ನಿಮ್ಮ ರಾಶಿಗಳ ಪ್ರಕಾರ ನೀವು ಯಾವ ಕ್ಷೇತ್ರದಲ್ಲಿ ಹಣ ಗಳಿಸಬಲ್ಲಿರಿ ಗೊತ್ತಾ?

By Suvarna NewsFirst Published Jun 16, 2023, 5:05 PM IST
Highlights

ಎಲ್ಲರಿಗೂ ಹಣ ಮಾಡಲು ಸಾಧ್ಯವಿಲ್ಲ, ಅದಕ್ಕೆ ಅದೃಷ್ಟ ಬೇಕು ಎಂಬುದನ್ನು ಬಹುತೇಕ ಎಲ್ಲರೂ ಗಾಢವಾಗಿ ನಂಬುತ್ತಾರೆ. ಆದರೆ, ಹಾಗೇನೂ ಇಲ್ಲ. ಎಲ್ಲ ರಾಶಿಗಳ ಜನರಿಗೂ ಅವರದ್ದೇ ಆದ ವಿಶೇಷತೆಗಳ ಮೂಲಕ ಹಣ ಗಳಿಸಲು, ಯಶಸ್ಸು ಸಾಧಿಸಲು ಅವಕಾಶವಿದ್ದೇ ಇದೆ.
 

ಹಣಕಾಸು ವಿಚಾರದಲ್ಲಿ ಯಶಸ್ಸು ಗಳಿಸಬೇಕು, ಸಾಕೆನಿಸುವಷ್ಟು ಹಣ ಮಾಡಬೇಕು, ಯಾವುದಕ್ಕೂ ಕೊರತೆಯಾಗದಂತೆ ಬದುಕಬೇಕು ಎಂದೆಲ್ಲ ಅವರವರ ಅಳತೆಗೋಲಿಗೆ ಸಿಗುವಂತಹ ಸಾಧನೆ ಮಾಡಲು ಎಲ್ಲರೂ ಬಯಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಣದ ವಿಚಾರದಲ್ಲಿ ರಾಶಿಚಕ್ರದ ಪ್ರಭಾವವೂ ಇರುತ್ತದೆ. ಪ್ರತಿಯೊಂದು ರಾಶಿಗಳ ಜನರಿಗೂ ಯಶಸ್ಸು ಗಳಿಸುವ ಅವಕಾಶ ಇದ್ದೇ ಇರುತ್ತದೆ. ಅವರದ್ದೇ ಶೈಲಿ, ವಿಧಾನದಲ್ಲಿ ಹಣ ಗಳಿಕೆಗೆ ಮುಂದಾಗಬೇಕೆ ವಿನಾ ಬೇರೊಬ್ಬರು ಮಾಡುವಂತೆ ನಾನೂ ಮಾಡುತ್ತೇನೆ ಎಂದು ಹೊರಟರೆ ಕಷ್ಟವಾಗಬಹುದು. ಪ್ರತಿಯೊಂದು ರಾಶಿಯೂ ತನ್ನದೇ ವಿಧಾನದಲ್ಲಿ ಹಣ ಗಳಿಸಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಅದನ್ನರಿತು ಮುಂದೆ ಸಾಗಿದರೆ ಹಣಕಾಸು ಯಶಸ್ಸು ಗಳಿಸುವುದು ಸುಲಭವಾಗುತ್ತದೆ. 

•    ಮೇಷ (Aries)
ಅತ್ಯುತ್ತಮ ಉದ್ಯಮಿಯನ್ನು (Entrepreneur) ಸೃಷ್ಟಿಸಬಲ್ಲ ರಾಶಿ ಇದು. ಮಹತ್ವಾಕಾಂಕ್ಷೆ (Ambition), ನಾಯಕತ್ವ (Leadership) ಮತ್ತು ಅದ್ಭುತ ಸ್ಫೂರ್ತಿ ಇವರಲ್ಲಿರುವುದರಿಂದ ಉದ್ಯಮಿಗಳಾಗಲು ಇವರು ಜನ್ಮಜಾತವಾಗಿ ಅರ್ಹತೆ ಹೊಂದಿರುತ್ತಾರೆ. ತಮ್ಮ ಕ್ಷೇತ್ರಕ್ಕೆ ಬೇಕಾದ ಖಚಿತತೆ ಇವರಲ್ಲಿರುತ್ತದೆ. ನವೋದ್ಯಮ (Startups), ಮಾರಾಟ, ಉದ್ಯಮದ ಯಾವುದಾದರೂ ವಿಭಾಗದ ನೇತೃತ್ವ ವಹಿಸಿಕೊಳ್ಳಲು ಇವರು ಸೂಕ್ತ. ಈ ಮೂಲಕ ಇವರು ತಮ್ಮದೇ ರೀತಿಯಲ್ಲಿ ಹಣಕಾಸು (Financial) ಯಶಸ್ಸು ಗಳಿಸಲು ಸಾಧ್ಯ.

