2021ರ ಸುಖ-ಸಮೃದ್ಧಿಗಾಗಿ ಗ್ರಹದೋಷ ನಿವಾರಣಾ ಮಂತ್ರಗಳು!

By Suvarna News  |  First Published Dec 31, 2020, 3:52 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳು ನೀಚ ಸ್ಥಿತಿಯಲ್ಲಿದ್ದಾಗ ಅದರಿಂದ ಉಂಟಾಗುವ ಅಶುಭ ಪ್ರಭಾವಗಳನ್ನು ನಿವಾರಿಸಿಕೊಳ್ಳಲು ಕೆಲವು ಪ್ರಭಾವಿ ಮಂತ್ರಗಳನ್ನು ತಿಳಿಸಲಾಗಿದೆ. ಗ್ರಹದೋಷಗಳಿದ್ದಲ್ಲಿ ಆಯಾ ಗ್ರಹಕ್ಕೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ಅಭಿವೃದ್ಧಿಯನ್ನು ಕಾಣಬಹುದಾಗಿದೆ. 2021ರಲ್ಲಿ ಗ್ರಹದೋಷಗಳಿಂದ ಪಾರಾಗಲು ಈ ಮಂತ್ರಗಳನ್ನು ಪಠಿಸಬೇಕು. ಆಯಾ ಗ್ರಹದ ಮಂತ್ರಗಳು ಯಾವುವು ಎಂಬ ಬಗ್ಗೆ ತಿಳಿಯೋಣ...


ಹೊಸ ವರ್ಷ ಆರಂಭವಾಗಲು ಇನ್ನೇನು ದಿನ-ಗಂಟೆಗಳ ಲೆಕ್ಕಾಚಾರ ಪ್ರಾರಂಭವಾಗಿದೆ. 2021ರ ಹೊಸ ವರ್ಷದಲ್ಲಿ ಸುಖ-ಸಮೃದ್ಧಿ ನೆಲೆಸಿ, 2020ರಲ್ಲಿ ಕಂಡ ಕಷ್ಟಗಳು ಮತ್ತೆ ಬಾರದಿರಲಿ ಎಂದು ಎಲ್ಲರೂ ಬಯಸುತ್ತಾರೆ. 

2021ರ ಆಗಮನ ಸರ್ವರಿಗೂ ಸಂತಸವನ್ನು ತರುತ್ತದೆ ಎಂದು ನಂಬಿದರೂ ಸಹ ಗ್ರಹಗತಿಗಳ ಸ್ಥಿತಿಯು ಜೀವನದಲ್ಲಿ ಆಗುವ ಏರು-ಪೇರಿಗೆ ಕಾರಣವಾಗಿರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳು ನೀಚ ಸ್ಥಿತಿಯಲ್ಲಿದ್ದಾಗ ಅದರಿಂದ ಉಂಟಾಗುವ ಅಶುಭ ಪ್ರಭಾವಗಳನ್ನು ನಿವಾರಿಸಿಕೊಳ್ಳಲು ಕೆಲವು ಪ್ರಭಾವಿ ಮಂತ್ರಗಳನ್ನು ತಿಳಿಸಲಾಗಿದೆ. ಗ್ರಹದೋಷಗಳಿದ್ದಲ್ಲಿ ಆಯಾ ಗ್ರಹಕ್ಕೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಮಂತ್ರಗಳು ಯಾವುವು ಎಂಬ ಬಗ್ಗೆ ತಿಳಿಯೋಣ...

