ನವರಾತ್ರಿ ಯಾರ ಉಪಾಸನೆ ಮತ್ತು ಯಾಕಾಗಿ?

By Suvarna NewsFirst Published Oct 2, 2021, 5:30 PM IST
Highlights

ನವರಾತ್ರಿಯಂದು ದೇವಿಯನ್ನು ಆರಾಧಿಸಲಾಗುತ್ತದೆ ಎಂಬುದು ನಮಗೆ ತಿಳಿದಿದೆ. ಆದರೆ ಯಾವ ದಿನಗಳು ದೇವಿಯ ಯಾವ ಸ್ವರೂಪಕ್ಕಾಗಿ ಮೀಸಲು, ನವರಾತ್ರಿ ಯಾವ ತತ್ವದ ಆರಾಧನೆ ಎಂಬುದು ನಿಮಗೆ ತಿಳಿದಿದೆಯೇ?

ಹೊಸದಾದ ಒಂಬತ್ತು
ನವರಾತ್ರಿಯ ಸಂಭ್ರಮ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ನವ ಎಂದರೆ ಹೊಸದು ಎಂದರ್ಥ, ಹಾಗೇ ಒಂಬತ್ತು (Nine) ಎಂದೂ ಅರ್ಥ. ಒಂಬತ್ತು ದಿನ ಒಂಬತ್ತು ಸ್ವರೂಪದ ದುರ್ಗೆಯರನ್ನು ಆರಾಧಿಸಲಾಗುತ್ತದೆ. ನವರಾತ್ರಿ (Navratri) ಹಬ್ಬ ದೇವಿ ಪೂಜೆಗೆಂದೇ ಸಮರ್ಪಿಸಲಾಗಿದೆ. ದುರ್ಗಾ (Durga), ಲಕ್ಷ್ಮಿ (Lakshmi) ಮತ್ತು ಸರಸ್ವತಿಯನ್ನು (Saraswathi) ಸ್ತ್ರೀ ತತ್ವದ ಮೂರು ಆಯಾಮಗಳಾಗಿ ನೋಡಲಾಗುತ್ತದೆ. ಇವು ಭೂಮಿ (Earth), ಸೂರ್ಯ (Surya) ಮತ್ತು ಚಂದ್ರನ (Moon) ಸಂಕೇತಗಳಾಗಿವೆ ಅಥವಾ ತಮಸ್ (ಜಡತ್ವ), ರಜಸ್ (ಚಟುವಟಿಕೆ, ಉತ್ಸಾಹ) ಮತ್ತು ಸತ್ವ (ಜ್ಞಾನ, ಶುದ್ಧತೆ) ಎಂದು ಕ್ರಮಬದ್ಧವಾಗಿ ನೋಡಲಾಗುತ್ತದೆ. ಶಕ್ತಿ ಅಥವಾ ಅಧಿಕಾರಕ್ಕಾಗಿ (Power) ಆಶಿಸುವವರು, ಭೂಮಿತಾಯಿ ಅಥವಾ ದುರ್ಗಾ ಅಥವಾ ಕಾಳಿಯಂತಹ ಸ್ತ್ರೀ ರೂಪಗಳನ್ನು ಪೂಜಿಸುತ್ತಾರೆ. ಸಂಪತ್ತು, ಉತ್ಸಾಹ ಅಥವಾ ವಸ್ತು ಉಡುಗೊರೆಗಳಿಗಾಗಿ ಆಶಿಸುವವರು ಲಕ್ಷ್ಮಿ ಅಥವಾ ಸೂರ್ಯನನ್ನು ಪೂಜಿಸುತ್ತಾರೆ. ಜ್ಞಾನ, ಅಥವಾ ಮೃತ್ಯುವನ್ನೂ ಮೀರುವಂತಹ ಜ್ಞಾನವನ್ನು ಆಶಿಸುವವರು ಸರಸ್ವತಿ ಅಥವಾ ಚಂದ್ರನನ್ನು ಪೂಜಿಸುತ್ತಾರೆ.