ಈ ಜನ್ಮರಾಶಿಯವರಿಗೆ EQ ತುಂಬಾ ಹೆಚ್ಚು, ಮೆಚ್ಚಿದರೆ ಹಚ್ಚಿಕೊಳ್ತಾರೆ!

Latest Videos

•    ವೃಷಭ (Taurus)
ಸ್ಥಿರತೆ, ಪ್ರಾಕ್ಟಿಕಲ್‌ (Practical) ಧೋರಣೆ, ವಸ್ತುಗಳ ಬಗ್ಗೆ ಹಿತವಾದ ಭಾವನೆ ಹೊಂದಿರುವ ವೃಷಭದ ಜನ ತೀವ್ರವಾದ ಹಣಕಾಸು ಆಕರ್ಷಣೆ ಹೊಂದಿರುತ್ತಾರೆ. ಇವರ ಪರಿಶ್ರಮದ ಗುಣದಿಂದ ಉತ್ತಮ ಹೂಡಿಕೆದಾರರಾಗಬಲ್ಲರು. ವಾಣಿಜ್ಯ, ರಿಯಲ್‌ ಎಸ್ಟೇಟ್‌ ಸೇರಿದಂತೆ ಕಾಲಕ್ರಮೇಣ ಸಂಪತ್ತನ್ನು (Wealth) ಗಳಿಸುವ ಯಾವುದೇ ಕ್ಷೇತ್ರದಲ್ಲಿ ಇವರು ಯಶಸ್ಸು ಗಳಿಸಬಲ್ಲರು. 

•    ಮಿಥುನ (Gemini)
ಉತ್ತಮ ಸಂವಹನಕಾರರಾಗಿರುವ (Communicators) ಮಿಥುನದ ಜನ ಅದ್ಭುತ ಎನಿಸುವಂತಹ ಕೌಶಲ (Skill) ಹೊಂದಿರುತ್ತಾರೆ. ಚುರುಕಾದ ಬುದ್ಧಿವಂತಿಕೆ ಹೊಂದಿದ್ದು, ಮಾತಿನಲ್ಲಿ ಮೋಡಿ ಮಾಡುತ್ತಾರೆ. ಮಾರಾಟ, ಸಂವಹನ, ಮಾರ್ಕೆಟಿಂಗ್‌ (Marketing) ಸೇರಿದಂತೆ ಉತ್ತಮ ಸಂಪರ್ಕ-ಸಂವಹನದ ಅಗತ್ಯವಿರುವ ಯಾವುದೇ ವೃತ್ತಿಯಲ್ಲಿ ಯಶಸ್ಸು ಕಾಣುತ್ತಾರೆ. 

•    ಕರ್ಕಾಟಕ (Cancer)
ಹಣಕಾಸು ರಕ್ಷಕರಾಗಿರುವ ಕರ್ಕಾಟಕ ರಾಶಿಯವರು ತಮ್ಮ ಆರೈಕೆ ಮತ್ತು ರಕ್ಷಣಾತ್ಮಕ ಸ್ವಭಾವದಿಂದಾಗಿ ಹಣಕಾಸು ಯೋಜನೆ (Planning), ವೆಲ್ತ್‌ ಮ್ಯಾನೇಜ್‌ ಮೆಂಟ್‌ ಅಥವಾ ಇತರರು ತಮ್ಮ ಹಣಕಾಸು ಭದ್ರ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ ವೃತ್ತಿಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ಫೈನಾನ್ಷಿಯಲ್‌ ಅಡ್ವೈಸರ್‌, ಅಕೌಂಟಂಟ್ಸ್‌, ಬ್ಯಾಂಕಿಂಗ್‌ (Banking) ವಲಯದಲ್ಲೂ ಇವರು ಮಿಂಚಬಲ್ಲರು.

