Palmistry: ಹೆಬ್ಬೆರಳು ಹೇಳುವ ವ್ಯಕ್ತಿತ್ವ, ನಿಮ್ಮ Thumb ಏನನ್ನುತ್ತೆ?

By Suvarna News  |  First Published Jun 14, 2022, 5:45 PM IST

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಕೈಯ ರೇಖೆಗಳು ಅವನ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಮಾಹಿತಿಯನ್ನು ನೀಡುವಂತೆಯೇ, ವ್ಯಕ್ತಿಯ ಕೈಯ ಹೆಬ್ಬೆರಳಿನ ಆಕಾರದಿಂದ ಬಹಳಷ್ಟು ಕಂಡುಹಿಡಿಯಬಹುದು. ನಿಮ್ಮ ಹೆಬ್ಬೆರಳು ನಿಮ್ಮ ಬಗ್ಗೆ ಏನನ್ನುತ್ತೆ ತಿಳಿದುಕೊಳ್ಳಲು ಮುಂದೆ ಓದಿ. 


ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಬಗ್ಗೆ ಮತ್ತು ಜೀವನಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳನ್ನು ತಿಳಿದುಕೊಳ್ಳಲು ಬಹಳ ಕುತೂಹಲದಿಂದಿರುತ್ತಾನೆ. ಜ್ಯೋತಿಷ್ಯದ ಒಂದು ವಿಭಾಗವಾಗಿರುವ ಹಸ್ತಸಾಮುದ್ರಿಕಾ ಶಾಸ್ತ್ರವು, ವ್ಯಕ್ತಿಯ ಕೈಯ ಆಕಾರ, ಅಂಗೈಯ ರೇಖೆಗಳು ಮತ್ತು ಗುರುತುಗಳ ಆಧಾರದ ಮೇಲೆ ಆತನ ಭವಿಷ್ಯದ ಬಗ್ಗೆ ಹೇಳುತ್ತದೆ. ಅಂತೆಯೇ, ವ್ಯಕ್ತಿಯ ಹೆಬ್ಬೆರಳು ಕೂಡಾ ಈ ಹಸ್ತ ಸಾಮುದ್ರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ ನಿಮ್ಮ ಕೈಯ ಹೆಬ್ಬೆರಳು(Thumb Palmistry) ಯಾವ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ ಎಂದು ತಿಳಿಯೋಣ.

ಸಣ್ಣ ಹೆಬ್ಬೆರಳು(Small Thumb)
ಸಣ್ಣ ಹೆಬ್ಬೆರಳು ಹೊಂದಿರುವ ಜನರ ಸ್ವಭಾವವು ತಾತ್ವಿಕವಾಗಿದೆ. ಈ ಜನರು ಯಾವುದೇ ಸಣ್ಣ ವಿಷಯದಿಂದ ಬೇಗನೆ ಅಸಮಾಧಾನಗೊಳ್ಳುತ್ತಾರೆ ಮತ್ತು ನಂತರ ಅವರು ಅದನ್ನು ದೀರ್ಘಕಾಲದವರೆಗೆ ಎಳೆಯುತ್ತಾರೆ. ಮತ್ತೊಂದೆಡೆ, ಸಣ್ಣ ಹೆಬ್ಬೆರಳು ಹೊಂದಿರುವ ಜನರು ಎದುರಿನ ವ್ಯಕ್ತಿಯ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಹಳ ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ.

Tap to resize

Latest Videos

ಫ್ಲೆಕ್ಸಿಬಲ್ ಹೆಬ್ಬೆರಳು(Flexible Thumb)
ಹೆಬ್ಬೆರಳು ಬಹಳ ಫ್ಲೆಕ್ಸಿಬಲ್ ಆಗಿದ್ದರೆ ಅಂಥ ಜನರು ಭಾವನಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ. ಅವರು ತಮ್ಮ ಮನಸ್ಸಿನಲ್ಲಿರುವಂತೆಯೇ, ಅವರು ಎಲ್ಲರ ಮುಂದೆ ಇರುತ್ತಾರೆ. ಹಿಂದೊಂದು, ಮುಂದೊಂದು ಮಾತಾಡುವ ಬುದ್ಧಿ ಇವರಲ್ಲಿಲ್ಲ. ಮತ್ತೊಬ್ಬರ ಬೆನ್ನ ಹಿಂದೆ ಮಾತಾಡುವವರು ಇವರಲ್ಲ. ಇವರ ಸುತ್ತಲಿನ ಜನರು ಇವರ ಮಾತನಾಡುವ ಕೌಶಲ್ಯದಿಂದ ಪ್ರಭಾವಿತರಾಗುತ್ತಾರೆ.