ಕೊರೋನಾ ಭಯವನ್ನು ಬಿಟ್ಟು ನವರಾತ್ರಿಯನ್ನು ಸಂಭ್ರಮದಿಂದ ಈ ರೀತಿ ಆಚರಿಸಿ

ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿ
ನವರಾತ್ರಿಯ ಒಂಬತ್ತು ದಿನಗಳನ್ನು ಈ ಮೂಲ ಅಂಶಗಳ ಪ್ರಕಾರ ವರ್ಗೀಕರಿಸಲಾಗಿದೆ. ಮೊದಲ ಮೂರು ದಿನಗಳನ್ನು ದುರ್ಗಾ, ಮುಂದಿನ ಮೂರು ದಿನಗಳನ್ನು ಲಕ್ಷ್ಮಿಗೆ ಮತ್ತು ಕೊನೆಯ ಮೂರು ದಿನಗಳನ್ನು ಸರಸ್ವತಿಗೆ ಅರ್ಪಿಸಲಾಗಿದೆ. ಹತ್ತನೇ ದಿನ, ವಿಜಯದಶಮಿ, ಜೀವನದ ಈ ಮೂರು ಅಂಶಗಳ ಮೇಲಿನ ವಿಜಯವನ್ನು ಅದು ಸೂಚಿಸುತ್ತದೆ. ಇದು ಕೇವಲ ಸಾಂಕೇತಿಕವಲ್ಲ, ಆದರೆ ಶಕ್ತಿಯ ಮಟ್ಟದಲ್ಲಿಯೂ ನಿಜವಾದ ಸಂಗತಿ. ಮನುಷ್ಯರಾಗಿ ನಾವು ಈ ಭೂಮಿಯ ಮೇಲೆ ಹುಟ್ಟುತ್ತೀವಿ ಮತ್ತು ಕ್ರಿಯಾಶೀಲರಾಗಿರುತ್ತೀವಿ. ಸ್ವಲ್ಪ ಸಮಯದ ನಂತರ, ಜಡತ್ವಕ್ಕೆ ಜಾರುತ್ತೀವಿ. ಇದು ನಮ್ಮೊಬ್ಬರಿಗೆ ಮಾತ್ರವಲ್ಲ, ಇಡೀ ನಕ್ಷತ್ರಪುಂಜಕ್ಕೂ ಮತ್ತು ಇಡೀ ಬ್ರಹ್ಮಾಂಡಕ್ಕೂ ಹೀಗೆಯೇ ಸಂಭವಿಸುತ್ತದೆ. ಬ್ರಹ್ಮಾಂಡವು ಜಡತ್ವದ ಸ್ಥಿತಿಯಿಂದ ಹೊರಹೊಮ್ಮುತ್ತದೆ, ಕ್ರಿಯಾತ್ಮಕವಾಗುತ್ತದೆ ಮತ್ತು ಮತ್ತೊಮ್ಮೆ ಜಡತ್ವಕ್ಕೆ ಇಳಿಯುತ್ತದೆ. ಈ ಪುನರಾವೃತ್ತಿಯನ್ನು ಮುರಿಯುವಂತಹ ಸಾಮರ್ಥ್ಯ ನಮ್ಮಲ್ಲಿದೆ. ದೇವಿಯ ಮೊದಲ ಎರಡು ಆಯಾಮಗಳು ಮಾನವನ ಉಳಿವು ಮತ್ತು ಯೋಗಕ್ಷೇಮಕ್ಕೆ ಅಗತ್ಯ. ಮೂರನೆಯದು ಎಲ್ಲವನ್ನೂ ಮೀರಿ ಹೋಗಬೇಕೆಂಬ ಆಕಾಂಕ್ಷೆ. ನೀವು ಸರಸ್ವತಿಯ ಅನುಗ್ರಹ ಪಡೆಯಬೇಕಿದ್ದರೆ ಬಹಳ ಶ್ರಮಿಸಬೇಕು.

ಮೀನ ರಾಶಿಯವರಿಗೆ ಎಂಥಾ ಬಾಳ ಸಂಗಾತಿ ಬೇಕು ನಿಮಗೆ ಗೊತ್ತೆ?

