Lord Kubera: ದುಷ್ಟ ರಾಕ್ಷಸ ಕುಬೇರ ದೇವರಾದದ್ದು ಹೇಗೆ?

Published : Dec 09, 2021, 02:38 PM ISTUpdated : Dec 09, 2021, 02:42 PM IST
Lord Kubera: ದುಷ್ಟ ರಾಕ್ಷಸ ಕುಬೇರ ದೇವರಾದದ್ದು ಹೇಗೆ?

ಸಾರಾಂಶ

ಕುಬೇರನ ಹೆಸರು ಎಲ್ಲರೂ ಕೇಳಿರುತ್ತೇವೆ. ಆತ ಸಂಪತ್ತಿಗೆ ಅಧಿಪತಿ ಎಂದೂ ಗೊತ್ತು. ಆದರೆ, ಕುಬೇರನ ಕತೆಯೇನು ಗೊತ್ತಾ?

ಕುಬೇರ(Kubera) ಎಂದರೆ ಸಂಪತ್ತಿನ ಅಧಿಪತಿ. ದೇವರ ಆಸ್ತಿಯ ಖಜಾಂಚಿ. ಭೂಮಿ ಮೇಲಿನ ಎಲ್ಲ ಖನಿಜ, ಆಭರಣ ಸೇರಿದಂತೆ ಪ್ರತಿ ಆಸ್ತಿಯೂ ಕುಬೇರನ ಸಂಪತ್ತೇ. ಕುರೂಪಿಯಾಗಿ ಯಕ್ಷರ ರಾಜನಾಗಿದ್ದ ಕುಬೇರ ದೇವರ ಸ್ಥಾನಕ್ಕೇರಿದ್ದು ಹೇಗೆ, ಯಾವಾಗ, ಈತನ ಕತೆಯೇನು- ಎಲ್ಲವೂ ರೋಚಕವಾಗಿದೆ. 

ಯಾರು ಈ ಕುಬೇರ?
ಹಿಂದೂಗಳ ನಂಬಿಕೆಯಂತೆ, ಎಲ್ಲ ದಿಕ್ಕನ್ನೂ ಕಾಯಲು ಒಬ್ಬೊಬ್ಬ ರಕ್ಷಕನಿರುತ್ತಾನೆ. ಇವರನ್ನೇ ದಿಕ್ಪಾಲಕರು ಎನ್ನುವುದು. ಹಾಗೆ 10 ದಿಕ್ಕಿಗೆ ಒಟ್ಟಿ 10 ದಿಕ್ಪಾಲಕರಿದ್ದಾರೆ. ಉತ್ತರ(North) ದಿಕ್ಕಿನ ಪಾಲಕ ಈ ಕುಬೇರ. ರಾಮಾಯಣ ಹಾಗೂ ಬ್ರಹ್ಮಪುರಾಣದಲ್ಲಿ ಹೇಳಿರುವಂತೆ, ಕುಬೇರನು ರಾವಣ(Ravana)ನ ಮಲ ಸಹೋದರ. ರಾವಣನ ತಂದೆ ವಿಶ್ರವ(Vishrava)ನೇ ಕುಬೇರನಿಗೂ ತಂದೆಯಾಗಿದ್ದಾನೆ. ಆದರೆ ತಾಯಿ ಬೇರೆ. 