ತೆಳುವಾದ ಹೆಬ್ಬೆರಳು(Thin Thumb)
ಕೈಯ ತೆಳ್ಳಗಿನ ಹೆಬ್ಬೆರಳು ವ್ಯಕ್ತಿಯ ಧೈರ್ಯದ ಸ್ವಭಾವವನ್ನು ಸೂಚಿಸುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ಹೇಳುತ್ತದೆ. ಈ ಜನರು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಅಲ್ಲದೆ, ಅಂಥ ವ್ಯಕ್ತಿಯು ಯಾವಾಗಲೂ ಹಣದ ಬಗ್ಗೆ ಯೋಚಿಸುತ್ತಾನೆ ಮತ್ತು ಹಣವನ್ನು ಗಳಿಸಲು ಶ್ರಮಿಸುತ್ತಾನೆ. ಅದೇ ಸಮಯದಲ್ಲಿ, ಈ ಜನರು ಸೌಕರ್ಯಗಳಿಂದ ತುಂಬಿದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ.

ನಾರದ ಮಹರ್ಷಿಗಳೇಕೆ ಎಲ್ಲೂ ನಿಲ್ಲದೆ ತ್ರಿಲೋಕ ಸಂಚಾರ ಮಾಡುತ್ತಾರೆ?

ಉದ್ದದ ಹೆಬ್ಬೆರಳು
ಉದ್ದನೆಯ ಹೆಬ್ಬೆರಳುಗಳನ್ನು ಹೊಂದಿರುವ ಜನರು ಸಾಮಾನ್ಯವಾಗಿ ಸಂಪೂರ್ಣವಾಗಿ ತಮ್ಮದೇ ಆದ ಮೇಲೆ ಅವಲಂಬಿತರಾಗಿರುತ್ತಾರೆ ಮತ್ತು ಹುಟ್ಟಾ ನಾಯಕರಾಗಿರುತ್ತಾರೆ. ಅವರು ಜನರು ಮತ್ತು ಸಂದರ್ಭಗಳನ್ನು ನಿಯಂತ್ರಿಸಲು ಇಷ್ಟಪಡುತ್ತಾರೆ. ಮಾಹಿತಿ ಮತ್ತು ಮೆದುಳಿನ ಶಕ್ತಿಯು ಅತ್ಯಂತ ಮೌಲ್ಯಯುತವಾಗಿದೆ ಎಂದು ಅವರು ನಂಬುತ್ತಾರೆ. ಸಾಮಾನ್ಯವಾಗಿ ಅವರು ಬಹಳ ಬುದ್ಧಿವಂತರಾಗಿರುತ್ತಾರೆ. ವಿಜ್ಞಾನ ಮತ್ತು ಗಣಿತದ ಕಡೆಗೆ ಹೆಚ್ಚು ಆಶಕ್ತಿ ಹೊಂದಿರುತ್ತಾರೆ.

ಕೈಯಿಂದ ಬಾಗುವ ಹೆಬ್ಬೆರಳು
ಕೈಯಿಂದ ಬಾಗುವ ಮೃದುವಾದ ಹೆಬ್ಬೆರಳು, ಹಣದಲ್ಲಿ ಮಾತ್ರವಲ್ಲದೆ ಆಲೋಚನೆಗಳಲ್ಲಿಯೂ ಅತಿರಂಜಿತ ವ್ಯಕ್ತಿಯ ಸೂಚನೆಯಾಗಿದೆ. ಈ ವ್ಯಕ್ತಿಗಳು ಸ್ವಾಭಾವಿಕವಾಗಿ ಖರ್ಚು ಮಾಡುವವರು ಮತ್ತು ಇತರರ ಸಮಯ ಮತ್ತು ಸಂಪತ್ತನ್ನು ಗೌರವಿಸುವುದಿಲ್ಲ.

ಒಣ ತುಳಸಿ ಎಲೆಗಳು ನಿಮ್ಮ ಹಣದ ಸಮಸ್ಯೆ ನೀಗಲಿವೆ!

ದಪ್ಪ ಹೆಬ್ಬೆರಳು(Thick Thumb)
ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಯಾರ ಹೆಬ್ಬೆರಳು ದಪ್ಪ ಮತ್ತು ಅಗಲವಾಗಿರುತ್ತದೆಯೋ ಅವರು ಬೇಗನೆ ಕೋಪಗೊಳ್ಳುತ್ತಾರೆ. ಕೋಪದಲ್ಲಿ, ಈ ಜನರು ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಅವರು ಕೋಪಗೊಂಡಾಗ, ಅವರನ್ನು ಶಾಂತಗೊಳಿಸಲು ತುಂಬಾ ಕಷ್ಟವಾಗುತ್ತದೆ. ಅನೇಕ ಬಾರಿ ಈ ಜನರು ಕೋಪದಲ್ಲಿ ತಮಗೇ ಹಾನಿ ಮಾಡಿಕೊಳ್ಳುತ್ತಾರೆ. ನೋಡಲು ಕಠಿಣರಾಗಿ ಕಂಡರೂ, ಒಳಗಿನಿಂದ ಮೃದು ಹೃದಯವನ್ನು ಹೊಂದಿರುತ್ತಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!