ಉಂಟು ಮಾಡಬಹುದು. ಆದ್ದರಿಂದ ಅದರ ಬಗ್ಗೆ ಜಾಗರೂಕರಾಗಿರಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!