•    ಸಿಂಹ (Leo)
ವರ್ಚಸ್ಸಿನ ದೂರದೃಷ್ಟಿಯುಳ್ಳ ಸಿಂಹ ರಾಶಿಯ ಜನ ಜನ್ಮಜಾತವಾಗಿ ಆತ್ಮವಿಶ್ವಾಸ (Confidence) ಹೊಂದಿರುತ್ತಾರೆ. ನಾಲ್ಕು ಜನರಲ್ಲಿ ಗುರುತಿಸಿಕೊಳ್ಳುವ ಹಂಬಲವೂ ಇವರಿಗೆ ಹೆಚ್ಚು. ಈ ಗುಣ ಇವರನ್ನು ನಾಯಕರನ್ನಾಗಿ ಅಥವಾ ಉದ್ಯಮಿಯನ್ನಾಗಿ ರೂಪಿಸುತ್ತದೆ. ಮನೋರಂಜನೆ, ಕ್ರಿಯಾಶೀಲ ಕೈಗಾರಿಕೆ ಸೇರಿದಂತೆ ಇವರ ಪ್ರತಿಭೆ ವ್ಯಕ್ತಪಡಿಸುವ ಯಾವುದೇ ವೃತ್ತಿಯಲ್ಲಿ ಯಶಸ್ಸು ಗಳಿಸುತ್ತಾರೆ.

Purse Color Astrology: ರಾಶಿಗೆ ಹೊಂದುವ ಬಣ್ಣದ ಪರ್ಸ್ ಬಳಸಿದ್ರೆ ಅದೆಂದೂ ಖಾಲಿಯಾಗೋಲ್ಲ!

•    ಕನ್ಯಾ (Virgo)
ವಿಸ್ತೃತವಾಗಿ ಪರಾಮರ್ಶೆ ಮಾಡುವ ಬುದ್ಧಿಯುಳ್ಳ ಕನ್ಯಾ ರಾಶಿಯ ಜನ ತಮ್ಮ ವಿಮರ್ಶೆಗೆ ಹೆಸರಾಗಿರುತ್ತಾರೆ. ಫೈನಾನ್ಷಿಯಲ್‌ ಅನಾಲಿಸಿಸ್‌, ಡಾಟಾ ಮ್ಯಾನೇಜ್‌ ಮೆಂಟ್‌ ಅಥವಾ ಸೂಕ್ಷ್ಮತೆ ಬಯಸುವ ಯಾವುದೇ ವೃತ್ತಿಯಲ್ಲಿ ಇವರು ಸಾಕಷ್ಟು ಹಣ (Money) ಗಳಿಸಬಹುದು. 

•    ತುಲಾ (Libra)
ಸಮಚಿತ್ತದ ಚೌಕಾಸಿದಾರರಾಗಿರುವ ತುಲಾ ರಾಶಿಯ ಜನ ಜನರೊಂದಿಗೆ ಒಡನಾಡುವಲ್ಲಿ ಅದ್ಭುತ ಕೌಶಲ ಹೊಂದಿರುತ್ತಾರೆ. ಹಾಗೂ ಸಾಮರಸ್ಯ (Harmony) ಬಯಸುತ್ತಾರೆ. ಈ ಗುಣ ಇವರಿಗೆ ಹಣಕಾಸು ಯಶಸ್ಸು (Success) ನೀಡುತ್ತದೆ. ಕಾನೂನು (Law), ಡಿಪ್ಲೊಮಸಿ ಸೇರಿದಂತೆ ಕಾರ್ಯತಂತ್ರದ ನಿರ್ಧಾರ ಕೈಗೊಳ್ಳುವ ಯಾವುದೇ ವೃತ್ತಿಯಲ್ಲಿ ಸಾಧನೆ ಮಾಡಬಲ್ಲರು.

