ಡಾಕ್ಟರ್‌ ಮಕ್ಕಳು ಡಾಕ್ಟರ್ರೇ ಆಗೋಕೆ ಇಷ್ಟಪಡ್ತಾರಾ? ಪಾಲಕರ ಹಾದೀಲಿ ಸಾಗೋ ರಾಶಿಗಳಿವು!

By Suvarna News  |  First Published Jun 16, 2023, 4:22 PM IST

ಕೆಲ ಜನ ತಮ್ಮ ಪಾಲಕರ ವೃತ್ತಿಯನ್ನೇ ತಮ್ಮ ಜೀವನಕ್ಕೂ ಆಯ್ಕೆ ಮಾಡಿಕೊಳ್ಳುತ್ತಾರೆ. ಪಾಲಕರ ಹಾದಿಯಲ್ಲಿ ಸಾಗುವುದನ್ನು ಮನಸಾರೆ ಇಷ್ಟಪಡುತ್ತಾರೆ. ಬಾಲ್ಯದಿಂದ ದೊರೆತ ಜ್ಞಾನ, ಮಾರ್ಗದರ್ಶನ ಇದಕ್ಕೆ ಕಾರಣವಿರಬಹುದಾದರೂ ರಾಶಿಚಕ್ರದ ಕಾರಣವೂ ಇದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.


ಡಾಕ್ಟರ್‌ ಮಕ್ಕಳು ಡಾಕ್ಟರುಗಳೇ ಆಗುತ್ತಾರೆ ಎನ್ನುವುದು ಖಚಿತವಿಲ್ಲ. ಬಹಳಷ್ಟು ಮಂದಿ ಪಾಲಕರ ವೃತ್ತಿಯನ್ನೇ ಮುಂದುವರಿಸುವುದು ಕಂಡುಬಂದರೂ ಸಂಪೂರ್ಣವಾಗಿ ಇದು ಸತ್ಯವಲ್ಲ. ಹಾಗೆಯೇ ಶಿಕ್ಷಕರ ಮಕ್ಕಳು ಶಿಕ್ಷಕರಾಗುವುದು, ಇಂಜಿನಿಯರ್‌ ಮಕ್ಕಳು ಇಂಜಿನಿಯರ್‌ ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುವುದು, ವಕೀಲರ ಮಕ್ಕಳು ವಕೀಲಿಕೆಯನ್ನೇ ಕಲಿಯುವುದು ತೀರ ಅಪರೂಪವೂ ಅಲ್ಲ, ಹಾಗೆಂದು ಎಲ್ಲರೂ ಮಾಡುವುದೂ ಇಲ್ಲ. ಪಾಲಕರು ತಮ್ಮ ವೃತ್ತಿಯಲ್ಲಿ ಎದುರಿಸುವ ಸವಾಲುಗಳು, ಆನಂದಿಸುವ ಸಮಯಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಕೆಲವು ಬಾರಿ ಸ್ಫೂರ್ತಿ ತುಂಬಿದರೆ ಕೆಲವು ಬಾರಿ “ಅದೊಂದು ಕೆಲಸ ಬೇಡವೇ ಬೇಡʼ ಎಂದು ನಿರ್ಧರಿಸುವಂತೆಯೂ ಆಗಬಹುದು. ಒಟ್ಟಿನಲ್ಲಿ ಪಾಲಕರ ವೃತ್ತಿ ಮಕ್ಕಳಿಗೆ ಅದೇ ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸುವುದು ಖಚಿತವಿಲ್ಲ. ಮನೆಯಲ್ಲಿ ಪಾಲಕರು ಮಕ್ಕಳೆದುರು ತಮ್ಮ ವೃತ್ತಿಯ ಬಗ್ಗೆ ಆಡುವ ಮಾತುಗಳು ಪರಿಣಾಮ ಬೀರುತ್ತವೆ. ಪಾಲಕರಿಂದ ಅನಾಯಾಸವಾಗಿ ದೊರೆತ ಜ್ಞಾನವೂ ಸಹ ಅದೇ ಹಾದಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತದೆ. ಆದರೆ, ಈ ಗುಣಕ್ಕೂ ನಿಮ್ಮ ರಾಶಿಗಳಿಗೂ ಸಂಬಂಧವಿದೆ. ಏಕೆಂದರೆ, ಕೆಲವೇ ರಾಶಿಗಳ ಜನರು ಮಾತ್ರ ಪಾಲಕರ ವೃತ್ತಿಯಲ್ಲಿ ಮುಂದುವರಿಯುವ ಗುಣಸ್ವಭಾವ ಕಂಡುಬರುತ್ತದೆ.