Latest Videos



ಸೂರ್ಯ
ಜಾತಕದಲ್ಲಿ ಸೂರ್ಯಗ್ರಹವು ನೀಚ ಸ್ಥಿತಿಯಲ್ಲಿದ್ದಾಗ ಶಾರೀರಿಕ ಮತ್ತು ಯಶಸ್ಸಿನ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಇದ್ದಕ್ಕೆ ಪ್ರತಿನಿತ್ಯ ಸೂರ್ಯದೇವನಿಗೆ ಅರ್ಘ್ಯ ನೀಡುವುದಲ್ಲದೆ, “ಓಂ ಘೃಣಿ ಸೂರ್ಯಾಯ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಸೂರ್ಯನಿಗೆ ಜಲವನ್ನು ಅರ್ಪಿಸಿದ ನಂತರ ಪೂರ್ವಾಭಿಮುಖವಾಗಿ ಕೆಂಪು ಆಸನದ ಮೇಲೆ ಕುಳಿತು 108 ಬಾರಿ ಈ  ಮಂತ್ರವನ್ನು ಜಪಿಸಬೇಕು. 
ಯಹಿ ಸೂರ್ಯ ಸಹಸ್ತ್ರಾಂಶೋ ತೇಜೋರಾಶೆ ಜಗತ್ಪತೆ/ ಅನುಕಂಪಯ ಮಾಂ ಭಕ್ತ್ಯಾ ಗೃಹಣಾರ್ಘ್ಯ ದಿವಾಕರ//

ಇದನ್ನು ಓದಿ: ನಿಮ್ಮ ಕಾಲ್ಬೆರಳು ಹೀಗಿದ್ದರೆ, ಭವಿಷ್ಯ ಚೆನ್ನಾಗಿರುತ್ತೆ…!!! 

ಚಂದ್ರ
ಜಾತಕದಲ್ಲಿ ಚಂದ್ರಗ್ರಹವು ನೀಚ ಸ್ಥಾನದಲ್ಲಿದ್ದಾಗ ಕಲಹ, ಮಾನಸಿಕ ವಿಕಾರ, ಖಿನ್ನತೆ, ಆರ್ಥಿಕ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಗಳಿಂದ ಪಾರಾಗಲು ಈ ಕೆಳಗಿನ ಮಂತ್ರವನ್ನು ನಿತ್ಯವು ಜಪಿಸಬೇಕು. 
ಓಂ ಐಂ ಕ್ಲಿಂ ಸೋಮಾಯ ನಮಃ 
ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಮಸೇ ನಮಃ 


ಮಂಗಳ 
ಜೀವನದಲ್ಲಿ ಪ್ರಭಾವಿ ಶಕ್ತಿ ಮತ್ತು ಯಶಸ್ಸನ್ನು ಪಡೆಯಲು ಮಂಗಳ ಗ್ರಹವು ಉಚ್ಛ ಸ್ಥಿತಿಯಲ್ಲಿರುವುದು ಅವಶ್ಯಕ. ಮಂಗಳ ಗ್ರಹವು ನೀಚ ಸ್ಥಿತಿಯಲ್ಲಿದ್ದಾಗ ಸಫಲತೆಯನ್ನು ಕಾಣುವುದು ಕಷ್ಟಕರವಾಗುತ್ತದೆ. ಹಾಗಾಗಿ ಮಂಗಳ ಗ್ರಹವು ಶುಭ ಪ್ರಭಾವವನ್ನು ನೀಡಲು ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು.
ಅಂ ಅಂಗಾರಕಾಯ ನಮಃ
ಧರಣಿ ಗರ್ಭ ಸಂಭೂತ ವಿದ್ಯುತ್ಕಾಂತಿ ಸಮಪ್ರಭಮ್/ ಕುಮಾರಂ ಶಕ್ತಿಹಸ್ತಂ ಚ  ಮಂಗಲಂ ಪ್ರಣಮಾಮ್ಯಹಂ//


ಬುಧ
ಒಂಭತ್ತು ಗ್ರಹಗಳಲ್ಲಿ ಬುಧ ಗ್ರಹವು ಶಾರೀರಿಕ ರೂಪದಲ್ಲಿ ನೀಚವಾಗಿಯು, ಬೌದ್ಧಿಕ ರೂಪದಲ್ಲಿ ಉಚ್ಛವಾಗಿಯೂ ಇರುತ್ತದೆ. ಹಾಗಾಗಿ ಬುಧ ಗ್ರಹದ ಕೃಪೆ ಅತ್ಯಂತ ಅವಶ್ಯಕವಾಗಿರುತ್ತದೆ. ಬುಧ ಗ್ರಹದ ಉತ್ತಮ ಪ್ರಭಾವಗಳನ್ನು ಪಡೆಯಲು ಈ ಬೀಜ ಮಂತ್ರವನ್ನು ಪಠಿಸಿ
ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ

ಇದನ್ನು ಓದಿ: ಈ ಐದು ರಾಶಿಯವರು ಕೊನೇ ತನಕ ಪ್ರೀತಿಯನ್ನು ನಿಭಾಯಿಸಬಲ್ಲರು!  

