ಜಾತಕದ ಈ ಸ್ಥಾನದಲ್ಲಿ ಶನಿ ಇದ್ದರೆ ಆಗುವ ಕೆಲಸವೂ ಆಗುವುದಿಲ್ಲ..!

By Suvarna News  |  First Published Oct 3, 2021, 11:33 AM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕಕ್ಕೆ ಮುಖ್ಯವಾದ ಸ್ಥಾನವಿದೆ. ಜಾತಕದಿಂದ ವ್ಯಕ್ತಿಯ ಭವಿಷ್ಯದ  ಅನೇಕ ವಿಚಾರಗಳನ್ನು ತಿಳಿಯಬಹುದಾಗಿದೆ. ಹಾಗೆಯೇ ಶನಿ ಗ್ರಹವು ಜಾತಕದಲ್ಲಿ ಯಾವ ಸ್ಥಾನದಲ್ಲಿದ್ದರೆ ಯಾವ ಫಲ ಎಂಬುದರ ಬಗ್ಗೆ ತಿಳಿಯೋಣ..


ಜಾತಕದಲ್ಲಿ ಶನಿ ಗ್ರಹವು ಯಾವ ಮನೆಯಲ್ಲಿ ಸ್ಥಿತವಾಗಿದೆ ಎಂಬುದರ ಆಧಾರದ ಮೇಲೆ ವ್ಯಕ್ತಿಯ ಲಾಭ ನಷ್ಟಗಳ ಬಗ್ಗೆ ಲೆಕ್ಕಾಚಾರ ಹಾಕಬಹುದಾಗಿದೆ.

ಹೌದು. ಜಾತಕದಲ್ಲಿ (Horoscope ) ಗ್ರಹಗಳು (Planet ) ಯಾವ ಮನೆಯಲ್ಲಿ ಸ್ಥಿತವಾಗಿದೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ಅರಿಯಬಹುದಾಗಿದೆ. ವ್ಯಕ್ತಿಯ ಹಣಕಾಸಿನ (Finance) ಸ್ಥಿತಿಯಾಗಿರಬಹುದು, ವಿವಾಹ, ಭವಿಷ್ಯದಲ್ಲಿ ವ್ಯಾಪಾರ ಉದ್ಯೋಗ ಕ್ಷೇತ್ರಗಳು, ಸಂತಾನ ಇತ್ಯಾದಿ ವಿಚಾರಗಳ ಬಗ್ಗೆ ಕೂಲಂಕುಷವಾಗಿ ತಿಳಿಯಬಹುದಾಗಿದೆ. ಹಾಗೆಯೇ ಶನಿ (Saturn) ಗ್ರಹವು ಕರ್ಮಕ್ಕೆ ತಕ್ಕ ಫಲ ನೀಡುವ ಗ್ರಹವಾಗಿದೆ. ಹಾಗಾಗಿ ಜಾತಕದಲ್ಲಿ ಶನಿ ಗ್ರಹವು ಯಾವ ಸ್ಥಾನದಲ್ಲಿ ಸ್ಥಿತವಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಒಂದೊಮ್ಮೆ ಶನಿ ಗ್ರಹವು ಹೆಚ್ಚು ನಷ್ಟವಾಗುವ ಸ್ಥಾನದಲ್ಲಿ ಸ್ಥಿತವಾಗಿದ್ದರೆ. ಅದಕ್ಕೆ ತಕ್ಕ ಪರಿಹಾರಗಳನ್ನು ಸಹ ಮಾಡಿಸಿಕೊಳ್ಳಬಹುದಾಗಿದೆ. ನಾಟಕದಲ್ಲಿ ಶನಿಗ್ರಹವು ಯಾವ ಸ್ಥಾನದಲ್ಲಿದ್ದರೆ ಯಾವ ಫಲ ಎಂಬುದನ್ನು ತಿಳಿಯೋಣ...