Anagha Devi: ದತ್ತಾತ್ರೇಯ ಸ್ವಾಮಿಯ ಹೆಣ್ಣು ರೂಪ ಅನಘಾ ದೇವಿ

ಕುರೂಪಿ, ಕುಳ್ಳ
ಕುಬೇರನು ಬಹಳ ಕುರೂಪಿಯಾಗಿದ್ದ. ಆತ ಕುಳ್ಳನಾಗಿದ್ದು, ಎಣ್ಣೆಗೆಂಪು ಬಣ್ಣದವನೂ, ದೊಡ್ಡ ಹೊಟ್ಟೆಯವನೂ ಆಗಿದ್ದ. ಅವನಿಗೆ ಹುಟ್ಟುವಾಗಲೇ ಕೆಲ ದೈಹಿಕ ನ್ಯೂನತೆ(deformities)ಗಳಿದ್ದವು. ಅವನಿಗಿದ್ದದ್ದು ಎಂಟೇ ಹಲ್ಲು, ಒಂದು ಕಣ್ಣು ಹಾಗೂ ಮೂರು ಕಾಲುಗಳು. ಅವನ ಈ ರೂಪದಿಂದ ಕೆಟ್ಟ ಶಕ್ತಿಗಳ ನಾಯಕ ಎಂದು ಅವನನ್ನು ಕರೆಯಲಾಗುತ್ತಿತ್ತು. ಮೈತುಂಬಾ ಆಭರಣಗಳನ್ನು ಹೇರಿಕೊಂಡೇ ಓಡಾಡುತ್ತಿದ್ದ ಕುಬೇರ ಒಂದು ಕೈಲಿ ಆಯುಧವನ್ನೂ ಮತ್ತೊಂದರಲ್ಲಿ ಹಣದ ಚೀಲ(money bag)ವನ್ನೂ ಇಟ್ಟುಕೊಂಡಿರುತ್ತಿದ್ದ. 

Career Horoscope 2022: ಹೊಸ ವರ್ಷಕ್ಕೆ ಈ ರಾಶಿಯವರ ಲಕ್ ತಿರುಗ್ತು ಅಂತಾನೇ ಲೆಕ್ಕ!

ಹೆಸರುಗಳು
ಕುಬೇರ ಹೆಸರಿನಲ್ಲಿ ಕು ಎಂದರೆ ಭೂಮಿಯೆಂದೂ ವೇರ ಎಂದರೆ ನಾಯಕತ್ವ ಎಂದೂ ಸೂಚಿಸಲಾಗುತ್ತದೆ. ಶಿವ ಹಾಗೂ ಪಾರ್ವತಿಯ ಕಡೆಗೆ ಹೊಟ್ಟೆಕಿಚ್ಚು ಪಟ್ಟಿದ್ದರಿಂದ ಅವನು ತನ್ನ ಒಂದು ಕಣ್ಣು ಕಳೆದುಕೊಂಡ. ಆ ಕಣ್ಣು ಪಾರ್ವತಿಯ ಶಾಪದಿಂದ ಹಳದಿಯಾಯಿತು ಎನ್ನಲಾಗುತ್ತದೆ. ಹೀಗೆ ಹಳದಿ ಕಣ್ಣು ಹೊಂದಿರುವ ಇವನಿಗೆ ಎಕಕ್ಸಿಪಿಂಗಲ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕುಬೇರನನ್ನು ರಾಕ್ಷಸರ ದೇವರೆಂದು ಹೇಳಲಾಗುವುದರಿಂದ ಈತನಿಗೆ ಭೂತೇಶ ಎಂದೂ ಕರೆಯಲಾಗುತ್ತದೆ. ಈತ ಮನುಷ್ಯನನ್ನೇ ವಾಹನವಾಗಿ ಬಳಸುವುದರಿಂದ ನರ ವಾಹನ ಎಂಬ ಹೆಸರೂ ಕುಬೇರನಿಗಿದೆ. 
ಅಸುರ ಮುರನ ಮಗಳಾದ ಭದ್ರ ಕುಬೇರನ ಪತ್ನಿ. ಇವರಿಗೆ ನಾಲ್ಕು ಮಕ್ಕಳಿದ್ದು ನಲಕುವರ, ಮನಿಗ್ರೀವ, ಮಯೂರಜ ಹಾಗೂ ಮೀನಾಕ್ಷಿ ಅವರ ಹೆಸರು. 