ಗುರು
ಒಂಭತ್ತು ಗ್ರಹಗಳ ಗುರು ಬೃಹಸ್ಪತಿ ಎಂದು ಹೇಳಲಾಗುತ್ತದೆ. ಗುರು ಗ್ರಹದ ಶುಭ ಪ್ರಭಾವದಿಂದ ಸುಖ, ಸೌಭಾಗ್ಯ, ಧನ ಮತ್ತು ಧೀರ್ಘಾಯಸ್ಸು ಪ್ರಾಪ್ತಿಯಾಗುತ್ತದೆ. ಗುರು ಗ್ರಹದ ಅಶುಭ ಪ್ರಭಾವದಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಗುರುಗ್ರಹದಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. 

ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ/ ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ//

ಶುಕ್ರ
ಜಾತಕದಲ್ಲಿ ಶುಕ್ರ ಗ್ರಹವು ನೀಚ ಸ್ಥಿತಿಯಲ್ಲಿದ್ದಾಗ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ಭೌತಿಕ ಸುಖದ ಕಾರಕ ಗ್ರಹ ಶುಕ್ರ. ಹಾಗಾಗಿ ಶುಕ್ರ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸುಖ-ಶಾಂತಿ ಮತ್ತು ಸಮೃದ್ಧಿಗಾಗಿ ಶುಕ್ರಗ್ರಹದ ಶುಭ ಪ್ರಭಾವಕ್ಕೆ ಈ ಮಂತ್ರವನ್ನು ಪಠಿಸಿರಿ.
ಓಂ ಶುಂ ಶುಕ್ರಾಯ ನಮಃ 

ಶನಿ
ಜಾತಕದಲ್ಲಿ ಶನಿಗ್ರಹ ಅಶುಭ ಸ್ಥಿತಿಯು ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ಶನಿಗ್ರಹವು ಶುಭ ಸ್ಥಿತಿಯಲ್ಲಿದ್ದರೆ ಅನೇಕ ರೀತಿಯಲ್ಲಿ ಒಳಿತನ್ನು ಕಾಣಬಹುದಾಗಿದೆ. ಶನಿಗ್ರಹದ ಕೃಪೆ ಪಡೆಯಲು ಈ ಮಂತ್ರವನ್ನು ಪಠಿಸಬೇಕು.
ಓಂ ಶಂ ಶನೇಶ್ವರಾಯ ನಮಃ
ಓಂ ಪ್ರಾಂ ಪ್ರೀಂ ಪ್ರೌಂ ಸಂ ಶನೇಶ್ವರಾಯ ನಮಃ


ಇದನ್ನು ಓದಿ: ಶನಿ ಸಾಡೇಸಾತ್‌ನಿಂದ ಸಂಕಷ್ಟಕ್ಕೀಡಾಗಿದ್ದರೆ ಹೀಗೆ ಮಾಡಿ.. 

ರಾಹು- ಕೇತು
ಛಾಯಾ ಗ್ರಹಗಳಾದ ರಾಹು ಮತ್ತು ಕೇತುಗ್ರಹಗಳ ಅಶುಭ ಪ್ರಭಾವದಿಂದ  ಜೀವನದಲ್ಲಿ ಯಶಸ್ಸು ಸಿಗುವುದು ಕಷ್ಟವಾಗುತ್ತದೆ. ಹಿರಿಯರಿಗೆ ಗೌರವ ನೀಡುವುದು ಮತ್ತು ಅವರ ಸೇವೆ ಮಾಡುವುದರಿಂದ ಈ ಗ್ರಹಗಳ ಅಶುಭ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಈ ಮಂತ್ರಗಳನ್ನು ಜಪಿಸುವುದರಿಂದ ಒಳಿತಾಗುತ್ತದೆ.
ರಾಹು- ಓಂ ಭ್ರಾಂ ಭ್ರೀಂ ಭ್ರೌಂ ಸಃ ರಾಹವೇ ನಮಃ
ಕೇತು- ಓಂ ಕೇಂ ಕೇತವೇ ನಮಃ

click me!