Tap to resize

Latest Videos

undefined

ಇದನ್ನು ಓದಿ: ಈ ರಾಶಿಗಳ ಪೋಷಕ-ಮಕ್ಕಳಿಗೇ ಬರೀ ಜಗಳವಂತೆ!

ಶನಿಯು ನ್ಯಾಯದ ದೇವನಾಗಿದ್ದಾನೆ. ಧರ್ಮಮಾರ್ಗದಲ್ಲಿ ನಡೆದವರಿಗೆ ಒಳ್ಳೆಯದನ್ನು ಮತ್ತು ಅಧರ್ಮದಲ್ಲಿ ನಡೆಯುತ್ತಿರುವವರಿಗೆ ಶಿಕ್ಷೆಯನ್ನು ನೀಡುವ ಗ್ರಹ ಶನಿ ಗ್ರಹವಾಗಿದೆ. ಶನಿಗ್ರಹದ ಸಿಟ್ಟಿಗೆ ತುತ್ತಾದವರು ಹೆಚ್ಚಿನ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಜಾತಕದ ಕೆಲವು ಸ್ಥಾನದಲ್ಲಿ ಶನಿ ಗ್ರಹವು ಸ್ಥಿತವಾಗಿದ್ದರೆ ವ್ಯಕ್ತಿಗೆ ಲಾಭವಾಗುತ್ತದೆ. ಅದೇ ಇನ್ನು ಬೇರೆ ಸ್ಥಾನದಲ್ಲಿ ಸ್ಥಿತವಾಗಿದ್ದರೆ ವ್ಯಕ್ತಿಯು ಹಲವು ರೀತಿಯಲ್ಲಿ ನಷ್ಟ (Loss) ಅನುಭವಿಸಬೇಕಾಗುತ್ತದೆ.

ಶನಿಗ್ರಹವು ಜಾತಕದ ಪ್ರಥಮ ಸ್ಥಾನದಲ್ಲಿ ಸ್ಥಿತವಾಗಿದ್ದು, ಸಪ್ತಮ ಮತ್ತು ದಶಮ ಸ್ಥಾನದಲ್ಲಿ ಯಾವುದೇ ಗ್ರಹಗಳು ಸ್ಥಿತವಾಗಿಲ್ಲದಿದ್ದರೆ ಅದನ್ನು ಲಾಭದ ಸ್ಥಾನವೆಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಈ ಸ್ಥಾನದಲ್ಲಿದ್ದಾಗ ಸಾಲ ವೃದ್ಧಿಯಾಗುತ್ತದೆ ಎಂದು ಸಹ ಹೇಳಲಾಗುತ್ತದೆ. ಹಾಗಾಗಿ ಜಾತಕದಲ್ಲಿ ಹೀಗಿದ್ದಾಗ ಸಾಲವನ್ನು ಪಡೆಯುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಜೊತಗೆ ವಿವಾದ ಕಲಹಗಳಲ್ಲಿ ತೊಡಗಿಕೊಳ್ಳದಂತೆ ಜಾಗರೂಕರಾಗಿರಬೇಕು.

ಶನಿಗ್ರಹವು ಜಾತಕದ ಎರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಸಂತೋಷದಿಂದ (Happiness) ಕೆಲಸ ನಿರ್ವಹಿಸಬೇಕು. ದುರಾಸೆಗೆ ಬಲಿಯಾದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಇದನ್ನು ಓದಿ: ಅಡುಗೆ ಮನೆಯಲ್ಲಿ ಇವು ಖಾಲಿಯಾದರೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ..!!