•    ಕರ್ಕಾಟಕ (Cancer)
ಕರ್ಕಾಟಕ ರಾಶಿಯ ಜನರ ಮೇಲೆ ಪಾಲಕರು (Parents) ಅಗಾಧ ಪ್ರಭಾವ (Influence) ಬೀರುತ್ತಾರೆ. ಪಾಲಕರ ಪದವಿ, ಅರ್ಹತೆಗಳು ಕೆಲಸವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಹಕಾರಿಯಾಗುತ್ತವೆ. ತಂದೆ (Father) ಮತ್ತು ತಾಯಿ (Mother) ಬೇರೆ ಬೇರೆ ವೃತ್ತಿಯಲ್ಲಿ ತೊಡಗಿದ್ದರೂ ಕರ್ಕಾಟಕದ ಜನ ಎರಡೂ ಗುಣಸ್ವಭಾವ ಅಳವಡಿಸಿಕೊಳ್ಳುವುದು ಕಂಡುಬರುತ್ತದೆ. ಪಾಲಕರ ವರ್ತನೆ ಮತ್ತು ನಿರೀಕ್ಷೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಅವರು ಹೆಮ್ಮೆ (Proud) ಪಡುವಂತೆ ಮಾಡುತ್ತಾರೆ. ಕುಟುಂಬದಿಂದ ದೊರೆತ ಮೌಲ್ಯಗಳ ಬಗ್ಗೆ ಅಪಾರ ಗೌರವ ಹೊಂದಿರುತ್ತಾರೆ. ಬಾಲ್ಯದಿಂದಲೂ ಪಾಲಕರ ಹಾದಿಯಲ್ಲೇ ಸಾಗುವುದು ಇವರ ಅಭ್ಯಾಸ.

Tap to resize

Latest Videos

ಈ ರಾಶಿಯ ಮಹಿಳೆಯರಿಗೆ ಕಿರಿಯ ಯುವಕರು ಅಂದ್ರೆ ಪಂಚಪ್ರಾಣ..!

•    ಸಿಂಹ (Leo)
ಸಿಂಹ ರಾಶಿಯ ಜನ ತಂದೆ ಮತ್ತು ತಾಯಿಯ ವೃತ್ತಿಯಿಂದ (Profession) ಸಾಕಷ್ಟು ಸ್ಫೂರ್ತಿ (Inspire) ಪಡೆಯುತ್ತಾರೆ. ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಅವರಿಂದಲೇ ಬೆಳೆಸಿಕೊಳ್ಳುತ್ತಾರೆ. ಪಾಲಕರ ಜ್ಞಾನವನ್ನು ಬಳಸಿಕೊಳ್ಳುವುದು ಇವರಿಗೆ ಇಷ್ಟ. ಹೀಗಾಗಿ, ಅವರದ್ದೇ ಹಾದಿಯಲ್ಲಿ ಸಾಗಲು ಬಯಸುತ್ತಾರೆ. ತಮ್ಮ ಹೊಸ ಉದ್ಯೋಗಕ್ಕೆ ಪಾಲಕರದ್ದೇ ಸಲಹೆಯಿದ್ದರೆ ಥ್ರಿಲ್‌ ಅನುಭವಿಸುತ್ತಾರೆ. ವೈದ್ಯರ ಮಕ್ಕಳ ಪೈಕಿ ಸಿಂಹ ರಾಶಿಯವರಿದ್ದರೆ ಖಂಡಿತವಾಗಿ ಅವರು ಪಾಲಕರ ವೃತ್ತಿಯನ್ನೇ ಆರಿಸಿಕೊಳ್ಳುತ್ತಾರೆ.