ಸ್ತ್ರೀ ತತ್ವದ ಆರಾಧನೆ
ನವರಾತ್ರಿ ಎಂದರೆ ಸ್ತ್ರೀ ತತ್ವದ ಉಪಾಸನೆ. ಸ್ತ್ರೀ ಉಪಾಸನೆ ಅತ್ಯಂತ ಪ್ರಾಚೀನ ಪದ್ಧತಿ. ಇದು ಭಾರತದಲ್ಲಷ್ಟೇ ಅಲ್ಲದೆ, ಯುರೋಪ್ (Europe), ಅರೇಬಿಯಾ (Arabia) ಮತ್ತು ಆಫ್ರಿಕಾದ (Africa) ಬಹುಪಾಲು ಭಾಗಗಳಲ್ಲಿ ವ್ಯಾಪಕವಾಗಿ ನಡೆಯುತ್ತಿತ್ತು. ದುರದೃಷ್ಟವಶಾತ್, ಪಾಶ್ಚಿಮಾತ್ಯ ದೇಶಗಳಲ್ಲಿ (Western Countries), ನಾಸ್ತಿಕತೆ, ಬಹುದೇವತಾ ಪೂಜೆ ಮತ್ತು ವಿಗ್ರಹಾರಾಧನೆ ಮುಂತಾದ ಕಾರಣಗಳನ್ನು ಮುಂದಿಟ್ಟು ದೇವಿ ದೇವಸ್ಥಾನಗಳನ್ನು ಯಾವುದೇ ಕುರುಹುಗಳಿಲ್ಲದಂತೆ ನಾಶಪಡಿಸಲಾಗಿದೆ. ಪ್ರಪಂಚದ ಇನ್ನುಳಿದ ಭಾಗಗಳಲ್ಲಿಯೂ ಹೀಗೆಯೇ ಸಂಭವಿಸಿದೆ. ಆದರೂ ಭಾರತದ ಸಂಸ್ಕೃತಿಯಲ್ಲಿ ದೇವೀ ಉಪಾಸನೆಯನ್ನು ಇವತ್ತಿಗೂ ಉಳಿಸಿಕೊಳ್ಳಲಾಗಿದೆ. ನಮ್ಮ ಅಗತ್ಯಗಳಿಗೆ ಅನುಗುಣವಾಗಿ ನಮ್ಮದೇ ದೇವತಾ ಸ್ವರೂಪಗಳನ್ನು ಸೃಷ್ಟಿಸುವ ಸ್ವಾತಂತ್ರ್ಯವನ್ನು ಈ ಸಂಸ್ಕೃತಿ (Culture) ನಮಗೆ ನೀಡಿದೆ. ಹಳ್ಳಿ ಹಳ್ಳಿಗಳಲ್ಲೂ ದೇವಿ ಅಥವಾ ಅಮ್ಮನವರ ದೇವಾಲಯಗಳನ್ನು ನಾವು ಕಾಣಬಹುದಾಗಿದೆ.
 

ಸೌಂದರ್ಯಶಾಸ್ತ್ರ, ನೃತ್ಯ (Dance), ಸಂಗೀತ (music), ಪ್ರೀತಿ (Love), ದೈವತ್ವ (Divinity) ಅಥವಾ ಧ್ಯಾನ (Meditation) ಇವುಗಳೆಲ್ಲ ಸ್ತ್ರೀ ತತ್ವದ ಅಡಿಯಲ್ಲಿ ಬರುತ್ತವೆ. ಸ್ತ್ರೀ ತತ್ವ ಕಳೆದುಹೋದರೆ, ಸುಂದರವಾದ, ಸೌಮ್ಯವಾದ, ಸ್ಪರ್ಧಾತ್ಮಕತೆಯಿಲ್ಲದ ಮತ್ತು ಜೀವನವನ್ನು ಪೋಷಿಸುವಂತಹ ಎಲ್ಲ ಅಂಶಗಳೂ ಕಣ್ಮರೆಯಾಗುತ್ತದೆ. ಆದ್ದರಿಂದ ನವರಾತ್ರಿಯನ್ನು ಉತ್ಸಾಹಭರಿತವಾಗಿ ಆಚರಿಸುವುದು ಅತ್ಯುತ್ತಮ ಮಾರ್ಗ.

click me!