•    ವೃಶ್ಚಿಕ (Scorpio)
ಉತ್ತಮ ಹೂಡಿಕೆದಾರರಾಗಿರುವ (Investment) ವೃಶ್ಚಿಕದ ಜನರಲ್ಲಿ ಅಂತಃಪ್ರಜ್ಞೆ ಚೆನ್ನಾಗಿರುತ್ತದೆ. ಉತ್ತಮ ಹಣಕಾಸು ಯೋಜನೆ ರೂಪಿಸಲು ಈ ಗುಣ ನೆರವಾಗುತ್ತದೆ. ಹಣಕಾಸು, ಉದ್ಯಮ ಸೇರಿದಂತೆ ಆಳವಾದ ಪರಾಮರ್ಶೆ ಬೇಡುವ ಯಾವುದೇ ವೃತ್ತಿಯಲ್ಲಿ ಇವರು ಯಶಸ್ಸು ಗಳಿಸುತ್ತಾರೆ.

•    ಧನು (Sagittarius)
ಸಾಹಸಮಯ ಕೆಲಸಗಳ ಅವಕಾಶವಾದಿಯಾಗಿರುವ ಧನು ರಾಶಿಯ ಜನ ಅನ್ವೇಷಣಾತ್ಮಕ (Innovative) ಪರಿಸರದಲ್ಲಿ ಕಾರ್ಯ ನಿರ್ವಹಿಸಲು ಇಷ್ಟಪಡುತ್ತಾರೆ. ಪ್ರಯಾಣ (Travel), ಉದ್ಯಮ ಸೇರಿದಂತೆ ತಮ್ಮ ಜ್ಞಾನ ಹಂಚಿಕೊಳ್ಳುವ, ಇತರರನ್ನು ಸ್ಫೂರ್ತಿಪಡಿಸುವ ಯಾವುದೇ ಕಾರ್ಯದಲ್ಲಿ ಯಶಸ್ಸು ಗಳಿಸಬಲ್ಲರು.

•    ಮಕರ (Capricorn)
ಮಹತ್ವಾಕಾಂಕ್ಷೆಯ ಈ ಜನ ದೀರ್ಘಕಾಲದ ಯಶಸ್ಸಿಗೆ ಮೌಲ್ಯ ನೀಡುತ್ತಾರೆ. ಸದೃಢ ಕಾರ್ಯತಂತ್ರದ ಚಿಂತನೆ ಬುದ್ಧಿ ಹೊಂದಿರುವ ಮೂಲಕ ಹಣಕಾಸು, ಕಾನೂನು ಅಥವಾ ಸ್ಟ್ರಾಂಗ್‌ ವರ್ಕ್‌ ಎಥಿಕ್ಸ್‌ (Work Ethics) ಅಗತ್ಯವಿರುವ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಹೊಂದುತ್ತಾರೆ.

•    ಕುಂಭ (Aquarius)
ಅನ್ವೇಷಣಾತ್ಮಕ ಚಿಂತನೆಯುಳ್ಳ ಇವರು, ವಿಶಿಷ್ಟ ದೃಷ್ಟಿಕೋನಕ್ಕೆ ಹೆಸರು. ತಂತ್ರಜ್ಞಾನ, ಸಾಮಾಜಿಕ ಕಾರ್ಯಕ್ರಮ ಸೇರಿದಂತೆ ವಿಶಿಷ್ಟ Unique) ಚಿಂತನೆ ಬಯಸುವ ಯಾವುದೇ ಕ್ಷೇತ್ರದಲ್ಲಿ ಹೆಸರು ಮಾಡಬಲ್ಲರು.

•    ಮೀನ (Pisces)
ಕ್ರಿಯಾಶೀಲ (Creative) ದೃಷ್ಟಿಕೋನದ ಜನ ಕಲ್ಪನೆ ಮತ್ತು ಆತ್ಮೀಯತೆಯಲ್ಲಿ ಮುಂದಿರುತ್ತಾರೆ. ಇವರು ಕ್ರಿಯಾಶೀಲತೆ ಬೇಡುವ ವಲಯಗಳಾದ ಕಲೆ, ಸಂಗೀತ, ಬರವಣಿಗೆಯಂತಹ ಇನ್ನೊಬ್ಬರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ಅವಕಾಶವುಳ್ಳ ಕ್ಷೇತ್ರಗಳಲ್ಲಿ ಸಾಕಷ್ಟು ಯಶಸ್ಸು ಗಳಿಸಬಹುದು.
 

click me!