•    ವೃಶ್ಚಿಕ (Scorpio)
ವೃತ್ತಿ ನಿರ್ಧಾರ (Decision) ಮತ್ತು ಉದ್ಯೋಗ (Job) ಬೆಳವಣಿಗೆಯಲ್ಲಿ ವೃಶ್ಚಿಕ ರಾಶಿಯವರ ಮೇಲೆ ಪಾಲಕರ ಪ್ರಭಾವ ಅಗಾಧವಾಗಿರುತ್ತದೆ. ಬಾಲ್ಯ ಹಾಗೂ ಹರೆಯದಲ್ಲಿ ಪಾಲಕರನ್ನು ತೀವ್ರವಾಗಿ ಗಮನಿಸುವ ಇವರು, ಅವರ ವೃತ್ತಿಯನ್ನೂ ಅಷ್ಟೇ ವಿಮರ್ಶಾತ್ಮಕವಾಗಿ ಪರಿಶೀಲನೆ ಮಾಡುತ್ತಾರೆ. ಪಾಲಕರು ಮಕ್ಕಳು ಯಶಸ್ಸನ್ನು (Success)  ಬಯಸುತ್ತಾರೆ ಎಂದು ಅರಿತಿರುವ ಇವರು, ಪಾಲಕರಿಂದ ಬೆಂಬಲ, ಪ್ರೀತಿ (Love) ದೊರೆತಾಗ ತಮ್ಮ ಸಾಮರ್ಥ್ಯದ ಬಗ್ಗೆ ಇನ್ನಷ್ಟು ವಿಶ್ವಾಸ ತಾಳುತ್ತಾರೆ. ಮೊದಲು ಬೇರೆ ವೃತ್ತಿಗಳ ಬಗ್ಗೆ ವಿಚಾರ ಮಾಡಿದರೂ ಅಂತಿಮವಾಗಿ ಪಾಲಕರ ಹಾದಿಗೇ ಮರಳುತ್ತಾರೆ.

ಇವರು ಹೃದಯವಂತರು: ಈ ರಾಶಿಯವರ ಸಂಬಂಧ ಕಳೆದುಕೊಳ್ಬೇಡಿ

•    ಮೀನ (Pisces)
ಮೀನ ರಾಶಿಯ ಮಕ್ಕಳಿಗೆ ಪಾಲಕರು ಆಗಾಗ ಸ್ಫೂರ್ತಿ ತುಂಬುತ್ತಿರಬೇಕು. ಹೀಗಾಗಿ, ಮೀನ ರಾಶಿಯ ಯುವಜನತೆಗೆ, ಶಿಕ್ಷಣ ಮತ್ತು ವೃತ್ತಿಗೆ ಸಂಬಂಧಿಸಿ ಪಾಲಕರು ಏನು ನಿರೀಕ್ಷೆ (Expect) ಮಾಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಕಲಿಕೆ ಮತ್ತು ಪ್ರಗತಿಗೆ ಹಿರಿಯರಿಂದ ದೊರೆತ ಬಳವಳಿಗೆ ಗೌರವ ನೀಡುತ್ತಾರೆ. ಕುಟುಂಬದ ಹಿರಿಯರ ಮಾರ್ಗದಲ್ಲೇ ಸಾಗಿ ಯಶಸ್ಸು ಗಳಿಸುವುದು ಇವರ ಹಿರಿಮೆ. 

click me!