ಕನಸಲ್ಲಿ ಪೂರ್ವಜರು ಕಂಡರೆ ಅದಕ್ಕೇನು ಅರ್ಥ ಗೊತ್ತಾ..?

By Suvarna News  |  First Published Jun 14, 2022, 6:07 PM IST

ಕನಸು ಎಲ್ಲರಿಗೂ ಬೀಳುತ್ತದೆ. ಅದಕ್ಕೆ ಹಲವಾರು ಅರ್ಥಗಳಿರುತ್ತವೆ ಎಂಬುದನ್ನು ಸ್ವಪ್ನ ಶಾಸ್ತ್ರ  ತಿಳಿಸುತ್ತದೆ. ಹಣ ಸಿಗುವುದು ಹಾಗೂ ದೇವರು ಕಾಣಿಸುವುದು ಹೀಗೆ ನಾನಾ ರೀತಿಯ ಕನಸುಗಳು ಬೀಳುತ್ತವೆ. ಮೃತರಾದವರು ಕನಸಿನಲ್ಲಿ ಬಂದರೆ ಅದಕ್ಕೂ ಅರ್ಥವಿದೆ. ಹಾಗಾದರೆ ಅಂತಹ ಕನಸುಗಳಿಗೆ ಏನರ್ಥ ಎಂಬುದನ್ನು ತಿಳಿಯೋಣ...


ಸ್ವಪ್ನ ಶಾಸ್ತ್ರವು (Swapna Shastra) ಜ್ಯೋತಿಷ್ಯ ಶಾಸ್ತ್ರದ (Astrology) ಒಂದು ಭಾಗ. ಇದು ಅತ್ಯಂತ ಕುತೂಹಲಕಾರಿಯೂ, ವಿಶೇಷವಾಗಿಯೂ ಇದೆ. ಇದರ ಅನುಸಾರ ಅನೇಕ ಕನಸುಗಳಿಗೆ (Dreams) ವಿಶೇಷವಾದ ಅರ್ಥಗಳು ಇರುತ್ತವೆ. ಅವು ಭವಿಷ್ಯದಲ್ಲಿ (Future) ಆಗುವ ಘಟನೆಗಳನ್ನು ಸೂಚಿಸುವ ಸಂಕೇತ ಸಹ ಆಗಿರುತ್ತವೆ. ಯಾವ ರೀತಿಯ ಕನಸ್ಸು ಬೀಳುತ್ತದೆ ಎಂಬುದರ ಆಧಾರದ ಮೇಲೆ ಅದರ ಅರ್ಥವನ್ನು ಸ್ವಪ್ನ ಶಾಸ್ತ್ರದಲ್ಲಿ ವ್ಯಾಖ್ಯಾನಿಸಲಾಗಿದ್ದಲ್ಲದೆ, ಅವುಗಳ ಬಗ್ಗೆ ವಿವರವಾಗಿ ಉಲ್ಲೇಖಿಸಲಾಗಿದೆ. 

ಕನಸಿನಲ್ಲಿ ಹಣ್ಣು (Fruit), ಹೂವು (Flower), ಹಸಿರು (Green), ನೀರು (Water), ಪ್ರಾಣಿ – ಪಕ್ಷಿಗಳು (Animals and birds), ಹಣ ಸಿಗುವುದು ಹಾಗೂ ದೇವರು ಕಾಣಿಸುವುದು ಹೀಗೆ ನಾನಾ ರೀತಿಯ ಕನಸುಗಳು ಬೀಳುತ್ತವೆ. ಅವುಗಳಲ್ಲಿ ಮೃತಪಟ್ಟಿರುವ ಹತ್ತಿರದ ಸಂಬಂಧಿಗಳು (Close relatives) ಕನಸಿನಲ್ಲಿ ಕಾಣುವುದು ಸಹ ಉಂಟು. ಮೃತರಾದವರು ಕನಸಿನಲ್ಲಿ ಬಂದರೆ ಏನನ್ನು ಸೂಚಿಸುವ ಸಂಕೇತವಾಗಿರುತ್ತದೆ ಎಂಬುದನ್ನು ತಿಳಿಯೋಣ.