ಶನಿಗ್ರಹವು ಜಾತಕದ ಮೂರನೇ ಮನೆಯಲ್ಲಿ ಸ್ಥಿತವಾಗಿದ್ದರೆ ನಕಾರಾತ್ಮಕ ಭಾವನೆಗಳು ಹೆಚ್ಚುತ್ತವೆ. ಇದರಿಂದ ಅನೇಕ ತೊಂದರೆಗಳು ಎದುರಾಗುತ್ತವೆ. ಪಾರಾಗಲು ಮನೆಯಲ್ಲಿ ಕತ್ತಲೆ ಆವರಿಸದಂತೆ ನೋಡಿಕೊಳ್ಳಬೇಕು. ಮನೆಯ ಮುಖ್ಯ ದ್ವಾರ ಪೂರ್ವ ಅಥವಾ ದಕ್ಷಿಣ ದಿಕ್ಕಿಗಿದ್ದರೆ ಶನಿಯ ಪ್ರಕೋಪವನ್ನು ಇನ್ನೂ ಹೆಚ್ಚು ಎದುರಿಸಬೇಕಾಗುತ್ತದೆ.

ಶನಿಗ್ರಹವು ಜಾತಕದ ನಾಲ್ಕನೇ ಮನೆಯಲ್ಲಿ ಸ್ಥಿತವಾಗಿದ್ದರೆ ಹೊಸ (New) ಮನೆಯನ್ನು (House) ಖರೀದಿಸುವುದು ಒಳಿತಲ್ಲವೆಂದು ಹೇಳಲಾಗುತ್ತದೆ. ಜಾತಕದಲ್ಲಿ ಶನಿಯು ಈ ಸ್ಥಾನದಲ್ಲಿ ಇದ್ದಾಗ ಹೊಸ ಮನೆಯನ್ನು ಖರೀದಿಸಿದರೆ ಅಥವಾ ಜಮೀನು - ಆಸ್ತಿಯನ್ನು ಖರೀದಿಸಿದರೆ ಹೆಚ್ಚು ದಿನ ನಿಲ್ಲುವುದಿಲ್ಲ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳು!

ಜಾತಕದ ಐದನೇ ಮನೆಯಲ್ಲಿ ಶನಿ ಗ್ರಹವು ಸ್ಥಿತವಾಗಿದ್ದಾಗ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೆ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಾಗಾಗಿ ಹೊಸ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳದಿರುವುದು ಉತ್ತಮ.  

ಜಾತಕದ ಆರನೇ ಮನೆಯಲ್ಲಿ ಶನಿ ಗ್ರಹವು ಸ್ಥಿತವಾಗಿದ್ದರೆ ಶುಭ ಸೂಚಕವೆಂದು ಹೇಳಲಾಗುತ್ತದೆ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಜಮೀನು - ಆಸ್ತಿಗಳನ್ನು ಹೊಂದುವ ಸಾಧ್ಯತೆಯೂ ಇರುತ್ತದೆ. ಇದರ ಜೊತೆಗೆ ಯಾವುದೇ ಕೆಟ್ಟ ಕೆಲಸಗಳನ್ನು ಮಾಡದೆ ಮತ್ತು ಮದ್ಯಪಾನ - ಧೂಮಪಾನದಿಂದ ದೂರವಿದ್ದರೆ ಉತ್ತಮ.

ಶನಿಗ್ರಹವು ಜಾತಕದ ಏಳನೇ ಮನೆಯಲ್ಲಿ ಸ್ಥಿತವಾಗಿದ್ದರೆ ಆರ್ಥಿಕ ನಷ್ಟ ಮತ್ತು ಸಾಮಾಜಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಈ ಸಮಯದಲ್ಲಿ ಅನ್ಯ ಮಹಿಳೆಯರ ಬಗ್ಗೆ ಉತ್ತಮ ಭಾವನೆಯನ್ನು ಹೊಂದುವುದು ಮತ್ತು ಹಣದ ಸರಿಯಾದ ಬಳಕೆ ಮಾಡುವುದು ಅವಶ್ಯಕವಾಗಿರುತ್ತದೆ.