ದೇವರ ಸ್ಥಾನ
ದುಷ್ಟ ಶಕ್ತಿಗಳ ಮುಖ್ಯಸ್ಥನೆಂದೇ ಬಿಂಬಿತನಾದವನು ಕುಬೇರ. ಆದರೆ, ಬ್ರಹ್ಮನ ವರದಿಂದಾಗಿ ಈತನಿಗೆ ಜಗತ್ತಿನ ಸಂಪತ್ತೆಲ್ಲ ಸಿಗುವುದಲ್ಲದೆ, ದೇವರ ಸ್ಥಾನವೂ ಸಿಗುತ್ತದೆ. ಬ್ರಹ್ಮನು ಪುಷ್ಪಕ ವಿಮಾನವನ್ನು ಉಡುಗೊರೆಯಾಗಿ ಕುಬೇರನಿಗೆ ನೀಡುತ್ತಾನೆ. ಈ ಶಕ್ತಿಗಳನ್ನು ಬಳಸಿಕೊಂಡು ಕುಬೇರ ಲಂಕೆಯನ್ನಾಳುತ್ತಾನೆ. ಆದರೆ, ನಂತರದಲ್ಲಿ ಲಂಕೆ ಹಾಗೂ ಪುಷ್ಪಕ ವಿಮಾನವನ್ನು ಕಸಿದುಕೊಳ್ಳುವ ರಾವಣ, ಕುಬೇರನನ್ನು ಲಂಕೆಯಿಂದ ಹೊರಗಟ್ಟುತ್ತಾನೆ. ನಂತರ ಕುಬೇರ ಕೈಲಾಸದ ಬಳಿಯಿದ್ದ ಗಂಧಮದನ ಪರ್ವತ(Gandhamadana Mountain)ದ ಬಳಿ ನೆಲೆಸುತ್ತಾನೆ. ಇಲ್ಲಿ ಕುಬೇರನ ಸ್ವಂತದ ಕಾಡಿರುತ್ತದೆ. ಈ ಕಾಡಿನ ಮರದ ಎಲೆಗಳೆಲ್ಲ ಬಂಗಾರದ್ದಾಗಿದ್ದಲ್ಲದೆ, ಅಪ್ಸರೆಯರೇ ಇಲ್ಲಿನ ಹಣ್ಣುಗಳಾಗಿರುತ್ತಾರೆ. ಇಲ್ಲಿರುವ ಸುಂದರ ಕೊಳ ನಳಿನಿ. ಕುಬೇರನ ಅರಮನೆಯ ಸೌಂದರ್ಯವನ್ನು ಶಿವ ಪಾರ್ವತಿಯರೇ ಮೆಚ್ಚಿ ಕೊಂಡಾಡುತ್ತಾರೆ. ಗಂಧರ್ವರು ಹಾಗೂ ಅಪ್ಸರೆಯರಿಂದ ಈ ಅರಮನೆಯಲ್ಲಿ ಸದಾ ಮನರಂಜನೆ ನಡೆಯುತ್ತಿರುತ್ತದೆ. 

ಬೇರೆ ಧರ್ಮದಲ್ಲಿ ಕುಬೇರ
ಕುಬೇರ ಕೇವಲ ಹಿಂದೂ ಧರ್ಮಕ್ಕೆ ಸೀಮಿತವಲ್ಲ. ಬೌದ್ಧರು(Buddhist) ಹಾಗೂ ಜೈನ(Jain)ರು ಕೂಡಾ ಕುಬೇರನನ್ನು ದೇವರೆಂದು ಆರಾಧಿಸುತ್ತಾರೆ. ಬೌದ್ಧರು ಜಾಂಭಾಲ ಹೆಸರಿನಿಂದ ಕುಬೇರನನ್ನು ಕರೆದರೆ, ಜಪಾನಿಗರು ಆತನನ್ನು ಬಿಶಾಮನ್ ಎನ್ನುತ್ತಾರೆ. ಜೈನರಲ್ಲಿ 19ನೇ ತೀರ್ಥಂಕರ ಮಲ್ಲಿನಾಥನ ಸಹಾಯಕ ಯಕ್ಷನಾಗಿ ಕುಬೇರನನ್ನು ನೋಡುತ್ತಾರೆ. ಅವನಿಗೆ ಸರ್ವಾನುಭೂತಿ ಎನ್ನುತ್ತಾರೆ. 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