ಕನಸಿನಲ್ಲಿ ಮೃತ ಪೂರ್ವಜರು ಕಂಡರೆ
ನೀವು ಕನಸಿನಲ್ಲಿ ಪೂರ್ವಜರನ್ನು ಕಂಡಿದ್ದೇ ಆದರೆ, ಪೂರ್ವಜರನ್ನು ಮರೆತಿದ್ದೀರಿ,  ಇಲ್ಲವೇ ಯಾವುದಾದರೂ ದೊಡ್ಡ ತಪ್ಪನ್ನು ಮಾಡಿದ್ದೀರಿ ಎಂಬುದರ ಸಂಕೇತವಾಗಿದೆ. ಇದರ ಜೊತೆಗೆ ಪೂರ್ವಜರು ಕನಸಿನ ಮೂಲಕ ನಿಮಗೆ ಏನನ್ನಾದರೂ ಹೇಳಲು ಬಯಸುತ್ತಿದ್ದಾರೆ ಎಂದರ್ಥ. ಹೀಗೆ ಅವರು ಹೇಳುತ್ತಿರುವುದು ಏನು ಎಂಬುದು ನಿಮಗೆ ಅರ್ಥ ಮಾಡಿಕೊಳ್ಳಲು ಆಗದಿದ್ದರೆ ಅಮಾವಾಸ್ಯೆಯ (New Moon) ದಿನ ನದಿಯ ದಡದಲ್ಲಿ ಅವರ ಹೆಸರಿನಲ್ಲಿ ದೀಪ ಬೆಳಗಿಸಿ, ಕ್ಷಮೆಯಾಚಿಸಬೇಕು. ಜೊತೆಗೆ ಬಡ ವ್ಯಕ್ತಿಗೆ ಒಂದು ಜೊತೆ ಬಟ್ಟೆಗಳನ್ನು (Dress) ದಾನ ಮಾಡಬೇಕು.

ಕನಸಲ್ಲಿ ತಂದೆ (Father) ಕೈ ಚಾಚಿದರೆ
ಕನಸಿನಲ್ಲಿ ಮೃತ ತಂದೆ ಅಥವಾ ಪೂರ್ವಜರು ಏನಾದರೂ ಕೈಗಳನ್ನು ಚಾಚುತ್ತಿರುವಂತೆ ನಿಮಗೆ ಕನಸು ಕಂಡರೆ ನಿಮ್ಮ ಜೀವನದಲ್ಲಿ (Life) ಸಂಭವಿಸುತ್ತಿರುವ ಸಮಸ್ಯೆಗಳಿಂದ ಅವರು ತೊಂದರೆಗೀಡಾಗಿದ್ದಾರೆ. ಅವುಗಳನ್ನು ಪರಿಹರಿಸಲು ಬಯಸುತ್ತಿದ್ದಾರೆ ಎಂದರ್ಥ.

ತಂದೆಯವರು ಕನಸಿನಲ್ಲಿ ಏನಾದರೂ ಕೇಳಿದರೆ?
ಕನಸಿನಲ್ಲಿ ಪೂರ್ವಜರು ಏನನ್ನಾದರೂ ಕೇಳುವುದನ್ನು ಕಂಡರೆ, ನೀವು ಬ್ರಾಹ್ಮಣ ಅಥವಾ ನಿರ್ಗತಿಕರಿಗೆ ಅಡುಗೆ (Cooking) ಮಾಡಿ ಉಣಬಡಿಸಬೇಕು. ಹೀಗೆ ಮಾಡುವುದರಿಂದ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ತಲೆಯ ಬಳಿ ತಂದೆ ನಿಂತಿದ್ದರೆ
ಕನಸಿನಲ್ಲಿ ಪೂರ್ವಜರು ತಲೆಯ (Head) ಬಳಿ ನಿಂತಿರುವುದನ್ನು ನೋಡಿದರೆ ನಿಮ್ಮ ಜೀವನದ ತೊಂದರೆಗಳು ಕಡಿಮೆಯಾಗುತ್ತವೆ ಎಂದು ನೀವು ಅರ್ಥೈಸಿಕೊಳ್ಳಬಹುದು. ಅದೇ ಸಮಯದಲ್ಲಿ ನೀವು ಪಾದಗಳ (Feet) ಬಳಿ ನಿಂತಿರುವುದನ್ನು ನೋಡಿದರೆ, ನಿಮ್ಮ ಜೀವನದಲ್ಲಿ ತೊಂದರೆಗಳು ಇರುತ್ತವೆ ಎಂದರ್ಥ.

