Chanakya Niti: ಹೆಂಡತಿ ಚೆಲುವೆಯಾಗಿದ್ದರೆ ಗಂಡ ಈ ಸಂಗತಿಗಳನ್ನು ಎಂದೂ ಮರೆಯಬಾರದು!

Published : Nov 11, 2024, 10:00 PM ISTUpdated : Nov 12, 2024, 07:24 AM IST
Chanakya Niti: ಹೆಂಡತಿ ಚೆಲುವೆಯಾಗಿದ್ದರೆ ಗಂಡ ಈ ಸಂಗತಿಗಳನ್ನು ಎಂದೂ ಮರೆಯಬಾರದು!

ಸಾರಾಂಶ

ಚಾಣಕ್ಯನ ಪ್ರಕಾರ, ಸುಂದರಿ ಹೆಂಡತಿ ಇದ್ದರೆ ಗಂಡ ಅವಳನ್ನು ಗೌರವಿಸಬೇಕು, ಅವಳ ಅಗತ್ಯಗಳನ್ನು ಪೂರೈಸಬೇಕು ಮತ್ತು ಅವಳನ್ನು ರಕ್ಷಿಸಬೇಕು. ಸುಂದರಿ ಹೆಂಡತಿಯನ್ನು ಹೊಂದಿರುವುದು ಒಂದು ವರ. ಆದರೆ ಅದರ ಜೊತೆಗೆ ಜವಾಬ್ದಾರಿಗಳೂ ಇವೆ.

ಚಾಣಕ್ಯ ಭಾರತೀಯ ಇತಿಹಾಸದಲ್ಲಿ ಬುದ್ಧಿವಂತಿಕೆ ಮತ್ತು ಜ್ಞಾನಕ್ಕೆ ಹೊಸ ಅರ್ಥ ನೀಡಿದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಅವರನ್ನು "ಭಾರತದ ಮೊದಲ ಅರ್ಥಶಾಸ್ತ್ರಜ್ಞ" ಎಂದು ಹೇಳಲಾಗುತ್ತದೆ. ಅವರ ಪ್ರಸಿದ್ಧ ಕೃತಿಗಳು "ಚಾಣಕ್ಯ ನೀತಿ", "ಅರ್ಥಶಾಸ್ತ್ರ" ಮತ್ತು "ನೀತಿಶಾಸ್ತ್ರ". ಚಾಣಕ್ಯನನ್ನು ಕೌಟಿಲ್ಯ ಮತ್ತು ವಿಷ್ಣುಗುಪ್ತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಚಾಣಕ್ಯನ ಬುದ್ಧಿವಂತಿಕೆಗೆ ವಯಸ್ಸಾಗುವುದಿಲ್ಲ. ಚಾಣಕ್ಯ ನೀತಿಯು, ವಾಸ್ತವವಾಗಿ, ತನ್ನ ಕಾಲದ ಜನರಿಗೆ ಪ್ರಾಯೋಗಿಕ ಬುದ್ಧಿವಂತಿಕೆಯನ್ನು ನೀಡಲು ಈ ಮಹಾನ್ ಚಿಂತಕ ಬರೆದ ಸಂಗತಿಗಳು. ಈ ಬೋಧನೆಗಳು ತುಂಬಾ ಮೂಲಭೂತವಾಗಿವೆ. ಕೆಲವೊಮ್ಮೆ ಇವು ಔಟ್‌ ಆಫ್‌ ಫ್ಯಾಶನ್‌, ಈ ಕಾಲಕ್ಕೆ ತಕ್ಕುದಲ್ಲ ಅಂತಲೂ ಆನಿಸಬಹುದು. ಆದರೆ ಅವುಗಳನ್ನು ಗಮನಿಸುವುದು ಕುತೂಹಲಕಾರಿ. ಸದ್ಯ, ಚಾಣಕ್ಯ ಚೆಲುವೆ ಹೆಂಡತಿಯನ್ನು ಹೊಂದಿರುವ ಗಂಡ ಯಾವ ಸಂಗತಿಗಳನ್ನು ಮರೆಯಲೇಬಾರದು ಎನ್ನುತ್ತಾನೆ- ಎನ್ನುವುದನ್ನು ಗಮನಿಸೋಣ.