ಶನಿ ಗ್ರಹವು ಜಾತಕದ ಎಂಟನೇ ಮನೆಯಲ್ಲಿ ಸ್ಥಿತವಾಗಿದ್ದರೆ ಶನಿ ಗ್ರಹ ಮತ್ತು ಮಂಗಳ ಗ್ರಹಗಳ ಯುತಿಯಾದಾಗ ( ಒಂದೇ ಮನೆಯಲ್ಲಿದ್ದಾಗ ) ಗುಪ್ತ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದು ಅವಶ್ಯಕ. ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಹಣವನ್ನು ಖರ್ಚುಮಾಡುವಾಗ ಮಿತಿ ಹಾಕಿಕೊಳ್ಳುವುದು ಉತ್ತಮ. 

ಇದನ್ನು ಓದಿ: ಹಸ್ತಾ, ಚಿತ್ತಾ, ಸ್ವಾತಿ, ವಿಶಾಖಾ ಮತ್ತು ಅನುರಾಧ ನಕ್ಷತ್ರದಲ್ಲಿ ಜನಿಸಿದವರ ಗುಣ ಹೇಗಿರುತ್ತೆ?

ಶನಿಗ್ರಹವು ಜಾತಕದ ಒಂಭತ್ತನೇ ಮನೆಯಲ್ಲಿ ಸ್ಥಿತವಾಗಿದ್ದರೆ ಶುಭ ಎಂದು ಹೇಳಲಾಗುತ್ತದೆ. ಇದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ಭಾವನೆ ಹೆಚ್ಚುತ್ತದೆ. ಸಾಂಸಾರಿಕ ಜೀವನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದಿಲ್ಲ.

ಶನಿ ಗ್ರಹವು ಹತ್ತನೆ ಮನೆಯಲ್ಲಿ ಸ್ಥಿತವಾಗಿದ್ದರೆ ಶುಭ ಎಂದೇ ಹೇಳಲಾಗುತ್ತದೆ. ಶನಿ ಈ ಮನೆಯಲ್ಲಿ ಸ್ಥಿತವಾಗಿದ್ದರೆ ಲಕ್ಷ್ಮಿ ಕೃಪೆ ಸಿಗುತ್ತದೆ ಮನೆಯಲ್ಲಿ ಧನ -ಧಾನ್ಯ ವೃದ್ಧಿಯಾಗುತ್ತದೆ. ಹೀಗಿದ್ದಾಗ ಬೇರೆಯವರಿಗೆ  ಹಣ ಕೊಡದೇ ಇರುವುದು ಉತ್ತಮ.

ಶನಿ ಗ್ರಹ ಹನ್ನೊಂದನೇ ಮನೆಯಲ್ಲಿ ಸ್ಥಿತವಾಗಿದ್ದರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಇದರಿಂದ ಪಾರಾಗಲು ಖರ್ಚಿನಲ್ಲಿ ಹಿಡಿತವನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ಶನಿ ಗ್ರಹವು ಹನ್ನೆರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಅಶುಭ ಎಂದೇ ಹೇಳಲಾಗುತ್ತದೆ. ಈ ಸಮಯದಲ್ಲಿ ಯಾವುದೇ ನೂತನ ಕಾರ್ಯಗಳನ್ನು ಆರಂಭಿಸುವುದು ಒಳ್ಳೆಯದಲ್ಲ.

ವ್ಯಕ್ತಿಯ ಭವಿಷ್ಯದ ಬಗ್ಗೆ ನಿಖರವಾಗಿ ತಿಳಿಯಲು ಜಾತಕದಲ್ಲಿ ಉಳಿದ ಗ್ರಹಗಳ ಸ್ಥಾನ ಮತ್ತು ಸ್ಥಿತಿಯನ್ನು ನೋಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಶನಿ ಗ್ರಹವು ಶುಭ ಪ್ರಭಾವವನ್ನು ಬೀರಲು ಅನೇಕ ಪರಿಹಾರಗಳನ್ನು ಸಹ ಮಾಡಿಕೊಳ್ಳ ಬಹುದಾಗಿರುತ್ತದೆ.

click me!