ಇದನ್ನು ಓದಿ: ಈ ರಾಶಿಯವರಿಗೆ True Love ಸುಲಭವಾಗಿ ಸಿಗೋದಿಲ್ಲ!

ತಲೆ ನೇವರಿಸಿದರೆ
ನಿಮ್ಮ ಪೂರ್ವಜರು ನಿಮ್ಮ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟು ನೇವರಿಸುತ್ತಿದ್ದರೆ, ಅವರು ನಿಮ್ಮೊಂದಿಗೆ ತೃಪ್ತರಾಗಿದ್ದಾರೆ. ಜೊತೆಗೆ ನಿಮಗೆ ಆಶೀರ್ವದಿಸಲು (Bless)  ಬಯಸುತ್ತಾರೆ ಎಂದರ್ಥ.

ತಕ್ಷಣ ಕಣ್ಮರೆಯಾದರೆ?
ನಿಮಗೆ ಬೀಳುವ ಕನಸಿನಲ್ಲಿ ಪಿತೃಗಳ ಕಂಡು ತಕ್ಷಣವೇ ಕಣ್ಮರೆಯಾದರೆ ಅದರ ಬಗ್ಗೆ ಹೆಚ್ಚು ಗಂಭೀರವಾಗಿ ಚಿಂತಿಸುವುದು ಉತ್ತಮ. ಯಾಕೆಂದರೆ ಹೀಗೆ ಕನಸು ಬಿದ್ದರೆ ನಿಮಗೆ ಯಾವುದಾದರೂ ಸಮಸ್ಯೆ (Problem) ಎದುರಾಗುತ್ತದೆ ಎಂಬುದರ ಮುನ್ಸೂಚನೆಯನ್ನು ನೀಡುತ್ತದೆ. ಅದಕ್ಕಾಗಿ ನೀವು ಸಿದ್ಧರಾಗಿರಬೇಕು, ಇಲ್ಲವೇ ಪರಿಹಾರವನ್ನು ಮಾಡಿಕೊಳ್ಳಬೇಕು. 

ಕನಸಿನಲ್ಲಿ ತಂದೆ ಕೋಪಗೊಂಡಿದ್ದರೆ
ನಿಮ್ಮ ಪೂರ್ವಜರು/ಅಪ್ಪ ಕೋಪಗೊಂಡಿರುವಂತೆ (Anger) ಕನಸು ಕಂಡರೆ, ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ದೊಡ್ಡ ನಷ್ಟವನ್ನು ಸೂಚಿಸುವುದಾಗಿದೆ. 

ಇದನ್ನು ಓದಿ: ವಾಸ್ತು ದೋಷ ನಿವಾರಣೆಗೆ ವಿಘ್ನನಿವಾರಕನ ಸರಳ ಪರಿಹಾರ!

ನಿಮ್ಮ ಜೊತೆ ನಡೆದು ಬಂದಂತೆ ಕಂಡರೆ?
ನಿಮ್ಮ ಕನಸಿನಲ್ಲಿ ಪೂರ್ವಜರು ನಿಮ್ಮೊಂದಿಗೆ ನಡೆಯುತ್ತಿರುವಂತೆ (Waker) ನೋಡಿದರೆ, ಅವರ ಆಶೀರ್ವಾದವು ಸದಾ ನಿಮ್ಮೊಂದಿಗೆ ಇದೆ, ಮುಂದೆಯೂ ಇರುತ್ತವೆ ಎಂದರ್ಥ. ಅಲ್ಲದೆ, ಈ ಕನಸಿನಿಂದ ನಿಮ್ಮ ಗೌರವ, ಪ್ರತಿಷ್ಠೆ ಮತ್ತು ಖ್ಯಾತಿ ಹೆಚ್ಚಾಗಲಿದೆ. 

click me!