1) ಸುಂದರಿ ಹೆಂಡತಿ ಸದ್ಗುಣಿಯಾಗಿದ್ದರೆ ಗಂಡನಿಗೆ ಸಮಸ್ಯೆ ಇರುವುದಿಲ್ಲ. ಅಂಥ ಸದ್ಗುಣಿ ಹೆಂಡತಿಗೆ ಗಂಡ ಕೃತಜ್ಞನಾಗಿರಬೇಕು. ಅವಳ ಮಾತುಗಳನ್ನು ತಿರಸ್ಕರಿಸಬಾರದು. ಅವಳನ್ನು ಕಾಲಕಾಲಕ್ಕೆ ಹೊಗಳುತ್ತ, ಗಿಫ್ಟ್‌ ಕೊಡುತ್ತ ಖುಷಿಪಡಿಸುತ್ತಿರಬೇಕು. 

2) ಸುಂದರಿ ಹೆಂಡತಿ ಕಾಮತೃಪ್ತಿಯನ್ನು ಬಯಸಿದರೆ ಅದನ್ನು ನಿರಾಕರಿಸಬಾರದು. ಆಕೆ ಸದ್ಗುಣಿಯಾಗಿದ್ದರೆ ಗಂಡನಿಗೆ ಆ ಸುಖ ಸಿಗದೆ ಕೊರಗಬಹುದು. ದುರ್ಗುಣಿಯಾಗದ್ದರೆ ಅದನ್ನು ಬೇರೆ ಪುರುಷರಲ್ಲಿ ಹುಡುಕಬಹುದು.   
   
3) ಹಣವನ್ನು ಉಳಿಸಬೇಕು, ಹೆಂಡತಿಗಾಗಿ ವೆಚ್ಚ ಮಾಡಬೇಕು. ಪುರುಷನು ಸಂಪತ್ತನ್ನು ಹೊಂದಿದ್ದರೆ ಮಾತ್ರ ಮಹಿಳೆಯನ್ನು ಆಕರ್ಷಿಸಬಹುದು. ಆದರೆ ಹಣ ಮತ್ತು ಹೆಣ್ಣು ಇಬ್ಬರೂ ಚಂಚಲ ಸ್ವಭಾವದವರು ಎಂಬ ಸತ್ಯವನ್ನು ಮರೆಯಬಾರದು.

4) ಸುಂದರಿಯನ್ನು ಮದುವೆಯಾಗುವ ಮುನ್ನ ಹತ್ತು ಸಲ ಪರಿಶೀಲಿಸಬೇಕು. ಸಮಾಜದಲ್ಲಿ ಒಳ್ಳೆಯ ಹೆಸರು, ಗೌರವ ಹೊಂದಿರುವ ಕುಟುಂಬದಿಂದ ಹೆಣ್ಣನ್ನು ಮದುವೆಯಾಗಬೇಕು. ಹುಡುಗಿಗೆ ಯಾವುದೇ ಸುಪ್ರಸಿದ್ಧ ವಂಶಾವಳಿ ಇಲ್ಲದಿದ್ದರೂ, ಆಕೆ ಸದ್ಗುಣಿಯಾಗಿದ್ದರೆ ಅವಳನ್ನು ಮದುವೆಯಾಗಲು ಹಿಂಜರಿಯಬಾರದು. ಏಕೆಂದರೆ ಸೌಂದರ್ಯ ಎಂಬುದು ಚರ್ಮಕ್ಕೆ ಸೀಮಿತ. ಆದರೆ ಒಂದು ಹುಡುಗಿ ಮೋಹಕ ಸುಂದರಿಯಾಗಿದ್ದರೂ, ಮತ್ತು ಅವಳು ಕೆಟ್ಟ ಕುಟುಂಬಕ್ಕೆ ಸೇರಿದವಳಾಗಿದ್ದರೆ, ಅವಳನ್ನು ಹೆಂಡತಿಯಾಗಿ ಸ್ವೀಕರಿಸಬಾರದು.

5) ಮಹಿಳೆ ಪುರುಷನಿಗಿಂತ ಹೆಚ್ಚು ಸೂಕ್ಷ್ಮ. ಸುಂದರಿಯರು ಇನ್ನಷ್ಟು ಸೂಕ್ಷ್ಮ. ಮಹಿಳೆ ಪುರುಷನಿಗಿಂತ ನಾಲ್ಕು ಪಟ್ಟು ಹೆಚ್ಚು ಲಜ್ಜೆ, ಅವನ ಆರು ಪಟ್ಟು ಧೈರ್ಯ ಮತ್ತು ಎಂಟು ಪಟ್ಟು ಉತ್ಸಾಹವನ್ನು ಹೊಂದಿರುತ್ತಾಳೆ.

6) ಸುಂದರಿಯಾದ ಹೆಂಡತಿಯನ್ನು ಸಾಲ ನೀಡಿದವನ ಬಳಿ, ಕೆಟ್ಟ ಗುಣದ ಸ್ನೇಹಿತನ ಬಳಿ, ಹಲವು ಪುರುಷರು ಮಾತ್ರ ಇರುವಲ್ಲಿ ಒಂಟಿಯಾಗಿ ಬಿಡಬಾರದು. ತವರಿನಲ್ಲಿ ಬಹಳ ದೀರ್ಘ ಕಾಲವೂ ಬಿಡಬಾರದು. ಪ್ರವಾಸ ಹೋದಾಗ ಛತ್ರದಲ್ಲಿ ಒಬ್ಬಳನ್ನೇ ಬಿಡಬಾರದು ಅಥವಾ ಹೊರಗೆ ಸುತ್ತಾಡಲು ಒಬ್ಬಳನ್ನೇ ಕಳಿಸಬಾರದು.

7) ಪರಿಶುದ್ಧ, ಚಾಣಾಕ್ಷ, ಸದ್ಗುಣಶೀಲ ಮತ್ತು ಮೃದುತ್ವದ ಮಹಿಳೆ ಮಾತ್ರ, ತನ್ನ ಪತಿಗೆ ನಂಬಿಗಸ್ತಳಾಗಿ ಉಳಿಯುತ್ತಾಳೆ. ನಿಜವಾಗಿಯೂ ಅವನ ಪ್ರೋತ್ಸಾಹಕ್ಕೆ ಅರ್ಹಳು. ಅಂತಹ ಹೆಂಡತಿ ಯಾವುದೇ ಪುರುಷನಿಗೆ ದೈವದತ್ತ. ಅಂತಹ ಮಹಿಳೆಯನ್ನು ತನ್ನ ಹೆಂಡತಿಯಾಗಿ ಕಂಡುಕೊಂಡ ಪುರುಷ ಧನ್ಯ.

8) ರಾಜ, ಅಗ್ನಿ, ಗುರು ಮತ್ತು ಸ್ತ್ರೀಯರಿಗೆ ತುಂಬಾ ಹತ್ತಿರ ಇರುವುದು ಅಪಾಯಕಾರಿ. ಇವರಿಂದ ತುಂಬಾ ದೂರವಿರುವುದೂ ಅಪಾಯಕಾರಿಯೇ. ಆದ್ದರಿಂದ ನಾವು ಸರಾಸರಿ ಸ್ಥಾನವನ್ನು ಆರಿಸಿಕೊಳ್ಳಬೇಕು. ಅಂದರೆ ನಾವು ಅವರಿಂದ ಬಹಳ ದೂರದಲ್ಲಿರಬಾರದು ಅಥವಾ ಅವರ ಹತ್ತಿರ ಇರಬಾರದು. 

64 ವರ್ಷಗಳ ನಂತರ ಕುಬೇರ ಯೋಗ, ಮೇಷ, ಮೀನ ರಾಶಿಗೆ ಜಾಕ್ ಪಾಟ್, ಹಣವೋ ಹಣ
 

9) ಗೆಳೆಯನ ಪತ್ನಿಯು ತುಂಬಾ ಸುಂದರಿಯಾಗಿದ್ದರೆ ಅವನ ಮನೆಗೆ ಪದೇ ಪದೆ ಹೋಗಬಾರದು. ಅವನು ಇಲ್ಲದಾಗ ಖಂಡಿತ ಹೋಗಬಾರದು.

10) ಸುಂದರಿಯಾದ ಪತ್ನಿಯ ಮುಂದೆ ಆಕೆಯ ಗೆಳತಿಯರನ್ನು ಹೊಗಳಬಾರದು. ಅವಳ ಶತ್ರುಗಳನ್ನೂ ಹೊಗಳಬಾರದು. 

11) ಸುಂದರಿಯಾದ ನಿಮ್ಮ ಪತ್ನಿಯನ್ನು ನಿಮ್ಮ ಮುಂದೆಯೇ ಬೇರೊಬ್ಬನು ಹೊಗಳುತ್ತಿದ್ದಾನೆ ಅಥವಾ ಆಕೆಯ ಜೊತೆಗೆ ಫ್ಲರ್ಟ್‌ ಮಾಡಲು ಬಯಸುತ್ತಿದ್ದಾನೆ ಎಂದಾದರೆ ಅಂಥವನ ಜೊತೆಗೆ ನಿರ್ದಾಕ್ಷಿಣ್ಯವಾಗಿ ಸಂಬಂಧ ಕಡಿದುಕೊಳ್ಳಬೇಕು.    

ದೇವರಿಗೆ ಅಗರಬತ್ತಿ ಉರಿಸುವಾಗ ಇದು ಗೊತ್ತಿರಲಿ! ಯಾವ ದೇವರಿಗೆ ಯಾವ ಪರಿಮಳದ ಅಗರಬತ್ತಿ?
 

PREV
Read more Articles on
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